Small Screen: ಒಂದೇ ಕಾರ್ಯಕ್ರಮದ ಜಡ್ಜ್‌ ಆಗಿ ಕಿಚ್ಚ,ದರ್ಶನ್‌,ಯಶ್..‌? ಯಾವ ಶೋವಿದು?


Team Udayavani, Apr 2, 2024, 11:59 AM IST

Small Screen: ಒಂದೇ ಕಾರ್ಯಕ್ರಮದ ಜಡ್ಜ್‌ ಆಗಿ ಕಿಚ್ಚ,ದರ್ಶನ್‌,ಯಶ್..‌? ಯಾವ ಶೋವಿದು?

ಬೆಂಗಳೂರು: ಕಿರುತೆರೆಗಳಲ್ಲಿ ವಾರಕ್ಕೊಂದರಂತೆ ಹೊಸ ಹೊಸ ಕಾರ್ಯಕ್ರಮಗಳು ಶುರುವಾಗುತ್ತದೆ. ವೀಕ್ಷಕರಿಗೆ ಹೊಸತಾಗಿ ಏನಾದರೂ ನೀಡಬೇಕೆನ್ನುವ ನಿಟ್ಟಿನಲ್ಲಿ ವಾಹಿನಿಗಳು ಸದಾ ವಿಭಿನ್ನ ರೀತಿಯ ಪ್ರಯತ್ನಗಳನ್ನು ಮಾಡುತ್ತದೆ.

ಸದ್ಯ ಕನ್ನಡದ ಬಹುತೇಕ ಮನರಂಜನೆಯ ವಾಹಿನಿಗಳಲ್ಲಿ ರಿಯಾಲಿಟಿ ಶೋಗಳು ನಡೆಯುತ್ತಿದೆ. ಈ ರಿಯಾಲಿಟಿ ಶೋಗಳಿಗೆ ತಮ್ಮದೇ ಆದ ವೀಕ್ಷಕರ ವರ್ಗವಿರುತ್ತದೆ. ಸೆಲೆಬ್ರಿಟಿಗಳು ರಿಯಾಲಿಟಿ ಶೋಗಳನ್ನು ನಡೆಸಿಕೊಡುವುದು ಹೊಸದೇನಲ್ಲ. ಆದರೆ ಒಂದೇ ಕಾರ್ಯಕ್ರಮದಲ್ಲಿ ಜನಪ್ರಿಯ ಸೆಲೆಬ್ರಿಟಿಗಳನ್ನು ತೀರ್ಪುಗಾರರನ್ನಾಗಿ ತಂದು ಕೂರಿಸುವುದು ಸಾಧ್ಯವೇ?

ಇಂಥದ್ದೊಂದು ಸಾಹಸಕ್ಕೆ ಕೈಹಾಕಲು ಜೀ ಕನ್ನಡ ವಾಹಿನಿ ಸಿದ್ದವಾಗಿದೆ. ಧಾರಾವಾಹಿ, ರಿಯಾಲಟಿ ಶೋಗಳನ್ನು ನೀಡಿ ಕನ್ನಡಿಗರ ಮನಗೆದ್ದಿರುವ ಜೀ ಕನ್ನಡ ಸದಾ ಒಂದಲ್ಲ ಒಂದು ಹೊಸ ಶೋಗಳನ್ನು ತರುತ್ತಲೇ ಇರುತ್ತದೆ. ಇದೀಗ ದೊಡ್ಡ ಸಾಹಸಕ್ಕೆ ಕೈಹಾಕಲು ಮುಂದಾಗಿದೆ.

ಇತ್ತೀಚೆಗಷ್ಟೇ ಜೀ ಕನ್ನಡದಲ್ಲಿ ʼಮಹಾನಟಿʼ ಎನ್ನುವ ಕಾರ್ಯಕ್ರಮ ಶುರುವಾಗಿದೆ. ಇದರಲ್ಲಿ ರಮೇಶ್‌ ಅರವಿಂದ್‌, ಪ್ರೇಮಾ ತರುಣ್‌ ಸುಧೀರ್‌ ಹಾಗೂ ನಿಶ್ವಿಕಾ ನಾಯ್ಡು ಅವರು ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ.

ಇದೀಗ ಜೀ ಕನ್ನಡ ʼಕಾಮಿಡಿ ಕಿಲಾಡಿಗಳು ಪ್ರಿಮಿಯರ್‌ ಲೀಗ್‌ʼ ಎನ್ನುವ ಹಾಸ್ಯಮಯ ರಿಯಾಲಿಟಿ ಶೋವೊಂದನ್ನು ಶುರು ಮಾಡುವ ತಯಾರಿಯಲ್ಲಿದೆ. ಕಾರ್ಯಕ್ರಮ ಆರಂಭಕ್ಕೂ ಮುನ್ನ ವೀಕ್ಷಕರ ತಲೆಗೆ ತೀರ್ಪುಗಾರರ ವಿಚಾರದಲ್ಲಿ ಹುಳು ಬಿಟ್ಟಿದೆ.

ಕಿರುತೆರೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಕಿಂಗ್‌ ಸ್ಟಾರ್‌ ಯಶ್‌, ಅಭಿನಯ ಚಕ್ರವರ್ತಿ ಸುದೀಪ್, ಚಾಲೇಜಿಂಗ್‌ ಸ್ಟಾರ್‌ ದರ್ಶನ್‌ ನಡೆಸಿಕೊಡುವ ಹೊಚ್ಛ ಹೊಸ ರಿಯಾಲಿಟಿ ಶೋ ಎಂದು ʼಕಾಮಿಡಿ ಕಿಲಾಡಿಗಳು ಪ್ರಿಮಿಯರ್‌ ಲೀಗ್‌ʼ ಕಾರ್ಯಕ್ರಮದ ಪ್ರೋಮೊ ರಿಲೀಸ್‌ ಮಾಡಲಾಗಿದೆ.

ಈ ಮೂವರು ವಜ್ರಗಳನ್ನು ಒಂದೇ ಶೋನಲ್ಲಿ ಜಡ್ಜ್‌ ಆಗಿ ನೋಡೋ ಆಸೆ ಎಲ್ಲರಿಗೂ ಇರುತ್ತೆ. ಆದರೆ ಕಾಲ ಕೂಡಿ ಬರಬೇಕಲ್ವಾ. ಆದ್ರೆ ನಾವು ಎಂತಹ ಜಡ್ಜ್‌ ಗಳನ್ನು ತರುತ್ತೇವೆ ಎಂದರೆ ನೀವೂ ಊಹೆನೂ ಮಾಡಿರಲಿಲ್ಲ ಎಂದು ಪ್ರೋಮೊದಲ್ಲಿ ಹೇಳಲಾಗಿದೆ.

ಈ ಪ್ರೋಮೊ ನೋಡಿದ ಬಳಿಕ ಈ ಮೂವರು ಸ್ಟಾರ್‌ ನಟರು ಜಡ್ಜ್‌ ಆಗಿ ಕಾಣಿಸಿಕೊಳ್ಳುವುದು ಸಾಧ್ಯವೇ? ಇದು ಏಪ್ರಿಲ್‌ ಪೂಲ್‌ ಎಂದು ಹಲವರು ಕಮೆಂಟ್‌ ಮಾಡಿದ್ದಾರೆ.

ಯಶ್‌ ಪ್ಯಾನ್‌ ಇಂಡಿಯಾ ಸಿನಿಮಾ ʼಟಾಕ್ಸಿಕ್‌ʼ ನಲ್ಲಿ ಬ್ಯುಸಿಯಾಗಿದ್ದಾರೆ. ಕಿಚ್ಚ ʼಮ್ಯಾಕ್ಸ್‌ʼ ಶೂಟಿಂಗ್‌ ಬ್ಯುಸಿಯಾಗಿದ್ದಾರೆ. ಇನ್ನು ದರ್ಶನ್‌ ಮುಂದಿನ ಸಿನಿಮಾದ ತಯಾರಿಯಲ್ಲಿದ್ದಾರೆ. ಇದು ವಾಹಿನಿ ಮಾಡಿದ ಏಪ್ರಿಲ್‌ ಪೂಲ್‌ ಎಂದು ಅನೇಕರು ಕಮೆಂಟ್‌ ಮಾಡಿದ್ದಾರೆ.

ಯಾವುದಕ್ಕೂ ತೀರ್ಪುಗಾರರು ಯಾರು ಎನ್ನುವುದನ್ನು ಕಾದುನೋಡಬೇಕಿದೆ. ಶೀಘ್ರದಲ್ಲಿ ಶೋ ಆರಂಭಗೊಳ್ಳಲಿದೆ.

 

ಟಾಪ್ ನ್ಯೂಸ್

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ

1-dubey

Increase of Muslims; ಝಾರ್ಖಂಡ್‌,ಪಶ್ಚಿಮ ಬಂಗಾಲ ಕೇಂದ್ರಾಡಳಿತ ಪ್ರದೇಶವಾಗಿಸಿ: ದುಬೆ

Supreme Court

State-Governor ಕದನ: ಕೇಂದ್ರ ಸರಕಾರಕ್ಕೆ ಸುಪ್ರೀಂ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sunny Mahipal: ಪತ್ನಿ ಮೇಲೆ ಹಲ್ಲೆ ನಡೆಸಿದ ಕಿರುತೆರೆ ನಟನಿಗೆ ಜಾಮೀನು

Sunny Mahipal: ಪತ್ನಿ ಮೇಲೆ ಹಲ್ಲೆ ನಡೆಸಿದ ಕಿರುತೆರೆ ನಟನಿಗೆ ಜಾಮೀನು

Bigg Boss ಮನೆಯಲ್ಲಿ ಖುಲ್ಲಂ ಖುಲ್ಲಾ ರೊಮ್ಯಾನ್ಸ್:‌ ವೈರಲ್ ವಿಡಿಯೋಗೆ ಆಯೋಜಕರ ಸ್ಪಷ್ಟನೆ

Bigg Boss ಮನೆಯಲ್ಲಿ ಖುಲ್ಲಂ ಖುಲ್ಲಾ ರೊಮ್ಯಾನ್ಸ್:‌ ವೈರಲ್ ವಿಡಿಯೋಗೆ ಆಯೋಜಕರ ಸ್ಪಷ್ಟನೆ

6

ಕಿರುತೆರೆ ನಟನಿಂದ ಗರ್ಭಿಣಿ ಪತ್ನಿ ಮೇಲೆ ಹಲ್ಲೆ: ಮದುವೆ ಬಳಿಕ ಮತ್ತೊಬ್ಬಳ ಜತೆ ನಿಶ್ಚಿತಾರ್ಥ?

1

Vinod Dondale: ʼಕರಿಮಣಿʼ ಧಾರಾವಾಹಿ ನಿರ್ದೇಶಕ ನೇಣಿಗೆ ಶರಣು; ಸಾಲದ ಸುಳಿಯೇ ಕಾರಣ?

Bigg Boss Kannada ಸೀಸನ್‌11ರ ಆರಂಭಕ್ಕೆ ಸಿದ್ಧತೆ; ಸ್ಪರ್ಧಿಗಳಾಗಿ ಬರುವವರು ಇವರೇನಾ?

Bigg Boss Kannada ಸೀಸನ್‌ 11ರ ಆರಂಭಕ್ಕೆ ಸಿದ್ಧತೆ; ಸ್ಪರ್ಧಿಗಳಾಗಿ ಬರುವವರು ಇವರೇನಾ?

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.