ಲಾಸ್ ಏಂಜಲೀಸ್ ಫಿಲ್ಮ್ ಅವಾರ್ಡ್ಸ್ಗೆ ಉರ್ವಿ
Team Udayavani, Apr 1, 2017, 4:02 PM IST
ಪ್ರದೀಪ್ ವರ್ಮ ನಿರ್ದೇಶನದ “ಉರ್ವಿ’ “ಲಾಸ್ ಏಂಜಲೀಸ್ ಫಿಲ್ಮ್ ಅವಾರ್ಡ್ಸ್’ಗೆ ಆಯ್ಕೆಯಾಗಿದೆ. ಚೊಚ್ಚಲ ನಿರ್ದೇಶನದ ಚಿತ್ರವೊಂದು ಲಾಸ್ ಏಂಜಲೀಸ್ನಲ್ಲಿ ರಿಲೀಸ್ ಆಗುತ್ತಿರುವುದರ ಬಗ್ಗೆ ಹೇಳಿಕೊಳ್ಳುವ ನಿರ್ದೇಶಕ ಪ್ರದೀಪ್ ವರ್ಮ, “ನನ್ನ ಮೊದಲ ಸಿನಿಮಾವೊಂದು ವರ್ಲ್ಡ್ ಸಿನಿಮಾಗಳು ಸೇರಿ ಪ್ರದರ್ಶನವಾಗುವ “ಲಾಸ್ ಏಂಜಲೀಸ್ ಫಿಲ್ಮ್ ಅವಾರ್ಡ್ಸ್’ಗೆ ಆಯ್ಕೆಯಾಗಿರುವುದು ಸಂತಸವಾಗಿದೆ. ವಿಶ್ವದ ಹಲವು ಸಿನಿಮಾಗಳು ಈ ಅವಾರ್ಡ್ಸ್ನಲ್ಲಿರಲಿವೆ. ಆ ಸಾಲಿಗೆ “ಉರ್ವಿ’ ಸಿನಿಮಾ ಸೇರಿದೆ. ಏಪ್ರಿಲ್ 10 ರಂದು ಯಾವ ಸಿನಿಮಾಗೆ ಯಾವ ಪ್ರಶಸ್ತಿ ಎಂದು ಅನೌನ್ಸ್ ಮಾಡಲಾಗುತ್ತದೆ. ಈಗಾಗಲೇ ನಮ್ಮ “ಉರ್ವಿ’ ಆಯ್ಕೆಯಾಗಿರುವ ಬಗ್ಗೆ ಆ ಅವಾಡ್ ಕಮಿಟಿಯಿಂದ ಇ-ಮೇಲ್ ಬಂದಿದೆ’ ಎನ್ನುತ್ತಾರೆ ಪ್ರದೀಪ್ ವರ್ಮ.
ಈಗಾಗಲೇ 25 ಫೆಸ್ಟಿವಲ್ಗೆ “ಉರ್ವಿ’ ಸಿನಿಮಾವನ್ನು ಕಳುಹಿಸಲಾಗಿದೆ. ಯಾವ ಚಿತ್ರೋತ್ಸವಗಳಲ್ಲಿ “ಉರ್ವಿ’ಗೆ ಮೆಚ್ಚುಗೆ ಸಿಗುತ್ತೋ ಗೊತ್ತಿಲ್ಲ. ಆದರೆ, ಒಳ್ಳೆಯ ಕಥೆ ಇರುವಂತಹ ಚಿತ್ರ ಎಲ್ಲರಿಗೂ ತಲುಪಬೇಕು ಎಂಬ ಉದ್ದೇಶ ನಮ್ಮದು. ಹಾಗಾಗಿ, ಎಲ್ಲಾ ಚಿತ್ರೋತ್ಸವಗಳಲ್ಲೂ ಸಿನಿಮಾ ಕಳುಹಿಸುವುದಾಗಿ ಹೇಳುವ ನಿರ್ದೇಶಕರು, “ಉರ್ವಿ’ ನೋಡಿದವರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಸಿನಿಮಾ ಬಗ್ಗೆ ಒಳ್ಳೆಯ ವಿಮರ್ಶೆಯೂ ಸಿಕ್ಕಿದೆ.
ಯುಗಾದಿ ಬೇರೆ ಹತ್ತಿರ ಬರುತ್ತಿದೆ. ಬೇವು-ಬೆಲ್ಲದ ರುಚಿ ನಮ್ಮ “ಉರ್ವಿ’ಗೂ ಆಗಿದೆ. ಒಂದು ಸಿನಿಮಾ ಅಂದಮೇಲೆ, ಎರಡನ್ನೂ ಕಾಣಬೇಕು ಎನ್ನುವ ಪ್ರದೀಪ್ ವರ್ಮ, ಸದ್ಯಕ್ಕೆ “ಉರ್ವಿ’ ಬಗ್ಗೆ ಫೋಕಸ್ ಮಾಡುತ್ತಿದ್ದೇನೆ. ಅದಾದ ಬಳಿಕ ಇನ್ನೊಂದು ಸೈಕೋ ಥ್ರಿಲ್ಲರ್ ಸಬೆjಕ್ಟ್ನ ಸ್ಕ್ರಿಪ್ಟ್ ಕೈಗೆತ್ತಿಕೊಳ್ಳುತ್ತೇನೆ. ಅದೊಂದು ವಿಭಿನ್ನ ಪ್ರಯತ್ನವಾಗಿರಲಿದೆ ಎಂದಷ್ಟೇ ಹೇಳುತ್ತಾರೆ ಪ್ರದೀಪ್ ವರ್ಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…