ದ್ವಾರಕೀಶ್‌ ಸಂಸ್ಥೆಯ 50ನೇ ಚಿತ್ರ ರೆಡಿ ವಿಶೇಷತೆಗಳ ಕೌತುಕ ಈ ಚೌಕ!


Team Udayavani, Jan 10, 2017, 11:12 AM IST

bhavana—vijaya-raghavendra.jpg

ಚೌಕ ಇದು ಹಲವು ವಿಶೇಷತೆ ಹೊಂದಿರುವ ಸಿನಿಮಾ. ಮೊದಲನೆಯದು ತರುಣ್‌ ಸುಧೀರ್‌ ನಿರ್ದೇಶನದ ಮೊದಲ ಚಿತ್ರ. ಎರಡನೆಯದು ದ್ವಾರಕೀಶ್‌ ನಿರ್ಮಾಣ ಸಂಸ್ಥೆಯಲ್ಲಿ ಮೂಡಿ ಬರುತ್ತಿರುವ 50 ನೇ ಸಿನಿಮಾ. ಮೂರನೆಯದು ನಾಲ್ವರು ಹೀರೋಗಳು ಒಟ್ಟಿಗೆ ನಟಿಸಿರುವುದು.

ನಾಲ್ಕನೆಯದು ಐವರು ಕ್ಯಾಮೆರಾಮೆನ್‌ಗಳು ಕೆಲಸ ಮಾಡಿರೋದು. ಆರನೆಯದು ಐವರು ಸಂಗೀತ ನಿರ್ದೇಶಕರು ಮ್ಯೂಸಿಕ್‌ ಕೊಟ್ಟಿರೋದು. ಏಳನೆಯದು ಐವರು ಸಂಭಾಷಣೆ ಬರೆದಿರೋದು. ಎಂಟನೆಯದು “ಅಪ್ಪ’ನ ಕುರಿತು ಬರೆದಿರುವ ಹಾಡೊಂದು ಈಗಾಗಲೇ ಎಲ್ಲೆಡೆ ಜೋರು ಸುದ್ದಿ ಮಾಡಿರುವುದು… ಇಷ್ಟೇ ಅಲ್ಲ, ಇನ್ನೂ ಇತ್ಯಾದಿ ವಿಶೇಷತೆಗಳು “ಚೌಕ’ ಚಿತ್ರದಲ್ಲಿ ಅಡಗಿವೆ. 

ಈಗ ವಿಷಯ ಏನೆಂದರೆ, “ಚೌಕ’ ಬಿಡುಗಡೆಗೆ ರೆಡಿಯಾಗಿದೆ. ಯೋಗೀಶ್‌ ದ್ವಾರಕೀಶ್‌ ನಿರ್ಮಾಣದ “ಚೌಕ’ ಎಲ್ಲವೂ ಅಂದುಕೊಂಡಂತೆ ನಡೆದರೆ ಜನವರಿ 19 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. “ಚೌಕ’ ಮಲ್ಟಿಸ್ಟಾರ್‌ ಸಿನಮಾ ಎಂಬುದು ಎಲ್ಲರಿಗೂ ಗೊತ್ತು. ಈವರೆಗೆ ಸಹೋದರ ನಂದಕಿಶೋರ್‌ ನಿರ್ದೇಶನದ ಯಶಸ್ವಿ ಚಿತ್ರಗಳ ಹಿಂದೆ ನಿಂತಿದ್ದ ತರುಣ್‌ ಸುಧೀರ್‌, ಬಹಳ ದಿನಗಳಿಂದಲೂ ಒಂದೊಳ್ಳೆಯ ಸಿನಿಮಾ ನಿರ್ದೇಶಿಸಬೇಕು ಎಂದು ಅಂದುಕೊಂಡಿದ್ದರು.

ಅದಕ್ಕೆ “ಚೌಕ’ ಸಾಕ್ಷಿಯಾಗಿದೆ. ಈ ಚಿತ್ರದಲ್ಲಿ ಪ್ರೇಮ್‌, ದಿಗಂತ್‌, ಪ್ರಜ್ವಲ್‌ ದೇವರಾಜ್‌ ಹಾಗೂ ವಿಜಯರಾಘವೇಂದ್ರ ನಾಯಕರುಗಳಾಗಿ ಕಾಣಿಸಿಕೊಂಡರೆ, ಇವರಿಗೆ ನಾಯಕಿಯರಾಗಿ, ಐಂದ್ರಿತಾ ರೇ, ಪ್ರಿಯಾಮಣಿ, ದೀಪಾ ಸನ್ನಿಧಿ, ಭಾವನಾ ನಟಿಸಿದ್ದಾರೆ. ಒಂದು ಸಿನಿಮಾ ಬಿಡುಗಡೆ ಮುನ್ನವೇ ಸುದ್ದಿ ಮಾಡುತ್ತದೆ ಅಂದರೆ, ಅದು ಹಾಡುಗಳಿಂದ. ಈಗಾಗಲೇ “ಚೌಕ’ ಸಿನಿಮಾ ಕೂಡ ಅಂಥದ್ದೊಂದು ಸುದ್ದಿ ಮಾಡಿದೆ.

ಯೋಗರಾಜಭಟ್‌ ಬರೆದಿರುವ “ಅಲ್ಲಾಡ್ಸು ಅಲ್ಲಾಡ್ಸು ..’ ಹಾಡು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿದೆ. ನಾಗೇಂದ್ರಪ್ರಸಾದ್‌ ಅವರು “ಅಪ್ಪ ಐಲವ್‌ಯೂ..’ ಹಾಡು ಕೂಡ ಭಾವುಕತೆಯನ್ನು ಹೆಚ್ಚಿಸುವಂತಿದೆ. ಈಗಾಗಲೇ ಈ ಹಾಡು ಕೇಳಿರುವ ರಕ್ಷಿತ, ಅಮೂಲ್ಯ, ಶ್ರುತಿ, ಶ್ರುತಿ ಹರಿಹರನ್‌, ತಾರಾ, ಸುಧಾರಾಣಿ. ಭಾವನಾ, ಪ್ರಣೀತಾ ಮುಂತಾದ ನಟಿಯರು ಭಾವುಕರಾಗಿರುವುದುಂಟು.  ಚಿತ್ರಕ್ಕೆ ಕೃಷ್ಣ, ಸತ್ಯಹೆಗ್ಡೆ, ಸಂತೋಷ್‌ ರೈ ಪಾತಾಜೆ, ಶೇಖರ್‌ ಚಂದ್ರು, ಸುಧಾಕರ್‌ ಎಸ್‌ ರಾಜ್‌ ಕ್ಯಾಮೆರಾ ಹಿಡಿದಿದ್ದಾರೆ.

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.