CTI exam: ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ: ಪಿಎಸ್‌ಐ ಸಿಸಿಬಿ ವಶಕ್ಕೆ


Team Udayavani, Jan 20, 2024, 1:20 PM IST

CTI exam: ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ: ಪಿಎಸ್‌ಐ ಸಿಸಿಬಿ ವಶಕ್ಕೆ

ಬೆಂಗಳೂರು: ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದಿ ರುವುದು ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿರುವ ಬೆನ್ನಲ್ಲೇ ಇದೀಗ ಕಮರ್ಷಿಯಲ್‌ ಟ್ಯಾಕ್ಸ್‌ ಇನ್‌ ಸ್ಪೆಕ್ಟರ್‌ (ಸಿಟಿಐ) ಹುದ್ದೆ ನೇಮಕಾತಿಗೆ ನಡೆಯಲಿರುವ ಪರೀಕ್ಷೆಗೆ ಸಂಬಂಧಿಸಿದಂತೆ ಸಬ್‌ ಇನ್‌ಸ್ಪೆಕ್ಟರ್‌ವೊಬ್ಬರು ಪ್ರಶ್ನೆ ಪತ್ರಿಕೆ ನೀಡುವ ಆಮಿಷವೊಡ್ಡಿ ದುಡ್ಡಿಗೆ ಬೇಡಿಕೆಯಿಟ್ಟಿರುವ ಆರೋಪ ಕೇಳಿ ಬಂದಿದೆ.

ಇದರ ಬೆನ್ನಲ್ಲೆ ಸಿಸಿಬಿ ಪೊಲೀಸರು ಪಿಎಸ್‌ಐ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಮರ್ಷಿಯಲ್‌ ಟ್ಯಾಕ್ಸ್‌ ಇನ್‌ಸ್ಪೆಕ್ಟರ್‌ ಪರೀಕ್ಷೆಗೆ ಸಂಬಂ ಧಿಸಿದಂತೆ ಇಂಟೆಲಿಜೆನ್ಸ್‌ ವಿಭಾಗದಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ವೊಬ್ಬರು ಪ್ರಶ್ನೆ ಪತ್ರಿಕೆ ನೀಡುವುದಾಗಿ ಕೆಲವು ಪರೀಕ್ಷಾರ್ಥಿಗಳಿಗೆ ಆಮಿಷವೊಡ್ಡಿ ದುಡ್ಡಿಗೆ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ. ಪಿಎಸ್‌ಐ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್‌ ಆಗಿದೆ. ಪ್ರಶ್ನೆ ಪತ್ರಿಕೆ ನಾವೇ ಕೊಡುತ್ತೇವೆ. ಪೋಸ್ಟಿಂಗ್‌ ಸಹ ಕೊಡಿಸುತ್ತೇವೆ ಎಂದು ಪಿಎಸ್‌ಐ ಹೇಳಿದ್ದಾರೆ ಎನ್ನಲಾಗಿದೆ.

ಇದರ ಜತೆಗೆ ಪಿಎಸ್‌ಐ ಪರೀಕ್ಷೆ ಪ್ರಶ್ನೆ ಪತ್ರಿಕೆಯನ್ನು ನೀಡುವುದಾಗಿ ಪಿಎಸ್‌ಐ ಪರೀಕ್ಷಾರ್ಥಿಗಳಿಗೆ ಆಮಿಷವೊಡ್ಡಿರುವ ಆರೋಪ ಕೇಳಿ ಬಂದಿದೆ.

ಆಡಿಯೋ ವೈರಲ್‌: ಸಬ್‌ ಇನ್‌ಸ್ಪೆಕ್ಟರ್‌ ಮಾತನಾಡಿದ್ದ ಎನ್ನಲಾದ ಆಡಿಯೋ ವೈರಲ್‌ ಆದ ಬೆನ್ನಲ್ಲೇ ಸಿಸಿಬಿ ಪೊಲೀಸರು ಆ ಪಿಎಸ್‌ಐಯನ್ನು ವಶಕ್ಕೆ ಪಡೆದು ಸ್ಪಷ್ಟೀಕರಣ ಪಡೆಯಲು ಮುಂದಾಗಿದ್ದಾರೆ. ಆಡಿಯೋ ಹಾಗೂ ವಾಟ್ಸ್‌ಆ್ಯಪ್‌ ಚಾಟಿಂಗ್‌ ವಿಚಾರದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ.

ಪೊಲೀಸ್‌ ಠಾಣೆ ಮುಂದೆ ಜಮಾಯಿಸಿದ ಪರೀಕ್ಷಾರ್ಥಿಗಳು : ಇದರ ಬೆನ್ನಲ್ಲೇ ಪರೀಕ್ಷಾರ್ಥಿಗಳು ಹಾಗೂ ಕೆಲ ಸಾರ್ವಜನಿಕರು ಶುಕ್ರವಾರ ಚಂದ್ರಾ ಲೇಔಟ್‌ ಪೊಲೀಸ್‌ ಠಾಣೆ ಮುಂದೆ ಜಮಾಯಿಸಿ ಅಕ್ರಮವೆಸಗಲು ಮುಂದಾಗಿರುವ ಪಿಎಸ್‌ಐ ವಿರುದ್ಧ ಕ್ರಮ ಕೈಗೊಳ್ಳುಂತೆ ಒತ್ತಾಯಿಸಿದ್ದಾರೆ. ವೈರಲ್‌ ಆಗಿರುವ ಆಡಿಯೋದಲ್ಲಿ ಹಣಕ್ಕೆ ಬೇಡಿಕೆ, ಪರೀಕ್ಷೆ ವಿಚಾರವಾಗಿ ಡೀಲ್‌ ನಡೆಸುವ ಬಗ್ಗೆ ಸಬ್‌ ಇನ್‌ ಸ್ಪೆಕ್ಟರ್‌ ಸಂಭಾಷಣೆ ನಡೆಸಿ, ವಾಟ್ಸ್‌ ಆ್ಯಪ್‌ ಚಾಟ್‌ ಸಹ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಜ.21ರಂದು ಕಮರ್ಷಿಯಲ್‌ ಟ್ಯಾಕ್ಸ್‌ ಇನ್‌ ಸ್ಪೆಕ್ಟರ್‌ ಹುದ್ದೆಗೆ ಪರೀಕ್ಷೆ ನಡೆಸಲಾಗುತ್ತಿದೆ. 1.60 ಲಕ್ಷ ಅಭ್ಯರ್ಥಿಗಳು ಸಿಟಿಐ ಪರೀಕ್ಷೆ ಬರೆಯಲಿದ್ದಾರೆ. ಜ.23ರಂದು ಪಿಎಸ್‌ಐ ಪರೀಕ್ಷೆ ನಡೆಯಲಿದೆ. ಎರಡೂ ಪರೀಕ್ಷೆಗಳ ಅಕ್ರಮಕ್ಕೆ ಸಂಚು ರೂಪಿಸುವ ಆರೋಪ ಕೇಳಿ ಬಂದಿದೆ.

ಟಾಪ್ ನ್ಯೂಸ್

Hubballi: ದೇವಸ್ಥಾನದ ಧರ್ಮದರ್ಶಿ ಹತ್ಯೆ ಪ್ರಕರಣ: 24 ಗಂಟೆಯೊಳಗೆ ಹಂತಕನ ಬಂಧನ

Hubballi: ದೇವಸ್ಥಾನದ ಧರ್ಮದರ್ಶಿ ಹತ್ಯೆ ಪ್ರಕರಣ: 24 ಗಂಟೆಯೊಳಗೆ ಹಂತಕನ ಬಂಧನ

2-udupi

Udupi:ಪ್ರವಾಸಿ ವಾಹನಗಳಿಗೆ ಜಿಪಿಎಸ್,ಪ್ಯಾನಿಕ್ ಬಟನ್ ಕಡ್ಡಾಯ ಅಳವಡಿಕೆ ವಿರೋಧಿಸಿ ಪ್ರತಿಭಟನೆ

Union Budget 2024:  ಟಾಪ್‌ 500 ಕಂಪನಿಗಳಲ್ಲಿ 1ಕೋಟಿ ಯುವಕರಿಗೆ Internshipಗೆ ಅವಕಾಶ

Union Budget 2024:  ಟಾಪ್‌ 500 ಕಂಪನಿಗಳಲ್ಲಿ 1ಕೋಟಿ ಯುವಕರಿಗೆ Internshipಗೆ ಅವಕಾಶ

1-mng

Mangaluru: ಆಯುಕ್ತರ ವಜಾಕ್ಕೆ ಒತ್ತಾಯಿಸಿ ಪಾಲಿಕೆಗೆ ಮುತ್ತಿಗೆ ಯತ್ನ

1-siddu-a

Valmiki ನಿಗಮದ ಹಗರಣ; ಇ ಡಿ ನನ್ನನ್ನು ಅಕ್ರಮವಾಗಿ ಸಿಲುಕಿಸಲು ಬಯಸಿದೆ: ಸಿದ್ದರಾಮಯ್ಯ

Union Budget 2024: ಪ್ರವಾಸಿ ಕೇಂದ್ರವಾಗಿ ನಳಂದ ವಿಶ್ವವಿದ್ಯಾಲಯ ಅಭಿವೃದ್ಧಿ

Union Budget 2024: ಪ್ರವಾಸಿ ಕೇಂದ್ರವಾಗಿ ನಳಂದ ವಿಶ್ವವಿದ್ಯಾಲಯ ಅಭಿವೃದ್ಧಿ

08

Tollywood: ಪ್ರಭಾಸ್‌ ʼಫೌಜಿʼಗೆ ಪಾಕಿಸ್ತಾನದ ಟಾಪ್‌ ನಟಿ ಎಂಟ್ರಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Commissioner B. Dayanand: ಪೊಲೀಸ್‌ ಡ್ರೆಸ್‌ನಲ್ಲಿ ರೀಲ್ಸ್ ಗೆ ಕಮಿಷನರ್‌ ಬ್ರೇಕ್

Commissioner B. Dayanand: ಪೊಲೀಸ್‌ ಡ್ರೆಸ್‌ನಲ್ಲಿ ರೀಲ್ಸ್ ಗೆ ಕಮಿಷನರ್‌ ಬ್ರೇಕ್

Bengaluru: ರೌಡಿಶೀಟರ್‌ ಹೆಸರಲಿ ಫ್ಯಾನ್ಸ್ ಪೇಜ್‌; ಅಡ್ಮಿನ್‌ ಮೇಲೆ ಕೇಸ್‌

Bengaluru: ರೌಡಿಶೀಟರ್‌ ಹೆಸರಲಿ ಫ್ಯಾನ್ಸ್ ಪೇಜ್‌; ಅಡ್ಮಿನ್‌ ಮೇಲೆ ಕೇಸ್‌

Bengaluru: ಬಸ್‌ಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿ ಅಪಹರಣ?

Bengaluru: ಬಸ್‌ಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿ ಅಪಹರಣ?

Bengaluru: 7 ತಿಂಗಳಲ್ಲಿ 8362 ಫ್ಲೆಕ್ಸ್‌ ತೆರವು

Bengaluru: 7 ತಿಂಗಳಲ್ಲಿ 8362 ಫ್ಲೆಕ್ಸ್‌ ತೆರವು

1

Fraud: ಖಾಕಿ ಸೋಗಿನಲ್ಲಿ ಮಹಿಳಾ ಥೆರಪಿಸ್ಟ್‌ ಗೆ ವಂಚನೆ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Hubballi: ದೇವಸ್ಥಾನದ ಧರ್ಮದರ್ಶಿ ಹತ್ಯೆ ಪ್ರಕರಣ: 24 ಗಂಟೆಯೊಳಗೆ ಹಂತಕನ ಬಂಧನ

Hubballi: ದೇವಸ್ಥಾನದ ಧರ್ಮದರ್ಶಿ ಹತ್ಯೆ ಪ್ರಕರಣ: 24 ಗಂಟೆಯೊಳಗೆ ಹಂತಕನ ಬಂಧನ

2-udupi

Udupi:ಪ್ರವಾಸಿ ವಾಹನಗಳಿಗೆ ಜಿಪಿಎಸ್,ಪ್ಯಾನಿಕ್ ಬಟನ್ ಕಡ್ಡಾಯ ಅಳವಡಿಕೆ ವಿರೋಧಿಸಿ ಪ್ರತಿಭಟನೆ

Union Budget 2024:  ಟಾಪ್‌ 500 ಕಂಪನಿಗಳಲ್ಲಿ 1ಕೋಟಿ ಯುವಕರಿಗೆ Internshipಗೆ ಅವಕಾಶ

Union Budget 2024:  ಟಾಪ್‌ 500 ಕಂಪನಿಗಳಲ್ಲಿ 1ಕೋಟಿ ಯುವಕರಿಗೆ Internshipಗೆ ಅವಕಾಶ

1-mng

Mangaluru: ಆಯುಕ್ತರ ವಜಾಕ್ಕೆ ಒತ್ತಾಯಿಸಿ ಪಾಲಿಕೆಗೆ ಮುತ್ತಿಗೆ ಯತ್ನ

1-siddu-a

Valmiki ನಿಗಮದ ಹಗರಣ; ಇ ಡಿ ನನ್ನನ್ನು ಅಕ್ರಮವಾಗಿ ಸಿಲುಕಿಸಲು ಬಯಸಿದೆ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.