ಲಿಪ್‌ಲಾಕ್‌ಗೆ ಒಲ್ಲೆ ಅಂದ ಸಂಯುಕ್ತ ಹೆಗ್ಡೆ!

ಮೈ ನೇಮ್‌ ಈಸ್‌ ರಾಜಾ ಚಿತ್ರದಲ್ಲಿ ಅಂಥದ್ಧೇನಿದೆ?

Team Udayavani, May 5, 2019, 3:00 AM IST

samyukta

ಸಂಯುಕ್ತ ಹೆಗ್ಡೆ ಅಂದಾಕ್ಷಣ, ಬೋಲ್ಡ್‌ ಆಗಿ ಮಾತನಾಡುವ ಅಷ್ಟೇ ಸಖತ್‌ ಹಾಟ್‌ ಆಗಿ ಕಾಣವ ನಟಿ ಎಂದೇ ಖ್ಯಾತಿ. ಈಗಾಗಲೇ ಸಂಯುಕ್ತ ಹೆಗ್ಡೆ ಕಾಣಿಸಿಕೊಂಡಿರುವ ಬಹುತೇಕ ಚಿತ್ರಗಳನ್ನು ಗಮನಿಸಿದರೆ, ಅಲ್ಲಿ ಪಕ್ಕಾ ಟಾಮ್‌ಬಾಯ್‌ ಆಗಿ, ಸಿಕ್ಕಾಪಟ್ಟೆ ಮಾತನಾಡುವ ಹುಡುಗಿಯಾಗಿ, ಗ್ಲಾಮರಸ್‌ ಪಾತ್ರದಲ್ಲಿ ಮಿಂಚಿರುವುದು ಕಂಡು ಬರುತ್ತೆ.

ಇಂತಹ ನಟಿ, ಇದೀಗ ಚಿತ್ರವೊಂದರಲ್ಲಿ ಬರುವ ಲಿಪ್‌ಲಾಕ್‌ ಸೀನ್‌ಗಾಗಿ ಆ ಚಿತ್ರವನ್ನೇ ಒಲ್ಲೆ ಅಂದಿದ್ದಾರೆ! ಹೌದು, ಇದು ನಿಜ. ಸಂಯುಕ್ತ ಹೆಗ್ಡೆ ಲಿಪ್‌ಲಾಕ್‌ ಸೀನ್‌ ಇದೆ ಎಂಬ ಕಾರಣಕ್ಕೆ ಹೊಸ ಚಿತ್ರವೊಂದರ ಅವಕಾಶ ಕೈ ಬಿಟ್ಟಿದ್ದಾರೆ. ಹೀಗಂತ ಹೇಳಿಕೊಂಡಿದ್ದು, ನಟ ರಾಜ್‌ ಸೂರ್ಯನ್‌.

ಯಾರು ಈ ರಾಜ್‌ ಸೂರ್ಯನ್‌ ಎಂಬ ಪ್ರಶ್ನೆಗೆ, “ಸಂಚಾರಿ’, “ಜಟಾಯು’ ಚಿತ್ರಗಳನ್ನು ಹೆಸರಿಸಬೇಕು. ಆ ಚಿತ್ರದ ಹೀರೋ ರಾಜ್‌ ಸೂರ್ಯ ಈಗ “ಮೈ ನೇಮ್‌ ಈಸ್‌ ರಾಜಾ’ ಎಂಬ ಚಿತ್ರದ ಹೀರೋ. ಈ ಚಿತ್ರವನ್ನು ಅಶ್ವಿ‌ನ್‌ ಕೃಷ್ಣ ನಿರ್ದೇಶಿಸುತ್ತಿದ್ದು, ನಾಯಕ ರಾಜ್‌ ಸೂರ್ಯ ಸಹೋದರ ಪ್ರಭುಸೂರ್ಯ (ಪ್ರಭಾಕರ್‌) ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಈ ಚಿತ್ರದಲ್ಲಿ ಒಬ್ಬರಲ್ಲ, ಇಬ್ಬರಲ್ಲ ಒಟ್ಟು ಮೂವರು ನಾಯಕಿಯರು. ಆ ಪೈಕಿ ಒಂದು ಪಾತ್ರವನ್ನು ಮಾಡುವಂತೆ ಸಂಯುಕ್ತ ಹೆಗ್ಡೆ ಅವರನ್ನು ಕೇಳಿದಾಗ, ಅವರು ಕಥೆ ಕೇಳಿ, ಇಷ್ಟಪಟ್ಟು ಮಾಡುವುದಾಗಿ ಒಪ್ಪಿದ ಬಳಿಕ, ಚಿತ್ರವನ್ನು ತಿರಸ್ಕರಿಸಿದ್ದಾರಂತೆ.

ಕನ್ನಡದ ಬಹುತೇಕ ನಟಿಯರನ್ನು ಸಂಪರ್ಕಿಸಿ, ಕಥೆ ಹೇಳಿದಾಗ, ಅವರೆಲ್ಲರೂ ಕೂಡ ಆ ಪಾತ್ರ ಮಾಡಲ್ಲ ಅಂತಾನೇ ಕೈ ಬಿಟ್ಟಿದ್ದಾರೆ. ಬರೋಬ್ಬರಿ ಸಾವಿರಕ್ಕೂ ಹೆಚ್ಚು ಕನ್ನಡದ ಪ್ರತಿಭೆಗಳು ಮಾಡಲ್ಲ ಎಂದರು ಎಂಬುದು ನಾಯಕ ರಾಜ್‌ ಸೂರ್ಯ ಅವರ ಮಾತು.

ಹಾಗಾದರೆ, ಆ ನಾಯಕಿ ಪಾತ್ರ ಅಷ್ಟೊಂದು ಬೋಲ್ಡ್‌ ಆಗಿದೆಯಾ? ಈ ಪ್ರಶ್ನೆಗೆ, ತೆಲುಗಿನ “ಅರ್ಜುನ್‌ರೆಡ್ಡಿ’ “ಆರ್‌ಎಕ್ಸ್‌ 100′ ರೀತಿಯ ಕೆಲ ಹಾಟ್‌ ಸೀನ್‌ಗಳು ಇಲ್ಲೂ ಇವೆ. ಅವೆಲ್ಲವೂ ಕಥೆಗೆ ಪೂರಕವಾಗಿದ್ದರಿಂದ ಆ ಸೀನ್‌ ಇಡಲಾಗಿದೆ. ಸಾಕಷ್ಟು ಕಡೆ ಲಿಪ್‌ಲಾಕ್‌ ಸೀನ್‌ ಇದ್ದುದರಿಂದ ಕನ್ನಡದ ಯಾರೊಬ್ಬರೂ ಮಾಡಲು ಒಪ್ಪಿಲ್ಲ ಎಂಬುದು ರಾಜ್‌ ಸೂರ್ಯ ಮಾತು.

ಅದೆಲ್ಲಾ ಸರಿ, ಕನ್ನಡದ ಯಾರೆಲ್ಲಾ ನಟಿಯರನ್ನು ಸಂಪರ್ಕಿಸಿದ್ದೀರಿ ಎಂಬ ಪ್ರಶ್ನೆಗೆ, ಎಲ್ಲರ ಹೆಸರನ್ನು ಹೇಳಲು ಆಗಲ್ಲ. ಆದರೆ, ಆಡಿಷನ್‌ನಲ್ಲಿ ಕನ್ನಡದ ಹೊಸ ಪ್ರತಿಭೆಗಳ್ಯಾರು ಮಾಡುವುದಿಲ್ಲ ಎಂದಿದ್ದು ನಿಜ. ಆ ಸಾಲಿನಲ್ಲಿ ಸಂಯುಕ್ತ ಹೆಗ್ಡೆ ಅವರೂ ಇದ್ದರು’ ಎಂಬುದು ರಾಜ್‌ ಸೂರ್ಯ ಅವರ ಮಾತು.

ಅದೇನೆ ಇರಲಿ, ಸಂಯುಕ್ತ ಹೆಗ್ಡೆ ಲಿಪ್‌ಲಾಕ್‌ ಸೀನ್‌ ಮಾಡಲ್ಲ ಅಂದಿದ್ದು ಓಕೆ, ಅದರಲ್ಲೂ “ಮೈ ನೇಮ್‌ ಈಸ್‌ ರಾಜಾ’ ಎಂಬ ಶೀರ್ಷಿಕೆಯೇ ಕೇಳಲು ಖುಷಿಯಾಗಿರುವಾಗ, ಆ ಚಿತ್ರದಲ್ಲಿ ಅಷ್ಟೊಂದು ಲಿಪ್‌ಲಾಕ್‌ ಸೀನ್‌ಗಳು ಬೇಕಿತ್ತಾ? ಈ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ.

ಕೊನೆಗೆ ಮುಂಬೈ ಮೂಲದ ಇಬ್ಬರು ಹೊಸ ಪ್ರತಿಭೆಗಳನ್ನು ಒಪ್ಪಿಸಿ, ಚಿತ್ರೀಕರಣ ಮಾಡಲಾಗಿದೆ ಎಂಬುದು ಚಿತ್ರತಂಡದ ಹೇಳಿಕೆ. ಅಂದಹಾಗೆ, ಮುಂಬೈನ ಆಕರ್ಷಕ ಹಾಗು ನಸ್ರಿನ್‌ ನಾಯಕಿಯರಾಗಿ ನಟಿಸಿದ್ದು, ಅವರಿಗೆ ಇದು ಮೊದಲ ಚಿತ್ರ. ಈ ಪೈಕಿ ಯಾರು ಲಿಪ್‌ಲಾಕ್‌ ಸೀನ್‌ ಒಪ್ಪಿ ಬಂದಿದ್ದಾರೆ ಎಂಬುದಕ್ಕೆ ಸಿನಿಮಾ ಬರುವವರೆಗೆ ಕಾಯಲೇಬೇಕು.

ಟಾಪ್ ನ್ಯೂಸ್

hgjghgfd

ಎರಡೂ ಉಪ ಚುನಾವಣೆ ಬಿಜೆಪಿ ಗೆಲುವುದು ನಿಶ್ಚಿತ : ನಾರಾಯಣಸ್ವಾಮಿ

ಪ್ರಧಾನಿ ನರೇಂದ್ರ ಮೋದಿ ಸಾಮಾನ್ಯ ವ್ಯಕ್ತಿಯಲ್ಲ, ಸರ್ವಶಕ್ತನ ಅವತಾರ: ಸಚಿವ ತಿವಾರಿ

ಪ್ರಧಾನಿ ನರೇಂದ್ರ ಮೋದಿ ಸಾಮಾನ್ಯ ವ್ಯಕ್ತಿಯಲ್ಲ, ಸರ್ವಶಕ್ತನ ಅವತಾರ: ಸಚಿವ ತಿವಾರಿ

ತಮಿಳುನಾಡು: ಪಟಾಕಿ ಅಂಗಡಿಯಲ್ಲಿ ಸ್ಫೋಟ, ಮಾಲೀಕ ಸೇರಿ ಐವರು ಸಾವು, ಹಲವರಿಗೆ ಗಾಯ

ತಮಿಳುನಾಡು: ಪಟಾಕಿ ಅಂಗಡಿಯಲ್ಲಿ ಸ್ಫೋಟ, ಮಾಲೀಕ ಸೇರಿ ಐವರು ಸಾವು, ಹಲವರಿಗೆ ಗಾಯ

gjhgfd

ಬಂಟ್ವಾಳ : ಬಿಜೆಪಿ ಮುಖಂಡ ಬೆಳ್ಳೂರು ನಿವಾಸಿ‌ ಪ್ರಕಾಶ್ ಮೇಲೆ ಹಲ್ಲೆ

ತಿರುಚ್ಚಿ – ಹುಬ್ಬಳ್ಳಿ ಏರ್‌ಪೋರ್ಟ್‌ ವಿಲೀನ?

ತಿರುಚ್ಚಿ – ಹುಬ್ಬಳ್ಳಿ ಏರ್‌ಪೋರ್ಟ್‌ ವಿಲೀನ?

hfjhgfds

ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು? : ಸಿದ್ದರಾಮಯ್ಯ ವಿರುದ್ಧ C.T ರವಿ ಟ್ವೀಟ್

fhghgf

ಸಿಂದಗಿ – ಹಾನಗಲ್‌ ಉಪ ಚುನಾವಣೆ : ಇಂದು ಬಹಿರಂಗ ಪ್ರಚಾರ ಅಂತ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಾರಿಗೆ ಸಾಧಕನ ಬಯೋಪಿಕ್‌: ‘ವಿಜಯಾನಂದ’ ಚಿತ್ರಕ್ಕೆ ಮುಹೂರ್ತ

ಸಾರಿಗೆ ಸಾಧಕನ ಬಯೋಪಿಕ್‌: ‘ವಿಜಯಾನಂದ’ ಚಿತ್ರಕ್ಕೆ ಮುಹೂರ್ತ

aditi prabhudeva

ತನಿಖಾಧಿಕಾರಿಯಾದ ‘ಅದಿತಿ ಪ್ರಭುದೇವ’

sreeleela

ಟಾಲಿವುಡ್‌ ನಲ್ಲಿ ಶ್ರೀಲೀಲಾಗೆ ಬೇಡಿಕೆ

ಹೈದರಾಬಾದ್‌ ನಲ್ಲಿ ‘ತ್ರಿಶೂಲಂ’ಗೆ ಸಾಹಸ

ಹೈದರಾಬಾದ್‌ ನಲ್ಲಿ ‘ತ್ರಿಶೂಲಂ’ಗೆ ಸಾಹಸ

love mocktail 2

ಲವ್‌ ಮಾಕ್ಟೇಲ್‌-2ಗೆ “ಯು’ ಪ್ರಮಾಣ ಪತ್ರ

MUST WATCH

udayavani youtube

ಆಧುನಿಕ ಪದ್ಧತಿಯೊಂದಿಗೆ ಬ್ಯಾಡಗಿ ಮೆಣಸಿನಕಾಯಿ ಕೃಷಿಗೆ ಮುಂದಾದ ಅಡಕೆ ಕೃಷಿಕ

udayavani youtube

ಬಸ್ ಕಂಡಕ್ಟರ್‌ನಿಂದ ಸೂಪರ್ ಸ್ಟಾರ್ ಆದ ರಜನಿಕಾಂತ್ ಕಥೆ

udayavani youtube

ಈ ಪ್ರೌಢ ಶಾಲೆಯಲ್ಲಿ ಒಂದಲ್ಲ, ಎರಡಲ್ಲ ಹಲವಾರು ಸಮಸ್ಯೆಗಳು!

udayavani youtube

ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್

udayavani youtube

ಸಾಮಾಜಿಕ ಸಂದೇಶ ಹೊತ್ತು 3500 ಕಿ.ಮೀ ಸೈಕಲ್ ಪ್ರಯಾಣ!

ಹೊಸ ಸೇರ್ಪಡೆ

3kannada

ಅದ್ದೂರಿ ರಾಜ್ಯೋತ್ಸವಕ್ಕೆ ಒತ್ತಾಯ

2life

ಆದರ್ಶ ನಂಬಿದ ಬದುಕು ಮಾದರಿ: ಡಾ|ಅಪ್ಪ

Road accident

ರಸ್ತೆ ಅಪಘಾತ: ವರ್ಷಕ್ಕೆ 2.91 ಲಕ್ಷ ಕೋಟಿ ನಷ್ಟ!

1election

ಚಿತ್ತಾಪುರ ಎಂಎಲ್‌ಎ ಸೋಲಿಸಲು ರಣತಂತ್ರ

High court of karnataka

ವರದಿಗೆ ಪ್ರತಿಕ್ರಿಯೆ ನೀಡಲು ಸರ್ಕಾರಕ್ಕೆ ಹೈ ಸೂಚನೆ‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.