ಸಭೆ ಮುಂದೂಡಿಕೆ ವಿರೋಧಿಸಿ ಪ್ರತಿಭಟನೆ

ಪಾಲಿಕೆ ಸಭೆ ಸೆ.5ಕೆ ಮುಂದೂಡಿಕ್ಕೆ/ಮುಂದಿನ ಶನಿವಾರ ಬಿಬಿಎಂಪಿ ಈ ಅವಧಿಯ ಕೊನೆಯ ಕೌನ್ಸಿಲ್‌ ಸಭೆ

Team Udayavani, Aug 29, 2020, 12:09 PM IST

ಸಭೆ ಮುಂದೂಡಿಕೆ ವಿರೋಧಿಸಿ ಪ್ರತಿಭಟನೆ

ಬೆಂಗಳೂರು: ಬಿಬಿಎಂಪಿಯ ಕೌನ್ಸಿಲ್‌ ಸಭೆಗೆ ಮೇಯರ್‌ ಎಂ.ಗೌತಮ್‌ಕುಮಾರ್‌, ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್‌ ಹಾಗೂ ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ಹಾಜರಾಗದ ಹಿನ್ನೆಲೆಯಲ್ಲಿ ಸಭೆ ಸೆ.5ಕ್ಕೆ ಮುಂದೂಡಲಾಯಿತು. ಬಿಜೆಪಿ ವಿರುದ್ಧ ವಿರೋಧ ಪಕ್ಷದಿಂದ ಪ್ರತಿಭಟನೆ ನಡೆಯಿತು.

ಆ.28ರ ಬೆಳಗ್ಗೆ 11 ಗಂಟೆಗೆ ಕೌನ್ಸಿಲ್‌ ಸಭೆ ಕರೆಯಲಾಗಿತ್ತು. ಕೆಲವು ಸದಸ್ಯರು ಸಭೆಗೆ ಹಾಜರಾಗಿದ್ದರು. ಆದರೆ, ಸಭೆಗೆ ಬಂದ ಉಪಮೇಯರ್‌ ರಾಮ್‌ ಮೋಹನ್‌ ರಾಜು ಸೆ.5ಕ್ಕೆ ಪಾಲಿಕೆಯ ಸಭೆ ಮುಂದೂಡಿಕೆ ಯಾಗಿದೆ ಎಂದು ಘೋಷಿಸಿದರು. ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ಬಿಬಿಎಂಪಿಯ ವಿರೋಧ ಪಕ್ಷ ನಾಯಕ ಅಬ್ದುಲ್‌ ವಾಜಿದ್‌, ನಿಗದಿಯಾದ ಸಭೆ ದಿಢೀರ್‌ ಎಂದು ಹೇಗೆ ಮುಂದೂಡ ಲಾಗುತ್ತದೆ?, ಸರಿಯಾದ ಕಾರಣ ಕೊಡಿ. ಚುನಾವಣೆ ಬಗ್ಗೆ ಚರ್ಚೆ ಮಾಡುವುದಿದೆ ಎಂದರು. ಸಭೆಗೆ ಮೇಯರ್‌, ಆಯುಕ್ತರು ಹಾಗೂ ಆಡಳಿತ ಪಕ್ಷದ ನಾಯಕರೂ ಸೇರಿದಂತೆ ಯಾರೂ ಹಾಜರಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಭೆ ಮುಂದೂಡಿಕೆಗೆ ಪ್ರತಿಭಟನೆ: ಬಿಬಿಎಂಪಿಯ ಮಾಸಿಕ ಸಭೆ ಮುಂದೂಡಿಕೆ ಮಾಡಿದ್ದನ್ನು ವಿರೋ ಧಿಸಿ ವಿರೋಧ ಪಕ್ಷದ ಸದಸ್ಯರು ಬಿಜೆಪಿಯ ಆಡಳಿತ ವೈಫಲ್ಯವಾಗಿದೆ. ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ನೀಡುವ ಯೋಜನೆಗೆ ಆಯುಕ್ತರಿಂದ ತಡೆ ನೀಡಿಸಿದ್ದಾರೆ ಎಂದು ದೂರಿ ಪ್ರತಿಭಟನೆಗೆ ಮುಂದಾದರು.

ಒಂದೆಡೆ ಲ್ಯಾಪ್‌ಟಾಪ್‌ ಖರೀದಿಸಿಲು ಅಧಿಕಾರಿಗಳು ಸಹಿ ಹಾಕ್ತಾರೆ. ಮತ್ತೂಂದೆಡೆ ಲ್ಯಾಪ್‌ ಟಾಪ್‌ ಖರೀದಿಯಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಆರೋಪಿಸಿ, ಸರ್ಕಾರಕ್ಕೂ ಪತ್ರ ಬರೆಯುತ್ತಾರೆ. ಇದು ಯಾವ ರೀತಿಯ ಆಡಳಿತ ವ್ಯವಸ್ಥೆ ಎಂದು ಅಬ್ದುಲ್‌ ವಾಜಿದ್‌ ಪ್ರಶ್ನಿಸಿದರು. ಪಾಲಿಕೆ ಸದಸ್ಯರ ಅಧಿ ಕಾರ ಅವಧಿ   ಸೆ.10ಕ್ಕೆ ಕೊನೆಯಾಗಲಿದೆ. ಚುನಾವಣೆ ನಡೆಸುವ ಬಗ್ಗೆ ಯಾವುದೇ ಪ್ರಕ್ರಿಯೆ ನೀಡುತ್ತಿಲ್ಲ. ಶುಕ್ರವಾರ ಬಡ ಮಕ್ಕಳಿಗೆ ಲ್ಯಾಪ್‌ಟಾಪ್‌ ನೀಡುವ ವಿಚಾರ ಚರ್ಚೆ ಆಗಬೇಕಿತ್ತು. ಆದರೆ, ಸಕಾರಣ ನೀಡದೆ ಸಭೆ ಮುಂದೂಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭೆ ಮುಂದೂಡಿಕೆಯಾಗಿದೆಯಾದರೂ, ಸಭೆ ಕರೆದ ಉದ್ದೇಶದಿಂದ ಮಾಡಲಾಗಿದ್ದ ಊಟ ವ್ಯರ್ಥ ಮಾಡದೆ ಸದಸ್ಯರು, ಪೊಲೀಸ್‌ ಸಿಬ್ಬಂದಿ ಭೋಜನ ಸವಿದರು.

ಹಣ ಯಾರು ಕೊಡುತ್ತಾರೆ? :  ಕೌನ್ಸಿಲ್‌ ಸಭೆ ಮುಂದೂಡಿಕೆ ಪೂರ್ವ ನಿಯೋಜಿತ. ಆಡಳಿತ ಪಕ್ಷದ ನಾಯಕರು ಸಭೆಗೆ ಹಾಜರಾಗಿಲ್ಲ. ಪಾಲಿಕೆ ಸದ್ಯರ ಅಧಿಕಾರ ಅವಧಿ ಮುಗಿಯುವ ಹಂತದಲ್ಲಿ ಸಭೆಯನ್ನು ಮುಂದೂಡಲಾಗಿದೆ. ಸಭೆ ನಡೆಸುವ ಆಸಕ್ತಿ ಇಲ್ಲದೆ ಇದ್ದಿದ್ದರೆ ಆ.27ಕ್ಕೆ ಸಭೆ ಮುಂದೂಡುವ ಬಗ್ಗೆ ಸೂಚನೆ ನೀಡಬೇಕಿತ್ತು. ಶುಕ್ರವಾರ ಕೌನ್ಸಿಲ್‌ ಸಭೆ ರದ್ದಾಗಿರುವುದರಿಂದ ಪಾಲಿಕೆಗೆ ಅಂದಾಜು 4 ಲಕ್ಷ ರೂ. ನಷ್ಟವುಂಟಾಗಿದೆ. ಪಾಲಿಕೆಗೆ ಉಂಟಾಗಿರುವ ನಷ್ಟಮೊತ್ತವನ್ನು ಮೇಯರ್‌ ಭರಿಸಬೇಕು ಎಂದು ವಿರೋಧ ಪಕ್ಷದ ಅಬ್ದುಲ್‌ ವಾಜಿದ್‌ ಆಗ್ರಹಿಸಿದರು.

ಚುನಾವಣೆ ಮುಂದೂಡಿಕೆ ಯತ್ನ: ಹೋರಾಟಕ್ಕೆ ನಿರ್ಧಾರ  ಬೆಂಗಳೂರು: ಪಾಲಿಕೆಯ ಚುನಾವಣೆಯನ್ನು ನಿಗದಿತ ಸಮಯಕ್ಕೆ ನಡೆಸದೆ ಮುಂದೂಡುವ ಪ್ರಯತ್ನಗಳು ನಡೆಯುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್‌ನ ಮಾಜಿ ಮೇಯರ್‌ಗಳು ನ್ಯಾಯಾಲಯದ ಮೊರೆ ಹೋಗಲು ತೀರ್ಮಾನಿಸಿದ್ದಾರೆ. ಸರ್ಕಾರ ಕೂಡಲೇ ಪಾಲಿಕೆಯ ಚುನಾವಣೆ ನಡೆಸುವ ಬಗ್ಗೆ ಅಧಿಸೂಚನೆ ಹೊರಡಿಸಬೇಕು. ಇದಕ್ಕೆ ಸ್ಪಂದಿಸದೆ ಇದ್ದಲ್ಲಿ ಸೆಪ್ಟಂಬರ್‌ ಎರಡನೇ ವಾರದಲ್ಲಿ ನ್ಯಾಯಾಲಯಕ್ಕೆ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುತ್ತೇವೆ ಎಂದು ಮಾಜಿ ಮೇಯರ್‌ಗಳಾದ ಎಂ ರಾಮಚಂದ್ರಪ್ಪ ಮತ್ತು ಪಿ.ಆರ್‌. ರಮೇಶ್‌ ಎಚ್ಚರಿಸಿದ್ದಾರೆ. ರಾಜ್ಯ ಚುನಾವಣಾ ಆಯೋಗವು ಈಗಾಗಲೇ ಬಿಬಿಎಂಪಿ ಚುನಾವಣೆ ನಡೆಸುವ ಸಂಬಂಧ ಹಾಗೂ ಮೀಸಲಾತಿ ಪಟ್ಟಿ ಪ್ರಕಟ ಮಾಡುವುದಕ್ಕೆ ರಾಜ್ಯ ಸರ್ಕಾರಕ್ಕೆ ನಿರ್ದೇಶ ನೀಡಬೇಕು ಎಂದು ನ್ಯಾಯಾಲಯದಲ್ಲಿ ಕೋರಿದೆ. ಇದರ ಪ್ರಕ್ರಿಯೆಗಳನ್ನು ನೋಡಿಕೊಂಡು ನಾವು ಮುಂದುವರಿಯುತ್ತೇವೆ ಎಂದು ರಮೇಶ್‌ ತಿಳಿಸಿದರು.

ಸೆ.5ಕ್ಕೆ ಪಾಲಿಕೆಯ ಮತ್ತೂಂದು ಸಭೆ ಇದೆ. ಕಡಿಮೆ ಅವ ಧಿಯಲ್ಲಿ ಎರಡು ಸಭೆ ಬೇಡ ಎಂದು ಮುಂದೂಡಿದ್ದೇವೆ. ಈಗಾಗಲೇ ಸಭೆ ಕರೆಯಲಾಗಿದ್ದರಿಂದ ಶಿಷ್ಠಾಚಾರದಂತೆ ಸಭೆ ಕರೆದು ಮುಂದೂಡಲಾಗಿದೆ. ಇದರಲ್ಲಿ ಯಾವ ಒಳಸಂಚೂ ಇಲ್ಲ. ಸೆ.5ಕ್ಕೆ ಪಾಲಿಕೆಯ ಕೊನೆಯ ಸಭೆ ನಡೆಯಲಿದೆ,  ಮುನೀಂದ್ರ ಕುಮಾರ್‌, ಆಡಳಿತ ಪಕ್ಷದ ನಾಯಕ

ಟಾಪ್ ನ್ಯೂಸ್

BMTC: ತನ್ನ ಆಸ್ತಿಯನ್ನೇ ರಕ್ಷಿಸಿಕೊಳ್ಳದ ಬಿಎಂಟಿಸಿ

BMTC: ತನ್ನ ಆಸ್ತಿಯನ್ನೇ ರಕ್ಷಿಸಿಕೊಳ್ಳದ ಬಿಎಂಟಿಸಿ

IPL 2024: 8 ಅಂಕ ಹೊಂದಿರುವ ಆರ್ ಸಿಬಿಗೆ ಇನ್ನೂ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ಲೆಕ್ಕಾಚಾರ

IPL 2024: 8 ಅಂಕ ಹೊಂದಿರುವ ಆರ್ ಸಿಬಿಗೆ ಇನ್ನೂ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ಲೆಕ್ಕಾಚಾರ

Crime: ತವರು ಮನೆಗೆ 1 ಕೋಟಿ ರೂ.ಕೊಟ್ಟಿದ್ದಕ್ಕೆ ಪತ್ನಿಯ ಕೊಂದ ಪತಿ

Crime: ತವರು ಮನೆಗೆ 1 ಕೋಟಿ ರೂ.ಕೊಟ್ಟಿದ್ದಕ್ಕೆ ಪತ್ನಿಯ ಕೊಂದ ಪತಿ

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Crime: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ

Crime: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BMTC: ತನ್ನ ಆಸ್ತಿಯನ್ನೇ ರಕ್ಷಿಸಿಕೊಳ್ಳದ ಬಿಎಂಟಿಸಿ

BMTC: ತನ್ನ ಆಸ್ತಿಯನ್ನೇ ರಕ್ಷಿಸಿಕೊಳ್ಳದ ಬಿಎಂಟಿಸಿ

Crime: ತವರು ಮನೆಗೆ 1 ಕೋಟಿ ರೂ.ಕೊಟ್ಟಿದ್ದಕ್ಕೆ ಪತ್ನಿಯ ಕೊಂದ ಪತಿ

Crime: ತವರು ಮನೆಗೆ 1 ಕೋಟಿ ರೂ.ಕೊಟ್ಟಿದ್ದಕ್ಕೆ ಪತ್ನಿಯ ಕೊಂದ ಪತಿ

Arrested: ಭೂ ಅವ್ಯವಹಾರ; ಬೆಂ.ವಿ.ವಿ. ಪ್ರೊ.ಮೈಲಾರಪ್ಪ ಬಂಧನ

Arrested: ಭೂ ಅವ್ಯವಹಾರ; ಬೆಂ.ವಿ.ವಿ. ಪ್ರೊ.ಮೈಲಾರಪ್ಪ ಬಂಧನ

Arrested: ಯೂಟ್ಯೂಬ್‌ ನೋಡಿ ದ್ವಿಚಕ್ರ ವಾಹನ ಕದ್ದಿದ್ದ ಯುವಕ ಬಂಧನ  

Arrested: ಯೂಟ್ಯೂಬ್‌ ನೋಡಿ ದ್ವಿಚಕ್ರ ವಾಹನ ಕದ್ದಿದ್ದ ಯುವಕ ಬಂಧನ  

ಚಿನ್ನದ ನಾಡಿನ ಕಲಾವಿದೆ ವಿದ್ಯಾಶ್ರೀ ಪ್ರತಿಭೆ ಅನಾವರಣ-ನೃತ್ಯಗಂಗಾ ಪ್ರದರ್ಶನ

ಚಿನ್ನದ ನಾಡಿನ ಕಲಾವಿದೆ ವಿದ್ಯಾಶ್ರೀ ಪ್ರತಿಭೆ ಅನಾವರಣ-ನೃತ್ಯಗಂಗಾ ಪ್ರದರ್ಶನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BMTC: ತನ್ನ ಆಸ್ತಿಯನ್ನೇ ರಕ್ಷಿಸಿಕೊಳ್ಳದ ಬಿಎಂಟಿಸಿ

BMTC: ತನ್ನ ಆಸ್ತಿಯನ್ನೇ ರಕ್ಷಿಸಿಕೊಳ್ಳದ ಬಿಎಂಟಿಸಿ

IPL 2024: 8 ಅಂಕ ಹೊಂದಿರುವ ಆರ್ ಸಿಬಿಗೆ ಇನ್ನೂ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ಲೆಕ್ಕಾಚಾರ

IPL 2024: 8 ಅಂಕ ಹೊಂದಿರುವ ಆರ್ ಸಿಬಿಗೆ ಇನ್ನೂ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ಲೆಕ್ಕಾಚಾರ

5-sirsi

Sirsi: ಯಾರನ್ನೂ ಯಾವತ್ತೂ ಪ್ಲೀಸ್ ಮಾಡಬೇಡಿ, ಪ್ರೀತಿ ಮಾಡಿ ಸಾಕು: ಹುಕ್ಕೇರಿ ಶ್ರೀ

Crime: ತವರು ಮನೆಗೆ 1 ಕೋಟಿ ರೂ.ಕೊಟ್ಟಿದ್ದಕ್ಕೆ ಪತ್ನಿಯ ಕೊಂದ ಪತಿ

Crime: ತವರು ಮನೆಗೆ 1 ಕೋಟಿ ರೂ.ಕೊಟ್ಟಿದ್ದಕ್ಕೆ ಪತ್ನಿಯ ಕೊಂದ ಪತಿ

Arrested: ಭೂ ಅವ್ಯವಹಾರ; ಬೆಂ.ವಿ.ವಿ. ಪ್ರೊ.ಮೈಲಾರಪ್ಪ ಬಂಧನ

Arrested: ಭೂ ಅವ್ಯವಹಾರ; ಬೆಂ.ವಿ.ವಿ. ಪ್ರೊ.ಮೈಲಾರಪ್ಪ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.