ಸೂರಜ್‌ಗೌಡ ಈಗ ನಿರ್ದೇಶಕ

Team Udayavani, Jan 6, 2020, 12:30 PM IST

cinema-tdy-2

ಸೂರಜ್‌ ಗೌಡ ಅಭಿನಯದ “ನಿನ್ನ ಸನಿಹಕೆ’ ಚಿತ್ರ ಇನ್ನೇನು ಒಂದು ಸಾಂಗ್‌ ಮತ್ತು ಒಂದು ಫೈಟ್‌ ಚಿತ್ರೀಕರಿಸಿದರೆ ಚಿತ್ರೀಕರಣ ಪೂರ್ಣಗೊಳ್ಳಲಿದೆ. ಈಗ ಈ ಚಿತ್ರದ ಅಪ್‌ಡೇಟ್‌ ಏನೆಂದರೆ, ಸೂರಜ್‌ಗೌಡ ನಟನೆ ಜೊತೆಯಲ್ಲಿ ಇದೇ ಮೊದಲ ಸಲ ನಿರ್ದೇಶನಕ್ಕೂ ಇಳಿದಿದ್ದಾರೆ.

ಹೌದು, ಚಿತ್ರದಲ್ಲೊಂದು ಬದಲಾವಣೆ ಅಂದರೆ, ಸೂರಜ್‌ ಗೌಡ ನಿರ್ದೇಶಕರಾಗಿರೋದು. ಹಾಗಂತ, ನಿರ್ದೇಶನ ಮಾಡಲೇಬೇಕು ಅಂತ ಮಾಡಿದ್ದಲ್ಲ. ಆಕಸ್ಮಿಕ ಎಂಬಂತೆ ಅವರ ಪಾಲಿಗೆ ನಿರ್ದೇಶನದ ಜವಾಬ್ದಾರಿ ಬಂದಿದೆ. ಹಾಗಾದರೆ, ಸೂರಜ್‌ಗೌಡ ಹೀಗೆ ದಿಢೀರನೆ ನಿರ್ದೇಶಕರಾಗಲು ಕಾರಣವಿಷ್ಟೇ.

ಸುಮನ್‌ ಜಾದುಗಾರ್‌ ಅವರು “ನಿನ್ನ ಸನಿಹಕೆ’ ಚಿತ್ರ ನಿರ್ದೇಶಕರು. ಮೂರು ದಿನಗಳ ಕಾಲ ಅವರು ನಿರ್ದೇಶನವನ್ನೂ ಮಾಡಿದ್ದರು. ಆದರೆ, ಬೈಕ್‌ ಅಪಘಾತದಿಂದಾಗಿ ಅವರು ಕೈಗೆ ಪೆಟ್ಟು ತಿಂದು ವಿಶ್ರಾಂತಿ ಪಡೆಯಬೇಕಾಯಿತು. ಆದರೆ, ಚಿತ್ರಕ್ಕೆ ಎಲ್ಲಾ ತಯಾರುನಡೆದಿದ್ದರಿಂದ, ಅದನ್ನು ಸೂರಜ್‌ಗೌಡ ಅವರು ಮುಂದುವರೆಸಬೇಕು ಎಂಬ ಸೂಚನೆ ನಿರ್ಮಾಪಕರಿಂದ ಸಿಕ್ಕಿತು. ಸೂರಜ್‌ಗೌಡ ಅವರ ಕಥೆ ಆಗಿದ್ದರಿಂದ, ಅವರೂ ಸ್ಕ್ರಿಪ್ಟ್ನಲ್ಲಿ ತೊಡಗಿದ್ದರಿಂದ ಚಿತ್ರದ ಪ್ರತಿಯೊಂದು ಸೀನ್‌ ಬಗ್ಗೆಯೂ ಗೊತ್ತಿತ್ತು. ಕೊನೆಗೆ, ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಸೂರಜ್‌ಗೌಡ ಅವರೇ ಆ್ಯಕ್ಷನ್‌-ಕಟ್‌ ಹೇಳ್ಳೋಕೆ ಮುಂದಾದರು. ಹದಿನೈದು ದಿನಗಳ ಬಳಿಕ ನಿರ್ದೇಶಕ ಸುಮನ್‌ ಜಾದುಗಾರ್‌ ಬಂದು ಚಿತ್ರದ ಔಟ್‌ಪುಟ್‌ ನೋಡಿದಾಗ, ಖುಷಿಪಟ್ಟು, ಇದನ್ನು ಸೂರಜ್‌ಗೌಡ ಅವರೇ ಮುಂದುವರೆಸಲಿ, ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ ಅಂತ ಪ್ರೋತ್ಸಾಹಿಸಿದ್ದಾರೆ. ಹಾಗಾಗಿ, ಸೂರಜ್‌ಗೌಡ ಅವರೇ ಚಿತ್ರವನ್ನು ನಿರ್ದೇಶಿಸುವಂತಾಗಿದೆ.  ನಿರ್ದೇಶನ ಕುರಿತು ಹೇಳುವ ಸೂರಜ್‌ಗೌಡ, “ಮೊದಲ ಸಲ ನಿರ್ದೇಶನ ಮಾಡಿದ್ದೇನೆ. ಹಾಗಂತ ಯಾವುದೇ ಯೋಚನೆ ಇರಲಿಲ್ಲ. ಸಿನಿಮಾ ಬಗ್ಗೆ ತಿಳಿದಿತ್ತು. ಫಿಲ್ಮ್ ಮೇಕಿಂಗ್‌ ಹೇಗೆ ಅನ್ನುವುದು ಗೊತ್ತಿತ್ತು. ಸ್ಕ್ರಿಪ್ಟ್ ನನ್ನದೇ ಆಗಿದ್ದರಿಂದ ಅನಿವಾರ್ಯವಾಗಿ ಆ್ಯಕ್ಷನ್‌-ಕಟ್‌ ಹೇಳಬೇಕಾಯಿತು. ಕೆಲಸ ಸಾರ್ಥಕ ಎನಿಸಿದೆ. ಎಲ್ಲರಿಗೂ ಚಿತ್ರದ ಮೇಲೆ ನಂಬಿಕೆಯೂ ಬಂದಿದೆ. ನಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಚೆನ್ನಾಗಿ ಮೂಡಿಬಂದಿದೆ. ಧನ್ಯಾ ರಾಮ್‌ಕುಮಾರ್‌ ಅವರು ತುಂಬಾನೇ ಚೆನ್ನಾಗಿ ನಟಿಸಿದ್ದಾರೆ. ಸಿನಿಮಾ ನೋಡಿದವರು ಅವರ ಮೊದಲ ಚಿತ್ರವಿದು ಎಂದು ಹೇಳುವುದಿಲ್ಲ. ಅವರಿಗಿಲ್ಲಿ ನಟನೆಗೆ ಸಾಕಷ್ಟು ಸ್ಕೋಪ್‌ ಇದೆ. ಕಷ್ಟಪಟ್ಟು ಎನ್ನುವುದಕ್ಕಿಂತ ಇಷ್ಟಪಟ್ಟು ಚಿತ್ರ ಮಾಡಿದ್ದೇವೆ. ಒಳ್ಳೆಯ ಟೀಮ್‌ ಜೊತೆಗಿತ್ತು. ಹಾಗಾಗಿ ಎಲ್ಲೂ ಸಮಸ್ಯೆ ಆಗಿಲ್ಲ’ ಎನ್ನುವ ಸೂರಜ್‌ ಗೌಡ, ಏಪ್ರಿಲ್‌ 24ರಂದು ಡಾ.ರಾಜಕುಮಾರ್‌ ಅವರ ಹುಟ್ಟುಹಬ್ಬಕ್ಕೆ ಚಿತ್ರ ಬಿಡುಗಡೆ ಮಾಡುವ ಯೋಚನೆ ಇದೆ. ಆ ಬಗ್ಗೆ ಚರ್ಚೆ ನಡೆಯುತ್ತಿದೆ’ ಎನ್ನುತ್ತಾರೆ.

ಟಾಪ್ ನ್ಯೂಸ್

ಚಿಕ್ಕಮಗಳೂರಿನ ಶಾಲೆಯಲ್ಲಿ ಹೆಚ್ಚಿದ ಕೋವಿಡ್ ಆತಂಕ: ನಾಲ್ಕೇ ದಿನದಲ್ಲಿ 107 ಪ್ರಕರಣಗಳು ಪತ್ತೆ!

ಚಿಕ್ಕಮಗಳೂರಿನ ಶಾಲೆಯಲ್ಲಿ ಹೆಚ್ಚಿದ ಕೋವಿಡ್ ಆತಂಕ: ನಾಲ್ಕೇ ದಿನದಲ್ಲಿ107 ಪ್ರಕರಣಗಳು ಪತ್ತೆ!

1cow

ವಾಹನಕ್ಕೆ ಹಗ್ಗ ಕಟ್ಟಿ ಮೃತ ಗೋವುಗಳ ಸಾಗಾಟ: ಆಕ್ರೋಶ

ಡಿಸೆಂಬರ್‌ 31ರ ಮೇಲೆ ಸಿನಿಮಂದಿ ಕಣ್ಣು: ಒಂದೇ ದಿನ 4 ಸಿನಿಮಾ

ಡಿಸೆಂಬರ್‌ 31ರ ಮೇಲೆ ಸಿನಿಮಂದಿ ಕಣ್ಣು: ಒಂದೇ ದಿನ 4 ಸಿನಿಮಾ

Jacqueline Fernandez

ವಂಚನೆ ಪ್ರಕರಣ: ಜಾಕ್ವೆಲಿನ್ ಫರ್ನಾಂಡಿಸ್ ಗೆ ದೇಶ ತೊರೆಯದಂತೆ ತಡೆದ ಅಧಿಕಾರಿಗಳು!

rwytju11111111111

ಸೋಮವಾರದ ರಾಶಿ ಫಲ : ಇಲ್ಲಿದೆ ಓದಿ ನಿಮ್ಮ ಗ್ರಹಬಲ

ಸಂಪುಟ ವಿಸ್ತರಣೆಯ ಪಿಸುಮಾತು; ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಗರಿಗೆದರಿದೆ ಹಲವು ನಿರೀಕ್ಷೆ

ಸಂಪುಟ ವಿಸ್ತರಣೆಯ ಪಿಸುಮಾತು; ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಗರಿಗೆದರಿದೆ ಹಲವು ನಿರೀಕ್ಷೆ

ಜನವರಿಯಲ್ಲಿ ಮತ್ತೆ ಕಾರು ಬೆಲೆ ಹೆಚ್ಚಳ?

ಜನವರಿಯಲ್ಲಿ ಮತ್ತೆ ಕಾರು ಬೆಲೆ ಹೆಚ್ಚಳ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಡಿಸೆಂಬರ್‌ 31ರ ಮೇಲೆ ಸಿನಿಮಂದಿ ಕಣ್ಣು: ಒಂದೇ ದಿನ 4 ಸಿನಿಮಾ

ಡಿಸೆಂಬರ್‌ 31ರ ಮೇಲೆ ಸಿನಿಮಂದಿ ಕಣ್ಣು: ಒಂದೇ ದಿನ 4 ಸಿನಿಮಾ

ಹಿಂದೆಂದೂ ಕಾಣದ ಸಿನಿಮಾ ಅನುಭವ!: ಪುನೀತ್ ಡ್ರೀಮ್ ಪ್ರಾಜೆಕ್ಟ್ ಬಗ್ಗೆ ಅಶ್ವಿನಿ ಟ್ವೀಟ್

ಹಿಂದೆಂದೂ ಕಾಣದ ಸಿನಿಮಾ ಅನುಭವ!: ಪುನೀತ್ ಡ್ರೀಮ್ ಪ್ರಾಜೆಕ್ಟ್ ಬಗ್ಗೆ ಅಶ್ವಿನಿ ಟ್ವೀಟ್

varada

ವಿನೋದ್‌ ಪ್ರಭಾಕರ್‌ ನಟನೆಯ ‘ವರದ’ ಟೀಸರ್‌ ರಿಲೀಸ್‌

1-fddsf

ನಟಿ ಜಾಕ್ವೆಲಿನ್ ಗೆ 10 ಕೋಟಿ ರೂ ಮೌಲ್ಯದ ಉಡುಗೊರೆ ನೀಡಿದ ಸುಕೇಶ್: ವರದಿ

8shivram

ಬಹಳ ಜನರಿಗೆ ಗೊತ್ತಿಲ್ಲ, ಕಲಾವಿದರ ಸಂಘಕ್ಕೆ ಮೂಲ ಪುರುಷ ಶಿವರಾಂ: ಅನಂತ್‍ನಾಗ್

MUST WATCH

udayavani youtube

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ: ಬಿಎಸ್‌ವೈ

udayavani youtube

ನಾಗಾಲ್ಯಾಂಡ್ ನಲ್ಲಿ ನಾಗರಿಕರ ಮೇಲೆ ಗುಂಡಿನ ದಾಳಿ

udayavani youtube

ಕೌಟುಂಬಿಕ ಮೌಲ್ಯಗಳು ಕುಸಿಯಲು ಕಾರಣವೇನು ?

udayavani youtube

ಬೆಳ್ತಂಗಡಿ : ಅಂತೂ ಬಲೆಗೆ ಬಿತ್ತು ತೋಟದಲ್ಲಿ ಪ್ರತ್ಯಕ್ಷವಾದ ಮೊಸಳೆ

udayavani youtube

ಸಾಹೇಬ್ರಕಟ್ಟೆ ಬಳಿ ಸರಣಿ ಅಪಘಾತ; ಓರ್ವ ಸಾವು, ಇಬ್ಬರಿಗೆ ಗಾಯ

ಹೊಸ ಸೇರ್ಪಡೆ

2meet

ದನಗಳನ್ನು ಕದ್ದು ಮಾಂಸ ಮಾರುತ್ತಿದ್ದ ಇಬ್ಬರ ಬಂಧನ

ಚಿಕ್ಕಮಗಳೂರಿನ ಶಾಲೆಯಲ್ಲಿ ಹೆಚ್ಚಿದ ಕೋವಿಡ್ ಆತಂಕ: ನಾಲ್ಕೇ ದಿನದಲ್ಲಿ 107 ಪ್ರಕರಣಗಳು ಪತ್ತೆ!

ಚಿಕ್ಕಮಗಳೂರಿನ ಶಾಲೆಯಲ್ಲಿ ಹೆಚ್ಚಿದ ಕೋವಿಡ್ ಆತಂಕ: ನಾಲ್ಕೇ ದಿನದಲ್ಲಿ107 ಪ್ರಕರಣಗಳು ಪತ್ತೆ!

1cow

ವಾಹನಕ್ಕೆ ಹಗ್ಗ ಕಟ್ಟಿ ಮೃತ ಗೋವುಗಳ ಸಾಗಾಟ: ಆಕ್ರೋಶ

ಡಿಸೆಂಬರ್‌ 31ರ ಮೇಲೆ ಸಿನಿಮಂದಿ ಕಣ್ಣು: ಒಂದೇ ದಿನ 4 ಸಿನಿಮಾ

ಡಿಸೆಂಬರ್‌ 31ರ ಮೇಲೆ ಸಿನಿಮಂದಿ ಕಣ್ಣು: ಒಂದೇ ದಿನ 4 ಸಿನಿಮಾ

Jacqueline Fernandez

ವಂಚನೆ ಪ್ರಕರಣ: ಜಾಕ್ವೆಲಿನ್ ಫರ್ನಾಂಡಿಸ್ ಗೆ ದೇಶ ತೊರೆಯದಂತೆ ತಡೆದ ಅಧಿಕಾರಿಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.