ಚಾಕೋಲೇಟ್, ಜೆಲ್ಲಿಯಲ್ಲೂ ಡ್ರಗ್ಸ್.!

Team Udayavani, Nov 30, 2019, 10:24 AM IST

bng-tdy-1

ಬೆಂಗಳೂರು: ಕೆನಡಾದಿಂದ ಗಾಂಜಾ ಬೆರೆಸಿದ ಚಾಕೊಲೇಟ್‌, ಮಾದಕ ವಸ್ತು ಒಳಗೊಂಡ ಸಿಗರೇಟ್‌ಗಳನ್ನು ಅಕ್ರಮವಾಗಿ ತರಿಸಿಕೊಂಡು ಮಾರಾಟ ಮಾಡುತ್ತಿದ್ದ ಅಂತಾರಾಷ್ಟ್ರೀಯ ಜಾಲವನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಬಯಲಿಗೆ ಎಳೆದಿದೆ.

ಈ ಜಾಲದಲ್ಲಿ ಸಕ್ರಿಯಗೊಂಡು ಕಾಲೇಜು ವಿದ್ಯಾರ್ಥಿಗಳು, ಖಾಸಗಿ ಕಂಪನಿ ಉದ್ಯೋಗಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಕೊಲ್ಕತ್ತಾ ಮೂಲದ ಅತೀಫ್ಸ ಲೀಂ (26), ರೋಹಿತ್‌ ದಾಸ್‌ (26) ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಂದ ಸುಮಾರು ಒಂದುಕೋಟಿ ರೂ. ಮೌಲ್ಯದ ಮಾದಕವಸ್ತು ಜಪ್ತಿ ಮಾಡಿಕೊಂಡಿದ್ದಾರೆ. ಆರೋಪಿಗಳಿಗೆ ಕೊಲ್ಕತ್ತಾ, ಮುಂಬೈ ಸೇರಿ ಇತರೆ ನಗರಗಳ ಮಾದಕ ವಸ್ತು ಮಾರಾಟ ಜಾಲದ ಸಂಪರ್ಕವಿದ್ದು, ಅಲ್ಲೂ ಮಾದಕವಸ್ತು ಸರಬರಾಜು ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಜಾಲದ ಕುರಿತುಕೂಲಂಕಶ ತನಿಖೆ ಮುಂದುವರಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಕೆನಡಾದಲ್ಲಿ ಕಿಂಗ್‌ಪಿನ್‌: ಹೈಡ್ರೋ ಗಾಂಜಾ, ಆಶಿಷ್‌ ಆಯಿಲ್‌ ಇರುವಂತಹ ಇ-ಸಿಗರೇಟ್‌ ಗಳನ್ನು ಕೆನಡಾ ಕಂಪನಿಯೊಂದು ತಯಾರಿಸುತ್ತದೆ. ಈ ದಂಧೆ ನಡೆಸುವ ವ್ಯಕ್ತಿ ಅತೀಫ್ ಸಲೀಂಗೆ ಡಾರ್ಕ್‌ವೆಬ್‌ ಆನ್‌ಲೈನ್‌ ತಾಣದಲ್ಲಿ ಪರಿಚಿತನಾಗಿದ್ದ. ಬಳಿಕ ಅತೀಫ್, ವಿಕ್ಕರ್‌ ಮೀ ಆ್ಯಪ್‌ ಮೂಲಕ ನಿರಂತರ ಸಂಪರ್ಕ ಇಟ್ಟುಕೊಂಡಿದ್ದ. ಕೆನಡಾದಿಂದ ದಂಧೆಕೋರ, ಮಕ್ಕಳ ಹಾಲಿನ ಪೌಡರ್‌ ಡಬ್ಬಗಳಲ್ಲಿ ಹೈಡ್ರೋಗಾಂಜಾ, ಸೇರಿ ಇನ್ನಿತರೆ ಮಾದಕ ವಸ್ತುಗಳನ್ನು ಇಟ್ಟುಕೊಂಡು ವಿಮಾನದಲ್ಲಿ ಕಳುಹಿಸಿಕೊಡುತ್ತಿದ್ದ. ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ಮಕ್ಕಳ ಹಾಲಿನ ಪೌಡರ್‌ ಡಬ್ಬಗಳನ್ನು ಶೋಧ ಮಾಡಿದರೂ ಗೊತ್ತಾಗದ ಹಾಗೆ ಡಬ್ಬದ ಒಳಗಡೆ ವಸ್ತುಗಳನ್ನು ತುಂಬಿರುತ್ತಿದ್ದ. ಹೀಗಾಗಿ ಕಸ್ಟಮ್ಸ್‌ ಅಧಿಕಾರಿಗಳ ಕಣ್ತಪ್ಪಿ ಮಾದಕ ವಸ್ತು ಅತೀಫ್ಗೆ ತಲುಪುತ್ತಿತ್ತು.

ಕೊರಿಯರ್‌ ಮೂಲಕ ಮನೆ ಬಾಗಿಲಿಗೆ: ಕೆನಡಾದಿಂದ ಬಂದ ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತುಗಳನ್ನು ಕೊಲ್ಕತ್ತಾ, ಮುಂಬೈ ಸೇರಿ ಇತರೆ ನಗರಗಳ ದಂಧೆಕೋರರಿಗೆ ಇ-ಕಾಮರ್ಸ್‌ ಸಂಸ್ಥೆಯೊಂದರ ಕವರ್‌ನಲ್ಲಿರಿಸಿ ಕೊರಿಯರ್‌ ಮೂಲಕ ತಲುಪಿಸುತ್ತಿದ್ದ. ಬೆಂಗಳೂರಿನಲ್ಲಿ ಮಾರಾಟ ಮಾಡಲು ಆರಂಭಿಸಿದ ಅತೀಫ್, ಪರಿಚಿತ ಗ್ರಾಹಕರಿಗೆ ಕೊರಿಯರ್‌ ಮೂಲಕವೇ ಚಾಕೊಲೇಟ್‌ ಗಾಂಜಾ, ಇತರೆ ಮಾದಕ ವಸ್ತು ಕಳುಹಿಸಿ ಹಣ ಗಳಿಸುತ್ತಿದ್ದ. ಆರೋಪಿ ಅತೀಫ್, ಆರಂಭದಲ್ಲಿ ಕೆಲವರಿಗೆ ಚಾಕೊಲೇಟ್‌, ಜೆಲ್ಲಿಗಳನ್ನು ನೀಡಿ ಅಭ್ಯಾಸ ಮಾಡಿಸುತ್ತಿದ್ದ. ಅದನ್ನು ಸೇವಿಸಿ ಅಭ್ಯಾಸವಾದ ಬಳಿಕ ಅವರೇ ಗ್ರಾಹಕರಾಗಿ ಪರಿವರ್ತನೆಯಾಗುತ್ತಿದ್ದರು ಎಂದು ತನಿಖೆ ವೇಳೆ ಗೊತ್ತಾಗಿದೆ. ಆರೋಪಿ ಅತೀಫ್ನಿಂದ ಒಂದು ಸ್ಕೋಡಾ ಕಾರು, ಒಂದು ಲಕ್ಷ ರೂ. ನಗದು, ಬೈಕ್‌ ಸೇರಿ ಇನ್ನಿತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬಿಟ್‌ಕಾಯಿನ್‌ ಮೂಲಕ ವ್ಯವಹಾರ : ಬಿಸಿಎ ಪದವೀಧರ ಅತೀಫ್ ಸಲೀಂ, ಸುದ್ದುಗುಂಟೆ ಪಾಳ್ಯದ ಅಪಾರ್ಟ್‌ ಮೆಂಟ್‌ ಒಂದರಲ್ಲಿ ವಾಸಿಸುತ್ತಿದ್ದಾನೆ. ಐಶಾರಾಮಿ ಜೀವನ ಶೈಲಿ ಆತನದ್ದಾಗಿದ್ದು, ಆತನ ಕುಟುಂಬ ಕೊಲ್ಕತ್ತಾದಲ್ಲಿ ನೆಲೆಸಿದೆ. ಈ ಹಿಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅತೀಫ್ ಸ್ವತಃ ಮಾದಕ ವ್ಯಸನಿಯಾಗಿದ್ದ, ಬಳಿಕ ತಾನೇ ಮಾರಾಟಮಾಡುವ ದಂಧೆ ಶುರು ಮಾಡಿದ್ದ. ಕೆನಡಾ ಮೂಲದ ದಂಧೆಕೋರನ ಜತೆ ಮಾದಕ ವಸ್ತು ಖರೀದಿಗೆ “ಬಿಟ್‌ ಕಾಯಿನ್‌’ ವ್ಯವಹಾರದ ಮೂಲಕ ಹಣ ವರ್ಗಾವಣೆ ಮಾಡುತ್ತಿದ್ದ. ಅತೀಫ್ ಹೆಸರಿನಲ್ಲಿ ದೇಶದ ವಿವಿಧ ನಗರಗಳಿಗೆ ಕೊರಿಯರ್‌ಗಳು ರವಾನೆಯಾಗುತ್ತಿದ್ದವು. ಆತನ ಹೆಸರಿಗೂ ಬರುತ್ತಿದ್ದವು. ಆದರೆ ನಿಖರ ವಿಳಾಸ ಮಾತ್ರ ದಾಖಲಾಗುತ್ತಿರಲಿಲ್ಲ. ಈ ಬಗ್ಗೆ ದೊರೆತ ಮಾಹಿತಿ ಆಧರಿಸಿ ಆತನ ಹಿನ್ನೆಲೆ ಕೆದಕಲು ಆರಂಭಿಸಿದಾಗ ವಿದೇಶದಿಂದಲೂ ಆತನ ಹೆಸರಿಗೆ ಲೆಕ್ಕವಿಲ್ಲದಷ್ಟು ಕೊರಿಯರ್‌ಗಳು ಬಂದಿರುವುದು ಗೊತ್ತಾಯಿತು. ಬಳಿಕ ದೂರವಾಣಿ ಸಂಖ್ಯೆ ಆಧರಿಸಿ ಆತ ವಾಸವಿದ್ದ ಅಪಾರ್ಟ್‌ಮೆಂಟ್‌ ಕದ ತಟ್ಟಿದಾಗ ಭಾರೀ ಪ್ರಮಾಣದ ಮಾದಕ ವಸ್ತುಗಳ ಜತೆಯೇ ರೆಡ್‌ ಹ್ಯಾಂಡಾಗಿಸಿಕ್ಕಿಬಿದ್ದಿದ್ದಾನೆ ಎಂದು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಹಿರಿಯ ಅಧಿಕಾರಿ ತಿಳಿಸಿದರು.

ಆರೋಪಿ ಬಳಿ ಪತ್ತೆಯಾಗಿರುವ ಮಾದಕ ವಸ್ತುಗಳನ್ನು ಇ-ಕಾಮರ್ಸ್‌ ಸಂಸ್ಥೆಯೊಂದರ ಪ್ಯಾಕೇಜ್‌ನಲ್ಲಿರಿಸಿ ಸಾಗಿಸಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಪರಿಶೀಲನೆ ನಡೆಸದೇ ವಸ್ತುಗಳನ್ನು ಸರಬರಾಜು ಮಾಡಿರುವ ಸಂಬಂಧ ಆ ಕಂಪನಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಭದ್ರತೆ ಹಾಗೂ ತಪಾಸಣೆ ನಡೆಸಲು ಸೂಚಿಸಲಾಗುವುದು.ಭಾಸ್ಕರ್‌ ರಾವ್‌, ನಗರ ಪೊಲೀಸ್‌ ಆಯುಕ್ತ

ಟಾಪ್ ನ್ಯೂಸ್

Prajwal Revanna Case ಜಾಲತಾಣದಲ್ಲಿ ಅಶ್ಲೀಲ ವೀಡಿಯೋ ಡಿಲೀಟ್‌ ಮಾಡಿಸಲು ಕ್ರಮ: ಪರಂ

Prajwal Revanna Case ಜಾಲತಾಣದಲ್ಲಿ ಅಶ್ಲೀಲ ವೀಡಿಯೋ ಡಿಲೀಟ್‌ ಮಾಡಿಸಲು ಕ್ರಮ: ಪರಂ

Prajwal Revanna ವಿದೇಶಕ್ಕೆ ಹಾರಲು ರಾಜ್ಯ ಸರಕಾರದ ವೈಫ‌ಲ್ಯ ಕಾರಣ: ಅಶೋಕ್‌

Prajwal Revanna ವಿದೇಶಕ್ಕೆ ಹಾರಲು ರಾಜ್ಯ ಸರಕಾರದ ವೈಫ‌ಲ್ಯ ಕಾರಣ: ಅಶೋಕ್‌

Prajwal Revanna ಬಂಧನಕ್ಕೆ ಸಹಕರಿಸುವಂತೆ ಪ್ರಧಾನಿಗೆ ಸಿಎಂ ಪತ್ರ

Prajwal Revanna ಬಂಧನಕ್ಕೆ ಸಹಕರಿಸುವಂತೆ ಪ್ರಧಾನಿಗೆ ಸಿಎಂ ಪತ್ರ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

Bengaluru water crisis: ನೀರು ಯಾವಾಗ ಬರುತ್ತೆ?: ಮೊಬೈಲಲ್ಲೇ ಮಾಹಿತಿ

Bengaluru water crisis: ನೀರು ಯಾವಾಗ ಬರುತ್ತೆ?: ಮೊಬೈಲಲ್ಲೇ ಮಾಹಿತಿ

10

Bengaluru: ಫ್ಲೈಓವರ್‌ಗಳಲ್ಲೂ ಕಸ ಸುರಿಯುವ ವಾಹನ ಸವಾರರು 

7

Bengaluru: ಸೈಕಲ್‌ ಕದಿಯುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ ಬಂಧನ

Extortion:  ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

Extortion: ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Prajwal Revanna Case ಜಾಲತಾಣದಲ್ಲಿ ಅಶ್ಲೀಲ ವೀಡಿಯೋ ಡಿಲೀಟ್‌ ಮಾಡಿಸಲು ಕ್ರಮ: ಪರಂ

Prajwal Revanna Case ಜಾಲತಾಣದಲ್ಲಿ ಅಶ್ಲೀಲ ವೀಡಿಯೋ ಡಿಲೀಟ್‌ ಮಾಡಿಸಲು ಕ್ರಮ: ಪರಂ

Prajwal Revanna ವಿದೇಶಕ್ಕೆ ಹಾರಲು ರಾಜ್ಯ ಸರಕಾರದ ವೈಫ‌ಲ್ಯ ಕಾರಣ: ಅಶೋಕ್‌

Prajwal Revanna ವಿದೇಶಕ್ಕೆ ಹಾರಲು ರಾಜ್ಯ ಸರಕಾರದ ವೈಫ‌ಲ್ಯ ಕಾರಣ: ಅಶೋಕ್‌

Prajwal Revanna ಬಂಧನಕ್ಕೆ ಸಹಕರಿಸುವಂತೆ ಪ್ರಧಾನಿಗೆ ಸಿಎಂ ಪತ್ರ

Prajwal Revanna ಬಂಧನಕ್ಕೆ ಸಹಕರಿಸುವಂತೆ ಪ್ರಧಾನಿಗೆ ಸಿಎಂ ಪತ್ರ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

Gangolli ಕಾರಿನಲ್ಲಿ ಬಂದು ದನ ಕಳವಿಗೆ ಯತ್ನ

Gangolli ಕಾರಿನಲ್ಲಿ ಬಂದು ದನ ಕಳವಿಗೆ ಯತ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.