ಹೊಸಬರ ಚಿತ್ರಕ್ಕೆ ಪುನೀತ್‌ ಸಾಥ್‌

Team Udayavani, May 16, 2019, 3:00 AM IST

ಆರಂಭದಿಂದಲೂ ಪುನೀತ್‌ ರಾಜಕುಮಾರ್‌ ಹೊಸಬರ ಚಿತ್ರಗಳಿಗೆ ಪ್ರೋತ್ಸಾಹ, ಸಾಥ್‌ ನೀಡುತ್ತಲೇ ಬಂದಿದ್ದಾರೆ. ಅದು ಚಿತ್ರದ ಟ್ರೇಲರ್‌, ಟೀಸರ್‌, ಹಾಡು ನೋಡಿ ಮೆಚ್ಚಿಕೊಳ್ಳುವ ಅಥವಾ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ. ಈಗ “ಕಾರ್ಮೋಡ ಸರಿದು’ ಎಂಬ ಚಿತ್ರದ ಟ್ರೇಲರ್‌ ನೋಡಿ, ಹೊಸಬರ ಬೆನ್ನುತಟ್ಟಿದ್ದಾರೆ.

ಈ ಚಿತ್ರ ನಾಳೆ (ಮೇ 17) ಬಿಡುಗಡೆಯಾಗುತ್ತಿದ್ದು, ಚಿತ್ರತಂಡ ಪುನೀತ್‌ ಅವರಿಗೆ ಟ್ರೇಲರ್‌ ತೋರಿಸಿದೆ. ಟ್ರೇಲರ್‌ ನೋಡಿ ಮೆಚ್ಚಿಕೊಂಡ ಪುನೀತ್‌, “ಚಿತ್ರದ ಟ್ರೇಲರ್‌ ಕುತೂಹಲ ಹುಟ್ಟಿಸುವಂತಿದೆ. ಕ್ಯಾಮರಾ ವರ್ಕ್‌ ತುಂಬಾ ಚೆನ್ನಾಗಿದ್ದು, ಕುದುರೆಮುಖವನ್ನು ಅದ್ಭುತವಾಗಿ ತೋರಿಸಿದ್ದಾರೆ.

ಚಿತ್ರದ ಟ್ರೇಲರ್‌ ನೋಡಿದಾಗ ಚಿತ್ರದಲ್ಲಿ ಗಟ್ಟಿತನವಿರೋದು ಎದ್ದು ಕಾಣುತ್ತದೆ’ ಎಂದು ಶುಭಕೋರಿದ್ದಾರೆ. “ಕಾರ್ಮೋಡ ಸರಿದು’ ಚಿತ್ರದಲ್ಲಿ ಮಂಜು ರಾಜಣ್ಣ ನಾಯಕರಾಗಿ ನಟಿಸುವ ಜೊತೆಗೆ ನಿರ್ಮಾಣ ಕೂಡಾ ಮಾಡಿದ್ದಾರೆ. ಚಿತ್ರದಲ್ಲಿ ಅದ್ವಿತಿ ನಾಯಕಿ. ಬಹುತೇಕ ಚಿತ್ರೀಕರಣ ಕುದುರೆಮುಖ ಸುತ್ತಮುತ್ತ ನಡೆದಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ