Kaathal-The Core: ರಿಲೀಸ್ಗೂ ಮುನ್ನ ಮಮ್ಮುಟ್ಟಿ ಸಿನಿಮಾಕ್ಕೆ ಬ್ಯಾನ್ ಬಿಸಿ: ಕಾರಣವೇನು?
Team Udayavani, Nov 21, 2023, 11:35 AM IST
ಕೊಚ್ಚಿ: ಮಾಲಿವುಡ್ ಸ್ಟಾರ್ ನಟ ಮಮ್ಮುಟ್ಟಿ – ಜ್ಯೋತಿಕಾ ಅಭಿನಯದ ಬಹು ನಿರೀಕ್ಷಿತ ʼಕಾತಲ್-ದಿ ಕೋರ್ʼ ಇದೇ ವಾರ ತೆರೆಗೆ ಬರಲಿದೆ. ರಿಲೀಸ್ ಗೂ ಮುನ್ನ ಸಿನಿಮಾಕ್ಕೆ ಬ್ಯಾನ್ ಬಿಸಿ ತಟ್ಟಿದೆ.
ಮಮ್ಮುಟ್ಟಿ – ಜ್ಯೋತಿಕಾ ಮೊದಲ ಬಾರಿ ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾಕ್ಕೆ ಜಿಯೋ ಬೇಬಿ ನಿರ್ದೇಶನ ಮಾಡಿದ್ದು, ಈಗಾಗಲೇ ಸಿನಿಮಾ ತನ್ನ ಕಥಾವಸ್ತುವಿನಿಂದ ಗಮನ ಸೆಳೆದಿದೆ. ಕೇರಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿಯೂ (IFFK) ಸಿನಿಮಾ ಪ್ರದರ್ಶನಗೊಳ್ಳಲಿದೆ.
ಪ್ರಚಾರದಲ್ಲಿ ನಿರತವಾಗಿರುವ ಚಿತ್ರತಂಡಕ್ಕೆ ಬ್ಯಾನ್ ಬಿಸಿ ತಟ್ಟಿದೆ. ಕತಾರ್ ಹಾಗೂ ಕುವೈತ್ ನಲ್ಲಿ ಸಿನಿಮಾವನ್ನು ಬ್ಯಾನ್ ಮಾಡಲಾಗಿದೆ. ಭಾರತದ ಸಿನಿಮಾ ಈ ಎರಡೂ ದೇಶಗಳಲ್ಲಿ ಬ್ಯಾನ್ ಆಗಿರುವುದು ಇದೇ ಮೊದಲಲ್ಲ. ಸಿನಿಮಾದ ಕಥಾವಸ್ತುವಿನಿಂದ ʼಕಾತಲ್-ದಿ ಕೋರ್ʼ ಸಿನಿಮಾಕ್ಕೆ ನಿಷೇಧ ಹೇರಲಾಗಿದೆ.
ʼಕಾತಲ್-ದಿ ಕೋರ್ʼ ಸಿನಿಮಾದ ಕಥೆ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ನಡೆಯುತ್ತದೆ. ಸಿನಿಮಾದಲ್ಲಿ ಮಮ್ಮುಟ್ಟಿ ಮ್ಯಾಥ್ಯೂ ಎನ್ನುವ ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಮಮ್ಮುಟ್ಟಿ ಸಲಿಂಗಕಾಮಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಸಲಿಂಗಕಾಮಿಯ ಕಥೆಯನ್ನೊಳಗೊಂಡ ಕಾರಣ ಕತಾರ್ ಹಾಗೂ ಕುವೈತ್ ನಲ್ಲಿ ಸಿನಿಮಾವನ್ನು ಬ್ಯಾನ್ ಮಾಡಲಾಗಿದೆ.
ಇದೇ ನ.23 ರಂದು ಸಿನಿಮಾ ತೆರೆ ಕಾಣಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?