ಜಟ್ಟಿಗಳ ಕಾಳಗದಲ್ಲಿ ಯಾರಾಗ್ತಾರೆ ಗಟ್ಟಿ?


Team Udayavani, Apr 20, 2018, 6:10 AM IST

Channapatna-assembly-consti.jpg

ಮೇ 12ರ ಚುನಾವಣೆಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಸಿ.ಪಿ.ಯೋಗೇಶ್ವರ್‌ಗೆ ರಾಜಕೀಯ ಸೋಲಿನ ರುಚಿ ತೋರಿಸಿಯೇ ತೀರುವುದಾಗಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸ್ಪರ್ಧಿಸಲು ನಿರ್ಧರಿಸಿದ ನಂತರ ಚನ್ನಪಟ್ಟಣ ಕ್ಷೇತ್ರ ಜಿದ್ದಾಜಿದ್ದಿನ ಕ್ಷೇತ್ರವಾಗಿತ್ತು. ಇದೀಗ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಕಣಕ್ಕಿಳಿದ ನಂತರ ಕ್ಷೇತ್ರವೀಗ ಅಕ್ಷರಶಃ ರಣರಂಗವಾಗಿದೆ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ 7ನೇ ಬಾರಿಗೆ ಸ್ಪರ್ಧಿಸುತ್ತಿರುವ ಸಿ.ಪಿ.ಯೋಗೇಶ್ವರ್‌ ತಮ್ಮ ರಾಜಕೀಯ ಜೀವನದಲ್ಲಿ ಎಂದೂ ಕಾಣದ ಪೈಪೋಟಿ 2018ರ ಚುನಾವಣೆಯಲ್ಲಿ ಎದುರಿಸುತ್ತಿದ್ದಾರೆ. 2011ರ ಉಪಚುನಾವಣೆಯೂ ಸೇರಿದಂತೆ 6 ಬಾರಿ ಚುನಾವಣೆ ಎದುರಿಸಿರುವ “ಸೈನಿಕ’ ಕೇವಲ ಒಂದು ಬಾರಿ ಮಾತ್ರ ಸೋಲು ಕಂಡಿದ್ದಾರೆ. ಚನ್ನಪಟ್ಟಣ ಮತದಾರರ ನಾಡಿ ಮಿಡಿತ ಚೆನ್ನಾಗಿ ಬಲ್ಲ ಸಿಪಿವೈಗೆ 2018ರ ಚುನಾವಣೆಯಲ್ಲಿ ನಾಡಿ ಬಡಿತವೇ ಏರು-ಪೇರು ಮಾಡುವ ಸನ್ನಿವೇಶಗಳು ಸೃಷ್ಟಿಯಾಗಿವೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.

ಪ್ರಸಕ್ತ ಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್‌ಗೆ ಮೊದಲ ಕಷ್ಟ ಎದುರಾಗಿದ್ದು ಖುದ್ದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ರಾಮನಗರ ಕ್ಷೇತ್ರದ ಜೊತೆಗೆ ಚನ್ನಪಟ್ಟಣ ಕ್ಷೇತ್ರದಿಂದಲೂ ಸ್ಪರ್ಧಿಸುವ ನಿರ್ಧಾರ ಪ್ರಕಟಗೊಂಡ ನಂತರ, ಅಲ್ಲಿವರೆಗೆ ಇದ್ದ ಗೆಲುವಿನ ಲೆಕ್ಕಾಚಾರಗಳನ್ನು ಅವರು ಪುನರ್‌ ಪರಿಶೀಲಿಸುತ್ತಿರುವಾಗಲೇ, ಈ ಭಾಗದ ಪ್ರಭಾವಿ ರಾಜಕಾರಣಿ, ರಾಮನಗರ ಜಿಲ್ಲೆಯ ಮೂಲದ ಎಚ್‌.ಎಂ.ರೇವಣ್ಣ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿರುವುದರಿಂದ ಸಿಪಿವೈಗೆ ಗೆಲುವಿನ ಹಾದಿ ಇನ್ನಷ್ಟು ಜಟಿಲಗೊಂಡಿದೆ.

ಎಚ್‌.ಎಂ.ರೇವಣ್ಣ ಏಕೆ?: ಡಿ.ಕೆ.ಸಹೋದರರು ಮತ್ತು ಸಿಪಿವೈ ನಡುವಿನ ಗೆಳೆತನ ಕಳಚಿ ಬಿದ್ದ ನಂತರ, ಡಿ.ಕೆ.ಸಹೋದರರು ತಮ್ಮ ಹತ್ತಿರದ ಸಂಬಂಧಿ ಶರತ್‌ಚಂದ್ರರನ್ನು ಕಣಕ್ಕಿಳಿಸುವುದಾಗಿ, ತಾವೇ ಖುದ್ದು ಪ್ರಚಾರ ಕೈಗೊಳ್ಳುವುದಾಗಿ ಹೇಳಿದರು. ಇದ್ಯಾವುದಕ್ಕೂ ಬಗ್ಗದ ಸಿಪಿವೈ, ಡಿಕೆ ಸಹೋದರರ ವಿರುದ್ಧ ತೊಡೆತಟ್ಟಿ ಗೆಲುವು ತಮ್ಮದೇ ಎಂದು ಅಬ್ಬರಿಸಿದ್ದರು.

ಸಿಪಿವೈ ಮತ್ತು ಡಿಕೆ ಸಹೋದರರ ಆಟದಲ್ಲಿ ತಾವು ಕಳೆದೇ ಹೋಗುತ್ತೇವೆ ಎಂದು ಬೆಚ್ಚಿದ ಜೆಡಿಎಸ್‌ ಕಾರ್ಯಕರ್ತರು ಅನಿತಾರನ್ನು ಕಣಕ್ಕಿಳಿಸುವಂತೆ ತಮ್ಮ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ತೀವ್ರ ಒತ್ತಡ ಹಾಕಿದರು. ಪಕ್ಷದ ಸ್ಥಿತಿಯನ್ನು ಅರ್ಥ ಮಾಡಿಕೊಂಡ ಕುಮಾರಸ್ವಾಮಿ ತಾವೇ ಖುದ್ದು ಸ್ಪರ್ಧಿಸುವ ಸಂದೇಶ ರವಾನಿಸಿದರು. ಸ್ವತಃ ಕುಮಾರಸ್ವಾಮಿ ಚನ್ನಪಟ್ಟಣಕ್ಕೆ ಎಂಟ್ರಿ ಕೊಟ್ಟ ನಂತರ ಅದೇಕೋ ಡಿ.ಕೆ.ಸಹೋದರರು ತಣ್ಣಗಾದರು.

ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಡುವೆ ವಿಧಾನಸಭಾ ಚುನಾವಣೆ ವಿಚಾರವಾಗಿ ಒಳಒಪ್ಪಂದ ನಡೆದಿದೆ. ರಾಜಕೀಯವಾಗಿ ತಮ್ಮಿಬ್ಬರಿಗೆ ಬದ್ಧ ವೈರಿಯಾಗಿರುವ ಶಾಸಕ ಸಿ.ಪಿ.ಯೋಗೇಶ್ವರ್‌ ಅವರನ್ನು ಮಣಿಸಲು ಇಬ್ಬರು ನಾಯಕರು ಕೈಜೋಡಿಸಿದ್ದಾರೆ ಎಂಬ ವದಂತಿ ದಟ್ಟವಾಗಿ ಹರಿದಾಡುತ್ತಿತ್ತು. ಅದೇ ವೇಳೆಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸಿಯೇ ತೀರುತ್ತೇವೆ ಎಂದು ಎಚ್‌.ಡಿ. ಕುಮಾರಸ್ವಾಮಿ ಗುಡುಗಿದ್ದು, ಸಿದ್ದರಾಮಯ್ಯ ಅವರಿಗೆ ಸಹಿಸಲು ಆಗಲಿಲ್ಲ. ತಮ್ಮ ತವರಿನಲ್ಲಿ ತಮಗೇ ಸವಾಲು ಹಾಕಿದ ಕುಮಾರಸ್ವಾಮಿಗೆ ತಿರುಗೇಟು ನೀಡಬೇಕು ಎಂದು ನಿರ್ಧರಿಸಿದ ಸಿದ್ದರಾಮಯ್ಯ, ಸಂಸದ ಡಿ.ಕೆ.ಸುರೇಶ್‌ರನ್ನು ರಾಮನಗರದಿಂದ ಕಣಕ್ಕಿಳಿಸಲು ಹೈಕಮಾಂಡ್‌ಗೆ ತಾಕೀತು ಮಾಡಿದ್ದರು ಎನ್ನಲಾಗಿದೆ. ಆದರೆ ಈ ಪ್ರಯತ್ನ ಫ‌ಲಕೊಡದಿದ್ದರಿಂದ ಎಚ್‌.ಎಂ.ರೇವಣ್ಣ ಅವರನ್ನು ರಾಮನಗರದಿಂದ ಸ್ಪರ್ಧೆಗೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿದ್ದರು ಎನ್ನಲಾಗಿದೆ. ಆದರೆ ಹೈಕಮಾಂಡ್‌ ಈ ಮನವಿಯನ್ನು ಪುರಸ್ಕರಿಸದಿದ್ದರಿಂದ ಅಂತಿಮವಾಗಿ ಚನ್ನಪಟ್ಟಣದಲ್ಲಿ  ಸಿ.ಪಿ.ಯೋಗೇಶ್ವರ್‌ ಮತ್ತು ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಪ್ರಬಲ ಪೈಪೋಟಿ ನೀಡುವ ಉದ್ದೇಶದಿಂದ ಎಚ್‌.ಎಂ.ರೇವಣ್ಣ ಅವರನ್ನು ಕಣಕ್ಕಿಳಿಸಲು ಡಿ.ಕೆ.ಸಹೋದರರು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.

ತ್ರೀಕೋನ ಸ್ಪರ್ಧೆ ಖಚಿತ: ಈಗ ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್‌ನ ಕುಮಾರಸ್ವಾಮಿ, ಕಾಂಗ್ರೆಸ್‌ನ ಎಚ್‌.ಎಂ.ರೇವಣ್ಣ ಹಾಗೂ ಬಿಜೆಪಿಯ ಸಿ.ಪಿ.ಯೋಗೇಶ್ವರ್‌ ನಡುವೆ ತ್ರಿಕೋನ ಪೈಪೋಟಿ ಏರ್ಪಟ್ಟಿದೆ.ಅಹಿಂದ ಮತಗಳ ಕ್ರೋಢೀಕರಣಕ್ಕೆ ಕಾಂಗ್ರೆಸ್‌ ಮುಂದಾಗಿದೆ. ಒಕ್ಕಲಿಗರ ಮತಗಳನ್ನು ಸಾರಾಸಗಟಾಗಿ ಸೆಳೆದು ಅಲ್ಪ$ಸಂಖ್ಯಾತರ ಮತ್ತು ದಲಿತ ಸಮುದಾಯಗಳ ಮತಗಳನ್ನು ತಮ್ಮತ್ತ ಸೆಳೆದುಕೊಳ್ಳಲು ಜೆಡಿಎಸ್‌ ಮುಂದಾಗಿದೆ. ಅಭಿವೃದ್ದಿ ಮಂತ್ರ ಜಪಿಸಿ ಎಲ್ಲಾ ವರ್ಗದ ಮತದಾರರನ್ನು ಸೆಳೆಯಲು ಹವಣಿಸಿದ್ದ ಸಿ.ಪಿ.ಯೋಗೇ ಶ್ವರ್‌ ಇದೀಗ ತಾವು ಜಾತಿ ಲೆಕ್ಕಾಚಾರಕ್ಕೆ ಇಳಿಯ ಬೇಕಾದ ಅನಿವಾರ್ಯತೆ ಎದುರಾಗಿದೆ.

ಚನ್ನಪಟ್ಟಣ ಕ್ಷೇತ್ರದಲ್ಲಿ ಸದ್ಯ 2.15 ಲಕ್ಷ ಮತದಾರರಿದ್ದಾರೆ. ಈ ಪೈಕಿ ಒಕ್ಕಲಿಗ ಮತದಾರರ ಸಂಖ್ಯೆ ಅಂದಾಜು 1 ಲಕ್ಷ ಇದೆ. ಎಸ್ಸಿ, ಎಸ್ಟಿ 35 ಸಾವಿರ, ಮುಸ್ಲಿಂ ಮತದಾರರು 25, ಕುರುಬರ 7 ಸಾವಿರ, ಲಿಂಗಾಯತರು 9 ಸಾವಿರ, ಬೆಸ್ತರು 10 ಸಾವಿರ, ತಿಗಳರು 8 ಸಾವಿರ, ಇತರರು 21 ಸಾವಿರ ಮತದಾರರಿದ್ದಾರೆ. ಅಹಿಂದ ಮಂತ್ರ ಜಪಿಸಿ ತಮ್ಮ ಬಗ್ಗೆ ಕಾಳಜಿ ತೋರಿಸದ ಸಿದ್ದರಾಮಯ್ಯ ಬಗ್ಗೆ ಒಕ್ಕಲಿಗರಲ್ಲಿ ಅಸಮಾಧಾನವಿರುವುದರಿಂದ ಒಕ್ಕಲಿಗರ ಪೈಕಿ ಇರುವ ಶೇ. 10 ರಿಂದ 15 ಸಾಂಪ್ರದಾಯಿಕ ಕಾಂಗ್ರೆಸ್‌ ಮತಗಳನ್ನು ಹೊರತು ಪಡೆಸಿ ಉಳಿದ ಮತಗಳನ್ನು “ದೊಡ್ಡಗೌಡರ’ (ಎಚ್‌.ಡಿ.ದೇವೇಗೌಡ) ಪರ ಸೆಳೆಯಲು ಜೆಡಿಎಸ್‌ ಮುಂದಾಗಿದೆ. ತಾವು ಒಕ್ಕಲಿಗರೇ ತಮಗೂ ಬೆಂಬಲ ಕೊಡಿ ಎಂದು ಸಿ.ಪಿ.ಯೋಗೇಶ್ವರ್‌ ಒಕ್ಕಲಿಗರ ಮನವೊಲಿಸುವ ಪ್ರಯತ್ನ ಮಾಡಲಿದ್ದಾರೆ.

ಮುಸಲ್ಮಾನರ ಮತಗಳು ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆ ಹಂಚಿಕೆಯಾದರೂ ಚನ್ನಪಟ್ಟಣದ ಮುಸ್ಲಿಂ ಸಮುದಾಯದಲ್ಲಿ ಸಿ.ಪಿ.ಯೋಗೇಶ್ವರ್‌ ಬಗ್ಗೆ ವಿಶ್ವಾಸ ಇರುವುದರಿಂದ ಕನಿಷ್ಠ ಶೇ.25 ರಿಂದ 30ರಷ್ಟು ಮತಗಳು ಸಿಪಿವೈಗೆ ಲಭಿಸಲಿದೆ ಎಂದು ಹೇಳಲಾಗಿದೆ. 

ಕುರುಬರ ಮತಗಳ ಬಹುತೇಕ ಎಚ್‌.ಎಂ.ರೇವಣ್ಣ ಬಾಚಿಕೊಳ್ಳಲಿದ್ದಾರೆ. ಲಿಂಗಾಯತರ ಮತಗಳ ಪೈಕಿ ಬಹುತೇಕ ಮತಗಳು ಸಿಪಿವೈಗೆ ದಕ್ಕಲಿದೆ. ಎಸ್ಸಿ, ಎಸ್ಟಿ, ಬೆಸ್ತರು, ತಿಗಳರ ಮತಗಳು ನಿರ್ಣಾಯಕವಾಗಲಿದೆ. ಎಸ್ಸಿ ಎಸ್ಟಿ ಮತಗಳನ್ನು ಸಳೆಯಲು ಜೆಡಿಎಸ್‌ ಪಕ್ಷ ಬಿಎಸ್‌ಪಿ ಮುಖ್ಯಸ್ಥೆ ಮಾಯವತಿ ಅವರ ವರ್ಚಸ್ಸು ಸಮರ್ಥವಾಗಿ ಬಳಸಿಕೊಂಡರೆ ಎಸ್ಸಿ, ಎಸ್ಟಿ ಸಮುದಾಯದ ಮತಗಳು ಚದುರಿ ಹೋಗಿ ಕಾಂಗ್ರೆಸ್‌ಗೆ ಪೆಟ್ಟು ನೀಡಬಹುದು. ಒಟ್ಟಾರೆ ಜಾತಿವಾರು ಮತಗಳಿಕೆ ಲೆಕ್ಕಾಚಾರ, ಅಭಿವೃದ್ಧಿ ಪರ ಲೆಕ್ಕಾಚಾರದ ಬಗ್ಗೆ ಕ್ಷೇತ್ರದಲ್ಲಿ ಕೂಡು, ಕಳಿ ನಿರಂತರವಾಗಿ ನಡೆಯುತ್ತಿದೆ. ಮೇ 12ರಂದು ಮತದಾರ ತನ್ನ ನಿರ್ಣಯವನ್ನು ಎವಿಎಂ ಯಂತ್ರಗಳ ಮೂಲಕ ದಾಖಲಿಸಲಿದ್ದಾನೆ. 

ಚನ್ನಪಟ್ಟಣ ಕ್ಷೇತ್ರದಲ್ಲಿ ಯಾರೇ ಸ್ಪರ್ಧಿಸಿದರೂ ಎಚ್‌.ಡಿ. ಕುಮಾರಸ್ವಾಮಿ ಗೆಲುವು ಖಚಿತ. ಕುಮಾರಸ್ವಾಮಿಗೆ, ಕುಮಾರಸ್ವಾಮಿ ಅವರೇ ಸಾಟಿ. ಅವರ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.
– ಅನಿತಾ ಕುಮಾರಸ್ವಾಮಿ, ಮಾಜಿ ಶಾಸಕಿ

ಚನ್ನಪಟ್ಟಣ ಕ್ಷೇತ್ರವನ್ನು ಸಿದ್ದರಾಮಯ್ಯ ಸರಕಾರ ಕಡೆಗಣಿಸಿಲ್ಲ. ನೀರಾವರಿ ಯಶಸ್ಸಿಗೆ ಕಾಂಗ್ರೆಸ್‌ ಕೊಡುಗೆ ಇದೆ. ಜನಪರ ಯೋಜನೆಗಳು ಈ ಕ್ಷೇತ್ರದ ಮತದಾರರನ್ನು ತಲುಪಿದೆ. ಹೀಗಾಗಿ ತಮ್ಮ ಗೆಲುವು ನಿಶ್ಚಿತ.
– ಎಚ್‌.ಎಂ.ರೇವಣ್ಣ, ಕಾಂಗ್ರೆಸ್‌ ಅಭ್ಯರ್ಥಿ

ಐದು ಬಾರಿ ಹರಸಿರುವ ಮತದಾರರು, ಈ ಬಾರಿಯೂ ಆಶೀರ್ವದಿಸುವ ವಿಶ್ವಾಸ ಇದೆ. ಜನರ ಸಂಕಷ್ಟಕ್ಕೆ ಸ್ಪಂದಿಸಿ ದ್ದೇನೆ. ನೀರಾವರಿ ವಿಚಾರದಲ್ಲಿ ರಾಜ್ಯಕ್ಕೆ ಮಾದರಿ ಕೆಲಸ ಮಾಡಿದ್ದೇನೆ. ಯಾರೇ ಸ್ಪರ್ಧಿಸಿದರೂ ಜನ ನನ್ನ ಕೈಬಿಡಲ್ಲ.
– ಸಿ.ಪಿ.ಯೋಗೇಶ್ವರ್‌, ಹಾಲಿ ಶಾಸಕ.

– ಬಿ.ವಿ. ಸೂರ್ಯಪ್ರಕಾಶ್‌

ಟಾಪ್ ನ್ಯೂಸ್

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crime: ಪಿಜಿಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಕೊಲೆಗೈದ

Crime: ಪಿಜಿಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಕೊಲೆಗೈದ

Bengaluru: ಖೋಖೋ ತೀರ್ಪು ವಿವಾದ: ಫೀಲ್ಡ್‌ನಲ್ಲೇ ಚಾಕು, ಡ್ಯಾಗರ್‌ ಹಿಡಿದು ಹೊಡೆದಾಟ!

Bengaluru: ಖೋಖೋ ತೀರ್ಪು ವಿವಾದ: ಫೀಲ್ಡ್‌ನಲ್ಲೇ ಚಾಕು, ಡ್ಯಾಗರ್‌ ಹಿಡಿದು ಹೊಡೆದಾಟ!

ಸ್ನೇಹಿತನ ಪತ್ನಿಯ ಕ್ಯಾನ್ಸರ್‌ ಚಿಕಿತ್ಸೆಗಾಗಿ ಬೈಕ್‌ ಕಳ್ಳತನಕ್ಕಿಳಿದ ಕುಚುಕು ಗೆಳೆಯ! 

ಸ್ನೇಹಿತನ ಪತ್ನಿಯ ಕ್ಯಾನ್ಸರ್‌ ಚಿಕಿತ್ಸೆಗಾಗಿ ಬೈಕ್‌ ಕಳ್ಳತನಕ್ಕಿಳಿದ ಕುಚುಕು ಗೆಳೆಯ! 

Shivakumar

Bengaluru: ಅಧಿವೇಶನದ ಬಳಿಕ ಕಾವೇರಿ ನೀರಿನ ದರ ಪರಿಷ್ಕರಣೆ: ಡಿ.ಕೆ.ಶಿವಕುಮಾರ್‌

Bengaluru: ಕೋರ್ಟ್‌ನಲ್ಲೇ ವಕೀಲೆಗೆ ಚಾಕು ಇರಿದ ಆರೋಪಿ ಸೆರೆ

Bengaluru: ಕೋರ್ಟ್‌ನಲ್ಲೇ ವಕೀಲೆಗೆ ಚಾಕು ಇರಿದ ಆರೋಪಿ ಸೆರೆ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.