ಸೋದರರ ಸಾವು ದಿಲೀಪ್ಜೀಗೆ ತಿಳಿದಿಲ್ಲ!
Team Udayavani, Sep 5, 2020, 1:23 AM IST
ಮುಂಬಯಿ: ಸಹೋದರರಿಬ್ಬರು ಕೋವಿಡ್ ಸೋಂಕಿಗೆ ಬಲಿಯಾದ ವಿಚಾರವನ್ನು ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಅವರಿಗೆ ಇನ್ನೂ ತಿಳಿಸಿಲ್ಲ ಎಂದು ಅವರ ಪತ್ನಿ ಸಾಯಿರಾ ಬಾನು ಹೇಳಿದ್ದಾರೆ.
ದಿಲೀಪ್ ಸಹೋದರರಾದ ಎಹ್ಸಾನ್ ಖಾನ್ ಮತ್ತು ಅಸ್ಲಾಂ ಖಾನ್ ಇಬ್ಬರೂ ಮುಂಬಯಿನ ಲೀಲಾವತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ದಿಲೀಪ್ ಕುಮಾರ್ ಅವರ ಆರೋಗ್ಯವೂ ಕ್ಷೀಣಿಸಿ ರುವ ಕಾರಣ, ಸದ್ಯಕ್ಕೆ ಅವರಿಗೆ ನೋವಾ ಗುವಂಥ ಯಾವುದೇ ಸುದ್ದಿಯನ್ನೂ ತಲುಪಿಸುತ್ತಿಲ್ಲ. ಹಾಗಾಗಿ, ಸೋದರರ ಸಾವಿನ ಸುದ್ದಿಯನ್ನೂ ಅವರಿಗೆ ಹೇಳಿಲ್ಲ. ಅವರು ಅಮಿತಾಭ್ ಬಚ್ಚನ್ ಅವರ ಅಭಿಮಾನಿಯಾಗಿರುವುದರಿಂದ, ಅವರಿಗೆ ಕೋವಿಡ್ ತಗುಲಿದ ವಿಚಾರ ವನ್ನೂ ಹೇಳಿರಲಿಲ್ಲ. ಇದೇ ವೇಳೆ, 97 ವರ್ಷದ ದಿಲೀಪ್ ಆರೋಗ್ಯ ಕುರಿತು ಮಾಹಿತಿ ನೀಡಿದ ಅವರು, ನಿರ್ಜ ಲೀಕರಣ ದಿಂದಾಗಿ ಇತ್ತೀಚೆಗೆ ಅವರ ರಕ್ತದೊತ್ತಡದಲ್ಲಿ ಏರುಪೇರಾಗಿತ್ತು, ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?