ಪುಷ್ಕರ್‌ ನಿರ್ಮಾಣದಲ್ಲಿ ವಿನಯ್‌ ಚಿತ್ರ

ಬಾಕ್ಸಿಂಗ್‌ ಹಿನ್ನೆಲೆಯ ಸಿನಿಮಾ

Team Udayavani, May 6, 2019, 3:00 AM IST

“ಗೋಧಿ ಬಣ್ಣ ಸಾಧಾರಾಣ ಮೈ ಕಟ್ಟು’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕರಾಗಿ ಎಂಟ್ರಿಕೊಟ್ಟಿರುವ ಪುಷ್ಕರ್‌, ಆ ನಂತರ ತಮ್ಮ ಬ್ಯಾನರ್‌ನಲ್ಲಿ ಹಲವು ವಿಭಿನ್ನ ಜಾನರ್‌ನ ಸಿನಿಮಾಗಳನ್ನು ಮಾಡುತ್ತಲೇ ಬರುತ್ತಿದ್ದಾರೆ.

ಈಗ ಈ ಸಾಲಿಗೆ ಹೊಸ ಸೇರ್ಪಡೆ ವಿನಯ್‌ ರಾಜಕುಮಾರ್‌ ಚಿತ್ರ. ಹೌದು, ಪುಷ್ಕರ್‌ ಈಗ ವಿನಯ್‌ ರಾಜಕುಮಾರ್‌ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಫೋಟೋಶೂಟ್‌ ಕೂಡಾ ನಡೆದಿದೆ. ನಾಳೆ (ಮೇ 7) ವಿನಯ್‌ ರಾಜಕುಮಾರ್‌ ಹುಟ್ಟುಹಬ್ಬ.

ಅಂದು ಈ ಚಿತ್ರಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಪುಷ್ಕರ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾವನ್ನು ಕರಮ್‌ ಚಾವ್ಲಾ ನಿರ್ದೇಶಿಸುತ್ತಿದ್ದಾರೆ. ಈ ಹೆಸರನ್ನು ಎಲ್ಲೋ ಕೇಳಿದ ಹಾಗೆ ಇದೆಯಲ್ಲ ಎಂದೆನಿಸಬಹುದು.

ರಕ್ಷಿತ್‌ ಶೆಟ್ಟಿ ನಿರ್ದೇಶನದ “ಉಳಿದವರು ಕಂಡಂತೆ’, “ಕಿರಿಕ್‌ ಪಾರ್ಟಿ’, “ಹಂಬಲ್‌ ಪೊಲಿಟಿಷಿಯನ್‌ ನೋಗ್‌ರಾಜ್‌’, “ಅವನೇ ಶ್ರೀಮನ್ನಾರಾಯಣ’ ಸೇರಿದಂತೆ ಹಲವು ಸಿನಿಮಾಗಳಿಗೆ ಛಾಯಾಗ್ರಾಹಕರಾಗಿದ್ದ ಕರಮ್‌ ಚಾವ್ಲಾ ಈಗ ನಿರ್ದೇಶಕರಾಗುತ್ತಿದ್ದು, ವಿನಯ್‌ ರಾಜಕುಮಾರ್‌ ಅವರ ಚಿತ್ರ ನಿರ್ದೇಶಿಸುತ್ತಿದ್ದಾರೆ.

ಇದೊಂದು ಸ್ಫೋರ್ಟ್ಸ್ ಹಿನ್ನೆಲೆಯ ಸಿನಿಮಾವಾಗಿದ್ದು, ಬಾಕ್ಸಿಂಗ್‌ ಕುರಿತು ಕಥೆ ಸಾಗಲಿದೆ. ಕಥೆಯ ಆಶಯಕ್ಕೆ ತಕ್ಕಂತೆ ಫೋಟೋಶೂಟ್‌ ಕೂಡಾ ಮಾಡಿಸಲಾಗಿದೆ. ನಿರ್ಮಾಪಕ ಪುಷ್ಕರ್‌ ಕೂಡಾ ವಿನಯ್‌ ಜೊತೆ ಸಿನಿಮಾ ಮಾಡುತ್ತಿರುವ ಬಗ್ಗೆ ಖುಷಿಯಾಗಿದ್ದಾರೆ.

ಅದಕ್ಕೆ ಕಾರಣ ರಾಜ್‌ಕುಟುಂಬದ ನಟನೊಂದಿಗೆ ಮೊದಲ ಬಾರಿಗೆ ಸಿನಿಮಾ ಮಾಡುತ್ತಿರುವುದು ಒಂದು ಕಾರಣವಾದರೆ, ಕ್ರೀಡಾ ಹಿನ್ನೆಲೆಯ ಕಥೆ ಮತ್ತೂಂದು ಕಾರಣ. ಈ ಎರಡು ಅಂಶಗಳು ತನಗೆ ತುಂಬಾ ಹೊಸದಾಗಿರುವುದರಿಂದ ಈ ಸಿನಿಮಾ ಬಗ್ಗೆ ಎಕ್ಸೈಟ್‌ ಆಗಿರುವುದಾಗಿ ಹೇಳುತ್ತಾರೆ ಪುಷ್ಕರ್‌.

ಚಿತ್ರಕ್ಕೆ ಶೀರ್ಷಿಕೆ ಇನ್ನಷ್ಟೇ ಅಂತಿಮವಾಗಬೇಕಿದೆ. ತಮ್ಮ ಸಿನಿಮಾದ ಒಂದಲ್ಲ, ಒಂದು ವಿಭಾಗದಲ್ಲಿ ಹೊಸಬರಿಗೆ ಅವಕಾಶ ನೀಡುತ್ತಾ ಬರುತ್ತಿರುವ ಪುಷ್ಕರ್‌ ಈ ಬಾರಿ ಕರಮ್‌ಗೆ ಮೊದಲ ಬಾರಿಗೆ ನಿರ್ದೇಶನದ ಅವಕಾಶ ನೀಡಿದ್ದಾರೆ.

ಚಿತ್ರದಲ್ಲಿ ವಿನಯ್‌ ಎರಡು ಶೇಡ್‌ನ‌ಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅದಕ್ಕಾಗಿ ಸಾಕಷ್ಟು ವಕೌìಟ್‌ ಕೂಡಾ ಮಾಡಲಿದ್ದಾರೆ. ಜೂನ್‌ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ನಾಯಕಿ ಸೇರಿದಂತೆ ಇತರ ಅಂಶಗಳು ಇನ್ನಷ್ಟೇ ಅಂತಿಮವಾಗಬೇಕಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ