ಪ್ರೇಮ ಪರೀಕ್ಷೆಯಲ್ಲಿ ತಾಳ್ಮೆ ಎಂಬುದು ಅನಿವಾರ್ಯ

Team Udayavani, Feb 18, 2017, 11:52 AM IST

preethi-premaa.jpg

ಇನ್ಮುಂದೆ ಹುಡುಗಿಯರನ್ನು ಕಣ್ಣೆತ್ತಿಯೂ ನೋಡಲ್ಲ, ಎಲ್ಲರೂ ಮೋಸಗಾತಿಯರು, ಟ್ರೂ ಲವ್‌ ಅನ್ನೋದೇ ಇಲ್ಲ ಎನ್ನುತ್ತಾ ಕೈಯಲ್ಲಿ ಗ್ಲಾಸ್‌ ಹಿಡಿಯುತ್ತಾನೆ. ಇತ್ತ ಕಡೆ ಇವಳು, ಹುಡುಗರ ಜೊತೆ ಫ್ರೆಂಡ್‌ಶಿಪ್‌ ಮಾಡಿ ಒಳ್ಳೆಯ ರೀತಿಯಲ್ಲಿ ಮಾತನಾಡಿದರೆ ಸಾಕು, ಲವ್‌ ಮಾಡು ಎಂದು ಹಿಂದೆ ಸುತ್ತುತ್ತಾರೆ. ಇನ್ನು ಮುಂದೆ ಹುಡುಗರ ಜೊತೆ ಫ್ರೆಂಡ್‌ಶಿಪ್‌ ಮಾಡಲ್ಲ ಎಂದು ಸಿಡಿಮಿಡಿಗೊಂಡಿರುತ್ತಾಳೆ. ಈ ಎರಡು ವಿರುದ್ಧ ಗುಣಗಳ ಪಾತ್ರಗಳನ್ನು ಒಟ್ಟು ಸೇರಿಸುವ ಪ್ರಯತ್ನವಾಗಿ ಮೂಡಿಬಂದಿರೋದೇ “ಪ್ರೀತಿ ಪ್ರೇಮ’. 

ಪ್ರೀತಿ ಯಾವ ರೀತಿ ಬದಲಾಗುತ್ತಿದೆ, ಪ್ರೀತಿ ಹೇಗೆ ತನ್ನ ಪಾವಿತ್ರ್ಯತೆಯನ್ನು ಕಳೆದುಕೊಳ್ಳುತ್ತಿದೆ ಮತ್ತು ಇದರಿಂದಾಗಿ ನಿಷ್ಕಲ್ಮಶ ಪ್ರೀತಿಯ ಮೇಲೂ ಸಂಶಯಪಡುವಂತಹ ಸ್ಥಿತಿ ಬಂದಿರೋದನ್ನು ಈ ಸಿನಿಮಾ ಮೂಲಕ ನಿರ್ದೇಶಕರು ಹೇಳಲು ಹೊರಟಿದ್ದಾರೆ. ನಿರ್ದೇಶಕರ ಗುರಿಯೇನೋ ಸ್ಪಷ್ಟವಾಗಿದೆ. “ಕಮರ್ಷಿಯಲ್‌ ಲವ್‌ಸ್ಟೋರಿ’ಗಳ ವಿವಿಧ ಮುಖಗಳನ್ನು ಅನಾವರಣಗೊಳಿಸುತ್ತಲೇ ಒಂದು ನಿಷ್ಕಲ್ಮಶ ಪ್ರೀತಿಯನ್ನು ತೋರಿಸಲು ಹೊರಟ ನಿರ್ದೇಶಕರು ಸಾಕಷ್ಟು ಕಷ್ಟಪಟ್ಟಿರೋದು ಎದ್ದು ಕಾಣುತ್ತದೆ.

ಆ ಕಷ್ಟವನ್ನು ಅನಿವಾರ್ಯವಾಗಿ ಪ್ರೇಕ್ಷಕ ಕೂಡಾ ಅನುಭವಿಸಬೇಕಾಗುತ್ತದೆ. ಮುಖ್ಯವಾಗಿ ಈ ಸಿನಿಮಾದ ಸಮಸ್ಯೆ ಎಂದರೆ ಏಕತಾನತೆ ಹಾಗೂ ಗಂಭೀರ ವಿಷಯದ ಕೊರತೆ. ಪ್ರೀತಿಯ ಕಮರ್ಷಿಯಲ್‌ ಅಂಶಗಳನ್ನು ತೋರಿಸುವ ಭರದಲ್ಲಿ ಉಳಿದೆಲ್ಲಾ ಅಂಶಗಳನ್ನು ನಿರ್ದೇಶಕರು ಮರೆತಿದ್ದಾರೆ. ಹಾಗೆ ನೋಡಿದರೆ ಕತೆ ಟ್ರ್ಯಾಕ್‌ಗೆ ಬರೋದು ಇನ್ನೇನು ಸಿನಿಮಾ ಮುಗಿಯಲು ಹತ್ತು ನಿಮಿಷ ಇರುವಾಗ. ಆ ಗ್ಯಾಪಲ್ಲೂ ನಿರ್ದೇಶಕರು ಒಂದು ಮಾಂಟೇಜ್‌ ಸಾಂಗ್‌ ಮೂಲಕ ಮತ್ತೆ ಸಿನಿಮಾವನ್ನು ಎಳೆದಾಡಿದ್ದಾರೆ. 

ಟೈಮ್‌ಪಾಸ್‌ಗೆ ಲವ್‌ ಮಾಡೋ ಹುಡುಗರ ಕಥೆ, ಪಾಕೇಟ್‌ ಮನಿ, ಪಿಕ್‌ಅಪ್‌, ಡ್ರಾಪ್‌ ಸರ್ವೀಸ್‌ಗಾಗಿ ಲವ್‌ ಮಾಡೋ ತರಹ ನಾಟಕವಾಡೋ ಹುಡುಗೀರ ಬಾಯಲ್ಲಿ ಬರೋ “ಕಮರ್ಷಿಯಲ್‌ ಡೈಲಾಗ್‌’ಗಳು ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಬಂದು ಹೋಗಿವೆ. “ಪ್ರೀತಿ ಪ್ರೇಮ’ದಲ್ಲೂ ಅದೇ ಮುಂದುವರಿದಿದೆ. ಹುಡುಗೀರನ್ನು ಬೈಕೊಂಡು ಓಡಾಡೋ ಹುಡುಗ ಒಂದು ಕಡೆಯಾದರೆ, ಹುಡುಗೀರನ್ನು ಎಟಿಎಂ ಕಾರ್ಡ್‌ ತರಹ ಬಳಸಿ ಕೊನೆಗೆ ಬಿಸಾಕಬೇಕು ಎಂದು ಭಾವಿಸುವ ಹುಡುಗೀರ ಗುಂಪು ಇನ್ನೊಂದು ಕಡೆ.

ಈ ಎರಡನ್ನೂ ಬ್ಯಾಲೆನ್ಸ್‌ ಮಾಡಲು ನಿರ್ದೇಶಕರು ಸಾಕಷ್ಟು ಶ್ರಮಪಟ್ಟಿದ್ದಾರೆ. ಮೊದಲೇ ಹೇಳಿದಂತೆ ಸಿನಿಮಾದಲ್ಲಿ ಏಕತಾನತೆ ಕಾಡುತ್ತದೆ. ದೃಶ್ಯಗಳು ಒಂದು ಸರ್ಕಲ್‌ ಬಿಟ್ಟು ಮುಂದಕ್ಕೆ ಹೋಗೋದೇ ಇಲ್ಲ. ಬ್ಯಾಚುಲರ್‌ ಬಾಯ್ಸನ ತರೆಲ ತಮಾಷೆಗಳನ್ನೇ ಡಿಸೈನ್‌ ಡಿಸೈನ್‌ ಆಗಿ ತೋರಿಸಿದ್ದಾರೆ. ಆದರೆ, ಚಿತ್ರದ ಕೊನೆಯಲ್ಲಿ ಬರುವ ಟ್ವಿಸ್ಟ್‌ ನಿಮಗೆ ಸ್ವಲ್ಪ ಖುಷಿ ಕೊಡಬಹುದು. ಹಾಗಂತ ಅದು ಅನಿರೀಕ್ಷಿತ ಎನ್ನುವಂತಿಲ್ಲ. ಬಹುತೇಕ ದೃಶ್ಯಗಳನ್ನು ಪ್ರೇಕ್ಷಕನೇ ಊಹಿಸಿಕೊಂಡು ಹೋಗುವಂತಿದೆ.

ಚಿತ್ರದಲ್ಲಿ ಸಾಕಷ್ಟು ಅನಾವಶ್ಯಕ ದೃಶ್ಯಗಳು ಬಂದು ಹೋಗುತ್ತವೆ. ನಿರ್ದೇಶಕರು ಅದನ್ನು ಕಾಮಿಡಿ ಎಂದು ಭಾವಿಸಿಕೊಂಡು ಚಿತ್ರದುದ್ದಕ್ಕೂ ಇಟ್ಟಿದ್ದಾರೆ. ಆ ಎಲ್ಲಾ ದೃಶ್ಯಗಳಿಗೆ ಕತ್ತರಿ ಹಾಕಿದ್ದರೆ ತಾಳ್ಮೆ ಪರೀಕ್ಷೆಯ ಅವಧಿಯೂ ಕಡಿಮೆಯಾಗುತ್ತಿತ್ತು. ಚಿತ್ರದ ಪ್ಲಸ್‌ ಪಾಯಿಂಟ್‌ ಎಂದರೆ ಗಾಂಧಿನಗರದ ಸಿದ್ಧಸೂತ್ರಗಳನ್ನು ಬಿಟ್ಟು ಮಾಡಿದ ಸಿನಿಮಾವಿದು. ಹಾಗಾಗಿ, ಹೀರೋಯಿಸಂ, ಬಿಲ್ಡಪ್‌ ಎಂಟ್ರಿ, ಜಬರ್ದಸ್ತ್ ಫೈಟ್‌ಗಳಿಲ್ಲ. ಕೇವಲ ಒಂದು ಲವ್‌ಸ್ಟೋರಿಯನ್ನಷ್ಟೇ ಹೇಳಲು ಪ್ರಯತ್ನಿಸಿದ್ದಾರೆ. 

ನಾಯಕ ಕೃಷ್ಣ ಚೈತನ್ಯ ಲವರ್‌ ಬಾಯ್‌ ಆಗಿ ನಟಿಸಿದ್ದಾರೆ. ಅವರು ಮತ್ತಷ್ಟು ಚೈತನ್ಯದಿಂದ ನಟಿಸಿದ್ದರೆ ಪಾತ್ರದ ತೂಕ ಹೆಚ್ಚುತ್ತಿತ್ತು. ನಾಯಕಿ ನಿಧಿ ಕುಶಾಲಪ್ಪ ನಟಿಸಲು ಪ್ರಯತ್ನಿಸಿದ್ದಾರೆ. ಉಳಿದಂತೆ ಗಿರಿ ಸೇರಿದಂತೆ ಇತರರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಚಿತ್ರ: ಪ್ರೀತಿ ಪ್ರೇಮ
ನಿರ್ಮಾಣ: ಕೃಷ್ಣ ಚೈತನ್ಯ
ನಿರ್ದೇಶನ: ಕಾಶಿ
ತಾರಾಗಣ: ಕೃಷ್ಣ ಚೈತನ್ಯ, ನಿಧಿ ಕುಶಾಲಪ್ಪ, ಗಿರಿ ಮತ್ತಿತರರು

* ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

ಮುಂಗಾರು ಅಧಿವೇಶನದ ಬಳಿಕ ಅಜಿತ್ ಬಣದ ಕೆಲವು ಶಾಸಕರು ಪಕ್ಷಾಂತರಗೊಳ್ಳಲಿದ್ದಾರೆ: Rohit Pawar

ಮುಂಗಾರು ಅಧಿವೇಶನದ ಬಳಿಕ ಅಜಿತ್ ಬಣದ ಕೆಲವು ಶಾಸಕರು ಪಕ್ಷಾಂತರಗೊಳ್ಳಲಿದ್ದಾರೆ: Rohit Pawar

2-

ಗ್ರಾಮದ ಸಮಸ್ಯೆ ಪರಿಹಾರಕ್ಕೆ 100% ಮತ

ಬಸ್‌ ಟಿಕೆಟ್‌ ದರ ಏರಿಕೆ? ನಾಲ್ಕೂ ನಿಗಮಗಳಿಂದ ಶೇ. 25 ಹೆಚ್ಚಳಕ್ಕೆ ಪ್ರಸ್ತಾವನೆ

ಬಸ್‌ ಟಿಕೆಟ್‌ ದರ ಏರಿಕೆ? ನಾಲ್ಕೂ ನಿಗಮಗಳಿಂದ ಶೇ. 25 ಹೆಚ್ಚಳಕ್ಕೆ ಪ್ರಸ್ತಾವನೆ

Udupi ಇನ್ನು ಮುತ್ತು ರತ್ನ ನಗರಿ! ಕೇಂದ್ರ ಸರಕಾರದ ಒಂದು ಜಿಲ್ಲೆ ಒಂದು ಉತ್ಪನ್ನ ಪರಿಕಲ್ಪನೆ

Udupi ಇನ್ನು ಮುತ್ತು ರತ್ನ ನಗರಿ! ಕೇಂದ್ರ ಸರಕಾರದ ಒಂದು ಜಿಲ್ಲೆ ಒಂದು ಉತ್ಪನ್ನ ಪರಿಕಲ್ಪನೆ

1-24-tuesday

Daily Horoscope: ಉದ್ಯೋಗದಲ್ಲಿ ನಿರೀಕ್ಷೆ ಮೀರಿ ಪ್ರಗತಿ, ಮನೋಬಲದಿಂದ ಕಾರ್ಯಸಿದ್ದಿ

ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕ!

Kannada ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕ! ಕಾಸರಗೋಡಿನಂತೆ ಗಡಿಭಾಗದಲ್ಲಿ ಮಹಾ ಉದ್ಧಟತನ

ಮೂರೂವರೆ ತಾಸು ಬಿಎಸ್‌ವೈ ವಿಚಾರಣೆ ; ಅಪ್ರಾಪ್ತ ವಯಸ್ಕಳಿಗೆ ನಾನು ತೊಂದರೆ ನೀಡಿಲ್ಲ

ಮೂರೂವರೆ ತಾಸು ಬಿಎಸ್‌ವೈ ವಿಚಾರಣೆ ; ಅಪ್ರಾಪ್ತ ವಯಸ್ಕಳಿಗೆ ನಾನು ತೊಂದರೆ ನೀಡಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

love li movie review

Love Li movie review: ಪ್ರೀತಿ, ದ್ವೇಷ ಮತ್ತು ಅವನು!

Shivamma movie review;

Shivamma movie review; ಗಟ್ಟಿಗಿತ್ತಿಯ ಬದುಕಿನ ಕನಸು

Kotee movie review: ಕೋಟಿ ಲೆಕ್ಕ ಹುಲಿಬೇಟೆ ಪಕ್ಕಾ

Kotee movie review: ಕೋಟಿ ಲೆಕ್ಕ ಹುಲಿಬೇಟೆ ಪಕ್ಕಾ

Anartha Movie Review

Anartha Movie Review; ‘ಅನರ್ಥ’ದಿಂದ ಅರ್ಥದೆಡೆಗೆ ಸಸ್ಪೆನ್ಸ್‌ ಯಾನ

Evidence movie review

Evidence movie review: ತ್ರಿಕೋನ ಪ್ರೇಮದ ಕರಾಳ ಮುಖ

MUST WATCH

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

udayavani youtube

ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಆಡಳಿತ ಮಾಡಲು ಅಸಮರ್ಥರು

udayavani youtube

ಬಿಜೆಪಿ ಹಿರಿಯ ಮುಖಂಡ ಎಂ.ಬಿ‌.ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ

ಹೊಸ ಸೇರ್ಪಡೆ

ಮುಂಗಾರು ಅಧಿವೇಶನದ ಬಳಿಕ ಅಜಿತ್ ಬಣದ ಕೆಲವು ಶಾಸಕರು ಪಕ್ಷಾಂತರಗೊಳ್ಳಲಿದ್ದಾರೆ: Rohit Pawar

ಮುಂಗಾರು ಅಧಿವೇಶನದ ಬಳಿಕ ಅಜಿತ್ ಬಣದ ಕೆಲವು ಶಾಸಕರು ಪಕ್ಷಾಂತರಗೊಳ್ಳಲಿದ್ದಾರೆ: Rohit Pawar

2-

ಗ್ರಾಮದ ಸಮಸ್ಯೆ ಪರಿಹಾರಕ್ಕೆ 100% ಮತ

ಬಸ್‌ ಟಿಕೆಟ್‌ ದರ ಏರಿಕೆ? ನಾಲ್ಕೂ ನಿಗಮಗಳಿಂದ ಶೇ. 25 ಹೆಚ್ಚಳಕ್ಕೆ ಪ್ರಸ್ತಾವನೆ

ಬಸ್‌ ಟಿಕೆಟ್‌ ದರ ಏರಿಕೆ? ನಾಲ್ಕೂ ನಿಗಮಗಳಿಂದ ಶೇ. 25 ಹೆಚ್ಚಳಕ್ಕೆ ಪ್ರಸ್ತಾವನೆ

Udupi ಇನ್ನು ಮುತ್ತು ರತ್ನ ನಗರಿ! ಕೇಂದ್ರ ಸರಕಾರದ ಒಂದು ಜಿಲ್ಲೆ ಒಂದು ಉತ್ಪನ್ನ ಪರಿಕಲ್ಪನೆ

Udupi ಇನ್ನು ಮುತ್ತು ರತ್ನ ನಗರಿ! ಕೇಂದ್ರ ಸರಕಾರದ ಒಂದು ಜಿಲ್ಲೆ ಒಂದು ಉತ್ಪನ್ನ ಪರಿಕಲ್ಪನೆ

1-24-tuesday

Daily Horoscope: ಉದ್ಯೋಗದಲ್ಲಿ ನಿರೀಕ್ಷೆ ಮೀರಿ ಪ್ರಗತಿ, ಮನೋಬಲದಿಂದ ಕಾರ್ಯಸಿದ್ದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.