Upadhyaksha; ಸದ್ದು ಮಾಡುತ್ತಿದೆ ಚಿಕ್ಕಣ್ಣ ಅಭಿನಯದ ‘ಉಪಾಧ್ಯಕ್ಷ’ ಟ್ರೇಲರ್
Team Udayavani, Jan 16, 2024, 11:34 AM IST
ಡಿ. ಎನ್ ಸಿನಿಮಾಸ್’ ಲಾಂಛನದಲ್ಲಿ ಸ್ಮಿತಾ ಉಮಾಪತಿ ನಿರ್ಮಿಸಿರುವ, ಅನಿಲ್ ಕುಮಾರ್ ನಿರ್ದೇಶನದ ಹಾಗೂ ಚಿಕ್ಕಣ್ಣ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ “ಉಪಾಧ್ಯಕ್ಷ’ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ನಟ ಶಿವರಾಜಕುಮಾರ್ “ಉಪಾಧ್ಯಕ್ಷ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
“ಉಪಾಧ್ಯಕ್ಷ’ ಸಿನಿಮಾ “ಅಧ್ಯಕ್ಷ’ ಸಿನಿಮಾದ ಮುಂದುವರೆದ ಭಾಗ’ ಎಂದು ಮಾತು ಆರಂಭಿಸಿದ ನಿರ್ದೇಶಕ ಅನಿಲ್ ಕುಮಾರ್, “ಅಧ್ಯಕ್ಷ’ ಸಿನಿಮಾದ ಕಥೆ ಎಲ್ಲಿಗೆ ನಿಂತಿತ್ತೋ, ಅಲ್ಲಿಂದ “ಉಪಾಧ್ಯಕ್ಷ’ ಸಿನಿಮಾದ ಕಥೆ ಆರಂಭವಾಗುತ್ತದೆ. ಇದೊಂದು ಪಕ್ಕಾ ಮನೋರಂಜನಾತ್ಮಕ ಸಿನಿಮಾ. ಮನರಂಜನೆಗೆ ಬೇಕಾದ ಎಲ್ಲ ಅಂಶಗಳೂ “ಉಪಾಧ್ಯಕ್ಷ’ ಸಿನಿಮಾದಲ್ಲಿದೆ’ ಎಂದು ಮಾಹಿತಿ ನೀಡಿದರು.
“ಇಲ್ಲಿಯವರೆಗೆ ಸುಮಾರು 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದೇನೆ. ನಾಯಕನಾಗಿ ಇದು ಮೊದಲ ಸಿನಿಮಾ. “ಉಪಾಧ್ಯಕ್ಷ’ ಕುಟುಂಬ ಸಮೇತ ನೋಡಬಹುದಾದ ಸಿನಿಮಾ. ಇದಕ್ಕಾಗಿ ಸಾಕಷ್ಟು ಶ್ರಮವಹಿಸಿದ್ದೇನೆ. ಎಲ್ಲರೂ ನೋಡಿ ಸಿನಿಮಾವನ್ನು ಬೆಂಬಲಿಸಿ’ ಎಂದರು ನಾಯಕ ನಟ ಚಿಕ್ಕಣ್ಣ
ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದ ನಟ ರವಿಶಂಕರ್, ನಾಯಕಿ ಮಲೈಕಾ, ನಿರ್ಮಾಪಕ ಉಮಾಪತಿ ಸೇರಿದಂತೆ ಅನೇಕ ಕಲಾವಿದರು, ತಂತ್ರಜ್ಞರು “ಉಪಾಧ್ಯಕ್ಷ’ನ ಕುರಿತು ಮಾತನಾಡಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ