‘ಮೈ ಅಟಲ್ ಹೂಂ’ ಜ.19ಕ್ಕೆ ತೆರೆಗೆ: ಇ.ಸಿ.ಐಕಾನ್ ಸ್ಥಾನ ತೊರೆದ ಪಂಕಜ್
Team Udayavani, Jan 12, 2024, 1:05 AM IST
ಹೊಸದಿಲ್ಲಿ: ಭಾರತೀಯ ಚುನಾವಣೆ ಆಯೋಗ (ಇಸಿಐ)ದ ರಾಷ್ಟ್ರೀಯ ಐಕಾನ್ ಆಗಿ ನೇಮಕಗೊಂಡಿದ್ದ ನಟ ಪಂಕಜ್ ತ್ರಿಪಾಠಿ ಅವರು ಸ್ವಯಂಪ್ರೇರಿತವಾಗಿ ಆ ಸ್ಥಾನದಿಂದ ಕೆಳಗಿಳಿದಿದ್ದಾರೆ. ಈ ಕುರಿತಂತೆ ಚುನಾವಣ ಆಯೋಗದ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದೆ.
“ಇನ್ನೇನು ತೆರೆಕಾಣಲು ಸಜ್ಜುಗೊಂಡಿರುವ ಸಿನೆಮಾದಲ್ಲಿ ನಟ ಪಂಕಜ್ ರಾಜಕಾರಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಿಯಮಗಳಿಗೆ ಅನುಗುಣವಾಗಿ ಸ್ವಯಂಪ್ರೇರಿತರಾಗಿ ರಾಷ್ಟ್ರೀಯ ಐಕಾನ್ ಸ್ಥಾನದಿಂದ ಕೆಳಗಿಳಿದ್ದಾರೆ. 2022ರಿಂದಲೂ ಮತದಾನದ ಬಗ್ಗೆ ಜಾಗೃತಿ ಮೂಡಿಸುವಲ್ಲಿನ ಅವರ ಕೊಡುಗೆಯನ್ನು ಭಾರತೀಯ ಚುನಾವಣೆ ಆಯೋಗ ಶ್ಲಾಘಿಸುತ್ತದೆ ಎಂದಿದೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜ ಪೇಯಿ ಆತ್ಮ ಚರಿತ್ರೆ ಆಧಾರಿತ “ಮೈ ಅಟಲ್ ಹೂಂ’ ಸಿನೆಮಾದಲ್ಲಿ ಪಂಕಜ್, ಅಟಲ್ ಪಾತ್ರ ದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಜ.19ರಂದು ತೆರೆಗೆ ಬರಲು ಸಿನೆಮಾ ಸಜ್ಜುಗೊಂಡಿದೆ.