Rishab Shetty ‘ಕಾಂತಾರ 2’ ಚಿತ್ರದ ಮುಹೂರ್ತಕ್ಕೆ ಡೇಟ್ ಫಿಕ್ಸ್?
ಚಿತ್ರೀಕರಣಕ್ಕೆ ಈ ಕಾಲ ತುಂಬಾ ಅಗತ್ಯವಾಗಿದೆ...
Team Udayavani, Jun 14, 2023, 4:42 PM IST
ಬೆಂಗಳೂರು : ಬ್ಲಾಕ್ಬಸ್ಟರ್ ಚಿತ್ರ ‘ಕಾಂತಾರ’ ಎರಡನೇ ಭಾಗವನ್ನು ತೆರೆಗೆ ತರಲಾಗುತ್ತದೆ ಎಂದು ನಟ-ನಿರ್ದೇಶಕ ರಿಷಬ್ ಶೆಟ್ಟಿ ಈಗಾಗಲೇ ಘೋಷಿಸಿದ್ದು, ಆಗಸ್ಟ್ 27 ರಂದು ಚಿತ್ರದ ಮುಹೂರ್ತ ನಡೆಯಲಿದೆ ಎಂದು ತಿಳಿದು ಬಂದಿದೆ.
‘ಕಾಂತಾರ 2’ ರ ಸುತ್ತಲಿನ ನಿರೀಕ್ಷೆಯು ರಾಷ್ಟ್ರದಾದ್ಯಂತ ಪಡೆದ ಪ್ರತಿಕ್ರಿಯೆಯಿಂದಾಗಿ ಗಗನಕ್ಕೇರಿದೆ. ಈಗ ಚಿತ್ರದ ಕುರಿತಾಗಿನ ದೊಡ್ಡ ಅಪ್ಡೇಟ್ ಇದಾಗಿದೆ.
ಹೊಂಬಾಳೆ ಫಿಲ್ಮ್ಸ್ ಸಂಸ್ಥಾಪಕ ವಿಜಯ್ ಕಿರಗಂದೂರು ಹೇಳುವಂತೆ. ರಿಷಬ್ ಆಗಸ್ಟ್ನಲ್ಲಿ ಚಿತ್ರೀಕರಣ ಪ್ರಾರಂಭಿಸಲು ಯೋಜಿಸಿದ್ದಾರೆ, ಏಕೆಂದರೆ ಚಿತ್ರೀಕರಣದ ಒಂದು ಭಾಗಕ್ಕೆ ಮಳೆಯ ಅಗತ್ಯವಿದೆ. ಮೊದಲ ಭಾಗಕ್ಕಿಂತ ಮುಂದಿನ ಭಾಗದ ಬಜೆಟ್ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.
ವರದಿಯ ಪ್ರಕಾರ, ರಿಷಬ್ ಶೆಟ್ಟಿ ಅವರು ಕಾಂತಾರ 2 ರ ಸ್ಕ್ರಿಪ್ಟ್ ಅನ್ನು ಲಾಕ್ ಮಾಡಿದ್ದು, ಚಿತ್ರವು ಪೂರ್ವಭಾವಿಯಾಗಿದೆ ಮತ್ತು ಕಾಂತಾರದ ಮುಂದುವರಿದ ಭಾಗವಲ್ಲ ಎಂಬುದು ಈಗಾಗಲೇ ಸುದ್ದಿಯಾಗಿದೆ.
”ನೀವು ನೋಡಿರುವುದು ನಿಜವಾಗಿ ಭಾಗ 2 ಮತ್ತು ಮುಂದಿನ ವರ್ಷ ಭಾಗ 1 ಬರಲಿದೆ. ನಾನು ಕಾಂತಾರ ಚಿತ್ರೀಕರಣದಲ್ಲಿದ್ದಾಗ ಈ ಆಲೋಚನೆ ನನ್ನ ಮನಸ್ಸಿಗೆ ಬಂದಿತು. ಏಕೆಂದರೆ ಕಾಂತಾರ ಇತಿಹಾಸವು ಹೆಚ್ಚು ಆಳವನ್ನು ಹೊಂದಿದೆ. ಪ್ರಸ್ತುತ, ನಾವು ಹೆಚ್ಚಿನ ವಿವರಗಳ ಸಂಶೋಧನೆ ಮಾಡುತ್ತಿರುವುದರಿಂದ, ಚಿತ್ರದ ಬಗ್ಗೆ ವಿವರಗಳನ್ನು ಬಹಿರಂಗಪಡಿಸಲು ತುಂಬಾ ಬೇಗ ಅನಿಸುತ್ತದೆ ಎಂದು ರಿಷಬ್ ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ