ಕ್ವೀನ್ ಕಂಗನಾ ರಾಣಾವತ್ ರಾಜಕೀಯ ಸೇರ್ತಾರಾ ? ಇಲ್ಲಿದೆ ಸತ್ಯ
Team Udayavani, Feb 21, 2018, 3:33 PM IST
ಮುಂಬಯಿ: ಇರುವುದನ್ನು ಇರುವ ಹಾಗೆಯೇ ಮುಲಾಜಿಲ್ಲದೆ ಹೇಳಿ ಬಿಡುವ ಛಾತಿ ಹೊಂದಿರುವ ಹಾಗೂ ಅದೇ ಕಾರಣಕ್ಕೆ ಸದಾ ವಿವಾದಕ್ಕೆ ಗುರಿಯಾಗುತ್ತಲೇ ಬಂದಿರುವ ಬಾಲಿವುಡ್ ನಟಿ ಕಂಗನಾ ರಾಣಾವತ್ ರಾಜಕೀಯ ಸೇರ್ತಾರಾ ?
ಇಂಥದ್ದೊಂದು ದಟ್ಟ ವದಂತಿ ಈಗ ಕೆಲ ದಿನಗಳಿಂದ ಮಾಧ್ಯಮ ವರ್ತುಲಗಳಲ್ಲಿ ಹರಿದಾಡುತ್ತಿದೆ. ಕಂಗನಾ ರಾಣಾವತ್ ರಾಜಕೀಯ ಸೇರುವ ಇರಾದೆಯಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂಬ ವರದಿಗಳು ಎಲ್ಲರ ಹುಬ್ಬೇರಿಸಿವೆ.
ಈ ವರದಿಗಳ ಸತ್ಯಾಂಶದ ಬಗ್ಗೆ ಕಂಗನಾ ಪ್ರತಿಕ್ರಿಯೆ ಏನು ಎಂದು ತಿಳಿಯುವ ಕುತೂಹಲದಲ್ಲಿ ಬಾಂಬೇ ಟೈಮ್ಸ್ ಕಂಗನಾ ವಕ್ತಾರೆಯನ್ನು ಸಂಪರ್ಕಿಸಿದಾಗ, ಆಕೆ ‘ಈ ಬಗೆಯ ವದಂತಿಗಳು ಕೇವಲ ಊಹಾಪೋಹದ ವರದಿಗಳು ಮತ್ತು ಅವು ಸಂಪೂರ್ಣ ಸುಳ್ಳು; ಕಂಗನಾ ರಾಣಾವತ್ ರಾಜಕೀಯ ಸೇರುವ ಪ್ರಶ್ನೆಯೇ ಇಲ್ಲ’ ಎಂದು ಕಡ್ಡಿ ಮುರಿದಂತೆ ಉತ್ತರಿಸಿದ್ದಾರೆ.
ಈಚೆಗೆ ಬಿಕಾನೇರ್ನಲ್ಲಿ ಮಣಿ ಕರ್ಣಿಕಾ ಚಿತ್ರದ ಶೂಟಿಂಗ್ ನಡೆಯುತ್ತಿದ್ದ ವೇಳೆ ಕಂಗನಾ ತಾನು ‘ರಾಜಕೀಯ ಸೇರುವ ಬಗೆಗಿನ ವದಂತಿಗಳು, ವರದಿಗಳು ಸಂಪೂರ್ಣ ಸುಳ್ಳು; ಅವುಗಳಲ್ಲಿ ಯಾವುದೇ ಹುರುಳಿಲ್ಲ’ ಎಂದು ಖುದ್ದಾಗಿ ಹೇಳಿದ್ದರು. ತನ್ನ ಮುಂದೆ ಸಾಲು ಸಾಲು ಚಿತ್ರಗಳೇ ಇರುವಾಗ ತಾನು ಅವುಗಳನ್ನು ಬಿಟ್ಟು ರಾಜಕೀಯವನ್ನು ಯಾಕಾದರೂ ಸೇರಿಯೇನು ? ಎಂದು ಕಂಗನಾ ಮಾಧ್ಯಮದವರನ್ನೇ ಪ್ರಶ್ನಿಸಿದ್ದರು.
ಕಂಗನಾ ರಾಣಾವತ್ ಪ್ರಕೃತ “ಮಣಿಕರ್ಣಿಕಾ : ದಿ ಕ್ವೀನ್ ಆಫ್ ಝಾನ್ಸಿ’ ಚಿತ್ರದಲ್ಲಿ ರಾಣಿ ಲಕ್ಷ್ಮೀ ಬಾಯಿಯಾಗಿ ನಟಿಸುತ್ತಿದ್ದಾಳೆ. ಕೃಷ್ ನಿರ್ದೇಶನದ ಈ ಚಿತ್ರ ಈ ವರ್ಷವೇ ತೆರೆ ಕಾಣಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ