ವಿನಯ್ ರಾಜಕುಮಾರ್ “ಅದೊಂದಿತ್ತು ಕಾಲ” ಬರ್ತ್ ಡೇ ಗಿಫ್ಟ್
Team Udayavani, May 9, 2023, 1:35 PM IST
ನಟ ವಿನಯ್ ರಾಜಕುಮಾರ್ ಅಭಿನಯದ “ಅದೊಂದಿತ್ತು ಕಾಲ’ ಸಿನಿಮಾ ತೆರೆಗೆ ಬರಲು ತಯಾರಾಗುತ್ತಿದೆ. ಈಗಾಗಲೇ “ಅದೊಂದಿತ್ತು ಕಾಲ’ ಸಿನಿಮಾದ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ ಇದೀಗ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ.
ಇದೀಗ ಸಿನಿಮಾದ ನಾಯಕ ನಟ ವಿನಯ್ ರಾಜಕುಮಾರ್ ಹುಟ್ಟುಹಬ್ಬದ ಪ್ರಯುಕ್ತ “ಅದೊಂದಿತ್ತು ಕಾಲ’ ಚಿತ್ರತಂಡ, ಸಿನಿಮಾದ ವಿಶೇಷ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ. ಸದ್ಯ ಬಿಡುಗಡೆಯಾಗಿರುವ ಈ ಸ್ಪೆಷಲ್ ಪೋಸ್ಟರ್ನಲ್ಲಿ ನಾಯಕ ವಿನಯ್ ರಾಜಕುಮಾರ್ ಬುಲೆಟ್ ಬೈಕ್ನಲ್ಲಿ ಮಾಸ್ ಎಂಟ್ರಿ ಕೊಡುವಂತಿದ್ದು, ಪೋಸ್ಟರ್ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.
“ಭುವನ್ ಸಿನಿಮಾಸ್’ ಲಾಂಛನದಡಿಯಲ್ಲಿ ನಿರ್ಮಾಪಕರಾದ ಸುರೇಶ್ ಹಾಗೂ ಎನ್. ಲೋಕೇಶ್ ನಿರ್ಮಿಸುತ್ತಿರುವ “ಅಂದೊಂದಿತ್ತು ಕಾಲ’ ಸಿನಿಮಾಕ್ಕೆ ಕೀರ್ತಿ ನಿರ್ದೇಶನವಿದೆ.
ಸಿನಿಮಾದಲ್ಲಿ ವಿನಯ್ ರಾಜ್ಕುಮಾರ್ ಅವರಿಗೆ ಅದಿತಿ ಪ್ರಭುದೇವ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ನಿಶಾ ಮಿಲನ, ಅರುಣಾ ಬಾಲರಾಜ್ ಮೋಹನ್ ಜುನೇಜಾ, ಕಡ್ಡಿಪುಡಿ ಚಂದ್ರು, ಮಜಾ ಭಾರತ್ ಜಗ್ಗಪ್ಪ, ಧರ್ಮೆಂದ್ರ ಅರಸ್, ಹಿರಿಯ ಸಾಹಿತಿ ಪ್ರೊ. ದೊಡ್ಡರಂಗೇಗೌಡ, ಗೋವಿಂದೇಗೌಡ ಮುಂತಾದವರು “ಅಂದೊಂದಿತ್ತು ಕಾಲ’ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರಕ್ಕೆ ಅಭಿಷೇಕ್ ಛಾಯಾಗ್ರಹಣ, ಎ.ಆರ್. ಕೃಷ್ಣ ಸಂಕಲನವಿದೆ. ಸದ್ಯ ಭರದಿಂದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೇ ಜೂನ್ ತಿಂಗಳಿನಲ್ಲಿ “ಅಂದೊಂದಿತ್ತು ಕಾಲ’ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ