O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

Team Udayavani, Apr 20, 2024, 1:07 PM IST

O2 movie review

ಆಕೆಗೆ ತಾನು ಕಂಡು ಹಿಡಿದ ಹೊಸ ಪ್ರಯೋಗದ ಮೂಲಕ ಸಾವಿನಂಚಿನಲ್ಲಿರುವವರನ್ನು ಬದುಕಿಸುವ ತವಕ.. ಈತನಿಗೆ ಇರುವಷ್ಟು ದಿನ ಬದುಕನ್ನು ಸಂಭ್ರಮಿಸಬೇಕು, ಖುಷಿ ಖುಷಿಯಾಗಿ ಬಾಳಬೇಕು ಎಂಬ ಆಸೆ.. ಇಂತಹ “ಸದುದ್ದೇಶ’ದ ಜೋಡಿಯ ಪರಿಚಯವಾಗುತ್ತದೆ, ಪರಿಚಯ ಪ್ರೇಮವಾಗುತ್ತದೆ. ಈ ಮಧ್ಯೆ ನಡೆಯುವ ಘಟನೆಯೊಂದು ದೊಡ್ಡ ತಿರುವಿಗೆ ಕಾರಣವಾಗುತ್ತದೆ. ಅದೇನೆಂಬುದನ್ನು ತೆರೆಮೇಲೆಯೇ ನೋಡಬೇಕು.

“ಓ2′ ಚಿತ್ರದ ಬಗ್ಗೆ ಒಂದೇ ಮಾತಲ್ಲಿ ಹೇಳಬೇಕೆಂದರೆ ಒಂದು ಸರಳ ಸುಂದರ ಪಯಣ. ಕಥೆಯ ವಿಚಾರಕ್ಕೆ ಬರುವುದಾದರೆ ಕನ್ನಡ ಮಟ್ಟಿಗೆ ಇದು ಹೊಸ ಕಥೆ ಎನ್ನಬಹುದು. ಮೆಡಿಕಲ್‌ ಥ್ರಿಲ್ಲರ್‌ ಜಾನರ್‌ನಲ್ಲಿ ಮೂಡಿಬಂದಿರುವ ಈ ಚಿತ್ರ ರೆಗ್ಯುಲರ್‌ ಕಂಟೆಂಟ್‌ಗಿಂತ ಭಿನ್ನವಾದ, ಹೊಸ ವಿಚಾರವನ್ನು ಪ್ರಸ್ತುತಪಡಿಸಿದೆ. ಪ್ರಾಣ ಹೋದ ಕೆಲವೇ ನಿಮಿಷಗಳಲ್ಲಿ ನೀಡುವ ಔಷಧಿ, ಹೇಗೆ ಪ್ರಾಣ ಉಳಿಸಬಲ್ಲದು ಎಂಬ ಅಂಶವನ್ನು ವಿಭಿನ್ನವಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ.

ಮೆಡಿಕಲ್‌ ಥ್ರಿಲ್ಲರ್‌ ಎಂದಾಕ್ಷಣ ಅದೇ ಆಸ್ಪತ್ರೆ, ಕಣ್ಣೀರು, ಗೋಳಾಟದ ಕಥೆ ಎಂದುಕೊಳ್ಳುವಂತಿಲ್ಲ. ಇಲ್ಲೊಂದು ಲವಲವಿಕೆಯ ಹುಡುಗನಿದ್ದಾನೆ, ಆತನ ಗಾಢವಾದ ಪ್ರೀತಿ ಇದೆ, ಉತ್ಸಾಹದ ಚಿಲುಮೆಯಂತಿರುವ ಆತನ ಪಟಪಟ ಮಾತುಗಳು ಸಿನಿಮಾಕ್ಕೊಂದು “ಆತ್ಮೀಯತೆ’ ಫೀಲ್‌ ನೀಡಿರುವುದು ಸುಳ್ಳಲ್ಲ. ಆ ಮಟ್ಟಿಗೆ “ಓ2′ ಒಂದು ನೀಟಾದ ಸಿನಿಮಾ.

ನಿರ್ದೇಶಕದ್ವಯರು ಯಾವುದೇ ಗೊಂದಲವಿಲ್ಲದಂತೆ ಇಡೀ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಏನು ಹೇಳಬೇಕು ಅದನ್ನು ಸ್ಪಷ್ಟವಾಗಿ ಮತ್ತು ಅಷ್ಟೇ ಪಕ್ವತೆಯಿಂದ ಹೇಳಿದ್ದಾರೆ. ಚಿತ್ರದಲ್ಲಿ ಎರಡು ಟ್ರ್ಯಾಕ್‌ ಬರುತ್ತದೆ. ಒಂದು ಮೆಡಿಕಲ್‌, ಇನ್ನೊಂದು ಲವ್‌. ಆದರೆ ಎರಡೂ ಜೊತೆ ಜೊತೆಯಾಗಿ ಸಾಗುತ್ತಲೇ ಒಂದಷ್ಟು ಕುತೂಹಲಕ್ಕೆ ಕಾರಣವಾಗುತ್ತದೆ.

ಚಿತ್ರದ ಬಿಗಿಯಾದ ಚಿತ್ರಕಥೆ, ತುಂಬಾ ಹೊಸದೆನಿಸುವ ದೃಶ್ಯಗಳು, ಅದಕ್ಕೆ ಪೂರಕವಾದ ವಾತಾವರಣ, ಅರ್ಥಪೂರ್ಣ ಸಂಭಾಷಣೆ.. “ಓ2′ ಸಿನಿಮಾದ ಪ್ಲಸ್‌. ಪಕ್ಕಾ ಕ್ಲಾಸ್‌ ಸಿನಿಮಾವಾಗಿ ಮೂಡಿಬಂದಿರುವ “ಓ2′ ಒಂದು ಹೊಸ ಅನುಭವ ನೀಡುವ ಸಿನಿಮಾ. ಸಣ್ಣಪುಟ್ಟ ಲೋಪದೋಷಗಳನ್ನು ಹೊರತುಪಡಿಸಿದರೆ, ಹೊಸ ನಿರ್ದೇಶಕರಿಬ್ಬರ ಪ್ರಯತ್ನವನ್ನು ಮೆಚ್ಚಬಹುದು.

ಚಿತ್ರದಲ್ಲಿ ಆಶಿಕಾ ರಂಗನಾಥ್‌ ವೈದ್ಯೆಯಾಗಿ ಹಾಗೂ ಪ್ರೇಮಿಯಾಗಿ ಮಿಂಚಿದ್ದಾರೆ. ಈ ಸಿನಿಮಾದ ಅಚ್ಚರಿಗಳಲ್ಲಿ ರಾಘವ್‌ ನಾಯಕ್‌ ಕೂಡಾ ಒಬ್ಬರು. ಚಿತ್ರದ ನಿರ್ದೇಶನದ ಜೊತೆಗೆ ಓಶೋ ಎಂಬ ಪಾತ್ರ ಮಾಡಿದ್ದಾರೆ. ತುಂಬಾ ಲವಲವಿಕೆಯಿಂದ ಆ ಪಾತ್ರವನ್ನು ನಿಭಾಹಿಸಿ, ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ಉಳಿದಂತೆ ಪ್ರವೀಣ್‌ ತೇಜ್‌, ಸಿರಿ, ಪ್ರಕಾಶ್‌ ಬೆಳವಾಡಿ, ಶ್ರೀಧರ್‌, ಅರುಣಾ ಬಾಲರಾಜ್‌ ಸೇರಿದಂತೆ ಇತರರು ನಟಿಸಿದ್ದಾರೆ. ಚಿತ್ರದ ಹಾಡುಗಳು ಕಥೆಗೊಂದು ಕಥೆಯ ಓಘಕ್ಕೆ ಸಾಥ್‌ ನೀಡಿವೆ. ಕುಟುಂಬ ಸಮೇತರಾಗಿ ನೋಡಲು “ಓ2′ ಒಂದು ಒಳ್ಳೆಯ ಆಯ್ಕೆಯಾಗಬಹುದು.

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vidyarthi Vidyarthiniyare Movie Review

Vidyarthi Vidyarthiniyare Review;ವಿದ್ಯಾರ್ಥಿಗಳ ಆಟದೊಳಗೊಂದು ಪಾಠ

Not Out movie review

Not Out movie review; ಮಧ್ಯಮ ಹುಡುಗನ ಕಾಸು-ಕನಸು

Hejjaru Movie Review

Hejjaru Movie Review; ಹೆಜ್ಜಾರು ಎಂಬ ಹೊಸ ಕೌತುಕ

Hiranya

Hiranya Review; ಆ್ಯಕ್ಷನ್‌-ಥ್ರಿಲ್ಲರ್‌ನಲ್ಲಿ ನಿರ್ದಯಿ ಪಯಣ

Jigar movie review

Jigar movie review; ಆ್ಯಕನ್‌ ಡ್ರಾಮಾದಲ್ಲೊಂದು ಪ್ರೇಮ್‌ ಕಹಾನಿ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.