ವಜ್ರಮಹೋತ್ಸವಕ್ಕೆ 3 ಡಿ ವರ್ಚ್ಯುಯೆಲ್‌ ಟಚ್‌

Team Udayavani, Oct 15, 2017, 11:19 AM IST

vidhana-soudha-750.jpg

ಬೆಂಗಳೂರು: ಅಮೆರಿಕ, ಇಂಗ್ಲೆಂಡ್‌, ಆಸ್ಟ್ರೇಲಿಯಾ ಸೇರಿ ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಅಲ್ಲಿಂದಲೇ ವಿಧಾನಸೌಧ ವಜ್ರಮಹೋತ್ಸವ ಸಮಾರಂಭ ಕಣ್ತುಂಬಿಕೊಳ್ಳಬಹುದು.

ಹೌದು, “ವರ್ಚ್ಯುಯೆಲ್‌  ರಿಯಾಲಿಟಿ’ ತಂತ್ರಜ್ಞಾನ ಮೂಲಕ ನೀವು ಎಲ್ಲಿದ್ದರೂ ಅಲ್ಲಿಂದಲೇ ಮೊಬೈಲ್‌ ಆನ್‌ ಮಾಡಿ ವಿಧಾನಸೌಧ ವಜ್ರಮಹೋತ್ಸವ ವೀಕ್ಷಿಸಬಹುದು. ಮೊಬೈಲ್‌ ಕೈಯಲ್ಲಿ ಹಿಡಿದರೆ ನೀವು ಅದೇ ಜಾಗದಲ್ಲಿದ್ದಂತೆ ಭಾಸವಾಗಲಿದೆ.

ಯಾವುದೇ ಸ್ಮಾರ್ಟ್‌ ಫೋನ್‌ ಹಾಗೂ ಲ್ಯಾಪ್‌ ಟಾಪ್‌ನಲ್ಲಿ “ಯೂ ಟ್ಯೂಬ್‌’ ಹಾಗೂ “ಫೇಸ್‌ಬುಕ್‌’ ಲೈವ್‌ ಮೂಲಕ ಕಾರ್ಯಕ್ರಮ ವೀಕ್ಷಿಸಬಹು ದಾಗಿದೆ. ಪಾರಂಪರಿಕ ನೇರ ಪ್ರಸಾರಕ್ಕೆ ಬದಲಾಗಿ 360 ಡಿಗ್ರಿ ಕೋನದಲ್ಲೂ ವೀಕ್ಷಣೆಗೆ ಅವಕಾಶವಾಗಿ ರುವುದರಿಂದ ನೀವೂ ಕಾರ್ಯಕ್ರಮದಲ್ಲಿ ಭಾಗಿಯಾದ ಅನುಭವ, ವಿಧಾನಸೌಧ ಆವರಣದಲ್ಲೇ ನಿಂತು ಅಲ್ಲಿನ ಅತಿಥಿಗಳು, ವೀಕ್ಷಕರ ಜತೆಗೂಡಿದಂತಹ  “ಫೀಲಿಂಗ್‌’ ಆಗಲಿದೆ. 

ಅ.25 ಮತ್ತು 26 ರಂದು ನಡೆಯಲಿರುವ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ “ವಿಧಾನಸೌಧ 3ಡಿ ವರ್ಚ್ಯುಯೆಲ್‌  ರಿಯಾಲಿಟಿ’ ಪ್ರದರ್ಶನವೂ ನಡೆಯಲಿದ್ದು, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಇಂಥದೊಂದು ಪ್ರದರ್ಶನಕ್ಕೆ ಸಿದ್ಧತೆ ನಡೆಯುತ್ತಿದೆ. ಕೇರಾಫ್ ಫ‌ುಟ್‌ಪಾತ್‌ ಖ್ಯಾತಿಯ ಮಾಸ್ಟರ್‌ ಕಿಶನ್‌ ನಿರ್ದೇಶನದಲ್ಲಿ “ವಿಧಾನಸೌಧ 3ಡಿ ವರ್ಚ್ಯುಯೆಲ್‌  ರಿಯಾಲಿಟಿ’ ಚಿತ್ರ ಸಿದ್ಧಗೊಂಡಿದ್ದು ಇದರ ಪ್ರದರ್ಶನ ಅ.26 ರಂದು ವಿಧಾನಸೌಧ ಬಾಂಕ್ವೆಟ್‌ ಸಭಾಂಗಣದಲ್ಲಿ ಮಧ್ಯಾಹ್ಮ 1 ಗಂಟೆಯಿಂದ 1.30ರವರೆಗೆ ನಡೆಯಲಿದೆ.

ಇದಕ್ಕೂ ಮುನ್ನ ಅ.25 ರಂದು ರಾತ್ರಿ 7 ರಿಂದ 8.30 ರವರೆಗೆ “ವಿಧಾನಸೌಧ ಮೇಲ್ಮೆ„ ಮೇಲೆ “3 ಡಿ ಮ್ಯಾಪಿಂಗ್‌’ ಪ್ರದರ್ಶನವೂ ಮತ್ತೂಂದು ವಿಶೇಷ. ಇದು ಒಂದು ರೀತಿಯಲ್ಲಿ ಲೇಸರ್‌ ಶೋ ಹಾಗೂ ಧ್ವನಿ-ಬೆಳಕಿನಂತೆ ವರ್ಣರಂಜಿತವಾಗಿರುತ್ತದೆ. ಅಷ್ಟೇ
ಅಲ್ಲದೆ ರಾಷ್ಟ್ರಪತಿಯವರು ಜಂಟಿ ಅಧಿವೇಶನ ಉದ್ದೇಶಿಸಿ ಮಾಡಲಿರುವ ಭಾಷಣ ಸಹ ವರ್ಚ್ಯುಯೆಲ್‌ ರಿಯಾಲಿಟಿ ತಂತ್ರಜ್ಞಾನದ ಮೂಲಕ ವೀಕ್ಷಿಸಬಹುದಾಗಿದೆ.

ಸಾಕ್ಷ್ಯಚಿತ್ರ ಪ್ರದರ್ಶನ: ನಿರ್ದೇಶಕ ಗಿರೀಶ್‌ ಕಾಸರವಳ್ಳಿ ನಿರ್ದೇಶನದ “ವಿಧಾನಸೌಧ ಕಟ್ಟಡ ನಿರ್ಮಾಣ’ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನವೂ ಅ.26ರಂದು ನಡೆಯಲಿದೆ. ಟಿ.ಎನ್‌.ಸೀತಾರಾಂ ನಿರ್ದೇಶನದ “ಕರ್ನಾಟಕ ವಿಧಾನಮಂಡಲ ನಡೆದು ಬಂದ ಹಾದಿ’ ಕುರಿತು ಸಾಕ್ಷ್ಯಚಿತ್ರವು ರಾಜ್ಯವನ್ನಾಳಿದ ನಾಯಕರು, ಅವರು ಕೈಗೊಂಡ ಐತಿಹಾಸಿಕ ನಿರ್ಣಯಗಳನ್ನೊಳಗೊಂಡಿರುತ್ತದೆ.

ವಿಧಾನಸೌಧ ಮುಂಭಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೇತೃತ್ವದಲ್ಲಿ ನಡೆಯಲಿರುವ ರಾಜ್ಯದ ಕಲೆ ಪರಂಪರೆ ಸಾಹಿತ್ಯ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ಸಮಾರಂಭದ ಮತ್ತೂಂದು ವಿಶೇಷ.

ಈಗಾಗಲೇ ವಾರ್ತಾ ಇಲಾಖೆ ವಜ್ರಮಹೋತ್ಸವ ಕುರಿತು 70 ಸೆಕೆಂಡ್‌ಗಳ ಕಿರುಚಿತ್ರ ಸಹ ನಿರ್ಮಿಸಿದೆ.

ಅ.26 ರಂದು ರಾತ್ರಿ ಗ್ರಾಮಿ ಪ್ರಶಸ್ತಿ ವಿಜೇತ ರಿಕಿಕೇಜ್‌ ರಾಜ್ಯದ ಜೀವರಾಶಿ, ಪ್ರಕೃತಿ ವೈವಿದ್ಯತೆಯ ಸೊಬಗಿನ ಸುಂದರ ಚಿತ್ರಣದ “ಶಾಂತಿ ಸಂಸಾರ’ ಸಂಗೀತ ಕಾರ್ಯಕ್ರಮ ಸಹ ವಿಧಾನಸೌಧ ಪೂರ್ವ ದ್ವಾರದ ಮೆಟ್ಟಿಲುಗಳ ಮೇಲೆ ನೀಡಲಿದ್ದಾರೆ.

– ಎಸ್‌.ಲಕ್ಷ್ಮಿನಾರಾಯಣ

ಟಾಪ್ ನ್ಯೂಸ್

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.