ನಿಕ್‌ ಜೊತೆ ಹಿಂದೂ ಸಂಪ್ರದಾಯದಂತೆ ರೊಕಾ ಮಾಡಿಕೊಂಡ ಪ್ರಿಯಾಂಕಾ!

Team Udayavani, Aug 18, 2018, 4:18 PM IST

ಮುಂಬಯಿ : ಕಳೆದ ಕೆಲ ದಿನಗಳಿಂದ ಭಾರೀ ಕುತೂಹಕ್ಕೆ ಕಾರಣವಾಗಿದ್ದ  ಅಂತರಾಷ್ಟ್ರೀಯ ಖ್ಯಾತಿಯ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಪ್ರಿಯಕರ ನಿಕ್‌ ಜೊನಾಸ್‌ ಅವರ ನಿಶ್ಚಿತಾರ್ಥ ಕೊನೆಗೂ ಹಿಂದೂ ಸಂಪ್ರದಾಯದಂತೆ ನಡೆದಿದೆ. 

ಹಲವು ಬಾರಿ ಜೊತೆಯಾಗಿ ಕಂಡು ಬಂದಿದ್ದ ಜೋಡಿ ಅಮೆರಿಕಾದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ಮುಂಬಯಿಯ ಬಂಗಲೆಯಲ್ಲಿ ಹಿಂದೂ ಸಂಪ್ರದಾಯದಂತೆ ಇಬ್ಬರೂ ರೊಕಾ ಸಂಭ್ರಮವಾಗಿ ಆಚರಿಸಿಕೊಂಡಿದ್ದು ಕೈ ಬೆರಳಿನಲ್ಲಿ ಉಂಗುರ ಕಂಡು ಬಂದಿದೆ. 

ಸಮಾರಂಭದಲ್ಲಿ ಪ್ರಿಯಾಂಕಾ ಆಪ್ತರು,ಕೆಲ ನಟಿಯರು, ಜೊನಾಸ್‌ ಕುಟುಂಬದ ಬೆರಳೆಣಿಕೆಯ ಸದಸ್ಯರು ಮಾತ್ರ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ. 

ಸಮಾರಂಭದಲ್ಲಿ ಇಬ್ಬರೂ ಸಂಪ್ರದಾಯಿಕ ದಿರಿಸಿನಲ್ಲಿ ಕಂಡು ಬಂದಿದ್ದಾರೆ. ನಿಕ್‌ ಶ್ವೇತವರ್ಣದ ಪೈಜಾಮ ಧರಿಸಿದ್ದಾರೆ. 

ಇಬ್ಬರೂ ಇನ್‌ಸ್ಟಾಗ್ರಾಂನಲ್ಲಿ ಫೋಟೋ ಸಮೇತ ಬರೆದುಕೊಂಡಿದ್ದು ‘ನನ್ನ ಹೃದಯ ಮತ್ತು ಆತ್ಮದೊಂದಿಗೆ ಸ್ವೀಕರಿಸಿದ್ದೇನೆ’ ಎಂದು ಪ್ರಿಯಾಂಕಾ ಬರೆದಿದ್ದರೆ,ಜೊನಾಸ್‌ ‘ಭವಿಷ್ಯದ ಜೊನಾಸ್‌ ಪತ್ನಿ ..ನನ್ನ ಹೃದಯ ,ನನ್ನ ಪ್ರೀತಿ’ ಎಂದು ಬರೆದಿದ್ದಾರೆ. 

ಇಬ್ಬರಿಗೂ ಸಾಮಾಜಿಕ ತಾಣಗಳಲ್ಲಿ ಲಕ್ಷಾಂತರ ಅಭಿಮಾನಿಗಳು ಶುಭ ಹಾರೈಸಿದ್ದಾರೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ