ಅಧ್ಯಾತ್ಮದಿಂದ ಮಾನವ ಜನ್ಮ ಸಾರ್ಥಕ

ಹಿತಮಿತ ಆಹಾರ ಪದ್ದತಿ ಅಳವಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು

Team Udayavani, Mar 19, 2022, 6:21 PM IST

ಅಧ್ಯಾತ್ಮದಿಂದ ಮಾನವ ಜನ್ಮ ಸಾರ್ಥಕ

ಮಹಾಲಿಂಗಪುರ: ದಾನ, ಧರ್ಮ ಮತ್ತು ಅಧ್ಯಾತ್ಮ ಸಂಸ್ಕಾರದ ಬಲದಿಂದ ಮಾನವ ಜನ್ಮದ ಸಾರ್ಥಕತೆ ಪಡೆಯಲು ಸಾಧ್ಯವಿದೆ ಎಂದು ಸಿದ್ದಾರೂಢ ಬ್ರಹ್ಮವಿದ್ಯಾಶ್ರಮದ ಸಹಜಾನಂದ ಸ್ವಾಮೀಜಿ ಹೇಳಿದರು.

ಪಟ್ಟಣದ ಢಪಳಾಪೂರ ಸಹೋದರರ ತೋಟದಲ್ಲಿ ಹೋಳಿ ಹಬ್ಬದ ವಿಶೇಷ ಶಿವಾನುಭವ ಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಇಂದಿನ ಯುವಕರಲ್ಲಿ ಗುರು-ಹಿರಿಯರ ಮೇಲೆ ಗೌರವ, ಅಭಿಮಾನ ಕಡಿಮೆಯಾಗುತ್ತಿರುವುದು ವಿಷಾದನೀಯ. ಯುವಜನತೆ ದುಶ್ಚಟಗಳಿಗೆ ಬಲಿಯಾಗದೆ ಸತ್ಸಂಗದಲ್ಲಿ ಭಾಗವಹಿಸಿ ಉತ್ತಮ ಸಂಸ್ಕಾರ-ಸಂಸ್ಕೃತಿ ಬೆಳೆಸಿಕೊಂಡು ಮಾನವಿಯ ಮೌಲ್ಯ ಕಾಪಾಡುವ ಜತೆಗೆ ಗುರು-ಹಿರಿಯರು ಹಾಕಿ ಕೊಟ್ಟ ಸನ್ಮಾರ್ಗದಲ್ಲಿ ನಡೆದು ಜೀವನ ಸಾರ್ಥಕ ಮಾಡಿಕೊಳ್ಳಬೇಕಾಗಿದೆ ಎಂದರು.

ಮನುಷ್ಯ ನಾಮಸ್ಮರಣೆ, ಜಪ, ತಪ, ಸಂಸ್ಕೃತಿ, ಸಂಸ್ಕಾರವಿಲ್ಲದೇ ವ್ಯರ್ಥವಾಗಿ ಆಯುಷ್ಯ ಕಳೆಯುತ್ತಿದ್ದಾನೆ. ಯಾವುದೇ ಸ್ವಾರ್ಥವಿಲ್ಲದೇ ಪರರ ಹಿತಕ್ಕಾಗಿ ಶ್ರಮಿಸುವವರು ಮಾತ್ರ ಸಮಾಜದಲ್ಲಿ ಮಹಾತ್ಮರಾಗಲು ಸಾಧ್ಯ. ಮನುಷ್ಯನು ಬದುಕು ಆರೋಗ್ಯಕರ, ಸದಾಚಾರ, ನಿ ರ್ದಿಷ್ಟ ಗುರಿ ಹೊಂದಿದಾಗ ಮಾತ್ರ ಮಾನವ ಜನ್ಮದ ಸಾರ್ಥಕತೆ ಸಾಧ್ಯ ಎಂದರು.

ಮಲ್ಲೇಶಪ್ಪ ಕಟಗಿ ಶರಣರು ಮಾತನಾಡಿ, ಮನುಷ್ಯ ಗಳಿಸುವ ಭೌತಿಕ ಸಂಪತ್ತಿಗಿಂತ ಬೌದ್ಧಿಕ ಸಂಪತ್ತಿಗೆ ಹೆಚ್ಚಿನ ಮಹತ್ವವಿದ್ದು, ಇಂದು  ಸಿರಿವಂತರಾಗುವುದಕ್ಕಿಂತ ಸಂಸ್ಕಾರಯುತ ಮನುಷ್ಯರಾಗಿ ಬಾಳುವುದು ಅವಶ್ಯವಾಗಿದೆ. ನಮ್ಮ ನಡೆ-ನುಡಿ, ಆಚಾರ-ವಿಚಾರ, ಪದ್ಧತಿಗಳು ಇತರರಿಗೆ ಮಾದರಿಯಾಗಿರಬೇಕು. ಇಂದು ಅಧ್ಯಾತ್ಮ ಅತ್ಯವಶ್ಯಕವಾಗಿದೆ. ನೀತಿ ಇಲ್ಲದ ಶಿಕ್ಷಣ, ಬೀತಿ ಇಲ್ಲದ ಶಾಸನ, ಮೀತಿ ಇಲ್ಲದ ಜೀವನ, ಸೀಮಾತೀತ ಸ್ವಾತಂತ್ರ್ಯದಿಂದ ಮನುಷ್ಯನ ಜೀವನಕ್ರಮವು ವಿನಾಶದತ್ತ ಸಾಗಿದೆ. ಪ್ರತಿಯೊಬ್ಬರು ಅಧ್ಯಾತ್ಮದತ್ತ ಒಲವು ತೋರಿಸಿ, ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದರು.

ಯೋಗಿರಾಜ ಸದಾಶಿವ ಗುರೂಜಿ ಮಾತನಾಡಿ, ಮನುಷ್ಯನ ಜೀವನದ ಅಭಿವೃದ್ಧಿಯಲ್ಲಿ ಯೋಗದ ಮಹತ್ವದ ಕುರಿತು ಮಾತನಾಡಿ ಪ್ರತಿಯೊಬ್ಬರು ಯೋಗಮಾಡಿ, ಹಿತಮಿತ ಆಹಾರ ಪದ್ದತಿ ಅಳವಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು. ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ಜರುಗಿದ ಭಜನಾ ಕಾರ್ಯಕ್ರಮಗಳು ಗಮನ ಸೆಳೆದವು. ಮಹಾಲಿಂಗಪುರ, ಹುಲಗಬಾಳಿ, ಹಳ್ಳೂರ, ಸತ್ತಿ, ನಾವಲಗಿ, ತೇರದಾಳ, ಅಕ್ಕಿಮರಡಿ ಸೇರಿದಂತೆ ವಿವಿಧ ಊರುಗಳು 12 ಕಲಾ ತಂಡಗಳ ಭಜನಾ ಕಾರ್ಯಕ್ರಮ ಗಮನ ಸೆಳೆದವು. ಪತ್ರಕರ್ತ ಚಂದ್ರಶೇಖರ ಮೋರೆ ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿ-ವಂದಿಸಿದರು.

ಬಸವರಾಜ ಢಪಳಾಪೂರ, ವಿವೇಕ ರವಿ ಢಪಳಾಪೂರ, ನವೀನ ಬ. ಢಪಳಾಪೂರ, ಭರತ ಬ. ಢಪಳಾಪೂರ, ಈಶ್ವರಪ್ಪ ಮುಂಡಗನೂರ, ಮಹಿಬೂಬ ಸನದಿ, ಮಹಾದೇವ ಕೌಜಲಗಿ, ಕಲ್ಲಪ್ಪ ಚಿಂಚಲಿ, ಎ.ಟಿ. ಪಾಟೀಲ, ವಿಜಯಕುಮಾರ ಸಬಕಾಳೆ, ಶಿವಾನಂದ ಹುಣಶ್ಯಾಳ, ಹನಮಂತ ಮೀರಾಪಟ್ಟಿ, ಜಯವಂತ ಬಿಳ್ಳೂರ, ಶಿವಾನಂದ ಪಟ್ಟೇದ, ಬಸವರಾಜ ನುಚ್ಚಿ, ಪ್ರಕಾಶ ಮಾಳಗಿ, ಈಶ್ವರ ಹಳ್ಳಿ, ಚಂದ್ರಪ್ಪ ಡೋಣಿ, ಉದ್ದಪ್ಪ ನಿಲಾರಿ, ಮಹಾಲಿಂಗ ಕರೆಹೊನ್ನ ಇದ್ದರು.

ಟಾಪ್ ನ್ಯೂಸ್

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.