ಬಾಲ್ಯವಿವಾಹ ಅಪರಾಧಿಗೆ 10 ವರ್ಷ ಜೈಲು

Team Udayavani, Apr 21, 2018, 11:56 AM IST

balya-vivaha.jpg

ಬೆಂಗಳೂರು: ಮೊದಲನೇ ವಿವಾಹ ಸಂಗತಿ ಮುಚ್ಚಿಟ್ಟು 14 ವರ್ಷದ ಅಪ್ರಾಪೆ¤ಯನ್ನು ಮದುವೆ ಮಾಡಿಕೊಂಡಿದ್ದ ಸೈಯದ್‌ ಮುಜಾಮಿಲ್‌ (24) ಎಂಬಾತನಿಗೆ 10 ವರ್ಷಗಳ ಜೈಲುಶಿಕ್ಷೆ ವಿಧಿಸಿ ನಗರದ ಪೋಕೊ ನ್ಯಾಯಾಲಯ ತೀರ್ಪು ನೀಡಿದೆ.

2014ರ ಆಗಸ್ಟ್‌ನಲ್ಲಿ ನಡೆದಿದ್ದ ವಿವಾಹ ಸಂಬಂಧ ಬಾಲ್ಯ ವಿವಾಹ ಹಾಗೂ ಅತ್ಯಾಚಾರ (ಪೋಕೊ) ಕಾಯ್ದೆಯಡಿ ಮೈಕೋಲೇಔಟ್‌ ಠಾಣೆ ಪೊಲೀಸರು ಆರೋಪಿ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಅದರಂತೆ ವಿಚಾರಣೆ ಪೂರ್ಣಗೊಳಿಸಿ ತೀರ್ಪು ನೀಡಿರುವ ನ್ಯಾಯಾಧೀಶರಾದ ವನಮಾಲ ಯಾದವ್‌, ಕೃತ್ಯ ಎಸಗಿದ ಅಪರಾಧಿ ಸೈಯದ್‌ ಮುಜಾಮಿಲ್‌ಗೆ  10 ವರ್ಷ ಜೈಲು ಶಿಕ್ಷೆ ಹಾಗೂ ಈ ಕೃತ್ಯಕ್ಕೆ ಸಹಕರಿಸಿದ ಆರೋಪಿ ಅಪ್ರುಶ್‌ ಪಾಷಾನಿಗೆ 40 ದಿನಗಳ ಕಾಲ ಜೈಲು ಶಿಕ್ಷೆ ವಿಧಿಸಿದ್ದಾರೆ.

14ನೇ ವರ್ಷದ ಮಗಳನ್ನು ಆಕೆಯ ತಂದೆ, ತಾಯಿ ಹಾಗೂ ಸಂಬಂಧಿಕರು ಆಟೋಚಾಲಕ ಸೈಯದ್‌ ಮುಜಾಮಿಲ್‌ಗೆ 2014ರ ಆಗಸ್ಟ್‌ 24ರಂದು ವಿವಾಹ ಮಾಡಿಕೊಟ್ಟಿದ್ದರು. ಈ ವೇಳೆ ಬಾಲಕಿಗೆ 18 ವರ್ಷ ತುಂಬಿದೆ ಎಂದು ಆಕೆಯ ಪೋಷಕರು ಮತ್ತು ಮುಜಾಮಿಲ್‌ ಮದುವೆ ಮಾಡಿಸುವ ಮೌಲ್ವಿಗೆ ತಿಳಿಸಿದ್ದರು. ಅಲ್ಲದೆ, ಮದುವೆಯಾದ ದಿನವೇ ಮುಜಾಮಿಲ್‌ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ.

ಇದಕ್ಕೆ ಮುನ್ನವೇ ಮುಜಾಮಿಲ್‌ಗೆ ಬೇರೆ ಮದುವೆಯಾಗಿದ್ದು, ಪತ್ನಿ ಆತನನ್ನು ತೊರೆದಿದ್ದಳು. ಈ ವಿಚಾರವನ್ನೂ ಆತ ಮುಚ್ಚಿಟ್ಟಿದ್ದ. ತನ್ನ ಅಪ್ರಾಪ್ತ ತಂಗಿಗೆ ಮದುವೆ ಮಾಡಿದ್ದನ್ನು ತಿಳಿದ ಆಕೆಯ ಅಣ್ಣ ತನ್ನ ಪೋಷಕರು ಮತ್ತು ಮುಜಾಮಿಲ್‌ ವಿರುದ್ಧ ಮೈಕೋಲೇಔಟ್‌ ಠಾಣೆಯಲ್ಲಿ ದೂರು ನೀಡಿದ್ದ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದರು. 

ಎಲ್ಲರೂ ನಾಪತ್ತೆ: ಆದರೆ, ಮುಜಾಮಿಲ್‌ ಮತ್ತಿತರರ ವಿರುದ್ಧ ದೂರು ದಾಖಲಾದ ಕೆಲವೇ ದಿನಗಳಲ್ಲಿ ದೂರು ನೀಡಿದ ಬಾಲಕ, ಸಂತಸ್ತೆ ಹಾಗೂ ಪ್ರಕರಣದ ಇನ್ನಿತರೆ ಆರೋಪಿಗಳಾದ 10 ಮಂದಿ ನಾಪತ್ತೆಯಾಗಿದ್ದು, ಇದುವರೆಗೂ ಪತ್ತೆಯಾಗಿಲ್ಲ ಎಂದು ಪ್ರಾಸಿಕ್ಯೂಶನ್‌ ಪರ ವಾದಿಸಿದ್ದ ಸರ್ಕಾರಿ ಅಭಿಯೋಜಕ ಎಸ್‌.ಎನ್‌ ಹಿರೇಮನಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

1

Renuka Swamy Case: ದರ್ಶನ್‌ ಮತ್ತೆ ಕಸ್ಟಡಿಗೆ, ಪವಿತ್ರಾ ಸೇರಿ 10 ಮಂದಿ ನ್ಯಾಯಾಂಗ ಬಂಧನ

1-vj

MLC Ticket; ಕಾಂಗ್ರೆಸ್ ವರಿಷ್ಠರು ಭರವಸೆ ಈಡೇರಿಸುವ ವಿಶ್ವಾಸವಿದೆ:ಗಣಿಹಾರ

1-v-dsadsa-d

Hooch tragedy ಆಡಳಿತ, ಕಾನೂನು ಮತ್ತು ಸುವ್ಯವಸ್ಥೆ ವೈಫಲ್ಯಕ್ಕೆ ಸ್ಪಷ್ಟ ಸಾಕ್ಷಿ: ಅಣ್ಣಾಮಲೈ

ಹಾಸನ: ಬೆಳಿಗ್ಗೆ ಒಟ್ಟಿಗೆ ಉಪಹಾರ ಸೇವಿಸಿದ್ದ ಸ್ನೇಹಿತರು, ಮಧ್ಯಾಹ್ನ ಗುಂಡು ಹಾರಿಸಿದ್ದೇಕೆ?

ಹಾಸನ: ಬೆಳಿಗ್ಗೆ ಒಟ್ಟಿಗೆ ಉಪಹಾರ ಸೇವಿಸಿದ್ದ ಸ್ನೇಹಿತರು, ಮಧ್ಯಾಹ್ನ ಗುಂಡು ಹಾರಿಸಿದ್ದೇಕೆ?

Tamil-nadu-Kallakuruchi

TamilNadu: ಅಕ್ರಮ ಮದ್ಯ ಸೇವನೆ, ಮೃತರ ಸಂಖ್ಯೆ 34ಕ್ಕೆ ಏರಿಕೆ-ಸಿಐಡಿ ತನಿಖೆ

1-Raga

Ukraine ಯುದ್ಧ ನಿಲ್ಲಿಸುವ ಮೋದಿಗೆ ಪೇಪರ್ ಲೀಕ್ ತಡೆಯಲಾಗುವುದಿಲ್ಲವೇ? : ರಾಹುಲ್

South China Sea: ಸಮುದ್ರದ ಮಧ್ಯೆ ಚೀನಾ ಪಡೆಯಿಂದ ಫಿಲಿಫೈನ್ಸ್‌ ಹಡಗಿನ ಮೇಲೆ ದಾಳಿ

South China Sea: ಸಮುದ್ರದ ಮಧ್ಯೆ ಚೀನಾ ಪಡೆಯಿಂದ ಫಿಲಿಫೈನ್ಸ್‌ ಹಡಗಿನ ಮೇಲೆ ದಾಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Horse racing: ಕುದುರೆ ಪಂದ್ಯ ಆಯೋಜನೆಗೆ ಷರತ್ತು ಬದ್ಧ ಅನುಮತಿ

Horse racing: ಕುದುರೆ ಪಂದ್ಯ ಆಯೋಜನೆಗೆ ಷರತ್ತು ಬದ್ಧ ಅನುಮತಿ

Theft Case: ಪಕ್ಕದ ಮನೆಯ ಬೆಕ್ಕಿಗೆ ಹಾಲು ಹಾಕಲು ಬಂದು ಚಿನ್ನಾಭರಣ ಕದ್ದ ಆರೋಪಿ ಬಂಧನ

Theft Case: ಪಕ್ಕದ ಮನೆಯ ಬೆಕ್ಕಿಗೆ ಹಾಲು ಹಾಕಲು ಬಂದು ಚಿನ್ನಾಭರಣ ಕದ್ದ ಆರೋಪಿ ಬಂಧನ

POCSO: ಪೋಕ್ಸೋ ಆರೋಪಿಗೆ ಸಂತ್ರಸ್ತೆ ಜತೆ ಮದುವೆಗೆ ಮಧ್ಯಂತರ ಜಾಮೀನು

POCSO: ಪೋಕ್ಸೋ ಆರೋಪಿಗೆ ಸಂತ್ರಸ್ತೆ ಜತೆ ಮದುವೆಗೆ ಮಧ್ಯಂತರ ಜಾಮೀನು

Renukaswamy Case: ಸಾಕ್ಷಿ ಸಿಕ್ಕಿವೆ, ಮೃತನಿಗೆ ನ್ಯಾಯ ಕಲ್ಪಿಸುತ್ತೇವೆ: ಆಯುಕ್ತ

Renukaswamy Case: ಸಾಕ್ಷಿ ಸಿಕ್ಕಿವೆ, ಮೃತನಿಗೆ ನ್ಯಾಯ ಕಲ್ಪಿಸುತ್ತೇವೆ: ಆಯುಕ್ತ

AlokMohan

Bengaluru: ಕಣ್ಣುಕುಕ್ಕುವ ಹೆಡ್‌ಲೈಟ್‌ ಹಾಕಿದ್ರೆ ಪ್ರಕರಣ: ಎಡಿಜಿಪಿ ಅಲೋಕ್‌

MUST WATCH

udayavani youtube

ಕಲಬುರಗಿ ಜಿಮ್ಸ್ ಮತ್ತು ಜಯದೇವ ಆಸ್ಪತ್ರೆಗಳಿಗೆ ಆರ್.ಅಶೋಕ ಭೇಟಿ

udayavani youtube

ರಿವರ್ಸ್‌ ಅವಾಂತರ-ಗೆಳೆಯನ ಕಣ್ಣೆದುರೇ ಕಾರು ಕಂದಕಕ್ಕೆ ಬಿದ್ದು ಗೆಳತಿ ಸಾವು

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

ಹೊಸ ಸೇರ್ಪಡೆ

1

Renuka Swamy Case: ದರ್ಶನ್‌ ಮತ್ತೆ ಕಸ್ಟಡಿಗೆ, ಪವಿತ್ರಾ ಸೇರಿ 10 ಮಂದಿ ನ್ಯಾಯಾಂಗ ಬಂಧನ

1-vj

MLC Ticket; ಕಾಂಗ್ರೆಸ್ ವರಿಷ್ಠರು ಭರವಸೆ ಈಡೇರಿಸುವ ವಿಶ್ವಾಸವಿದೆ:ಗಣಿಹಾರ

ಭರ್ತಿಯಾಗಬೇಕಿದೆ ಬಹುತೇಕ ಕೆರೆಗಳು; ಬಳಕೆಗೆ ಸೀಮಿತವಾದ ಕೆರೆಗಳು-192

ಭರ್ತಿಯಾಗಬೇಕಿದೆ ಬಹುತೇಕ ಕೆರೆಗಳು; ಬಳಕೆಗೆ ಸೀಮಿತವಾದ ಕೆರೆಗಳು-192

ಭರವಸೆ ಈಡೇರಿಸಲು ಪ್ರಾಮಾಣಿಕ ಯತ್ನ: ಜಗದೀಶ ಶೆಟ್ಟರ

ಭರವಸೆ ಈಡೇರಿಸಲು ಪ್ರಾಮಾಣಿಕ ಯತ್ನ: ಜಗದೀಶ ಶೆಟ್ಟರ

1-v-dsadsa-d

Hooch tragedy ಆಡಳಿತ, ಕಾನೂನು ಮತ್ತು ಸುವ್ಯವಸ್ಥೆ ವೈಫಲ್ಯಕ್ಕೆ ಸ್ಪಷ್ಟ ಸಾಕ್ಷಿ: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.