ಕೊಳಚೆ ನೀರು ಶುದ್ಧೀಕರಿಸದಿದ್ದರೆ ಕಾರ್ಖಾನೆ ನೀರು, ಕರೆಂಟ್‌ ಕಟ್‌

Team Udayavani, May 19, 2017, 11:38 AM IST

Bellandur_Lake.jpg

ಬೆಂಗಳೂರು: ಬೆಳ್ಳಂದೂರು ಕೆರೆ ಸುತ್ತಮುತ್ತಲ ಕೈಗಾರಿಕೆಗಳು, ಅಪಾರ್ಟ್‌ಮೆಂಟ್‌ ಹಾಗೂ ವಸತಿ ಸಮುಚ್ಚಯಗಳು ಕಾಲಮಿತಿಯೊಳಗೆ ಕೊಳಚೆ ನೀರು ಸಂಸ್ಕರಣಾ ಘಟಕಗಳನ್ನು ಅಳವಡಿಸಿಕೊಳ್ಳದಿದ್ದರೆ ವಿದ್ಯುತ್‌ ಹಾಗೂ ನೀರಿನ ಸಂಪರ್ಕ ಕಡಿತಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಗುರುವಾರ ಸೂಚನೆ ನೀಡಿದೆ.

ಬೆಳ್ಳಂದೂರು ಕೆರೆ ಮಾಲಿನ್ಯಕ್ಕೆ ಸಂಬಂಧಪಟ್ಟ ಪ್ರಕರಣ ಸಂಬಂಧ ಗುರುವಾರ ವಿಚಾರಣೆ ವೇಳೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕೆರೆಯ ಸುತ್ತಮುತ್ತಲಿನ 97 ಕೈಗಾರಿಕೆಗಳ ಪೈಕಿ 76 ಕೈಗಾರಿಕೆಗಳನ್ನು ಬಂದ್‌ ಮಾಡಿರು ವುದಾಗಿ ನ್ಯಾಯಾಧೀಕರಣಕ್ಕೆ ಪ್ರಮಾಣ ಪತ್ರ ಸಲ್ಲಿಸಿತು. ಇದಕ್ಕೆ ಆಕ್ಷೇಪಿಸಿದ ನ್ಯಾಯಪೀಠವು, ಮಾಲಿನ್ಯಕಾರಕ ಎಲ್ಲ ಕೈಗಾರಿಕೆಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಬೇಕಿತ್ತಲ್ಲವೇ ಎಂದು ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಆದಿತ್ಯ ಸೋಂಧಿ ಅವರನ್ನು ಪ್ರಶ್ನಿಸಿತು.

ಅಲ್ಲದೆ, ಕೆರೆಯ ಸುತ್ತಮುತ್ತಲಿನ ಎಲ್ಲ ಕೈಗಾರಿಕೆಗಳು ತ್ಯಾಜ್ಯ ನೀರು ಸಂಸ್ಕರಣಾ ಘಟಕ ಅಳವಡಿಸಿಕೊಳ್ಳುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬಿಡಿಎ ಹಾಗೂ ಜಲಮಂಡಳಿಯ ಜಂಟಿ ತನಿಖಾ ತಂಡವು ಸೂಚಿಸಬೇಕು. ನಿಗದಿತ ಕಾಲಮಿತಿಯೊಳಗೆ ಘಟಕ ಅಳವಡಿಕೆಗೆ ಕಾರ್ಖಾನೆಗಳು ಕ್ರಮ ಕೈಗೊಳ್ಳದಿದ್ದರೆ ಅವುಗಳಿಗೆ ವಿದ್ಯುತ್‌ ಹಾಗೂ ನೀರಿನ ಸಂಪರ್ಕ ಕಡಿತಗೊಳಿಸಿ ಬೀಗಮುದ್ರೆ ಹಾಕಬೇಕು.

ಹಾಗೆಯೇ ಕಾಲಮಿತಿಯೊಳಗೆ ಕೊಳಚೆ ನೀರು ಸಂಸ್ಕರಣಾ ಘಟಕ ಅಳವಡಿಸಿಕೊಳ್ಳದ ಅಪಾರ್ಟ್‌ಮೆಂಟ್‌ಗಳು ಹಾಗೂ ವಸತಿ ಸಮುಚ್ಚಯಗಳಿಗೂ ವಿದ್ಯುತ್‌ ಹಾಗೂ ನೀರಿನ ಸಂಪರ್ಕ ಕಡಿತಗೊಳಿಸಬೇಕು ಎಂದು ನಾಯಾಧೀಕರಣ ಸೂಚನೆ ನೀಡಿತು. ಕೆರೆಯನ್ನು ಮಲಿನಗೊಳಿಸುತ್ತಿರುವ ಕೈಗಾರಿಕೆಗಳನ್ನು ತಕ್ಷಣ ಬಂದ್‌ ಮಾಡಬೇಕು.

ಬೆಳ್ಳಂದೂರು ಕೆರೆಗೆ ನೀರು ಸೇರುವ 17 ಕಾಲುವೆ, ನಾಲೆಗಳ ವಿಸ್ತೀರ್ಣ, ನೀರು ಹರಿಯುವ ಸಾಮರ್ಥಯ ಹಾಗೂ ಗುಣಮಟ್ಟದ ವಿವರ ನೀಡಬೇಕು. ಬಯೋಲಾಜಿಕಲ್‌ ಆಕ್ಸಿಜನ್‌ ಡಿಮಾಂಡ್‌ ಪ್ರಮಾ ಋಣದ ನಿಖರ ಮಾಹಿತಿ ಹಾಗೂ ಮಂಡಳಿಯು ಎಸ್‌ಟಿಪಿ ಅಳವಡಿಕೆಗೆ ನಿಗದಿಪಡಿಸಿರುವ ಮಾನದಂಡಗಳ ವಿವರ, ಬೆಳ್ಳಂದೂರು ಕೆರೆ ಸುತ್ತಮುತ್ತ ನಿರ್ಮಾಣಗೊಂಡಿರುವ ಕಟ್ಟಡಗಳು, ಅಪಾರ್ಟ್‌ಮೆಂಟ್‌ಗಳು, ಕಟ್ಟಡ ಸಂಕೀರ್ಣಗಳ ವಿವರ ಸಲ್ಲಿಸಬೇಕು ಎಂದೂ ನ್ಯಾಯಾಧೀಕರಣ ತಾಕೀತು ಮಾಡಿದೆ. 

ಅದರಂತೆ ರಾಜ್ಯಮಾಲಿನ್ಯ ನಿಯಂತ್ರಣ ಮಂಡಳಿಯು ಹಾಲಿ ಕೊಳಚೆ ನೀರು ಸಂಸ್ಕರಣಾ ಘಟಕಗಳ ನೀರಿನ ಮಾದರಿ ಸಂಗ್ರಹಿಸಿ ಅದನ್ನು ಭಾರತೀಯ ವಿಜ್ಞಾನ ಸಂಸ್ಥೆಯ ವತಿಯಿಂದ ಪರಿಶೀಲನೆಗೆ ಒಳಪಡಿಸಲು ಕ್ರಮ ಕೈಗೊಳ್ಳಬೇಕಿದೆ.

ಟಾಪ್ ನ್ಯೂಸ್

Belagavi: ಹಿಂದೂ ತಾಯಿ-ಮಗುವಿಗೆ ಆರೈಕೆ ಮಾಡಿದ ಮುಸ್ಲಿಂ ದಂಪತಿ

Belagavi: ಹಿಂದೂ ತಾಯಿ-ಮಗುವಿಗೆ ಆರೈಕೆ ಮಾಡಿದ ಮುಸ್ಲಿಂ ದಂಪತಿ

ದಸರಾ ಹಬ್ಬಕ್ಕೆ ಪ್ಯಾನ್‌ ಇಂಡಿಯಾ ಫೈಟ್:‌ ʼಮಾರ್ಟಿನ್‌ʼಗೆ ರಜಿನಿ, ಜೂ.NTR ಸಿನಿಮಾ ಟಕ್ಕರ್

ದಸರಾ ಹಬ್ಬಕ್ಕೆ ಪ್ಯಾನ್‌ ಇಂಡಿಯಾ ಫೈಟ್:‌ ʼಮಾರ್ಟಿನ್‌ʼಗೆ ರಜಿನಿ, ಜೂ.NTR ಸಿನಿಮಾ ಟಕ್ಕರ್

Davanagere: ಪ್ರಭಾ ಮಲ್ಲಿಕಾರ್ಜುನ್ ಹೆಸರಿನ ನಕಲಿ ಎಫ್.ಬಿ ಖಾತೆಯಿಂದ ಹಣಕ್ಕೆ ಬೇಡಿಕೆ

Davanagere: ಪ್ರಭಾ ಮಲ್ಲಿಕಾರ್ಜುನ್ ಹೆಸರಿನ ನಕಲಿ ಎಫ್.ಬಿ ಖಾತೆಯಿಂದ ಹಣಕ್ಕೆ ಬೇಡಿಕೆ

Odisha Assembly poll: ಒಡಿಶಾ ವಿಧಾನಸಭೆ ಈ ಬಾರಿ ಬಿಜೆಪಿ ತೆಕ್ಕೆಗೆ, ಬಿಜೆಡಿಗೆ ಮುಖಭಂಗ?

Odisha Assembly poll: ಒಡಿಶಾ ವಿಧಾನಸಭೆ ಈ ಬಾರಿ ಬಿಜೆಪಿ ತೆಕ್ಕೆಗೆ, ಬಿಜೆಡಿಗೆ ಮುಖಭಂಗ?

Shimoga: ಮಟನ್ ಹೆಚ್ಚಿಗೆ ಹಾಕೆಂದು ಹೇಳಿದ್ದಕ್ಕೆ ಅನ್ಯಕೋಮಿನ ಯುವಕನಿಂದ ಮಚ್ಚೇಟು!

Shimoga: ಮಟನ್ ಹೆಚ್ಚಿಗೆ ಹಾಕೆಂದು ಹೇಳಿದ್ದಕ್ಕೆ ಅನ್ಯಕೋಮಿನ ಯುವಕನಿಂದ ಮಚ್ಚೇಟು!

Kotee movie trailer

Kotee movie; ಇನ್ನೆರಡು ದಿನದಲ್ಲಿ ಧನಂಜಯ್‌ ನಟನೆಯ ‘ಕೋಟಿ’ ಟ್ರೇಲರ್

Americaದಲ್ಲಿ ಭಾರತೀಯ ವಿದ್ಯಾರ್ಥಿನಿ ನಾಪತ್ತೆ; ಸಾರ್ವಜನಿಕರ ನೆರವು ಕೋರಿದ ಪೊಲೀಸ್

Americaದಲ್ಲಿ ಭಾರತೀಯ ವಿದ್ಯಾರ್ಥಿನಿ ನಾಪತ್ತೆ; ಸಾರ್ವಜನಿಕರ ನೆರವು ಕೋರಿದ ಪೊಲೀಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru Rain: ಭಾರೀ ಧರೆಗುರುಳಿದ 118 ಮರಗಳು 

Bengaluru Rain: ಭಾರೀ ಧರೆಗುರುಳಿದ 118 ಮರಗಳು 

Special Class: ಮಕ್ಕಳ ಕಲಿಕಾ ಸಾಮರ್ಥ್ಯ ಸುಧಾರಣೆಗೆ ಸ್ಪೆಷಲ್‌ ಕ್ಲಾಸ್‌

Special Class: ಮಕ್ಕಳ ಕಲಿಕಾ ಸಾಮರ್ಥ್ಯ ಸುಧಾರಣೆಗೆ ಸ್ಪೆಷಲ್‌ ಕ್ಲಾಸ್‌

Mansoon: ರಾಜ್ಯಕ್ಕೆ ಮುಂಗಾರು ಪ್ರವೇಶ… ದಕ್ಷಿಣ ಕರ್ನಾಟಕದ ಬಹುತೇಕ ಕಡೆ ಮುಂಗಾರು ಮಳೆ

Mansoon: ರಾಜ್ಯಕ್ಕೆ ಮುಂಗಾರು ಪ್ರವೇಶ… ದಕ್ಷಿಣ ಕರ್ನಾಟಕದ ಬಹುತೇಕ ಕಡೆ ಮುಂಗಾರು ಮಳೆ

Election Result: ಟ್ರೆಂಡ್‌ ಗೊತ್ತಾದರೂ ಫ‌ಲಿತಾಂಶ ಘೋಷಣೆ ವಿಳಂಬ ಸಾಧ್ಯತೆ

Election Result: ಟ್ರೆಂಡ್‌ ಗೊತ್ತಾದರೂ ಫ‌ಲಿತಾಂಶ ಘೋಷಣೆ ವಿಳಂಬ ಸಾಧ್ಯತೆ

ಮೇಲ್ಮನೆ: ಶಿಕ್ಷಕ, ಪದವೀಧರ ಕ್ಷೇತ್ರಕ್ಕಿಂದು ಮತದಾನ… 78 ಅಭ್ಯರ್ಥಿಗಳು ಕಣದಲ್ಲಿ

ಮೇಲ್ಮನೆ: ಶಿಕ್ಷಕ, ಪದವೀಧರ ಕ್ಷೇತ್ರಕ್ಕಿಂದು ಮತದಾನ… 78 ಅಭ್ಯರ್ಥಿಗಳು ಕಣದಲ್ಲಿ

MUST WATCH

udayavani youtube

ಹೆರ್ಗದಲ್ಲಿ 40 ಅಡಿ ಆಳದ ಬಾವಿಗೆ ಬಿದ್ದ ಕರುವಿನ ರಕ್ಷಣೆ

udayavani youtube

ಇಡ್ಲಿ ವಡೆ, ಶಾವಿಗೆ ಬಾತ್ ಗೆ ಹೆಸರುವಾಸಿಯಾದ ಹೋಟೆಲ್

udayavani youtube

ಒಡವೆ ಖರೀದಿಸುವ ನೆಪದಲ್ಲಿ ಮೂರುವರೆ ಲಕ್ಷ ಮೌಲ್ಯದ ಒಡವೆ ಕದ್ದ ಖತರ್ನಾಕ್ ಅಜ್ಜಿ

udayavani youtube

ರಘುಪತಿ ಭಟ್ ಅವರ ಮನದಾಳದ ಮಾತು

udayavani youtube

ರಘುಪತಿ ಭಟ್ ಅವರ ಮನದಾಳದ ಮಾತು

ಹೊಸ ಸೇರ್ಪಡೆ

chef chidambara trailer

Chef Chidambara trailer: ಭರವಸೆ ಮೂಡಿಸಿದ ಅನಿರುದ್ಧ್ ಸಿನಿಮಾ

Belagavi: ಹಿಂದೂ ತಾಯಿ-ಮಗುವಿಗೆ ಆರೈಕೆ ಮಾಡಿದ ಮುಸ್ಲಿಂ ದಂಪತಿ

Belagavi: ಹಿಂದೂ ತಾಯಿ-ಮಗುವಿಗೆ ಆರೈಕೆ ಮಾಡಿದ ಮುಸ್ಲಿಂ ದಂಪತಿ

12

Sagara: ಮತದಾನಕ್ಕೆ ಬಂದಿದ್ದವರ ಮೊಬೈಲ್ ಕಳ್ಳತನ

Mandya: ಬಿಜೆಪಿ‌ ಮುಖಂಡನ ಮಗ ನೌಕಪಡೆಯ ಲೆಫ್ಟಿನೆಂಟ್ ಆಗಿ ಆಯ್ಕೆ

Mandya: ಬಿಜೆಪಿ‌ ಮುಖಂಡನ ಮಗ ನೌಕಪಡೆಯ ಲೆಫ್ಟಿನೆಂಟ್ ಆಗಿ ಆಯ್ಕೆ

ಈಶಾನ್ಯ ಪದವೀಧರರ ಚುನಾವಣೆ: ಹರಪನಹಳ್ಳಿಯಲ್ಲಿ ಮ.1 ಗಂಟೆಯವರೆಗೆ ಶೇ.33.8 ರಷ್ಟು ಮತದಾನ

ಈಶಾನ್ಯ ಪದವೀಧರರ ಚುನಾವಣೆ: ಹರಪನಹಳ್ಳಿಯಲ್ಲಿ ಮ.1 ಗಂಟೆಯವರೆಗೆ ಶೇ.33.8 ರಷ್ಟು ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.