64 ಪಿಯು ಕಾಲೇಜಿಗೆ ಶೌಚಾಲಯ
Team Udayavani, Jul 10, 2017, 3:05 AM IST
ಬೆಂಗಳೂರು: ರಾಜ್ಯದ ಆಯ್ದ 64 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಶೌಚಾಲಯ ನಿರ್ಮಿಸಲು ತಲಾ 2.50 ಲಕ್ಷ ರೂ.ಗಳಂತೆ 1.62 ಕೋಟಿ ರೂ.ಗಳನ್ನು ಸ್ವತ್ಛ ಭಾರತ್ ಕೋಶ್ ಯೋಜನೆಯಡಿ ಬಿಡುಗಡೆ ಮಾಡಲಾಗಿದೆ.
ಒಂದೇ ನಕಾಶೆ ಹಾಗೂ ಅಂದಾಜು ಪಟ್ಟಿಯಂತೆ ಶೌಚಾಲಯ ನಿರ್ಮಾಣದ ಕಾಮಗಾರಿಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕು. ಕಾಮಗಾರಿ ವೆಚ್ಚ ನಿಗದಿತ ಹಣಕ್ಕಿಂತ ಹೆಚ್ಚಾಗದಂತೆ ನೋಡಿಕೊಳ್ಳಬೇಕು ಮತ್ತು ಶೌಚಾಲಯ ನಿರ್ಮಾಣ ಹೊರತುಪಡಿಸಿ ಬೇರ್ಯಾವ ಕಾಮಗಾರಿಗೂ ಈ ಹಣವನ್ನು ಬಳಸುವಂತಿಲ್ಲ. ಕಾಮಗಾರಿಯ ವರದಿಯನ್ನು ಆದಷ್ಟು ಶೀಘ್ರ ಇಲಾಖೆಗೆ ಕಳುಹಿಸಬೇಕೆಂದು ಪಿಯು ಇಲಾಖೆ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ 6, ಮೈಸೂರಿನ 4, ಯಾದಗಿರಿ, ಧಾರವಾಡ, ತುಮಕೂರು, ಉಡುಪಿಯ ತಲಾ 3, ರಾಮನಗರ,ಬಳ್ಳಾರಿ, ಬಾಗಲಕೋಟೆ, ವಿಜಯಪುರ, ಬೀದರ್, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಕೊಪ್ಪಳ, ರಾಯಚೂರು, ಮಂಡ್ಯ, ಗದಗ, ಹಾವೇರಿ, ಹಾಸನ,ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ, ಕಲಬುರಗಿ, ಕೊಡಗಿನ ತಲಾ 2 ಹಾಗೂ ಬೆಳಗಾವಿ, ಶಿರಸಿ, ಕಾರವಾರ, ಮಂಗಳೂರು, ಶಿವಮೊಗ್ಗದ ತಲಾ ಒಂದು ಕಾಲೇಜಿನಲ್ಲಿ ಈ ಯೋಜನೆಯಡಿ ಶೌಚಾಲಯ ನಿರ್ಮಿಸಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drought Relief: ಕಾಂಗ್ರೆಸ್-ಬಿಜೆಪಿ ಬರ ಪರಿಹಾರ ಜಟಾಪಟಿ
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ