ಕಿಚ್ಚನ ಅಭಿಮಾನಿಗಳಿಗೆ ಶುಭ ಶುಕ್ರವಾರ: ಕೋಟಿಗೊಬ್ಬ-3 ಪೋಸ್ಟರ್ ರಿಲೀಸ್
Team Udayavani, Aug 7, 2020, 4:25 PM IST
ಕಿಚ್ಚನ ಸುದೀಪ್ ಅಭಿನಯದ ಬಹುನಿರೀಕ್ಷಿತ ಕೋಟಿಗೊಬ್ಬ-3 ಚಿತ್ರದ ಪೋಸ್ಟರ್ ಇಂದು ರಿಲೀಸ್ ಆಗಿದೆ. ನಿರ್ಮಾಪಕ ಸೂರಪ್ಪ ಬಾಬು ಅವರ ಜನ್ಮದಿನದ ಪ್ರಯುಕ್ತ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ಕಿಚ್ಚ ಸುದೀಪ್ ಅವರ ರಗಡ್ ಲುಕ್ ಇರುವ ಪೋಸ್ಟರ್ ಬಿಡುಗಡೆಯಾಗಿದ್ದು, ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಸುದೀಪ್ ಅವರ ಮತ್ತೊಂದು ಚಿತ್ರ ಫ್ಯಾಂಟಮ್ ನ ಮಾಹಿತಿಗಳು ಹೊರಬೀಳುತ್ತಿದ್ದರೂ ಕೋಟಿಗೊಬ್ಬ-3 ಬಗ್ಗೆ ಕೆಲ ಸಮಯದಿಂದ ಯಾವುದೇ ಅಪ್ಡೇಟ್ ಇಲ್ಲದ ಕಾರಣದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಚಿತ್ರತಂಡ ಪೋಸ್ಟರ್ ನೊಂದಿಗೆ ಖುಷಿ ನೀಡಿದೆ.
ಇದೊಂದು ಹೊಡೆದಾಟದ ದೃಶ್ಯದ ಪೋಸ್ಟರ್ ಆಗಿದ್ದು, ವಿಲನ್ ನ ತಲೆಯನ್ನು ಒತ್ತಿ ಹಿಡಿದು ರಗಡ್ ಲುಕ್ ನಿಂದ ಕಿಚ್ಚ ಮಿಂಚಿದ್ದಾರೆ. ಕೋಟಿಗೊಬ್ಬ -3 ಚಿತ್ರವನ್ನು ಶಿವಕಾರ್ತಿಕ್ ನಿರ್ದೇಶನ ಮಾಡುತ್ತಿದ್ದು, ಅರ್ಜುನ್ ಜನ್ಯ ಸಂಗೀತವಿದೆ.
Wshn you happiness and health #SoorappaBabu #K3 … have a wonderful bday.
Happy returns? pic.twitter.com/CRFFbAbH48— Kichcha Sudeepa (@KicchaSudeep) August 7, 2020