ನಿಜವಾಗಿಯೂ ಬೆತ್ತಲಾಗಿ ಆಸ್ಕರ್ ವೇದಿಕೆಗೆ ಬಂದಿದ್ರಾ ಜಾನ್ ಸೆನಾ? ಅಸಲಿ ಫೋಟೋ ಇದೇ ನೋಡಿ..
Team Udayavani, Mar 11, 2024, 3:03 PM IST
ವಾಷಿಂಗ್ಟನ್: 96ನೇ ಆಸ್ಕರ್ ಪ್ರಶಸ್ತಿ ಸಮಾರಂಭ ಹಾಲಿವುಡ್ ಗಣ್ಯರ ಸಮ್ಮುಖದಲ್ಲಿ ಯುಎಸ್ಎಯ ಕ್ಯಾಲಿಫೋರ್ನಿಯಾದ ಡಾಲ್ಬಿ ಥಿಯೇಟರ್ನಲ್ಲಿ ಅದ್ಧೂರಿಯಾಗಿ ನಡೆದಿದೆ.
ಹತ್ತಾರ ವಿಭಾಗದಲ್ಲಿ ಪ್ರತಿಷ್ಠಿತ ಆಸ್ಕರ್ ಅವಾರ್ಡ್ಸ್ ಗಳನ್ನು ನೀಡಲಾಗಿದೆ. ಕ್ರಿಸ್ಟೋಫರ್ ನೋಲನ್ ಅವರ ʼಓಪನ್ ಹೈಮರ್ʼ ಸೇರಿದಂತೆ ವಿವಿಧ ಸಿನಿಮಾಗಳು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಕಾರ್ಯಕ್ರಮದಲ್ಲಿ WWE ಸೂಪರ್ ಸ್ಟಾರ್ ಹಾಗೂ ಅಮೆರಿಕಾದ ನಟ ಜಾನ್ ಸೆನಾ ಅವರು ಬೆತ್ತಲಾಗಿ ಪ್ರಶಸ್ತಿ ನೀಡಲು ಬಂದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಾನ್ ಸೆನಾ ಈ ರೀತಿ ಕಾಣಿಸಿಕೊಂಡ ರೀತಿಗೆ ಹಲವರು ಶಾಕ್ ಆಗಿದ್ದಾರೆ.
ಫೋಟೋ ಹಾಗೂ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಇದೀಗ ಇದರ ಸತ್ಯಾಸತ್ಯತೆ ಹೊರಬಿದ್ದಿದೆ.
ಜಾನ್ ಸೆನಾ ಅವರು ವಸ್ತ್ರ ವಿನ್ಯಾಸ ಪ್ರಶಸ್ತಿ ನೀಡಲು ವೇದಿಕೆ ಬಂದಿದ್ದರು. ಈ ವೇಳೆ ಅವರು ಖಾಸಗಿ ಅಂಗಕ್ಕೆ ಸ್ಟೋರಿ ಬೋರ್ಡ್ ನ್ನು ಅಡ್ಡ ಹಿಡಿದು ಬೆತ್ತಲಾಗಿ ವೇದಿಕೆಗೆ ಬಂದಿದ್ದರು.
ಆದರೆ ಇದೀಗ ಜಾನ್ ಸಿನಾ ನಿಜಕ್ಕೂ ಬೆತ್ತಲಾಗಿದ್ದಾರ? ಎನ್ನುವುದರ ಬಗೆಗಿನ ಚರ್ಚೆಗೆ ಫೋಟೋವೊಂದು ಇಲ್ಲ ಎನ್ನುವ ಉತ್ತರವನ್ನು ಸ್ಪಷ್ಟೀಕರಿಸಿದೆ.
ಬ್ಯಾಕ್ ಸ್ಟೇಜ್ ನಲ್ಲಿ ಜಾನ್ ಸೆನಾ ನಿಂತಿರುವ ಫೋಟೋಗಳು ಹೊರಬಿದ್ದಿದೆ. ಜಾನ್ ಸೆನಾ ಮೈಗೆ ಏನು ಬಟ್ಟೆ ಹಾಕಿಲ್ಲ. ಆದರೆ ಖಾಸಗಿ ಅಂಗದ ಮುಂದೆ ಹಾಗೂ ಹಿಂದೆ ಸಣ್ಣದೊಂದು ಬಟ್ಟೆಯನ್ನು ಮುಚ್ಚಿಕೊಂಡಿದ್ದಾರೆ. ಇದು ವೇದಿಕೆಗೆ ಬಂದಾಗ ಯಾರಿಗೂ ಕೂಡ ಗೊತ್ತಾಗದಂತೆ, ಹಾಸ್ಯವಾಗಿ ಹಾಗೂ ನೈಜವಾಗಿ ತಾನೇನು ಧರಿಸಿಯೇ ಇಲ್ಲ ಎನ್ನುವ ಹಾಗೆ ಜಾನ್ ಸೆನಾ ನಡೆದುಕೊಂಡು ಹೋಗಿದ್ದಾರೆ.
ಜಾನ್ ಸೆನಾ ಬೆತ್ತಲಾಗಿಲ್ಲ ಅವರು ಮಾನ ಮುಚ್ಚಲು ಬಟ್ಟೆಯೊಂದನ್ನು ಸುತ್ತಿಕೊಂಡಿರುವುದು ಬ್ಯಾಕ್ ಸ್ಟೇಜ್ ನಲ್ಲಿರುವ ಫೋಟೋಗಳಿಂದ ಗೊತ್ತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್