Raj Kundra; ‘ನಾವು ಬೇರ್ಪಟ್ಟಿದ್ದೇವೆ’ ಎಂದು ಪೋಸ್ಟ್ ಮಾಡಿದ ಶಿಲ್ಪಾ ಶೆಟ್ಟಿ ಪತಿ
Team Udayavani, Oct 20, 2023, 6:01 PM IST
ಮುಂಬಯಿ: ಖ್ಯಾತ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಅವರ ಪತಿ ರಾಜ್ ಕುಂದ್ರಾ ಅವರು ‘ನಾವು ಬೇರ್ಪಟ್ಟಿದ್ದೇವೆ ‘ ಎಂದು ಮಾಡಿರುವ ಪೋಸ್ಟ್ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಎಕ್ಸ್ ಖಾತೆಯಲ್ಲಿ ಕುಂದ್ರಾ ಅವರು ಸ್ಪಷ್ಟವಾದ ಸಂದರ್ಭವನ್ನು ಉಲ್ಲೇಖಿಸದೆ, ಪತ್ನಿಯ ಹೆಸರನ್ನು ಬಳಸದೆ, ‘ನಾವು ಬೇರ್ಪಟ್ಟಿದ್ದೇವೆ ಮತ್ತು ಈ ಕಷ್ಟದ ಅವಧಿಯಲ್ಲಿ ನಮಗೆ ಸಮಯ ನೀಡುವಂತೆ ವಿನಂತಿಸುತ್ತೇವೆ’ ಎಂದು ಬರೆದಿದ್ದಾರೆ.
ಈ ಸಂದೇಶ ನೋಡಿದ ನಂತರ, ನೆಟಿಜನ್ಗಳ ಕಡೆಯಿಂದ ಪ್ರತಿಕ್ರಿಯೆಗಳ ಮಹಾಪೂರ ಹರಿದು ಬಂದಿದ್ದು, ದಂಪತಿಗಳು ನಿಜವಾಗಿಯೂ ಬೇರ್ಪಟ್ಟಿದ್ದಾರೆಯೇ ಎಂದು ಆಶ್ಚರ್ಯ ಪಟ್ಟಿದ್ದಾರೆ.
‘ಪ್ರತ್ಯೇಕ ಎಂದರೆ? ವಿಚ್ಛೇದನ?, ‘ಇದು ನಿಜಕ್ಕೂ ಆಘಾತಕಾರಿ ಸುದ್ದಿಯಾಗಿದೆ, ಎಂದು ಬರೆದಿದ್ದಾರೆ. ‘ಫೇಸ್ ಮಾಸ್ಕ್ ಮತ್ತು ರಾಜ್ ಕುಂದ್ರಾ ಈಗ ಬೇರ್ಪಟ್ಟಿದ್ದಾರೆ’ ಮತ್ತು ‘ಅವರ ಮಾಸ್ಕ್ ಗಳ ಬಗ್ಗೆ ಮಾತನಾಡುತ್ತಿರಬೇಕು’ ಎಂಬಂತಹ ಕಾಮೆಂಟ್ಗಳನ್ನು ಮಾಡಲಾಗಿದೆ.
ಉದ್ಯಮಿಗಳು ತನ್ನ ಬಹುಚರ್ಚಿತ ಮಾಸ್ಕ್ ನಿಂದ ಬೇರ್ಪಟ್ಟಿದ್ದಾರೆ ಎಂದು ಕೆಲವು ನೆಟಿಜನ್ಗಳು ಭಾವಿಸಿದ್ದಾರೆ. ‘ ಕುಂದ್ರಾ ಅವರ ಸಂದೇಶವನ್ನು ಡಿಕೋಡ್ ಮಾಡುವ ಪ್ರಯತ್ನದಲ್ಲಿ, ಕೆಲವರು ಇದನ್ನು ಅವರ ಮುಂಬರುವ ಚಲನಚಿತ್ರ UT69 ಗಾಗಿ ಪ್ರಚಾರದ ಗಿಮಿಕ್ ಎಂದು ಹೇಳಿದ್ದಾರೆ.
ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ಅವರು 2009 ರಲ್ಲಿ ವಿವಾಹವಾಗಿದ್ದರು. ಅವರಿಗೆ ವಿಯಾನ್ ಮತ್ತು ಸಮೀಷಾ ಎಂಬ ಇಬ್ಬರು ಮಕ್ಕಳಿದ್ದಾರೆ.
ರಾಜ್ ಕುಂದ್ರಾ ಅವರು ಬುಧವಾರ ತಮ್ಮ ಮುಂದಿನ ಚಿತ್ರ ‘ಯುಟಿ 69’ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಮಾಸ್ಕ್ ತೆಗೆದುಹಾಕಿ ಮುಖ ತೋರಿಸಿದರು. ಚಿತ್ರವು ರಾಜ್ ಕುಂದ್ರಾ ಅವರ ನಿಜ ಜೀವನವನ್ನು ಆಧರಿಸಿದೆ. ಹೆಲ್ಮೆಟ್ ಮಾದರಿಯ ಮಾಸ್ಕ್ ಹಾಕಿಕೊಂಡೇ ಪತ್ರಿಕಾಗೋಷ್ಠಿಗೆ ಆಗಮಿಸಿದ್ದರು. ಬಳಿಕ ಮಾಧ್ಯಮಗಳ ಮುಂದೆ ಅದನ್ನು ತೆಗೆದರು.
ಇಷ್ಟು ತಿಂಗಳು ಏಕೆ ಮಾಸ್ಕ್ ಧರಿಸಿದ್ದರು ಎಂಬುದನ್ನೂ ಬಹಿರಂಗಪಡಿಸಿ, “ನಾನು ನೋವಿನಿಂದ ಮುಖವಾಡವನ್ನು ಧರಿಸಿದ್ದೇನೆ. ಮಾಧ್ಯಮದ ವಿಚಾರಣೆಯು ನೋವಿನಿಂದ ಕೂಡಿದೆ. ಇದು ನನ್ನ ಕಾನೂನು ವಿಚಾರಣೆಗಿಂತ ಹೆಚ್ಚು ನೋವಿನಿಂದ ಕೂಡಿದೆ. ನೀವು ನಿಮ್ಮ ಕೆಲಸವನ್ನು ಮಾಡುತ್ತಿದ್ದೀರಿ ಎಂದು ನಾನು ನಿಮ್ಮನ್ನು ದೂಷಿಸುವುದಿಲ್ಲ. ಆದರೆ ಇದು ತುಂಬಾ ನೋವಿನಿಂದ ಕೂಡಿದೆ, ನಾನು ಮುಚ್ಚಿಡಲು ಬಯಸುತ್ತೇನೆ. ನಾನು ಗುರುತಿಸಲು ಬಯಸುವುದಿಲ್ಲ. ನಾನು ಕ್ಲಿಕ್ ಆಗಲು ಬಯಸುವುದಿಲ್ಲ.ಎಂದರು.
2021 ಜುಲೈನಲ್ಲಿ ಅಶ್ಲೀಲ ವೀಡಿಯೊಗಳನ್ನು ಹಂಚುತ್ತಿದ್ದಾರೆ ಎಂಬ ಆರೋಪದಲ್ಲಿ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ನಂತರ ಅವರಿಗೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸೆಪ್ಟೆಂಬರ್ 2021 ರಲ್ಲಿ ಜಾಮೀನು ನೀಡಿತು.ಅಲ್ಲಿಂದಲೂ ಅವರು ಫೇಸ್ ಮಾಸ್ಕ್ ಧರಿಸಿಯೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?