‘ಶಿವಣ್ಣ ಯಾವಾಗ ಬರ್ತಾರೆ, ಯಾವಾಗ ಹೋಗ್ತಾರೆ ಅಂತ ಗೊತ್ತಾಗಲ್ಲ’
Team Udayavani, Oct 13, 2017, 9:04 PM IST
ಸುದೀಪ್ ಇತ್ತೀಚೆಗೆ ಬ್ಯಾಂಕಾಕ್‌ನಲ್ಲಿ ‘ದಿ ವಿಲನ್’ ಚಿತ್ರದ ಇನ್ನೊಂದು ಹಂತದ ಚಿತ್ರೀಕರಣ ಮುಗಿಸಿಕೊಂಡು ಬಂದಿದ್ದಾರೆ. ಈಗಾಗಲೇ ಅವರು ‘ದಿ ವಿಲನ್’ ಚಿತ್ರಕ್ಕಾಗಿ ಪ್ರೇಮ್ ಜೊತೆಗೆ ಸಾಕಷ್ಟು ಸುತ್ತಾಡಿದ್ದಾರೆ. ಬೆಂಗಳೂರು, ಚಿಕ್ಕಮಗಳೂರು, ಲಂಡನ್, ಬ್ಯಾಂಕಾಕ್, ಶಿವಮೊಗ್ಗ, ಬೆಳಗಾವಿ ಅಂತ ಸಾಕಷ್ಟು ಸಮಯ ಕಳೆದಿದ್ದಾರೆ. ಇಷ್ಟು ದಿನಗಳಲ್ಲಿ ಪ್ರೇಮ್ ಒಬ್ಬ ಪ್ಯಾಶನೇಟ್ ನಿರ್ದೇಶಕ ಎಂದು ಅರ್ಥ ಮಾಡಿಕೊಂಡಿದ್ದಾರೆ.
‘ಪ್ರೇಮ್ ತುಂಬಾ ಬಿಲ್ಡಪ್ ಕೊಡುತ್ತಾರೆ, ಶೋ ಆಫ್ ಮಾಡುತ್ತಾರೆ ಅಂತ ಕೇಳಿದ್ದೆ. ಆದರೆ, ಅವರ ಜೊತೆಗೆ ಕೆಲಸ ಮಾಡಿದ ಮೇಲೆ ಆತ ಎಷ್ಟು ಪ್ಯಾಶನೇಟ್ ಅಂತ ಅರ್ಥವಾಯಿತು. ಅವರ ಪ್ಯಾಶನ್‌ಗೆ ತಲೆ ಬಾಗಲೇಬೇಕು. ಸದಾ ಸಿನಿಮಾ ಬಗ್ಗೆಯೇ ಯೋಚನೆ ಮಾಡುತ್ತಿರುತ್ತಾರೆ. ಆ ಮನುಷ್ಯ ಒಂದು ಕಡೆ ಕೂರಲ್ಲ. ಸರಿಯಾಗಿ ಊಟ ಮಾಡಲ್ಲ. ನಾನು ಬೈದು ಊಟ ಮಾಡಿಸ್ತೀನಿ. ಇನ್ನೂ ಒಂದು ವಿಶೇಷ ಅಂದರೆ, ಆತ ಯಾರಿಗೂ ಬೈಯಲ್ಲ. ಎಲ್ಲರಿಂದಲೂ ಪ್ರೀತಿ ಇಂದ ಕೆಲಸ ತೆಗೆಯುತ್ತಾರೆ. ಅಂತಹ ನಿರ್ದೇಶಕರ ಜೊತೆಗೆ ಕೆಲಸ ಮಾಡುವುದಕ್ಕೆ ನಿಜಕ್ಕೂ ಖುಷಿ. ಇನ್ನು ಶಿವರಾಜಕುಮಾರ್ ಜೊತೆಗೆ ಕೆಲಸ ಮಾಡೋದು ನಿಜಕ್ಕೂ ಸಂತೋಷ. ಅವರು ಯಾವಾಗ ಬರ್ತಾರೆ, ಯಾವಾಗ ಹೋಗುತ್ತಾರೆ ಅನ್ನೋದೇ ಗೊತ್ತಾಗಲ್ಲ. ಅವರು ಯಾವತ್ತೂ ಬರುವಾಗ ಅಹಂ ತರುವುದಿಲ್ಲ. ಹಾಗಾಗಿ ಬಹಳ ಖುಷಿಯಾಗತ್ತೆ ಅವರ ಜೊತೆಗೆ ಕೆಲಸ ಮಾಡೋಕೆ. ಇನ್ನು ಪ್ರೇಮ್, ನಮ್ಮಿಬ್ಬರ ಪಾತ್ರವನ್ನ ಬಹಳ ಚೆನ್ನಾಗಿ ಬ್ಯಾಲೆನ್ಸ್ ಮಾಡಿದ್ದಾರೆ’ ಎಂದು ಖುಷಿಯಾಗುತ್ತಾರೆ ಸುದೀಪ್.
ಇನ್ನು ಇತ್ತೀಚೆಗೆ ಬ್ಯಾಂಕಾಕ್‌ನಲ್ಲಿ ನಡೆದ ಚೇಸ್ ಸನ್ನಿವೇಶಗಳ ಬಗ್ಗೆ ಅವರಿಗೆ ಬಹಳ ಸಂತೋಷವಿದೆ. ‘ಬ್ಯಾಂಕಾಕ್‌ನಲ್ಲಿ ಬಹಳ ವ್ಯವಸ್ಥಿತವಾಗಿ ಚಿತ್ರೀಕರಣ ಮಾಡಿದ್ದಾರೆ. ಬರೀ ಪ್ರೇಮ್ ಒಬ್ಬರೇ ಅಲ್ಲ, ಇಡೀ ತಂಡ ಅದರಲ್ಲಿ ತೊಡಗಿಸಿಕೊಂಡಿದ್ದು ನೋಡಿ ಖುಷಿಯಾಯ್ತು. ಆ ಚಿತ್ರ ಹೇಗೆ ಬರುತ್ತದೆ ಎಂಬ ಕುತೂಹಲ ಇದೆ. ಚಿತ್ರ ಏನೇ ಆಗಲೀ, ತುಂಬಾ ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ’ ಎನ್ನುತ್ತಾರೆ ಸುದೀಪ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ಮಹಾರಥೋತ್ಸವ
ಶಂಕರನಾರಾಯಣ : ವಾರಾಹಿ ನದಿಯಲ್ಲಿ ಮುಳುಗಿ ರೈತ ಸಾವು
ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಶ್ರೀ ಆಯ್ಕೆ
ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು
ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್
ಹೊಸ ಸೇರ್ಪಡೆ
ಆಂಧ್ರಪ್ರದೇಶ: ಸಿಲಿಂಡರ್ ಸ್ಫೋಟ- ಮನೆ ಕುಸಿದು ಬಿದ್ದು 3 ವರ್ಷದ ಮಗು ಸೇರಿ ನಾಲ್ವರು ಸಾವು
ಕನ್ನಡಿಗರಿಗೆ ತೊಂದರೆಯಾದರೆ ಕರ್ನಾಟಕ ಸರ್ಕಾರ ಸಹಿಸಿಕೊಳ್ಳುವುದಿಲ್ಲ: ಸಿಎಂ ಬೊಮ್ಮಾಯಿ
ಗರ್ಭಗುಡಿಯ ಮೂರ್ತಿ ಶ್ರೀಚಕ್ರ ಸ್ಥಳಾಂತರ: ಸ್ಥಳಕ್ಕೆ ಭೇಟಿ ನೀಡದ ಸಚಿವ ಆನಂದ್ ಸಿಂಗ್; ಆಕ್ರೋಶ
‘ವೀಲ್ ಚೇರ್ ರೋಮಿಯೋ’ ಚಿತ್ರ ವಿಮರ್ಶೆ; ವೀಲ್ಚೇರ್ನಿಂದ ಮೇಲೇಳುವ ಸಿನಿಮಾವಿದು…
ಎಸಿಬಿ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಮಾಜಿ ಪೊಲೀಸ್ ಸಿಬ್ಬಂದಿ