ಮಧ್ಯರಾತ್ರಿ ವಿದೇಶಿ ಮಹಿಳೆಯರ ಪುಂಡಾಟ: ಹೊಯ್ಸಳ ಸಿಬ್ಬಂದಿ ಮೇಲೆ ಹಲ್ಲೆ
Team Udayavani, Aug 30, 2022, 2:08 PM IST
ಬೆಂಗಳೂರು: ಮದ್ಯದ ಆಮಲಿನಲ್ಲಿ ವಿದೇಶಿ ಮಹಿಳೆಯರು ಹೊಯ್ಸಳ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ಬ್ರಿಗೇಡ್ ರಸ್ತೆಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ನೈಜೀರಿಯಾ ಮೂಲದ ಪೀಸ್ ಪರ್ನಾಷ್ ಹಾಗೂ ಜೂಲಿಯ ವಾಂಜೀರೋ ಸೇರಿ ಮೂವರು ಮಹಿಳೆಯರು ನಗರದ ಕಮ್ಮನ ಹಳ್ಳಿಯಲ್ಲಿ ವಾಸವಾಗಿದ್ದರು. ವಾರಾಂತ್ಯವಾದ್ದರಿಂದ ಬೀಗ್ರೇಡ್ ರಸ್ತೆಯಲ್ಲಿರುವ ಪಬ್ ಆ್ಯಂಡ್ ರೆಸ್ಟೋರೆಂಟ್ಗೆ ಬಂದಿದ್ದು, ತಡರಾತ್ರಿವರೆಗೂ ಕಂಠಪೂರ್ತಿ ಮದ್ಯ ಸೇವಿಸಿದ್ದಾರೆ. ಬಳಿಕ ಹೋಟೆಲ್ ಸಿಬ್ಬಂದಿ ಜತೆ ವಾಗ್ವಾದಕ್ಕಿಳಿದ್ದರಿಂದ ಹೋಟೆಲ್ನಿಂದ ಹೊರಗಡೆ ಕಳುಹಿಸಲಾಗಿದೆ.
ನಂತರ ರಾತ್ರಿ 1.30ರ ಸುಮಾರಿಗೆ ಬ್ರಿàಗೇಡ್ ರಸ್ತೆಯಲ್ಲಿ ಅಸಭ್ಯವಾಗಿ ಓಡಾಡುತ್ತಿದ್ದು, ಸಾರ್ವಜ ನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದರು. ಆಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದೇ ವೇಳೆ ಗಸ್ತಿನಲ್ಲಿದ್ದ ಕಬ್ಬನ್ಪಾರ್ಕ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಬಂದು ತಡರಾತ್ರಿ 1.30ರ ಆಗಿದ್ದು, ಸ್ಥಳದಿಂದ ಹೊರಡುವಂತೆ ಸೂಚಿಸಿದ್ದಾರೆ. ಅದಕ್ಕೆ ಇಬ್ಬರು ಮಹಿಳೆಯರು ಏಕಾಏಕಿ ಹೊಯ್ಸಳ ಸಿಬ್ಬಂದಿ ಜತೆ ವಾಗ್ವಾದಕ್ಕಿಳಿಸಿದ್ದಾರೆ. ಕೂಡಲೇ ಪಿಎಸ್ಐ ಕೂಡ ಸ್ಥಳಕ್ಕೆ ಬಂದು ವಿದೇಶಿ ಮಹಿಳೆಯರಿಗೆ ಇಷ್ಟೊತ್ತಿನಲ್ಲಿ ಈ ರೀತಿ ಓಡಾಡಬಾರದು ಮನೆಗೆ ಹೋಗುವಂತೆ ಎಚ್ಚರಿಕೆ ನೀಡಿದ್ದಾರೆ.
ಆದರೂ ಮಹಿಳೆಯರು ಏಕಾಏಕಿ ಪಿಎಸ್ಐ ಹಾಗೂ ಸಿಬ್ಬಂದಿ ಜತೆ ಗಲಾಟೆ ಮಾಡಿದ್ದು, ಒಂದು ಹಂತ ದಲ್ಲಿ ತಳ್ಳಾಟ, ನೂಕಾಟ ನಡೆದಿದೆ. ಅದು ವಿಕೋ ಪಕ್ಕೆ ಹೋದಾಗ ಹೆಡ್ಕಾನ್ಸ್ಟೇಬಲ್ ನಾಗರಾಜ್ ಮೇಲೆ ಹಲ್ಲೆ ನಡೆಸಿದ್ದಾರೆ.
ಕೂಡಲೇ ಹೆಚ್ಚಿನ ಪೊಲೀಸ್ ಸಿಬ್ಬಂದಿ ಕರೆಸಿಕೊಂಡು ಇಬ್ಬರನ್ನು ಠಾಣೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಿ, ಪ್ರಾಥಮಿಕ ಮಾಹಿತಿ ಸಂಗ್ರಹಿಸಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೋಟಿಸ್ ಕೊಟ್ಟು ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು. ಈ ಕುರಿತು ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!