ಕರಣ್ ಜೋಹರ್ ಪಾರ್ಟಿಯಲ್ಲಿ ತನ್ನ ಹೊಸ ಗರ್ಲ್ ಫ್ರೆಂಡ್ ಪರಿಚಯಿಸಿದ ಹೃತಿಕ್ ರೋಶನ್
Team Udayavani, May 26, 2022, 1:14 PM IST
ಪತ್ನಿ ಸುಸೇನ್ ಖಾನ್ ರಿಂದ ದೂರವಾದ ಬಳಿಕ ಹೃತಿಕ್ ರೋಶನ್ ಹೊಸ ಗೆಳತಿಯೊಂದಿಗೆ ಸುತ್ತುತ್ತಿದ್ದಾರೆಂಬ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿತ್ತು. ಈ ಮಾತುಗಳಿಗೆ ಸ್ವತಃ ಬಾಲಿವುಡ್ ಸ್ಟೈಲಿಶ್ ಹೀರೋ ಹೃತಿಕ್ ರೋಶನ್ ಅಧಿಕೃತ ಮುದ್ರೆ ಒತ್ತಿದ್ದಾರೆ.
ಬಾಲಿವುಡ್ ನ ನಿರ್ದೇಶಕ- ನಿರ್ಮಾಪಕ ಕರಣ್ ಜೋಹರ್ ಅವರ ಬರ್ತ್ ಡೇ ಪಾರ್ಟಿಯಲ್ಲಿ ಹೃತಿಕ್ ರೋಶನ್ ಅವರು ತಮ್ಮ ಹೊಸ ಗೆಳತಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಹೃತಿಕ್ ಮತ್ತು ಗೆಳತಿ ಸಬಾ ಅಜಾದ್ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಎಲ್ಲರ ಗಮನ ಸೆಳೆದಿದ್ದಾರೆ.
ವಿಶೇಷವೆಂದರೆ ಹೃತಿಕ್ ಮಾಜಿ ಪತ್ನಿ ಸುಸೇನ್ ಕೂಡಾ ಕರಣ್ ಜೋಹರ್ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಅವರು ತಮ್ಮ ಹೊಸ ಗೆಳೆಯ ಅರ್ಸ್ಲಾನ್ ಗೋನಿ ಜೊತೆ ಪಾರ್ಟಿಗೆ ಹಾಜರಾಗಿದ್ದರು.
ಇದನ್ನೂ ಓದಿ:ಮತ್ತಷ್ಟು ಬಲಿಷ್ಠರಾಗಿ ಮರಳುತ್ತೇವೆ..: ಲಕ್ನೋ ತಂಡ ಮೆಂಟರ್ ಗೌತಮ್ ಗಂಭೀರ್
“ಕರಣ್ ಹುಟ್ಟುಹಬ್ಬದ ಸಮಾರಂಭದಲ್ಲಿ ಸಬಾ ಆಜಾದ್ ಅವರನ್ನು ಹೃತಿಕ್ ತನ್ನ ಗೆಳತಿ ಎಂದು ಪರಿಚಯಿಸಿದರು. ಜೋಡಿ ಪಾರ್ಟಿಯುದ್ದಕ್ಕೂ ಕೈ ಕೂ ಹಿಡಿದು ಕೊಂಡಿದ್ದರು. ಪಾರ್ಟಿಯಲ್ಲಿ ಸಬಾ ಮತ್ತು ಹೃತಿಕ್ ಮಾಜಿ ಪತ್ನಿ ಸುಸೇನ್ ಮಾತನಾಡಿಕೊಂಡರು. ಹೃತಿಕ್ ಮತ್ತು ಸುಸೇನ್ ನಡುವೆ ಎಲ್ಲವೂ ಚೆನ್ನಾಗಿದೆ” ಎಂದು ಮೂಲಗಳು ತಿಳಿಸಿವೆ.
View this post on Instagram