- Wednesday 11 Dec 2019
ಗೋವಾ ಚಿತ್ರೋತ್ಸವದಲ್ಲಿ ಉಚಿತ ಪ್ರವೇಶ;ಸಮೂಹಸಂವಹನ ವಿದ್ಯಾರ್ಥಿಗಳಾಗಿದ್ದರೆ ಹೆಸರು ನೋಂದಾಯಿಸಿ
Team Udayavani, Nov 12, 2019, 5:39 PM IST
ಸಿನಿಮಾಸಕ್ತ ವಿದ್ಯಾರ್ಥಿಗಳು ಇಫಿ ಚಿತ್ರೋತ್ಸವವೂ ಸೇರಿದಂತೆ ದೇಶದ ವಿವಿಧೆಡೆ ನಡೆಯುವ ಚಿತ್ರೋತ್ಸವಗಳಲ್ಲಿ ಭಾಗವಹಿಸಲು ಹಲವು ಕಾರಣಗಳಿವೆ. ನ. 20ರಿಂದ 28ರವರೆಗೆ ನಡೆಯುವ ಈ ಚಿತ್ರೋತ್ಸವದಲ್ಲಿ ಸಿನಿಮಾ ಮತ್ತು ಸಮೂಹ ಮಾಧ್ಯಮದ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ.
ವಿದ್ಯಾರ್ಥಿಗಳಲ್ಲಿ ಸಿನಿಮಾ ಬಗೆಗಿನ ಪ್ರೀತಿ ಮತ್ತು ಅರಿವು ಹೆಚ್ಚಿಸುವ ಸಲುವಾಗಿ ಇಫಿ ಈ ಸೌಲಭ್ಯವನ್ನು ಕಲ್ಪಿಸಿದೆ. ಅಂದರೆ, ಈ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕವಿರುವುದಿಲ್ಲ.ಇಫಿ ಚಿತ್ರೋತ್ಸವದಲ್ಲಿ ಬರೀ ಬಾಲಿವುಡ್ ಅಥವಾ ಇತರೆ ಪ್ರಾದೇಶಿಕ ಭಾಷೆಗಳ ಜನಪ್ರಿಯ ಚಲನ ಚಿತ್ರಗಳಷ್ಟೇ ಸಿಗುವುದಿಲ್ಲ. ಇಲ್ಲಿ ಬಹಳ ಮುಖ್ಯವಾಗಿ ಜಗತ್ತಿನ ವಿವಿಧ ದೇಶಗಳ ಪ್ರಶಸ್ತಿ ಪುರಸ್ಕೃತ ಚಿತ್ರಗಳು, ಹೊಸ ಅಲೆಯ ಚಿತ್ರಗಳು ವೀಕ್ಷಿಸಲು ಲಭ್ಯ.
ಇದರೊಂದಿಗೆ ಇನ್ನೂವಿಶೇಷವೆಂದರೆ, ಕಥೇತರ [ನಾನ್ ಫೀಚರ್] ವಿಭಾಗದಲ್ಲಿ ಸಾಕ್ಷ್ಯ ಚಿತ್ರಗಳನ್ನೂ ವೀಕ್ಷಿಸಬಹುದು. ವಿವಿಧ ಸಿನಿಮಾ ಶಾಲೆಗಳಿಂದ ಹೊರ ಬರುತ್ತಿರುವ ವಿಶಿಷ್ಟ ಪ್ರತಿಭೆಗಳ ಪ್ರದರ್ಶನವೂ ಇಲ್ಲಿದೆ.
ಯಾಕೆ ವಿದ್ಯಾರ್ಥಿಗಳು ಭಾಗವಹಿಸಬೇಕು?
ಇಫಿಯಷ್ಟೇ ಅಲ್ಲ, ದೇಶದ ಯಾವುದೇ ಭಾಗದಲ್ಲಿ ನಡೆಯುವ ಪ್ರಮುಖ ಚಿತ್ರೋತ್ಸವಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಲು ಹಲವು ಕಾರಣಗಳಿವೆ. ಪ್ರಮುಖವಾಗಿ ಅಲ್ಲಿ ಸಿಗುವ ಸಿನಿಮಾ ವೈವಿಧ್ಯ. ಇದರಿಂದ ಜಗತ್ತಿನ ಇಂದಿನ ಚಲನ ಚಿತ್ರಗಳ ಟ್ರೆಂಡ್ ತಿಳಿದುಕೊಳ್ಳಲು ಸಾಧ್ಯ.
ಮಾಸ್ಟರ್ ಕ್ಲಾಸಸ್
ಎರಡನೆಯದಾಗಿ ಅಲ್ಲಿ ನಡೆಯುವ ವಿವಿಧ ತರಬೇತಿಗಳು. ಈಗ ಇಫಿಯಲ್ಲಿ ಮಾಸ್ಟರ್ ಕ್ಲಾಸಸ್ ಎಂಬ ವಿಭಾಗವಿದೆ. ಚಿತ್ರೋತ್ಸವಕ್ಕೆ ಬಂದವರು ಬರೀ ಸಿನಿಮಾ ನೋಡಬೇಕೆಂದೇನೂ ಇಲ್ಲ. ಮಧ್ಯಾಹ್ನ ಅಥವಾ ಸಂಜೆ ಹೊತ್ತಿಗೆ ನಡೆಯುವ ಮಾಸ್ಟರ್ಕ್ಲಾಸಸ್ ನಲ್ಲಿ ಭಾಗವಹಿಸಬಹುದು. ಅದರಲ್ಲಿ ಖ್ಯಾತ ಸಿನಿಮಾಕರ್ತರು ಭಾಗವಹಿಸಿ ತಮ್ಮ ಅನುಭವವನ್ನು ಹಂಚಿಕೊಳ್ಳುವರು. ಸುಭಾಷ್ ಘಾಯ್ ನಿಂದ ಹಿಡಿದು ಹಲವರು ಇಂಥ ತರಗತಿಗಳಲ್ಲಿ ಪಾಲ್ಗೊಳ್ಳುವರು.
ಖ್ಯಾತರೊಂದಿಗೆ ಸಂಭಾಷಣೆ
ಪ್ರತಿ ಚಿತ್ರೋತ್ಸವದಲ್ಲೂ ಹಲವಾರು ಖ್ಯಾತ ನಿರ್ದೇಶಕರು, ಪರಿಣಿತರು ಪಾಲ್ಗೊಳ್ಳುವರು. ಅವರನ್ನು ಭೇಟಿಯಾಗಿ ಸಿನಿಮಾ ಬಗೆಗಿನ ತಮ್ಮ ಅಭಿಪ್ರಾಯ, ಸಂಶಯ ನಿವಾರಿಸಿಕೊಳ್ಳಲೂ ಒಂದು ಅವಕಾಶ.
ಚಿಮ್ಮುಹಲಗೆ
ಕೆಲವು ಪ್ರತಿಭೆಗಳಿಗೆ ಇದೊಂದು ಚಿಮ್ಮು ಹಲಗೆಯೂ ಸಹ. ಅಲ್ಲಿ ಭೇಟಿಯಾಗುವ ಖ್ಯಾತ ನಾಮರ ಸಂಪರ್ಕ ಪಡೆದು ಸಿನಮಾ ಕ್ಷೇತ್ರ ಪ್ರವೇಶಿಸಲೂ ಒಂದು ಕಿಂಡಿ ತೆರೆಯುವುದು ಇಲ್ಲಿಯೇ.
ಇಫಿ ಉತ್ಸವಕ್ಕೆ ನೋಂದಾಯಿಸಲು ಏನು ಮಾಡಬೇಕು ?
ಯಾವುದೇ ಸಿನಿಮಾ ಮತ್ತು ಸಮೂಹ ಮಾಧ್ಯಮ ಸಂಸ್ಥೆಯ ವಿದ್ಯಾರ್ಥಿಯಾಗಿದ್ದು, ಹದಿನೆಂಟು ವರ್ಷ ವಯಸ್ಸಾಗಿರಬೇಕು. ಬಳಿಕ ಸಂಸ್ಥೆಯ ಮುಖ್ಯಸ್ಥರಿಂದ ಪತ್ರ [ bonafide certificate]ವನ್ನು ತರಬೇಕು, ವಿದ್ಯಾರ್ಥಿ ಪ್ರತಿನಿಧಿ ವಿಭಾಗದಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು.
ವಿದ್ಯಾರ್ಥಿ ಪ್ರತಿನಿಧಿಗಳಿಗೂ ಉಳಿದ ಪ್ರತಿನಿಧಿಗಳಿಗೆ ಸಿಗುವ ಸೌಲಭ್ಯದಂತೆಯೇ ಚಿತ್ರ ವೀಕ್ಷಣೆ, ಮಾಸ್ಟರ್ ಕ್ಲಾಸಸ್, ಕಾರ್ಯಾಗಾರ, ಉಚಿತ ವೈಫೈ, ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಸೌಕರ್ಯ ಲಭ್ಯ. ಅಂದ ಹಾಗೆ ವಿದ್ಯಾರ್ಥಿ ಪ್ರತಿನಿಧಿ ದಿನಕ್ಕೆ ಮೂರು ಸಿನಿಮಾಗಳನ್ನುವೀಕ್ಷಿಸಬಹುದು. ನೋಂದಣಿ ಮತ್ತು ಮಾಹಿತಿಗೆ ಈ ಲಿಂಕ್ [ಸಂಪರ್ಕಕೊಂಡಿ]ನ್ನು ಕ್ಲಿಕ್ ಮಾಡಿ
*ರೂಪರಾಶಿ
ಈ ವಿಭಾಗದಿಂದ ಇನ್ನಷ್ಟು
-
ಪಣಜಿ(ಉದಯವಾಣಿ ಪ್ರತಿನಿಧಿಯಿಂದ): ಗೋವಾದಪಣಜಿಯಲ್ಲಿ ನ.೨೦ ರಿಂದಆರಂಭವಾಗಿದ್ದ ೫೦ ನೇಭಾರತೀಯಅಂತಾರಾಷ್ಟ್ರೀಯಚಿತ್ರೋತ್ಸವಕ್ಕೆಗುರುವಾರತೆರೆಬಿದ್ದಿದ್ದು,...
-
ಪಣಜಿ: ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದೊಂದಿಗೆ ನಡೆಯುತ್ತಿರುವ ಎನ್ಎಫ್ ಡಿಸಿ ಯ 13ನೇ ವರ್ಷದ ಫಿಲ್ಮ್ ಬಜಾರ್ ರವಿವಾರ ಸಮಾಪನಗೊಂಡಿದ್ದು, ಕನ್ನಡದ ಯುವ ನಿರ್ದೇಶಕರು...
-
ಪಣಜಿ: ಸಾಕ್ಷ್ಯಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವುದೇ ಇಂದಿನ ತುರ್ತು ಅವಶ್ಯ. ಸಾಕ್ಷ್ಯಚಿತ್ರ ರೂಪಿಸುವವರಿಗೆ ಕೊರತೆ ಇಲ್ಲ, ಆದರೆ ಆವುಗಳನ್ನು ಪ್ರೇಕ್ಷಕರಿಗೆ...
-
ಪಣಜಿ: ಕನ್ನಡದಲ್ಲಿ ಸಮಕಾಲೀನ ಸಂಗತಿಗಳನ್ನು ಕಥಾವಸ್ತುವನ್ನಾಗಿ ಸ್ವೀಕರಿಸಿ ಸಿನಿಮಾ ಮಾಡುವ ಪ್ರಯತ್ನಗಳೇ ಬಹಳ ಕಡಿಮೆ. ನನ್ನ ಸಿನಿಮಾ ಅಧುನಿಕ ಬದುಕಿಗೆ ಸಂಬಂಧಿಸಿದ್ದೇ....
-
ಪಣಜಿ: ನಾನು ಯಾವಾಗಲೂ ಬದುಕನ್ನು ಆಶಾವಾದದಿಂದ ಸ್ವೀಕರಿಸಿದವಳು. ಅರ್ಧ ಲೋಟ ತುಂಬಿದೆ ಎಂಬ ದೃಷ್ಟಿಕೋನದಿಂದಲೇ ಬೆಳೆದವಳು, ಎಂದಿಗೂ ನನಗೆ ಅರ್ಧ ಲೋಟ ಖಾಲಿ ಇದೆ...
ಹೊಸ ಸೇರ್ಪಡೆ
-
ಲಂಡನ್: ವೈದ್ಯರ ಬಳಿಯಲ್ಲಿ ಹಾಗೂ ವಕೀಲರ ಬಳಿಯಲ್ಲಿ ನಾವು ಯಾವುದೇ ವಿಷಯಗಳನ್ನು ಮುಚ್ಚಿಡಬಾರದು ಎಂಬ ಮಾತೊಂದಿದೆ. ಹಾಗಾಗಿಯೇ ರೋಗಿಗಳು ತಾವು ವೈದ್ಯರಲ್ಲಿಗೆ...
-
ಶರತ್ ಭದ್ರಾವತಿ ಶಿವಮೊಗ್ಗ: ತಮಿಳುನಾಡು ಬಾಳೆ ಜಿಲ್ಲೆಗೆ ಕಾಲಿಟ್ಟ ಕಾರಣ ಗ್ರಾಹಕರ ಜೇಬಿಗೆ ಹೊರೆಯಾಗಿದ್ದು ಪುಟ್ಟ ಬಾಳೆ (ಏಲಕ್ಕಿ ಬಾಳೆ) ಈಗ ಭಾರೀ ಇಳಿಕೆಯಾಗಿದ್ದು...
-
ಹರಪನಹಳ್ಳಿ: ತಾಲೂಕಿನ ಮಾಚಿಹಳ್ಳಿ ಕೊರಚರಹಟ್ಟಿ ಗ್ರಾಮದ ಕೆರೆ ಕೋಡಿ ಒಡೆದಿದ್ದು, ಅಪಾರ ಪ್ರಮಾಣದಲ್ಲಿ ಕೆರೆ ನೀರು ಪೋಲಾಗುತ್ತಿದೆ. ಮಾಚಿಹಳ್ಳಿ ಕೊರಚರಹಟ್ಟಿ...
-
ಸುರಪುರ: ತಾಲೂಕಿನ ಯಕ್ತಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ಪ್ರತಿಭಾವಂತ ವಿದ್ಯಾರ್ಥಿ ಅಂಕಪಟ್ಟಿ ತಿದ್ದುಪಡಿ ಮಾಡಿದ ಪ್ರಧಾನ ಶಿಕ್ಷಕರ...
-
ದೇಶ ಕಾಯುವ ಯೋಧರು ನಮ್ಮನ್ನು ಶತ್ರುಗಳಿಂದ ರಕ್ಷಿಸಿದರೆ, ಹೊಲ ಉಳುವ ರೈತ ನಮಗೆಲ್ಲಾ ಅನ್ನದಾತ, ಹಸಿವಿನಿಂದ ನಮ್ಮನ್ನು ರಕ್ಷಿಸುವ ದೇವದೂತ. ಅಂತಹ ರೈತರನ್ನು ಸ್ಮರಿಸುವುದು...