ಕಟ್ಟೆಚ್ಚರ ವಹಿಸಲು ಆಯುಕ್ತರ ಸೂಚನೆ


Team Udayavani, May 3, 2019, 10:39 AM IST

Udayavani Kannada Newspaper

ಬೆಂಗಳೂರು: ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟ ಹಿನ್ನೆಲೆಯಲ್ಲಿ ಸಿಲಿಕಾನ್‌ ಸಿಟಿಯಾದ್ಯಂತ ಕಟ್ಟೆಚ್ಚರ ವಹಿಸುವಂತೆ ಕಿರಿಯ ಅಧಿಕಾರಿಗಳಿಗೆ ಸೂಚಿಸಿರುವ ನಗರ ಪೊಲೀಸ್‌ ಆಯುಕ್ತ ಟಿ.ಸುನಿಲ್ ಕುಮಾರ್‌ ನಗರದಲ್ಲಿರುವ ಎಲ್ಲಾ ಖಾಸಗಿ ಭದ್ರತಾ ಏಜೆನ್ಸಿಗಳ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸುವಂತೆ ಆದೇಶಿಸಿದ್ದಾರೆ.

ಗುರುವಾರ ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಡಿಸಿಪಿ, ಇನ್‌ಸ್ಪೆಕ್ಟರ್‌, ಎಸಿಪಿಗಳಿಗೆ ಈ ಸೂಚನೆ ನೀಡಿದ್ದು, ತಮ್ಮ ವ್ಯಾಪ್ತಿಯಲ್ಲಿ ಭದ್ರತೆ ಬಗ್ಗೆ ಹೆಚ್ಚು ನಿಗಾವಹಿಸುವಂತೆ ಮೌಖೀಕವಾಗಿ ಆದೇಶಿದ್ದಾರೆ.

ಪ್ರತಿ ಠಾಣಾ ವ್ಯಾಪ್ತಿಯಲ್ಲಿ ಎಷ್ಟು ಖಾಸಗಿ ಭದ್ರತಾ ಸಂಸ್ಥೆಗಳಿವೆ? ಅವುಗಳಿಗೆ ಪರವಾನಿಗೆ ಇದೆಯೇ? ಇಲ್ಲವೇ? ಪರವಾನಗಿ ಇರುವ ಸಂಸ್ಥೆಗಳು ನವೀಕರಣ ಮಾಡಿಕೊಂಡಿವೆಯೇ? ಇಲ್ಲವೇ? ಎಂಬ ಬಗ್ಗೆ ಮಾಹಿತಿ ಪಡೆಯಬೇಕು. ಹಾಗೆಯೇ ಆ ಸಂಸ್ಥೆಗಳ ಕಾರ್ಯವೈಖರಿ, ಸಿಬ್ಬಂದಿ ಕೆಲಸ ಮಾಡುವ ಸ್ಥಳ ಹಾಗೂ ವೈಯಕ್ತಿಕ ಮಾಹಿತಿ ಸಂಗ್ರಹಿಸಬೇಕು. ಅಷ್ಟೇ ಅಲ್ಲದೆ, ಪ್ರತಿ ಠಾಣೆಯಲ್ಲಿಯೂ ತಮ್ಮ ವ್ಯಾಪ್ತಿಯಲ್ಲಿರುವ ಭದ್ರತಾ ಸಂಸ್ಥೆಗಳ ಹೆಸರು, ಮಾಲೀಕರು, ಸಿಬ್ಬಂದಿ ವಿವರವನ್ನೊಳಗೊಂಡ ಮಾಹಿತಿಯನ್ನು ಠಾಣೆಯ ನೋಂದಣಿ ಪುಸ್ತಕ(ರಿಜಿಸ್ಟರ್‌)ದಲ್ಲಿ ಉಲ್ಲೇಖೀಸಬೇಕು ಎಂದು ಆಯುಕ್ತರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆಂದು ಮೂಲಗಳು ತಿಳಿಸಿದೆ.

ಮನೆಯ ಪ್ರತಿ ಸದಸ್ಯರ ಬಗ್ಗೆ ಮಾಹಿತಿ: ಪ್ರತಿ ಠಾಣೆಯಲ್ಲಿರುವ ಕಾನ್‌ಸ್ಟೆಬಲ್ಗಳಿಗೆ ಬೀಟ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಆ ಕಾನ್‌ಸ್ಟೇಬಲ್ಗಳು ತಮ್ಮ ವ್ಯಾಪ್ತಿಯಲ್ಲಿರುವ ಮನೆಗಳ ಸಂಖ್ಯೆ ಎಷ್ಟು? ಮನೆಯಲ್ಲಿ ಎಷ್ಟು ಮಂದಿ ಇದ್ದಾರೆ? ಅವರ ವೈಯಕ್ತಿಕ ಮಾಹಿತಿ ಹಾಗೂ ಆ ಮನೆಗೆ ಬಂದು ಹೋಗುವ ವ್ಯಕ್ತಿಗಳ ಮೇಲೆ ನಿಗಾವಹಿಸಬೇಕು.

ವಿದೇಶಿಯರ ಮೇಲೆ ನಿಗಾ: ವಿಮಾನ ನಿಲ್ದಾಣದ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ನಗರಕ್ಕೆ ಬರುವ ಪ್ರತಿ ವಿದೇಶಿಯರ ಬಗ್ಗೆ ಮಾಹಿತಿ ಪಡೆಯಬೇಕು. ಅವರ ಚಟುವಟಿಕೆಗಳ ಮೇಲೂ ನಿಗಾ ವಹಿಸಬೇಕು ಎಂದು ಸಭೆಯಲ್ಲಿ ಕಿರಿಯ ಅಧಿಕಾರಿಗಳಿಗೆ ಪೊಲೀಸ್‌ ಆಯುಕ್ತ ಸುನಿಲ್ ಕುಮಾರ್‌ ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ.

ಸಿಸಿ ಕ್ಯಾಮೆರಾ ಕಡ್ಡಾಯ

ಭದ್ರತೆ ದೃಷ್ಟಿಯಿಂದ ಎಲ್ಲ ಖಾಸಗಿ ಕಂಪನಿಗಳು ತಮ್ಮ ವ್ಯಾಪ್ತಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಸರ್ಕಾರ ಆದೇಶಿಸಿದೆ. ಈ ಬಗ್ಗೆ ತಿಳಿದುಕೊಳ್ಳಬೇಕು. 500ಕ್ಕೂ ಹೆಚ್ಚು ಮಂದಿ ಸೇರುವ ಸಾರ್ವಜನಿಕ ಸ್ಥಳದಲ್ಲಿ ಸಿಸಿಟಿವಿ ಇದೆಯೇ? ಇಲ್ಲವೇ? ಎಂಬ ಬಗ್ಗೆ ತಿಳಿದುಕೊಂಡು, ಅಂತಹ ಸ್ಥಳಗಳ ಪಟ್ಟಿ ಸಿದ್ಧಪಡಿಸಬೇಕು. ಹಾಗೆಯೇ ಮಾಲ್ ಹಾಗೂ ಹೆಚ್ಚು ಸಾರ್ವಜನಿಕರು ಸೇರುವ ಸ್ಥಳಗಳಲ್ಲಿ ಪ್ರಮುಖವಾಗಿ ಲೋಹಶೋಧಕ ಯಂತ್ರ ಅಳವಡಿಸಲಾಗಿದೆಯೇ? ಇಲ್ಲವೇ ಪರಿಶೀಲಿಸಬೇಕು. ಅಲ್ಲದೆ ಅನುಮಾನಾಸ್ಪದ ವ್ಯಕ್ತಿ ಬಗ್ಗೆ ನಿಗಾವಹಿಸಿ, ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ನಗರ ಪೊಲೀಸ್‌ ಆಯುಕ್ತರು ಕಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
•ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಭದ್ರತೆ ಕುರಿತ ಸಭೆ
•ನಗರದಲ್ಲಿನ ವಿದೇಶಿ ಪ್ರಜೆಗಳ ಮೇಲೆ ತೀವ್ರ ನಿಗಾ ವಹಿಸಲು ತೀರ್ಮಾನ

ಟಾಪ್ ನ್ಯೂಸ್

1–sdssadadasd

Ayodhya ಫ‌ಲಿತಾಂಶಕ್ಕೆ ಟೀಕೆ: ಅರ್ಚಕನ ಗನ್‌ಮ್ಯಾನ್‌ ವಾಪಸ್‌ ಪಡೆದ ಆಡಳಿತ!

Parliment New

Modi 3.0: ಲೋಕಸಭೆ ಅಧಿವೇಶನ ಇಂದು ಆರಂಭ: ಏನೇನು ನಡೆಯಲಿದೆ?

ಪೊಲೀಸರಿಗೆ ಸವಾಲಾಗುತ್ತಿರುವ ಪ್ರಚೋದನಕಾರಿ ಪೋಸ್ಟ್‌

ಪೊಲೀಸರಿಗೆ ಸವಾಲಾಗುತ್ತಿರುವ ಪ್ರಚೋದನಕಾರಿ ಪೋಸ್ಟ್‌

1-SURAJ

JDS MLC ಸೂರಜ್‌ ರೇವಣ್ಣಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

naksal (2)

Chhattisgarh; ಬಯಲಿಗೆ ಬಂದಿತು ನಕ್ಸಲರ ಕಳ್ಳನೋಟು ಜಾಲ!

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

Exam

NEET ಮಹಾರಾಷ್ಟ್ರದಲ್ಲೂ ಅಕ್ರಮ ಬಹಿರಂಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

High Court: ಕುದುರೆ ರೇಸ್‌ಗೆ ಹೈಕೋರ್ಟ್‌ ತಡೆ

High Court: ಕುದುರೆ ರೇಸ್‌ಗೆ ಹೈಕೋರ್ಟ್‌ ತಡೆ

Driving license: ಡ್ರೈವಿಂಗ್‌ ಲೈಸೆನ್‌ ನೀಡಲು ಮುಂದೆ ಬಂದ ಖಾಸಗಿ ಕೇಂದ್ರ

Driving license: ಡ್ರೈವಿಂಗ್‌ ಲೈಸೆನ್‌ ನೀಡಲು ಮುಂದೆ ಬಂದ ಖಾಸಗಿ ಕೇಂದ್ರ

Kaithota

Bengaluru: ಬುದ್ಧಿಮಾಂದ್ಯರಿಗೆ ಇಕೋ ಥೆರಪಿ, ಕೈತೋಟ ತರಬೇತಿ

Suburban rail: ಉಪನಗರ ರೈಲು ಮಾರ್ಗಕ್ಕೆ 2800 ಕೋಟಿ ವಿದೇಶಿ ಸಾಲ

Suburban rail: ಉಪನಗರ ರೈಲು ಮಾರ್ಗಕ್ಕೆ 2800 ಕೋಟಿ ವಿದೇಶಿ ಸಾಲ

Water-Pipe

Bengaluru: ಜುಲೈಗೆ ಕಾವೇರಿ 5ನೇ ಹಂತದ ನೀರು ಪೂರೈಕೆ

MUST WATCH

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

udayavani youtube

ಕಡುಬು ಸೇವೆಗೆ ಒಲಿಯುವ ಮುಂಡ್ರಪಾಡಿ ಈಶ

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

ಹೊಸ ಸೇರ್ಪಡೆ

1–sdssadadasd

Ayodhya ಫ‌ಲಿತಾಂಶಕ್ಕೆ ಟೀಕೆ: ಅರ್ಚಕನ ಗನ್‌ಮ್ಯಾನ್‌ ವಾಪಸ್‌ ಪಡೆದ ಆಡಳಿತ!

Parliment New

Modi 3.0: ಲೋಕಸಭೆ ಅಧಿವೇಶನ ಇಂದು ಆರಂಭ: ಏನೇನು ನಡೆಯಲಿದೆ?

ಪೊಲೀಸರಿಗೆ ಸವಾಲಾಗುತ್ತಿರುವ ಪ್ರಚೋದನಕಾರಿ ಪೋಸ್ಟ್‌

ಪೊಲೀಸರಿಗೆ ಸವಾಲಾಗುತ್ತಿರುವ ಪ್ರಚೋದನಕಾರಿ ಪೋಸ್ಟ್‌

1-SURAJ

JDS MLC ಸೂರಜ್‌ ರೇವಣ್ಣಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

naksal (2)

Chhattisgarh; ಬಯಲಿಗೆ ಬಂದಿತು ನಕ್ಸಲರ ಕಳ್ಳನೋಟು ಜಾಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.