ಮುಂಬೈ ಓಪನ್‌ ಟೆನಿಸ್‌: ಚ್ವೊನರೇವಾ, ಸಬಲೆಂಕಾ ತಾರಾ ಆಕರ್ಷಣೆ


Team Udayavani, Nov 14, 2017, 6:30 AM IST

Aryna-Sabalenka,-Vera-Zvona.jpg

ಮುಂಬಯಿ: ಮಾಜಿ ನಂ.2 ಆಟಗಾರ್ತಿ, ರಶ್ಯದ ವೆರಾ ಚ್ವೊನರೇವಾ ಮತ್ತು ಬೆಲರೂಸ್‌ನ ಯುವ ಆಟಗಾರ್ತಿ ಅರಿನಾ ಸಬಲೆಂಕಾ ಈ ಬಾರಿಯ “ಮುಂಬೈ ಓಪನ್‌ ಟೆನಿಸ್‌ ಪಂದ್ಯಾವಳಿ’ಯ ತಾರಾ ಆಕರ್ಷಣೆ ಆಗಲಿದ್ದಾರೆ. 

125,000 ಡಾಲರ್‌ ಬಹುಮಾನದ ಡಬ್ಲ್ಯುಟಿಎ ಮುಂಬೈ ಓಪನ್‌ ಟೆನಿಸ್‌ ನ. 18ರಿಂದ 26ರ ತನಕ “ಕ್ರಿಕೆಟ್‌ ಕ್ಲಬ್‌ ಆಫ್ ಇಂಡಿಯಾ’ (ಸಿಸಿಐ) ಅಂಗಳದಲ್ಲಿ ನಡೆಯಲಿದೆ.33ರ ಹರೆಯದ ವೆರಾ ಚ್ವೊನರೇವಾ 2008ರ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಸಾಧನೆಗೈದಿದ್ದಾರೆ. 2010ರ ವಿಂಬಲ್ಡನ್‌ ಮತ್ತು ಯುಎಸ್‌ ಓಪನ್‌ ಟೆನಿಸ್‌ ಕೂಟದಲ್ಲಿ ರನ್ನರ್ ಅಪ್‌ ಆಗಿದ್ದರು. 2012ರ ಬಳಿಕ ನಾನಾ ಗಾಯದ ಸಮಸ್ಯೆಯಿಂದಾಗಿ ಚ್ವೊನರೇವಾ ಸ್ಪರ್ಧಾತ್ಮಕ ಟೆನಿಸ್‌ನಿಂದ ದೂರ ಸರಿಯಬೇಕಾಯಿತು. ಈಗ ಚ್ವೊನರೇವಾ ಒಂದು ಮಗುವಿನ ತಾಯಿಯೂ ಆಗಿದ್ದು, ಈ ವರ್ಷ ಮತ್ತೆ ಟೆನಿಸ್‌ಗೆ ಮರಳುತ್ತಿದ್ದಾರೆ. ಮಹಾರಾಷ್ಟ್ರ ರಾಜ್ಯ ಲಾನ್‌ ಟೆನಿಸ್‌ ಅಸೋಸಿಯೇಶನ್‌ ಕಾರ್ಯದರ್ಶಿ ಸುಂದರ್‌ ಅಯ್ಯರ್‌ ಅವರು ಚ್ವೊನರೇವಾ ಆಗಮನವನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಬಲೆಂಕಾಗೆ ಅಗ್ರ ಶ್ರೇಯಾಂಕ
ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಬೆಲರೂಸ್‌ನ 19ರ ಹರೆಯದ ಅರಿನಾ ಸಬಲೆಂಕಾ ಈ ಕೂಟದ ಅಗ್ರ ಶ್ರೇಯಾಂಕಿತ ಆಟಗಾರ್ತಿಯಾಗಿದ್ದಾರೆ. ಹಿಂದೊಮ್ಮೆ ವಿಶ್ವ ರ್‍ಯಾಂಕಿಂಗ್‌ನಲ್ಲಿ 12ನೇ ಸ್ಥಾನ ಅಲಂಕರಿಸಿದ್ದ ಬೆಲ್ಜಿಯಂನ ಯಾನಿನಾ ವಿಕ್‌ವೆುàಯರ್‌ ಕೂಡ ಈ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.

ಚೀನದ ಝು ಲಿನ್‌ (105), ರಶ್ಯದ ಆರಿನಾ ರೊಡಿಯೊನೋವಾ (117), ಬ್ರಿಟನ್ನಿನ ನವೊಮಿ ಬ್ರಾಡಿ (120), ಸ್ಲೊವಾಕಿಯಾದ ಅನ್ನಾ ಶಿಮಿಡೊÉàವಾ (132), ಇಟಲಿಯ ಜಾಸ್ಮಿನ್‌ ಪೌಲಿನಿ (136), ಆಸ್ಟ್ರಿಯಾದ ಫೈತ್‌ ಕಾಬ್ರೆರಾ (137ನೇ ರ್‍ಯಾಂಕಿಂಗ್‌) ಮೊದಲಾವರೆಲ್ಲ ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಭಾರತದ ನಾಲ್ವರಿಗೆ ವೈಲ್ಡ್‌ಕಾರ್ಡ್‌
ಭಾರತದ ನಾಲ್ವರು ಆಟಗಾರ್ತಿಯರಿಗೆ ಪ್ರಧಾನ ಸುತ್ತಿನ ವೈಲ್ಡ್‌ಕಾರ್ಡ್‌ ಲಭಿಸಿದ್ದು, ಇಬ್ಬರು ಅರ್ಹತಾ ಸುತ್ತಿನಲ್ಲಿ ಸೆಣಸಲಿದ್ದಾರೆ. ಪ್ರಧಾನ ಸುತ್ತಿಗೆ ನೇರ ಅವಕಾಶ ಪಡೆದವರೆಂದರೆ, ದೇಶದ ಹಾಲಿ ನಂ.1 ಆಟಗಾರ್ತಿ ಕರ್ಮನ್‌ ಕೌರ್‌ ಥಾಂಡಿ, ಮಾಜಿ ನಂ.1 ಆಟಗಾರ್ತಿ ಅಂಕಿತಾ ರೈನಾ, ಮಹಾರಾಷ್ಟ್ರದ ನಂ.1 ಆಟಗಾರ್ತಿ ಋತುಜಾ ಭೋಂಸ್ಲೆ ಮತ್ತು ಜೂನಿಯರ್‌ ಆಟಗಾರ್ತಿ ಝೀಲ್‌ ದೇಸಾಯಿ.

“ವನಿತಾ ಟೆನಿಸ್‌ ರ್‍ಯಾಂಕಿಂಗ್‌ನಲ್ಲಿ ಭಾರತದ ಆಟಗಾರ್ತಿಯರು ನಿರಂತರ ಪ್ರಗತಿ ಸಾಧಿಸುತ್ತಿದ್ದಾರೆ. ಈ ಪಂದ್ಯಾವಳಿ ಮುಂದಿನ ಹಂತಕ್ಕೆ ಅಗತ್ಯವಾಗಿ ಬೇಕಾದ ಅಡಿಪಾಯವನ್ನು ನಿರ್ಮಿಸಿ ಕೊಡಲಿದೆ’ ಎಂದು ಕೂಟದ ಸಂಘಟನಾ ಸಮಿತಿಯ ಅಧ್ಯಕ್ಷೆ ಅಮೃತಾ ಫ‌ಡ್ನವೀಸ್‌ ಹೇಳಿದರು.

ಬಹುಮಾನಗಳ ವಿವರ
ವನಿತಾ ಸಿಂಗಲ್ಸ್‌ ಪ್ರಶಸ್ತಿ ವಿಜೇತರಿಗೆ 20 ಸಾವಿರ ಡಾಲರ್‌ ಜತೆಗೆ 160 ಡಬ್ಲ್ಯುಟಿಎ ಅಂಕ, ರನ್ನರ್ ಅಪ್‌ಗೆ 11 ಸಾವಿರ ಡಾಲರ್‌ ಮತ್ತು 95 ಅಂಕ ಲಭಿಸಲಿದೆ. ಡಬಲ್ಸ್‌ ವಿಜೇತರಿಗೆ 5,500 ಡಾಲರ್‌ ಮತ್ತು 160 ಅಂಕ, ಪೈನಲ್‌ನಲ್ಲಿ ಸೋತವರಿಗೆ 2,700 ಡಾಲರ್‌ ಮತ್ತು 95 ಅಂಕ ದೊರೆಯಲಿದೆ.

ಅರ್ಹತಾ ಸುತ್ತಿನ ಪಂದ್ಯಗಳು ನ. 18 ಮತ್ತು 19ರಂದು ನಡೆದರೆ, ಪ್ರಧಾನ ಸುತ್ತಿನ ಸ್ಪರ್ಧೆಗಳು ನ. 20ರಿಂದ ಆರಂಭವಾಗಲಿವೆ. ಮೊದಲ 3 ದಿನ ಮಧ್ಯಾಹ್ನ 2.30ರಿಂದ, ಬಳಿಕ ಸಂಜೆ 4 ಗಂಟೆಯಿಂದ ಸ್ಪರ್ಧೆಗಳು ನಡೆಯಲಿವೆ.

ಸಿಸಿಐ 2007ರ ಬಳಿಕ ಮೊದಲ ಬಾರಿಗೆ ದೊಡ್ಡ ಮಟ್ಟದ ಟೆನಿಸ್‌ ಪಂದ್ಯಾವಳಿಯನ್ನು ಆಯೋಜಿಸಲಿದೆ. ಅಂದು ಎಟಿಪಿ ಟೂರ್ನಿ ಇಲ್ಲಿ ನಡೆದಿತ್ತು.

ಟಾಪ್ ನ್ಯೂಸ್

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.