ಕೋವಿಡ್ ಲಸಿಕೆ ವಿತರಣೆಗೆ 5 ರಾಜ್ಯ, ಕೇಂದ್ರಾಡಳಿತ ಪ್ರದೇಶದಲ್ಲಿ ಖಾಸಗಿ ಸೌಲಭ್ಯ ಇಲ್ಲ!

ದೆಹಲಿ, ಕೇರಳ ಮತ್ತು ಉತ್ತರಪ್ರದೇಶದಲ್ಲಿ ಅತೀ ಹೆಚ್ಚು ಕೋವಿಡ್ 19 ಪ್ರಕರಣಗಳು ವರದಿಯಾಗುತ್ತಿದೆ.

Team Udayavani, Apr 20, 2021, 6:11 PM IST

ಕೋವಿಡ್ ಲಸಿಕೆ ವಿತರಣೆಗೆ 5 ರಾಜ್ಯ, ಕೇಂದ್ರಾಡಳಿತ ಪ್ರದೇಶದಲ್ಲಿ ಖಾಸಗಿ ಸೌಲಭ್ಯ ಇಲ್ಲ

ನವದೆಹಲಿ: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ನೀಡುವ ಮೂರನೇ ಹಂತದ ಅಭಿಯಾನಕ್ಕೆ ಕೆಲವು ದಿನಗಳು ಬಾಕಿ ಇದ್ದು, ಈ ಲಸಿಕೆ ವಿತರಣೆಗೆ ಹೆಚ್ಚಾಗಿ ಖಾಸಗಿ ವ್ಯವಸ್ಥೆಯನ್ನೇ ಬಳಕೆ ಮಾಡಲಾಗುತ್ತಿದೆ. ಆದರೆ ಸರ್ಕಾರದ ಅಧಿಕೃತ ಅಂಕಿಅಂಶದ ಪ್ರಕಾರ ಎಲ್ಲಾ ಸಣ್ಣ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಂಪೂರ್ಣವಾಗಿ ಸರ್ಕಾರಿ ವ್ಯವಸ್ಥೆ ಮೇಲೆ ಅವಲಂಬಿತವಾಗಿ ಎಂದು ತಿಳಿಸಿದೆ.

ಇದನ್ನೂ ಓದಿ:ಬೆಂಗಳೂರಿಗೆ ಲಾಕ್ ಡೌನ್ ಅನಿವಾರ್ಯವಿದೆ : ಸರ್ವ ಪಕ್ಷ ಸಭೆಯಲ್ಲಿ ಕುಮಾರಸ್ವಾಮಿ

ಕೇಂದ್ರ ಸರ್ಕಾರದ ಕೋವಿನ್ ಪೋರ್ಟಲ್ ಮಾಹಿತಿ ಪ್ರಕಾರ, 13 ಸಣ್ಣ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್ ಲಸಿಕೆ ನೀಡಲು ಹತ್ತಕ್ಕಿಂತಲೂ ಕಡಿಮೆ ಖಾಸಗಿ ಆಸ್ಪತ್ರೆ ಸೌಲಭ್ಯವಿದೆ. ಅಲ್ಲದೇ ಐದು ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಲಸಿಕೆ ವಿತರಣೆಗೆ ಯಾವುದೇ ಖಾಸಗಿ ಸೌಲಭ್ಯಗಳಿಲ್ಲ.

ಹತ್ತಕ್ಕಿಂತ ಕಡಿಮೆ ಖಾಸಗಿ ಸೌಲಭ್ಯವಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಯಾವುದೆಂದರೆ, ಅಂಡಮಾನ್ ಮತ್ತು ನಿಕೋಬಾರ್ , ಅರುಣಾಚಲ ಪ್ರದೇಶ, ದಾಮನ್ ಮತ್ತು ದಿಯು, ಲಡಾಖ್, ಲಕ್ಷದ್ವೀಪದಲ್ಲಿ ಯಾವುದೇ ಖಾಸಗಿ ಸೌಲಭ್ಯ ಇಲ್ಲ. ದಾದ್ರ ಮತ್ತು ನಗರ್ ಹವೇಲಿಯಲ್ಲಿ 2 ಖಾಸಗಿ ಸೌಲಭ್ಯ, ಮಣಿಪುರದಲ್ಲಿ 3, ಮೇಘಾಲಯ 7, ನಾಗಲ್ಯಾಂಡ್ 4, ಪುದುಚೆರಿ 7, ಸಿಕ್ಕಿಂ 1, ತ್ರಿಪುರಾ 1 ಮತ್ತು ಮಿಜೋರಾಂನಲ್ಲಿ 1 ಖಾಸಗಿ ಆಸ್ಪತ್ರೆ ಸೌಲಭ್ಯದ ವ್ಯವಸ್ಥೆ ಇದೆ ಎಂದು ತಿಳಿಸಿದೆ.

ಕೆಲವು ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಕೋವಿಡ್ ಲಸಿಕೆ ಅಭಿಯಾನ ನಡೆಸಲು ಯಾವುದೇ ಖಾಸಗಿ ಸೌಲಭ್ಯ ಇಲ್ಲ ಎಂಬುದಾಗಿ ಈ ಮೊದಲು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದರು. ಕುತೂಹಲಕಾರಿ ವಿಷಯವೇನೆಂದರೆ ದೇಶದಲ್ಲಿ ಕೋವಿಡ್ ಲಸಿಕೆ ವಿತರಣೆಗೆ 1110ಕ್ಕೂ ಅಧಿಕ ಖಾಸಗಿ ಸೌಲಭ್ಯ ಹೊಂದಿರುವ ಒಂದೇ ಒಂದು ರಾಜ್ಯವೆಂದರೆ ಅದು ತಮಿಳುನಾಡು.

ದೆಹಲಿ, ಕೇರಳ ಮತ್ತು ಉತ್ತರಪ್ರದೇಶದಲ್ಲಿ ಅತೀ ಹೆಚ್ಚು ಕೋವಿಡ್ 19 ಪ್ರಕರಣಗಳು ವರದಿಯಾಗುತ್ತಿದೆ. ಆದರೆ ಕೋವಿಡ್ ಲಸಿಕೆ ವಿತರಿಸಲು ದೆಹಲಿಯಲ್ಲಿ 817, ಕೇರಳದಲ್ಲಿ 230 ಹಾಗೂ ಉತ್ತರಪ್ರದೇಶದಲ್ಲಿ 1,101 ಖಾಸಗಿ ಸೌಲಭ್ಯ ಹೊಂದಿದೆ ಎಂದು ಪಿಟಿಐ ವರದಿ ತಿಳಿಸಿದೆ. 3ನೇ ಹಂತದ ಕೋವಿಡ್ ಲಸಿಕೆ ವಿತರಣೆಯಲ್ಲಿ 18ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೇಂದ್ರ ಸರಕಾರ ಅವಕಾಶ ನೀಡಿರುವುದರಿಂದ ಈ ಅಭಿಯಾನದಲ್ಲಿ ಖಾಸಗಿ ಆಸ್ಪತ್ರೆಗಳು ಮತ್ತು ಸರ್ಕಾರಿ ಆಸ್ಪತ್ರೆಗಳ ಪಾಲು ಮಹತ್ತರವಾದದ್ದಾಗಿದೆ ಎಂದು ವರದಿ ವಿವರಿಸಿದೆ. ಮೇ 1ರಿಂದ 18 ವರ್ಷದ ಮೇಲಿನ ಎಲ್ಲರಿಗೂ ಲಸಿಕೆ ಪಡೆಯುವ ಅವಕಾಶವನ್ನು ಕೇಂದ್ರ ಸರಕಾರ ಕಲ್ಪಿಸಿದೆ.

ಟಾಪ್ ನ್ಯೂಸ್

ED raids; ಸಚಿವರ ಆಪ್ತ ಕಾರ್ಯದರ್ಶಿ ಮನೆಯಲ್ಲಿತ್ತು ಕಂತೆ ಕಂತೆ ಹಣ, ಬೆಚ್ಚಿ ಬಿದ್ದ ಅಧಿಕಾರಿ

ED Raids; ಸಚಿವರ ಆಪ್ತ ಕಾರ್ಯದರ್ಶಿ ಮನೆಯಲ್ಲಿತ್ತು ಕಂತೆ ಕಂತೆ ಹಣ, ಬೆಚ್ಚಿ ಬಿದ್ದ ಅಧಿಕಾರಿ

Samantha: ಬೆತ್ತಲೆ ಫೋಟೋ ಹಾಕಿ ಡಿಲೀಟ್‌ ಮಾಡಿದ್ರಾ ಸಮಂತಾ?: ಟ್ರೆಂಡ್‌ ಆದ ಸ್ಯಾಮ್

Samantha: ಬೆತ್ತಲೆ ಫೋಟೋ ಹಾಕಿ ಡಿಲೀಟ್‌ ಮಾಡಿದ್ರಾ ಸಮಂತಾ?: ಟ್ರೆಂಡ್‌ ಆದ ಸ್ಯಾಮ್

Amethi: ಕಾಂಗ್ರೆಸ್ ಕಚೇರಿ ಮೇಲೆ ದಾಳಿ… ಕಾರುಗಳು ಪುಡಿ ಪುಡಿ, ಕಾರ್ಯಕರ್ತರಿಂದ ಪ್ರತಿಭಟನೆ

Amethi: ಕಾಂಗ್ರೆಸ್ ಕಚೇರಿ ಮೇಲೆ ದಾಳಿ… ಕಾರುಗಳು ಪುಡಿ ಪುಡಿ, ಕಾರ್ಯಕರ್ತರಿಂದ ಪ್ರತಿಭಟನೆ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್‌ ಬೇಲಿ!

ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್‌ ಬೇಲಿ!

Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ

Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ

8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್‌ಐಟಿ? ಇನ್ನಷ್ಟು ಎಫ್ಐಆರ್‌ ಸಾಧ್ಯತೆ

8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್‌ಐಟಿ? ಇನ್ನಷ್ಟು ಎಫ್ಐಆರ್‌ ಸಾಧ್ಯತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ED raids; ಸಚಿವರ ಆಪ್ತ ಕಾರ್ಯದರ್ಶಿ ಮನೆಯಲ್ಲಿತ್ತು ಕಂತೆ ಕಂತೆ ಹಣ, ಬೆಚ್ಚಿ ಬಿದ್ದ ಅಧಿಕಾರಿ

ED Raids; ಸಚಿವರ ಆಪ್ತ ಕಾರ್ಯದರ್ಶಿ ಮನೆಯಲ್ಲಿತ್ತು ಕಂತೆ ಕಂತೆ ಹಣ, ಬೆಚ್ಚಿ ಬಿದ್ದ ಅಧಿಕಾರಿ

Amethi: ಕಾಂಗ್ರೆಸ್ ಕಚೇರಿ ಮೇಲೆ ದಾಳಿ… ಕಾರುಗಳು ಪುಡಿ ಪುಡಿ, ಕಾರ್ಯಕರ್ತರಿಂದ ಪ್ರತಿಭಟನೆ

Amethi: ಕಾಂಗ್ರೆಸ್ ಕಚೇರಿ ಮೇಲೆ ದಾಳಿ… ಕಾರುಗಳು ಪುಡಿ ಪುಡಿ, ಕಾರ್ಯಕರ್ತರಿಂದ ಪ್ರತಿಭಟನೆ

voter

Odisha; ಒಂದೇ ವಿಧಾನಸಭಾ ಕ್ಷೇತ್ರಕ್ಕೆ 3 ಪಕ್ಷಗಳಿಂದ ಒಂದೇ ಕುಟುಂಬದ ಅಭ್ಯರ್ಥಿಗಳು!

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

ED raids; ಸಚಿವರ ಆಪ್ತ ಕಾರ್ಯದರ್ಶಿ ಮನೆಯಲ್ಲಿತ್ತು ಕಂತೆ ಕಂತೆ ಹಣ, ಬೆಚ್ಚಿ ಬಿದ್ದ ಅಧಿಕಾರಿ

ED Raids; ಸಚಿವರ ಆಪ್ತ ಕಾರ್ಯದರ್ಶಿ ಮನೆಯಲ್ಲಿತ್ತು ಕಂತೆ ಕಂತೆ ಹಣ, ಬೆಚ್ಚಿ ಬಿದ್ದ ಅಧಿಕಾರಿ

Samantha: ಬೆತ್ತಲೆ ಫೋಟೋ ಹಾಕಿ ಡಿಲೀಟ್‌ ಮಾಡಿದ್ರಾ ಸಮಂತಾ?: ಟ್ರೆಂಡ್‌ ಆದ ಸ್ಯಾಮ್

Samantha: ಬೆತ್ತಲೆ ಫೋಟೋ ಹಾಕಿ ಡಿಲೀಟ್‌ ಮಾಡಿದ್ರಾ ಸಮಂತಾ?: ಟ್ರೆಂಡ್‌ ಆದ ಸ್ಯಾಮ್

Amethi: ಕಾಂಗ್ರೆಸ್ ಕಚೇರಿ ಮೇಲೆ ದಾಳಿ… ಕಾರುಗಳು ಪುಡಿ ಪುಡಿ, ಕಾರ್ಯಕರ್ತರಿಂದ ಪ್ರತಿಭಟನೆ

Amethi: ಕಾಂಗ್ರೆಸ್ ಕಚೇರಿ ಮೇಲೆ ದಾಳಿ… ಕಾರುಗಳು ಪುಡಿ ಪುಡಿ, ಕಾರ್ಯಕರ್ತರಿಂದ ಪ್ರತಿಭಟನೆ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್‌ ಬೇಲಿ!

ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್‌ ಬೇಲಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.