ಮಹಾಮಾರಿಯ ಮೊದಲ ಬಲಿಗೆ ವರ್ಷ!

Team Udayavani, Mar 10, 2021, 2:00 PM IST

ಮಹಾಮಾರಿಯ ಮೊದಲ ಬಲಿಗೆ ವರ್ಷ!

ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್ ಮಹಾಮಾರಿಗೆ ದೇಶದಲ್ಲಿಯೇ ಮೊದಲ ಬಲಿಯಾಗಿದ್ದು, ಕರ್ನಾಟಕದ ಕಲಬುರಗಿಯಲ್ಲಿ. ಆ ಕರಾಳ ದಿನಕ್ಕೆ ಇಂದಿಗೆ (ಮಾರ್ಚ್‌ 10) ಒಂದು ವರ್ಷ!

ಈವರೆಗೂ ಕೋವಿಡ್ ವೈರಸ್‌ ದೇಶದಲ್ಲಿ ಬರೋಬ್ಬರಿ 1,57,968, ರಾಜ್ಯದಲ್ಲಿ 12,373 ಮಂದಿಯನ್ನು ಬಲಿ ಪಡೆದಿದೆ. ಈ ಮೂಲಕ ಕಳೆದ ಒಂದು ವರ್ಷದಲ್ಲಿ ನಿತ್ಯ ಸರಾಸರಿ ದೇಶದಲ್ಲಿ 430 ಮಂದಿ, ರಾಜ್ಯದಲ್ಲಿ 33 ಮಂದಿ ಸೋಂಕಿನಿಂದ ಜೀವ ಕಳೆದುಕೊಂಡಂತಾಗಿದೆ.

2020 ಜನವರಿ 27 ರಂದು ದೇಶದಲ್ಲಿ (ಕೇರಳ) ಮೊದಲ ಕೋವಿಡ್ ಪ್ರಕರಣ ವರದಿಯಾಗಿತ್ತು. ಆದರೆ, ಸೋಂಕಿತರ ಸಾವಾಗಿರಲಿಲ್ಲ. ಸೌದಿ ಅರೇ ಬಿಯಾ ಪ್ರಯಾಣ ಹಿನ್ನೆಲೆ ಹೊಂದಿದ್ದ ಕಲಬುರಗಿಯ 76 ವರ್ಷದ ವೃದ್ಧ ಮಾರ್ಚ್‌10 ರಂದು ಮೃತಪಟ್ಟಿದ್ದು, ಮಾ.12ರಂದು ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇದೇ ದೇಶದ ಮೊದಲ ಕೋವಿಡ್ ಸಾವಾಗಿತ್ತು. ಬಳಿಕ ಮಾರ್ಚ್‌ ಅಂತ್ಯಕ್ಕೆ ರಾಜ್ಯದಲ್ಲಿ ಮೂವರು, ದೇಶದಲ್ಲಿ 35 ಮಂದಿ ಸೋಂಕಿ ಬಲಿಯಾಗಿದ್ದರು.

ಸೋಂಕಿತರ ಸಾವಿನಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದ್ದು, ಮಹಾರಾಷ್ಟ್ರ (52,500), ತಮಿಳುನಾಡು (12521) ಮೊದಲ 2 ಸ್ಥಾನದಲ್ಲಿವೆ. ಸದ್ಯ ರಾಜ್ಯದ 9.56 ಲಕ್ಷ ಸೋಂಕಿತರಲ್ಲಿ ಶೇ1.3ರಷ್ಟು ಮೃತಪಟ್ಟಿದ್ದಾರೆ. ಶೇ 98 ಮಂದಿ ಗುಣಮುಖರಾಗಿದ್ದಾರೆ. ಉಳಿದ ಶೇ 0.7 ರಷ್ಟು ಮಂದಿ ಚಿಕಿತ್ಸೆ ಆರೈಕೆಯಲ್ಲಿದ್ದಾರೆ. ಸಾವಿನಲ್ಲಿಬೆಂಗಳೂರು(4503), ಮೈಸೂರು (1035), ದಕ್ಷಿಣ ಕನ್ನಡ(738), ಧಾರವಾಡ (619),ಬಳ್ಳಾರಿ(597) ಮೊದಲ ಐದು ಸ್ಥಾನದಲ್ಲಿವೆ. ಮೂರಂಕಿಯಿಂದ ಬೆರಳೆಣಿಕೆಯ ಹಾದಿ: ಒಂದು ವರ್ಷದಲ್ಲಿ ಒಂದೇ ದಿನ ಅತಿ ಹೆಚ್ಚು ಸಾವು ದೇಶದಲ್ಲಿ 1300, ರಾಜ್ಯದಲ್ಲಿ 150 ಗಡಿಗೆಸಮೀಪಿಸಿತ್ತು. ಇನ್ನು ರಾಜ್ಯದಲ್ಲಿ ಜುಲೈ 13 ರಿಂದ ಸೆಪ್ಟೆಂಬರ್‌ 13ವರೆಗೂ ಮೂರು ತಿಂಗಳು ನಿತ್ಯ ಸರಾಸರಿ 100 ಸೋಂಕಿತರ ಸಾವಾಗಿತ್ತು.75ಕ್ಕೂ ಹೆಚ್ಚು ಬಾರಿ ಸೋಂಕಿತರ ಸಾವಿನ ಸಂಖ್ಯೆ 100 ಗಡಿದಾಟಿದೆ. ಸದ್ಯ ಸಾವು ಬೆರಳೆಣಿಕೆಗೆ ಇಳಿದಿದ್ದು, ರಾಜ್ಯದಲ್ಲಿ ಕಳೆದ ಎರಡು ತಿಂಗಳಲ್ಲಿ (2021 ಜನವರಿ-ಫೆಬ್ರವರಿ) ನಿತ್ಯ ಸರಾಸರಿನಾಲ್ಕು ಸೋಂಕಿತರ ಸಾವಾಗಿದೆ. ಇನ್ನು ದೇಶದಲ್ಲಿ ನಿತ್ಯ ಸೋಂಕಿತರ ಸಾವು 100 ಆಸುಪಾಸಿನಲ್ಲಿದೆ.

ತಿಂಗಳು                    ಸಾವು

2020 ಮಾರ್ಚ್           3

ಏಪ್ರಿಲ್                     18

ಮೇ                         30

ಜೂನ್                    195

ಜುಲೈ                    2,068

ಆಗಸ್ಟ್                   3,388

ಸೆಪ್ಟೆಂಬರ್             3,162

ಅಕ್ಟೋಬರ್            2304

ನವೆಂಬರ್               610

ಡಿಸೆಂಬರ್              312

ಜನವರಿ(2021)     127

ಫೆಬ್ರವರಿ 119 ಸೋಂಕಿತರ ಸಾವಾಗಿದೆ.

ವಯಸ್ಸು          ಸಾವು

0-9                28

10-19             46

20-49          2,165

50-59           2,677

60-90          7,277

90-99          160

ಜಯಪ್ರಕಾಶ್ ಬಿರಾದಾರ್

ಟಾಪ್ ನ್ಯೂಸ್

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.