ಸೆ. 10ಕ್ಕೆ ಬಾದಾಮಿಗೆ ಸಿದ್ದರಾಮಯ್ಯ ಭೇಟಿ, ಮಳೆ ಹಾನಿ ಪ್ರದೇಶಗಳ ವೀಕ್ಷಣೆ
Team Udayavani, Sep 8, 2022, 2:48 PM IST
ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ, ಬಾದಾಮಿ ಶಾಸಕ ಸಿದ್ಧರಾಮಯ್ಯ ಅವರು ನಾಡಿದ್ದು ಸೆ.10 ಶನಿವಾರ ಬೆಂಗಳೂರಿನಿಂದ ಬಾದಾಮಿಗೆ ಆಗಮಿಸಲಿದ್ದಾರೆ.
ಅಂದು ಬೆಳಿಗ್ಗೆ ಬೆಂಗಳೂರಿನಿಂದ ಹುಬ್ಬಳ್ಳಿ ಗೆ ವಿಮಾನದ ಮೂಲಕ ಆಗಮಿಸಿ ಅಲ್ಲಿಂದ ರಸ್ತೆಯ ಮೂಲಕ ಮಧ್ಯಾಹ್ನ 1 ಗಂಟೆಗೆ ಬಾದಾಮಿಗೆ ಆಗಮಿಸಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.
ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸಾರ್ವಜನಿಕರ ಅಹವಾಲು ಸ್ವೀಕರಿಸಿ ವಾಸ್ತವ್ಯ ಮಾಡಲಿದ್ದಾರೆ ಎಂದು ಮುಖಂಡ ಹೊಳಬಸು ಶೆಟ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಇದು ಸ್ಮಶಾನ ವೈರಾಗ್ಯ…ಟಿಎಂಸಿ ಮುಖಂಡರ ರಾಜಕೀಯ ನಿವೃತ್ತಿ ಹೇಳಿಕೆಗೆ ಬಿಜೆಪಿ ತಿರುಗೇಟು