ನ್ಯಾ. ಕೆಂಪಣ್ಣ ಆಯೋಗದ ವರದಿ ಶೈತ್ಯಾಗಾರಕ್ಕೆ?

Team Udayavani, Jun 4, 2018, 6:50 AM IST

ban04061806medn.jpg

ಬೆಂಗಳೂರು: ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಭಾರೀ ಸದ್ದು ಮಾಡಿದ್ದ ಹಾಗೂ ಆಗಿನ ಸಿಎಂ ಸಿದ್ದರಾಮಯ್ಯ ವಿರುದ್ಧ ನೇರ ಆರೋಪ ಮಾಡಲಾಗಿದ್ದ “ಅರ್ಕಾವತಿ ಡಿನೋಟಿಫಿಕೇಷ ನ್‌ ಹಗರಣ’ಕ್ಕೆ ಸಂಬಂಧಿಸಿದ ನ್ಯಾ. ಕೆಂಪಣ್ಣ ಆಯೋಗದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿ ಇಲ್ಲಿಗೆ ಒಂಭತ್ತು ತಿಂಗಳು ತುಂಬಿದೆ.

ಆದರೆ, “ಡೆಲಿವರಿ’ ಮಾತ್ರ ಇನ್ನೂ ಆಗಿಲ್ಲ! ಈಗಿನ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಅದು ಆಗುವ ಸಾಧ್ಯತೆಯೂ ಕಡಿಮೆ. ಈ ಹಿಂದೆ ಬಿಜೆಪಿ ಹಾಗೂ ಜೆಡಿಎಸ್‌ ಎರಡೂ ಪಕ್ಷಗಳು ಅರ್ಕಾವತಿ ಡಿನೋಟಿಫಿಕೇಷನ್‌ ಹಗರಣದ ವಿರುದ್ಧ ಹೋರಾಟ ಮಾಡಿದ್ದವು. ಆದರೆ, ಇಂದು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್‌,
ಜೆಡಿಎಸ್‌ ಒಂದಾಗಿ ಆಡಳಿತದ ಚುಕ್ಕಾಣಿ ಹಿಡಿದಿವೆ.

ಹೀಗಾಗಿ ನ್ಯಾ. ಕೆಂಪಣ್ಣ ಆಯೋಗದ ವರದಿ “ಶೈತ್ಯಾಗಾರ’ ಸೇರುವುದರಲ್ಲಿ ಅನುಮಾನವಿಲ್ಲ.ಸತತ   ವರ್ಷಗಳ ಕಾಲ ವಿಚಾರಣೆ ನಡೆಸಿದ ನ್ಯಾ. ಕೆಂಪಣ್ಣ ನೇತೃತ್ವದ ಆಯೋಗ 2017ರ ಆಗಸ್ಟ್‌ 23ರಂದು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

ನಿಯಮದ ಪ್ರಕಾರ ವರದಿ ಸಲ್ಲಿಕೆಯಾದ ಕನಿಷ್ಠ ಆರು ತಿಂಗಳೊಳಗಾಗಿ ವರದಿಯನ್ನು ಸಚಿವ ಸಂಪುಟ ದಲ್ಲಿ ಒಪ್ಪಿ, ಅದನ್ನು ಸದನದಲ್ಲಿ ಮಂಡಿಸ  ಬೇಕು. ಇಲ್ಲದಿದ್ದರೆ ಸಂಪುಟದಲ್ಲಿ ಮಂಡಿಸಿ ಅದರ ಪರಾಮರ್ಶೆಗೆ ಸಮಿತಿಯೊಂದನ್ನು ರಚಿಸಬಹುದು. ಆದರೆ, ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಇದರಲ್ಲಿ ಯಾವುದೂ ಆಗಿಲ್ಲ. 

ಆಯೋಗದ ವರದಿಯಲ್ಲಿ ಸಿದ್ದರಾಮಯ್ಯ  ನವರಿಗೆ “ಕ್ಲೀನ್‌ಚಿಟ್‌’ ನೀಡಲಾಗಿದೆ ಎಂದು ವಿಶ್ಲೇಷಿ  ಸಲಾಗಿತ್ತು. ಆದರೆ, ವರದಿಯಲ್ಲಿ ಸಿದ್ದರಾಮಯ್ಯ  ನವರು ತಪ್ಪು ಮಾಡಿದ್ದಾರೆಂದು ಸ್ಪಷ್ಟವಾಗಿ ಹೇಳಲಾಗಿದೆ. 

ಹಾಗಾಗಿ, ವರದಿ ಬಹಿರಂಗಪಡಿಸಲು ಹಿಂದೇಟು ಹಾಕುತ್ತಿದ್ದಾರೆಂದು ಆಗ ಪ್ರತಿ  ಪಕ್ಷ ನಾಯಕರಾಗಿದ್ದ ಜಗದೀಶ ಶೆಟ್ಟರ್‌ ಆರೋಪಿಸಿದ್ದರು. ಸರ್ಕಾರವೇ ಆಯೋಗ ರಚನೆ ಮಾಡಿರುವುದರಿಂದ ವರದಿ ನಿರೀಕ್ಷಿತ. ಹಾಗೊಮ್ಮೆ
ದಾಖಲೆಗಳನ್ನು ಪರಿಶೀಲಿಸಿ ಸತ್ಯಾಂಶಗಳ ಆಧಾರದಲ್ಲಿ ವರದಿ ನೀಡಿದ್ದರೆ ನ್ಯಾ. ಕೆಂಪಣ್ಣ ಅವರನ್ನು ಬಹಿರಂಗವಾಗಿ ಅಭಿನಂದಿಸುತ್ತೇನೆಂದು ಈಗ ಮುಖ್ಯಮಂತ್ರಿ ಆಗಿರುವ ಕುಮಾರಸ್ವಾಮಿ ಆಗ ಹೇಳಿದ್ದರು. ಈ ನಡುವೆ ಯಾರನ್ನೂ ಹೊಣೆಗಾರರ ನ್ನಾಗಿ ಅಥವಾ ತಪ್ಪಿತಸ್ಥರನ್ನಾಗಿ ಮಾಡುವ ಅಧಿಕಾರ ಆಯೋಗಕ್ಕೆ ಕೊಟ್ಟಿಲ್ಲ. ಆದ್ದರಿಂದ “ಕ್ಲೀನ್‌ಚಿಟ್‌’ ಅನ್ನುವುದು ಅಪ್ರಸ್ತುತ ಎಂದು ಆಯೋಗದ ಅಧಿಕಾರಿಗಳು ಹೇಳಿದ್ದರು.

ಯಾವ ಸರ್ಕಾರದ ಅವಧಿಯಲ್ಲಿ ವರದಿ
ಸಲ್ಲಿಕೆಯಾಗಿರುತ್ತದೋ, ಆ ಸರ್ಕಾರದ ಅವಧಿ ಯಲ್ಲಿ ವರದಿ ಬಗ್ಗೆ ಯಾವುದೇ ಕ್ರಮ ಆಗಿರಲಿಲ್ಲದಿದ್ದರೆ, ಮುಂಬರುವ ಸರ್ಕಾರದ ಮೇಲೆ ವರದಿ ಮಂಡನೆ ಮತ್ತು ಜಾರಿಯ ಜವಾಬ್ದಾರಿ ಬೀಳುತ್ತದೆ ಎಂದು ಕಾನೂನು ತಜ್ಞರು ಹೇಳುತ್ತಾರೆ. ಹೀಗಾಗಿ ನ್ಯಾ. ಕೆಂಪಣ್ಣ ಆಯೋಗದ ವರದಿ ಒಪ್ಪಿಕೊಳ್ಳುವ, ಅನುಪಾಲನ ವರದಿ ಯೊಂದಿಗೆ ಅದನ್ನು ಸದನದಲ್ಲಿ ಮಂಡಿಸುವ ಹೊಣೆ ಈಗ ಸಮ್ಮಿಶ್ರ ಸರ್ಕಾರದ ಮೇಲಿದೆ. ಸಮ್ಮಿಶ್ರ ಸರ್ಕಾರ  ದಲ್ಲಿ ಕಾಂಗ್ರೆಸ್‌ ಮೈತ್ರಿ ಪಕ್ಷ ಆಗಿರುವುದರಿಂದ ಅದರ ಸಾಧ್ಯತೆ ತೀರಾ ಕಡಿಮೆ.

ಏನಿದು ನ್ಯಾ. ಕೆಂಪಣ್ಣ ವರದಿ?
ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಳ್ಳಲಾದ ಜಮೀನಿನ ಪೈಕಿ 981 ಎಕರೆ ಜಮೀನು ಡಿನೋಟಿಫಿಕೇಷನ್‌ ಮಾಡಲಾಗಿದ್ದು, ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದಾರೆಂದು ಪ್ರತಿಪಕ್ಷಗಳು
ಆರೋಪಿಸಿದ್ದವು. ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದ ಸರ್ಕಾರ ನ್ಯಾ.ಕೆಂಪಣ್ಣ ಆಯೋಗ ನೇಮಿಸಿತ್ತು. 2017ರ ಆ.23ಕ್ಕೆ 4 ಸಂಪುಟಗಳಲ್ಲಿ ಸುಮಾರು 9 ಸಾವಿರ ಪುಟಗಳ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು.

– ರಫೀಕ್‌ ಅಹ್ಮದ್‌

ಟಾಪ್ ನ್ಯೂಸ್

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.