ಪ್ರಥಮ್ ಬಿಗ್ಬಾಸ್ ಕಿರಿಕ್ ಕೀರ್ತಿ ರನ್ನರ್ಅಪ್
Team Udayavani, Jan 29, 2017, 11:40 PM IST
ಬೆಂಗಳೂರು: ಕಳೆದ ಮೂರು ತಿಂಗಳಿಂದ ಕಲರ್ಸ್ ವಾಹಿನಿಯಲ್ಲಿ ನಡೆಯುತ್ತಿದ್ದ ಬಿಗ್ಬಾಸ್ ಸೀಸನ್ 4ಗೆ ತೆರೆಬಿದ್ದಿದ್ದು, ಪ್ರಥಮ್ ಗೆದ್ದಿದ್ದು, ಕಿರಿಕ್ ಕೀರ್ತಿ ರನ್ನರ್ ಅಪ್ ಆಗಿದ್ದಾರೆ.
ಭಾನುವಾರ ರಾತ್ರಿ ನಡೆದ ಗ್ರಾಂಡ್ ಫಿನಾಲೆಯಲ್ಲಿ ನಟ ಸುದೀಪ್ ಅವರು, ವಿಜೇತರ ಹೆಸರು ಘೋಷಿಸಿದರು. ಪ್ರಥಮ್ಗೆ 50 ಲಕ್ಷ ರೂ. ನಗದು ಬಹುಮಾನ ಮತ್ತು ಟ್ರೋಫಿ ಸಿಕ್ಕಿದೆ. ಆದರೆ ಈ ಹಣವನ್ನು ಪ್ರಥಮ್ ಅವರು ಹುತಾತ್ಮ ಯೋಧರ ಮತ್ತು ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬ ಹಾಗೂ ಅಂಗವಿಕಲ ಹೆಣ್ಣು ಮಕ್ಕಳ ವಿವಾಹ ಖರ್ಚಿಗೆ ಹಂಚುವುದಾಗಿ ಪ್ರಕಟಿಸಿದರು.
ಒಟ್ಟಾರೆ 114 ದಿನಗಳ ಕಾಲ ನಡೆದ ಈ ರಿಯಾಲಿಟಿ ಶೋನಲ್ಲಿ 18 ಮಂದಿ ಭಾಗವಹಿಸಿದ್ದರು. ಆದರೆ ಅಂತಿಮವಾಗಿ ಸ್ಪರ್ಶ ಖ್ಯಾತಿಯ ರೇಖಾ, ಪ್ರಥಮ್ ಮತ್ತು ಕಿರಿಕ್ ಕೀರ್ತಿ ಉಳಿದುಕೊಂಡಿದ್ದರು. ಇವರಲ್ಲಿ ರೇಖಾ ಮೊದಲ ಸುತ್ತಿನಲ್ಲೇ ಹೊರಬಿದ್ದರೆ, ಕೀರ್ತಿ ಮತ್ತು ಪ್ರಥಮ್ ನಡುವೆ ಬಿರುಸಿನ ಪೈಪೋಟಿ ಏರ್ಪಟ್ಟಿತ್ತು.