ಮಹೇಶ್ಗೆ ಚಿತ್ರ ಮಾಡ್ತಾರಂತೆ ರಾಜಮೌಳಿ
Team Udayavani, Apr 20, 2020, 12:06 PM IST
ಯಾವುದೇ ಚಿತ್ರರಂಗವಿರಲಿ ಅಲ್ಲಿನ ಅಭಿಮಾನಿಗಳು ಒಂದು ಆಸೆಪಡುತ್ತಾರೆ. ಅದೇನೆಂದರೆ ಸ್ಟಾರ್ ನಟ ಹಾಗೂ ಸ್ಟಾರ್ ನಿರ್ದೇಶಕ ಒಟ್ಟಾಗಿ ಸಿನಿಮಾ ಮಾಡಬೇಕೆಂದು. ಈ ಮೂಲಕ ಆ ಚಿತ್ರರಂಗದ ಕ್ರೇಜ್ ಹೆಚ್ಚುವ ಜೊತೆಗೆ ಅಭಿಮಾನಿಗಳಿಗೆ ಹಬ್ಬವಾಗಿರುತ್ತದೆ.
ಖ್ಯಾತ ತೆಲುಗು ನಟ ಮಹೇಶ್ ಬಾಬು ಹಾಗೂ ಬಾಹುಬಲಿ ಖ್ಯಾತಿಯ ರಾಜಮೌಳಿ ಬಗ್ಗೆ ಅಭಿಮಾನಿಗಳು ಈ ತರಹದ ಒಂದು ಆಸೆ ವ್ಯಕ್ತಪಡಿಸಿದ್ದರು. ಅದೀಗ ಈಡೇರುತ್ತಿದೆ. ಅದೇನೆಂದರೆ ಮಹೇಶ್ ಬಾಬು ಹಾಗೂ ರಾಜಮೌಳಿ ಜೊತೆಯಾಗಿ ಸಿನಿಮಾ ಮಾಡುವುದು ಬಹುತೇಕ ಪಕ್ಕಾ ಆಗಿದೆ. ರಾಜಮೌಳಿ ಈಗ ಕೇವಲ ತೆಲುಗು ಚಿತ್ರರಂಗಕ್ಕೆ ಸೀಮಿತವಾಗಿಲ್ಲ. ಅವರೀಗ ಭಾರತೀಯ ಚಿತ್ರರಂಗದ ಪ್ರಮುಖ ನಿರ್ದೇಶಕರಲ್ಲಿ ಒಬ್ಬರು. ಸಿನಿಮಾದಿಂದ ಸಿನಿಮಾಕ್ಕೆ ಹೊಸ ಪ್ರಯೋಗ ಮಾಡುತ್ತಾ ಬರುತ್ತಿರುವ ರಾಜಮೌಳಿ ಈಗ ಆರ್ಆರ್ ಆರ್ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಬಳಿಕ ಯಾವ ಹೀರೋ ಜೊತೆ ಸಿನಿಮಾ ಮಾಡುತ್ತಾರೆ ಎಂಬ ಕುತೂಹಲವಿತ್ತು. ಅದಕ್ಕೆ ಉತ್ತರ ಮಹೇಶ್ ಬಾಬು. ಮುಂದಿನ ವರ್ಷ ಮಹೇಶ್ ಬಾಬು ಜೊತೆ ರಾಜ್ ಮೌಳಿ ಸಿನಿಮಾ ಮಾಡುವುದು ಬಹುತೇಕ ಪಕ್ಕಾ ಆಗಿದೆ.
ಇಷ್ಟು ದಿನ ಆಕ್ಷನ್ ಹೀರೋ ಆಗಿ ಗುರುತಿಸಿಕೊಂಡಿದ್ದ ಮಹೇರ್ಶ ಬಾಬು ಅವರನ್ನು ರಾಜಮೌಳಿ ಹೊಸ ಗೆಟಪ್ನಲ್ಲಿ ತೋರಿಸಲಿದ್ದಾರಂತೆ. ಈ ಸುದ್ದಿ ಸಿನಿಮಾ ಪ್ರೇಮಿಗಳಿಗೆ ಖುಷಿ ನೀಡಿರೋದಂತೂ ಸುಳ್ಳಲ್ಲ. ಬಹುತೇಕ ಸ್ಟಾರ್ ನಟರು ಕೂಡಾ ರಾಜಮೌಳಿ ಚಿತ್ರದಲ್ಲಿ ನಟಿಸುವ ಆಸೆ ವ್ಯಕ್ತಪಡಿಸುತ್ತಾರೆ. ಅದಕ್ಕಿಂತ ಹೆಚ್ಚಾಗಿ ಮಲ್ಟಿಸ್ಟಾರ್ ಸಿನಿಮಾ ಮಾಡುವಲ್ಲಿ, ಇಬ್ಬರು ಸ್ಟಾರ್ ನಟರನ್ನು ನಿಭಾಹಿಸುವಲ್ಲಿ ರಾಜಮೌಳಿ ಎತ್ತಿದ ಕೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
MUST WATCH
ಹೊಸ ಸೇರ್ಪಡೆ
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ