ಕ್ಯಾನ್ಸರ್‌ ಎಂದು ಹೇಳಿ ತಪ್ಪು ಚಿಕಿತ್ಸೆ ನೀಡಿದ ಆಸ್ಪತ್ರೆ

Team Udayavani, May 9, 2019, 3:00 AM IST

Udayavani Kannada Newspaper

ಬೆಂಗಳೂರು: ಶೇಷಾದ್ರಿಪುರ ರಸ್ತೆಯ ಅಪೋಲೋ ಆಸ್ಪತ್ರೆ ವೈದ್ಯರು ಈಜಿಪ್ಟ್ ಪ್ರಜೆ ಮಗ್ದ ಹರೌನ್‌ (31) ಎಂಬ ಮಹಿಳೆಗೆ ವಿನಾಕಾರಣ ಕ್ಯಾನ್ಸರ್‌ ಇದೆ ಎಂದು ಚಿಕಿತ್ಸೆ ಪ್ರಾರಂಭಿಸಿದ್ದರಿಂದ ಅವರು ಸಾವು ಬದುಕಿನ ನಡುವೆ ನರಳುತ್ತಿದ್ದಾರೆ ಎಂದು ಮಾನವ ಬಂಧುತ್ವ ಸಂಘಟನೆ ಆರೋಪಿಸಿದೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆ ಸಂಚಾಲಕ ಮತ್ತು ವಕೀಲ ಅನಂತ್‌ನಾಯ್ಕ, ಮಗ್ದ ಹರೌನ್‌ ಅವರು 2017ರಲ್ಲಿ ಅಪೋಲೋ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಹೊಟ್ಟೆ ನೋವಿನಿಂದ 2018ರ ಆಗಸ್ಟ್‌ನಲ್ಲಿ ಅದೇ ಆಸ್ಪತ್ರೆಗೆ ದಾಖಲಾಗಿದ್ದರು. ತಪಾಸಣೆ ಮಾಡಿದ ವೈದ್ಯರು, “ಕ್ಯಾನ್ಸರ್‌ ಇದೆ ಚಿಕಿತ್ಸೆ ತೆಗೆದುಕೊಳ್ಳಬೇಕು’ ಎಂದು ಹೇಳಿದ್ದರು.

ಮಗ್ದ ಅವರಿಗೆ ಕ್ಯಾನ್ಸರ್‌ ಚಿಕಿತ್ಸೆ ಆರಂಭಿಸಲಾಗಿದೆ. ಎರಡೇ ತಿಂಗಳಲ್ಲಿ 9 ಕಿಮೋಥೆರಪಿ ಮತ್ತು ಎರಡು ಮೇಜರ್‌ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಶಸ್ತ್ರಚಿಕಿತ್ಸೆ ವೇಳೆ ಅವರ ದೇಹದಲ್ಲಿನ ಕಿಮೋಪಾಟ್‌ ಅಂಶವನ್ನು ಇಳಿಸಲಾಗಿದೆ. ಇದರಿಂದ ಅವರ ತಲೆ ಕೂದಲು ಸಂಪೂರ್ಣವಾಗಿ ಉದುರಿದ್ದು, ನಡೆದಾಡಲು ಸಹ ಆಗದೆ, ವ್ಹೀಲ್‌ ಚೇರ್‌ ಬಳಸುವ ಹಂತ ತಲುಪಿದ್ದಾರೆ. ಮಾತನಾಡಲೂ ಆಗದೆ, ದಿನದ ಕಾರ್ಯಗಳಿಗೆ ಮತ್ತೂಬ್ಬರನ್ನು ಅವಲಂಬಿಸುವಂತಾಗಿದೆ ಎಂದರು.

ಮಗ್ದ ಅವರ ಈಜಿಪ್ಟ್ ವಿಸಾ ಅವಧಿಯೂ ಮುಗಿದಿದೆ. ತಮ್ಮ ದೇಶಕ್ಕೂ ಹಿಂದಿರುಗದ ಸ್ಥಿತಿಯಲ್ಲಿದ್ದು, ಚಿಕಿತ್ಸೆ ನೆಪದಲ್ಲಿ ಅಪೋಲೋ ಆಸ್ಪತ್ರೆ ಮಗ್ದ ಅವರಿಂದ ಲಕ್ಷಾಂತರ ರೂ. ತೆಗೆದುಕೊಳ್ಳಲಾಗಿದೆ. ಕೂಡಲೇ ಗೃಹ ಸಚಿವರು ಮಧ್ಯ ಪ್ರವೇಶಿಸಿ ಮಗ್ದ ಈಜಿಪ್ಟ್ ದೇಶಕ್ಕೆ ಹಿಂದಿರುಗಲು ನೆರವಾಗಬೇಕು. ಆಸ್ಪತ್ರೆ ಮಗ್ದ ಅವರಿಗೆ 10 ಕೋಟಿ ಪರಿಹಾರ ನೀಡಬೇಕು ಎಂದು ಅನಂತ್‌ನಾಯ್ಕ ಒತ್ತಾಯಿಸಿದ್ದಾರೆ.

ಪೊಲೀಸರು ಶಾಮೀಲು – ಆರೋಪ: “ಪ್ರಕರಣ ಸಂಬಂಧ ಶೇಷಾದ್ರಿಪುರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗಿತ್ತು. ಆದರೆ, ಪೊಲೀಸರು ಎಫ್ಐಆರ್‌ ದಾಖಲಿಸಿಕೊಂಡಿಲ್ಲ’ ಎಂದು ವಕೀಲ ಅನಂತ್‌ನಾಯ್ಕ ಅರೋಪಿಸಿದ್ದಾರೆ. ಆಸ್ಪತ್ರೆ ವೈದ್ಯರ ವಿರುದ್ಧ ಜೀವಹಾನಿ, ಜೀವ ಮತ್ತು ವೈಯಕ್ತಿಕ ಸುರಕ್ಷತೆಗೆ ಧಕ್ಕೆ, ತೀವ್ರ ಗಾಯ, ಕೊಲೆ ಯತ್ನ ಮತ್ತು ಬೆದರಿಕೆ ಆರೋಪದ ಮೇಲೆ ದೂರು ದಾಖಲಿಸಿಕೊಳ್ಳುವ ಅವಕಾಶವಿದೆ. ಆದರೆ, ಇದುವರೆಗೆ ಎಫ್ಐಆರ್‌ ಸಹ ದಾಖಲಿಸಿಲ್ಲ. ಹೀಗಾಗಿ ಪೊಲೀಸರು ಆಸ್ಪತ್ರೆ ಆಡಳಿತ ಮಂಡಳಿ ಜತೆ ಶಾಮೀಲಾಗಿರುವ ಶಂಕೆಯಿದೆ ಎಂದು ಆರೋಪಿಸಿದ್ದಾರೆ.

ಕ್ಯಾನ್ಸರ್‌ ಇಲ್ಲ ಎಂದಿದ್ದ ಕಿದ್ವಾಯಿ?: ಹಲವು ಚಿಕಿತ್ಸೆಯ ನಂತರವೂ ಸಮಸ್ಯೆ ಮುಂದುವರೆದದ್ದರಿಂದ ಮಗ್ದ ಅವರು 2018 ನ.3ರರಂದು ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆಯ ತಪಾಸಣೆಗೆ ಒಳಗಾಗಿದ್ದರು. ಈ ವೇಳೆ ಅವರ ದೇಹದಲ್ಲಿ ಯಾವುದೇ ಕ್ಯಾನ್ಸರ್‌ ಕಣಗಳು ಇಲ್ಲ ಎನ್ನುವುದು ಸ್ಪಷ್ಟವಾಗಿದೆ. ಹೊಟ್ಟೆಯಲ್ಲಿದ್ದ ಸಣ್ಣ ಗಡ್ಡೆಯನ್ನು ಅಪೋಲೋ ವೈದ್ಯರು ಮತ್ತೂಮ್ಮೆ ಪರಿಶೀಲಿಸದೆ ಕ್ಯಾನ್ಸರ್‌ ಗಡ್ಡೆ ಎಂದು ಭಾವಿಸಿ ಚಿಕಿತ್ಸೆ ಪ್ರಾರಂಭಿಸಿದ್ದೇ ಇಷ್ಟೆಲ್ಲ ಸಮಸ್ಯೆಗೆ ಕಾರಣ ಎಂದು ಹೇಳಲಾಗಿದೆ.

ಟಾಪ್ ನ್ಯೂಸ್

Mecca Heat Wave: ವಿಪರೀತ ಬಿಸಿಲ ತಾಪ-500ಕ್ಕೂ ಅಧಿಕ ಹಜ್‌ ಯಾತ್ರಾರ್ಥಿಗಳು ಮೃತ್ಯು

Mecca Heat Wave: ವಿಪರೀತ ಬಿಸಿಲ ತಾಪ-500ಕ್ಕೂ ಅಧಿಕ ಹಜ್‌ ಯಾತ್ರಾರ್ಥಿಗಳು ಮೃತ್ಯು

1

Koppal: ಮಹಿಳೆಯ ಸರ ಕಸಿದು ಪರಾರಿಯಾದ ಕಳ್ಳರು

Judge

ಒಂದೇ ದಿನ 600 ಅರ್ಜಿ ವಿಚಾರಣೆ! ಹೈಕೋರ್ಟ್‌ ನ್ಯಾಯಮೂರ್ತಿ ನಾಗಪ್ರಸನ್ನ ವಿಕ್ರಮ

7-sagara

Sagara: ಸಿಗಂದೂರು ಲಾಂಚ್; ವಾಹನಗಳ ಸಾಗಾಣಿಕೆ ಸ್ಥಗಿತ

Chennai: ಮಿತಿಮೀರಿದ ವೇಗ- BMW ಹೊಡೆದು ಯುವಕ ಮೃತ್ಯು; YSR ಸಂಸದನ ಪುತ್ರಿ ಪರಾರಿ

Chennai: ಮಿತಿಮೀರಿದ ವೇಗ- BMW ಹೊಡೆದು ಯುವಕ ಮೃತ್ಯು; YSR ಸಂಸದನ ಪುತ್ರಿ ಪರಾರಿ

6

Davangere: ಸರಣಿ ಅಪಘಾತ; ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಸೇರಿ ಇಬ್ಬರಿಗೆ ಗಂಭೀರ ಗಾಯ

5-

Special Story: ಅಗ್ನಿ ಅನಾಹುತ ಪ್ರಕರಣಗಳು ಇಳಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Renukaswamy Case: ಸಾಕ್ಷಿ ಸಿಕ್ಕಿವೆ, ಮೃತನಿಗೆ ನ್ಯಾಯ ಕಲ್ಪಿಸುತ್ತೇವೆ: ಆಯುಕ್ತ

Renukaswamy Case: ಸಾಕ್ಷಿ ಸಿಕ್ಕಿವೆ, ಮೃತನಿಗೆ ನ್ಯಾಯ ಕಲ್ಪಿಸುತ್ತೇವೆ: ಆಯುಕ್ತ

AlokMohan

Bengaluru: ಕಣ್ಣುಕುಕ್ಕುವ ಹೆಡ್‌ಲೈಟ್‌ ಹಾಕಿದ್ರೆ ಪ್ರಕರಣ: ಎಡಿಜಿಪಿ ಅಲೋಕ್‌

BBMP:  “ಗ್ರೇಟರ್‌ ಬೆಂಗಳೂರು’ ರಚನೆಗೆ ಪರ, ವಿರೋಧ

BBMP: “ಗ್ರೇಟರ್‌ ಬೆಂಗಳೂರು’ ರಚನೆಗೆ ಪರ, ವಿರೋಧ

12

Online ಗೇಮ್‌ ಚಟಕ್ಕೆ ಬಿಎಸ್‌ಸಿ ಮೊದಲ ವರ್ಷದ ವಿದ್ಯಾರ್ಥಿನಿ ಬಲಿ

Reporters: ಪತ್ರಿಕಾ ವರದಿಗಾರನ ಮೇಲೆ ನಾಲ್ವರಿಂದ ಹಲ್ಲೆ; ಆರೋಪ

Reporters: ಪತ್ರಿಕಾ ವರದಿಗಾರನ ಮೇಲೆ ನಾಲ್ವರಿಂದ ಹಲ್ಲೆ; ಆರೋಪ

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

Renukaswamy Case: ಸಾಕ್ಷಿ ಸಿಕ್ಕಿವೆ, ಮೃತನಿಗೆ ನ್ಯಾಯ ಕಲ್ಪಿಸುತ್ತೇವೆ: ಆಯುಕ್ತ

Renukaswamy Case: ಸಾಕ್ಷಿ ಸಿಕ್ಕಿವೆ, ಮೃತನಿಗೆ ನ್ಯಾಯ ಕಲ್ಪಿಸುತ್ತೇವೆ: ಆಯುಕ್ತ

AlokMohan

Bengaluru: ಕಣ್ಣುಕುಕ್ಕುವ ಹೆಡ್‌ಲೈಟ್‌ ಹಾಕಿದ್ರೆ ಪ್ರಕರಣ: ಎಡಿಜಿಪಿ ಅಲೋಕ್‌

BBMP:  “ಗ್ರೇಟರ್‌ ಬೆಂಗಳೂರು’ ರಚನೆಗೆ ಪರ, ವಿರೋಧ

BBMP: “ಗ್ರೇಟರ್‌ ಬೆಂಗಳೂರು’ ರಚನೆಗೆ ಪರ, ವಿರೋಧ

Mecca Heat Wave: ವಿಪರೀತ ಬಿಸಿಲ ತಾಪ-500ಕ್ಕೂ ಅಧಿಕ ಹಜ್‌ ಯಾತ್ರಾರ್ಥಿಗಳು ಮೃತ್ಯು

Mecca Heat Wave: ವಿಪರೀತ ಬಿಸಿಲ ತಾಪ-500ಕ್ಕೂ ಅಧಿಕ ಹಜ್‌ ಯಾತ್ರಾರ್ಥಿಗಳು ಮೃತ್ಯು

1

Koppal: ಮಹಿಳೆಯ ಸರ ಕಸಿದು ಪರಾರಿಯಾದ ಕಳ್ಳರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.