ಭಜರಂಗಿಯಲ್ಲಿ ರಗಡ್ ಶ್ರುತಿ: ಹೆಚ್ಚಾಗುತ್ತಿದೆ ಸಿನಿಮಾ ನಿರೀಕ್ಷೆ
Team Udayavani, Sep 20, 2021, 12:00 PM IST
ನಟಿ ಶ್ರುತಿ “ಭಜರಂಗಿ-2′ ಚಿತ್ರ ದಲ್ಲಿ ನಟಿಸಿರೋದು ನಿಮಗೆ ಗೊತ್ತಿರಬಹುದು. ಚಿತ್ರದಲ್ಲಿ ಅವರು ರಗಡ್ ಲುಕ್ ನಲ್ಲಿಕಾಣಿಸಿಕೊಂಡಿದ್ದಾರೆ. ಈ ಹಿಂದೆ ಬಿಡುಗಡೆಯಾದ ಟೀಸರ್ ನಲ್ಲಿ ಅವರ ಲುಕ್‌ನ ಝಲಕ್ ಕಂಡು ಖುಷಿಯಾದವರಿಗೆ ಈಗ ಚಿತ್ರ ತಂಡ ಮತ್ತೊಂದು ಗೆಟಪ್ ಬಿಟ್ಟಿದೆ.
ಶ್ರುತಿ ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ “ಭಜರಂಗಿ-2′ ತಂಡ ಹೊಸ ಪೋಸ್ಟರ್ ಬಿಟ್ಟಿದ್ದು, ಇದರಲ್ಲೂ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಣೆಮೇಲೆ ದೊಡ್ಡ ಕುಂಕುಮ, ಬೆಂಕಿಯುಗುಳುವ ಕಣ್ಣುಗಳು, ರಗಡ್ ಲುಕ್‌ನಲ್ಲಿ ಕುಳಿತಿರುವ ಶ್ರುತಿಯವರನ್ನು ಕಂಡಾಗ ಅವರ ಪಾತ್ರದ ಬಗ್ಗೆ ಕುತೂಹಲ ಹುಟ್ಟೋದು ಸಹಜ. ಇಷ್ಟು ವರ್ಷ ಸಾಫ್ಟ್ ಪಾತ್ರಗಳ ಮೂಲಕ ಗಮನ ಸೆಳೆದಿದ್ದ ಶ್ರುತಿ ಈಗ
ರಗಡ್ ಪಾತ್ರ ಮಾಡಲು ಕಾರಣವೇನು ಎಂದು ನೀವು ಕೇಳಬಹುದು. ಇದಕ್ಕೆ ಸ್ವತಃ ಶ್ರುತಿಯವರೇ ಉತ್ತರಿಸಿದ್ದಾರೆ. “ಇಲ್ಲಿ ನನ್ನದು, ಜನರನ್ನು ಹೆದರಿಸುವಂತಹ ಪಾತ್ರ. ಕೈಯಲ್ಲಿ ಚುಟ್ಟಾ ಹಿಡಿದು ರಗಡ್ ಆಗಿಯೇ ಕಾಣಿಸಿಕೊಳ್ಳುತ್ತೇನೆ’ ಎಂಬುದು ಶ್ರುತಿಯವರ ಮಾತು.
ಇದನ್ನೂ ಓದಿ:ಮತ್ತೊಂದು ಬಾರಿ ನಾಗವಲ್ಲಿಯಾಗಲು ಒಪ್ಪಿಗೆ ಕೊಟ್ಟ ಅನುಷ್ಕಾ ಶೆಟ್ಟಿ
ಶ್ರುತಿಯವರ ಪಾತ್ರವನ್ನು ಮೆಚ್ಚಿ ಸ್ವತಃ ಶಿವಣ್ಣ ಅವರು ಫೋನ್ ಮಾಡಿದ್ದರಂತೆ. ಜೊತೆಗೆ ಸಾಕಷ್ಟು ಮಂದಿ ಫೋನ್ ಮಾಡಿ, ಮೆಚ್ಚುಗೆ ಸೂಚಿಸಿದ್ದಾರೆ. ಆರಂಭದಲ್ಲಿ ನಿರ್ದೇಶಕ ಹರ್ಷ ಬಂದು, ಈ ತರಹದ ಒಂದು ಪಾತ್ರವಿದೆ ನೀವೇ ಮಾಡಬೇಕು ಎಂದಾಗ ಶ್ರುತಿಯವರಿಗೆ ಭಯವಾಗಿತ್ತು. ಅದಕ್ಕೆ ಕಾರಣ, ಈ ಹಿಂದಿನ ಇಮೇಜ್.
“ಇಷ್ಟು ದಿನ ಮೃದು ಪಾತ್ರಗಳನ್ನು ಮಾಡುತ್ತಾ ಬಂದ ನಾನು ಏಕಾಏಕಿ ಈ ತರಹದ ಪಾತ್ರ ಮಾಡಿದರೆ ಜನ ಒಪ್ಪುತ್ತಾರಾ ಎಂಬ ಭಯ ಕಾಡಿತ್ತು’ ಆದರೆ, ನಿರ್ದೇಶಕ ಹರ್ಷ ಅವರಿಗೆ ಮಾತ್ರ ಅಗಾಧವಾದ ನಂಬಿಕೆ ಇತ್ತಂತೆ. “ಆ ಕಾರಣದಿಂದಲೇ ಹಳೆಯ ಇಮೇಜ್ ಬೇಡ ಎಂದು ಈ ರೀತಿಯ ಹೊಸ ಇಮೇಜ್ ಕೊಟ್ಟರು’ ಎನ್ನುತ್ತಾರೆ ಶ್ರುತಿ.
ಶಿವರಾಜ್ ಕುಮಾರ್ ನಾಯಕರಾಗಿರುವ “ಭಜರಂಗಿ-2′ ಚಿತ್ರ ಈಗಾಗಲೇ ದೊಡ್ಡಮಟ್ಟದ ನಿರೀಕ್ಷೆ ಹುಟ್ಟಿಸಿದ್ದು, ಚಿತ್ರ ಮಂದಿರಗಳಿಗೆ ಪೂರ್ಣ ಪ್ರವೇಶಾತಿ ನೀಡಿದ ಕೂಡಲೇ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಎ.ಹರ್ಷ ನಿರ್ದೇಶಿಸಿದ್ದು, ಜಯಣ್ಣ ನಿರ್ಮಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…