ನೆಲದ ಮೇಲಲ್ಲ, ಆಗಸದಲ್ಲೂ ಕನ್ನಡ ಭಾಷೆಯ ತಾತ್ಸಾರ

Team Udayavani, Nov 1, 2018, 6:00 AM IST

b-24.jpg

ಬೆಂಗಳೂರು: ಕನ್ನಡ ಭಾಷೆ ಎಂದರೆ ನಮ್ಮವರಿಗೆ ತಾತ್ಸಾರ ಎಂಬ ಮಾತು ಕೇವಲ ಭೂಮಿ ಮೇಲಲ್ಲ. ಆಕಾಶದಲ್ಲಿ ಹಾರಾಡುವ ವಿಮಾನದಲ್ಲಿಯೂ ಇದೆ! ಪ್ರಾದೇಶಿಕ ವಾಯುಯಾನದಲ್ಲಿ ಕನ್ನಡವೇ ಮೊಳಗುತ್ತಿಲ್ಲ! ಕೇಂದ್ರ ಸರ್ಕಾರ “ಉಡಾನ್‌’ ಯೋಜನೆಯಡಿ
ಪ್ರಾದೇಶಿಕವಾಗಿ ವಿಮಾನಯಾನ ಸೇವೆಯನ್ನು ಆರಂಭಿಸಿದೆ. ಅದರಂತೆ ರಾಜ್ಯದಲ್ಲಿ ಹುಬ್ಬಳ್ಳಿ, ಮೈಸೂರು, ಬೆಳಗಾವಿ, ಮಂಗಳೂರು ಹಾಗೂ ಇತರ ನಗರಗಳ ನಡುವೆ ಅನೇಕ ಖಾಸಗಿ ಕಂಪನಿ  ಗಳೂ ವಿಮಾನ ಹಾರಿಬಿಟ್ಟಿವೆ. ಆದರೆ, ಗಗನ ಸಖಿಯರು ಮಾತ್ರ ವಿಮಾನದಲ್ಲಿ ಕನ್ನಡವನ್ನೇ ಬಳಸುತ್ತಿಲ್ಲ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ವಿಮಾನಗಳಲ್ಲಿ ಮಂಗಳೂರಿಗೆ ತೆರಳಬೇಕಿದ್ದರೆ, ಹಿಂದಿ, ಇಂಗ್ಲಿಷ್‌ ಅಥವಾ ಮಲಯಾಳಂನಲ್ಲಿ ಮಾತನಾಡುತ್ತಾರೆ. ಹುಬ್ಬಳ್ಳಿಗೆ ತೆರಳಿದರೆ, ಹಿಂದಿ,
ಇಂಗ್ಲಿಷ್‌ ಜೊತೆ ಮರಾಠಿ ಯಲ್ಲೂ ಮಾತಾಡುತ್ತಾರೆ. ಆದರೆ, ಕನ್ನಡ ಮಾತಾಡುವ ಗಗನಸಖಿ ಮಾತ್ರ ಕಾಣಿಸುತ್ತಲೇ ಇಲ್ಲ.
“ಪ್ರಯಾಣಿಕರು ನಮ್ಮೊಂದಿಗೆ ಯಾವ ಭಾಷೆ ಮಾತಾಡಬಹುದು?’ ಎಂದು ವಿಮಾನ ನೆಲದಿಂದ ಚಿಮ್ಮುವ ಮೊದಲು 
ಗಗನಸಖೀಯರು, ಪ್ರಯಾಣಿಕರಿಗೆ ಸೂಚನೆ ನೀಡುವುದು ವಾಡಿಕೆ. ಇಂಗ್ಲಿಷ್‌, ಹಿಂದಿ, ಮಲಯಾಳಂ, ಮರಾಠಿ, ಪಂಜಾಬಿ ಭಾಷೆಯ 
ನ್ನಷ್ಟೇ ಅವರು ಆ ಕ್ಷಣ ಆಯ್ಕೆಯಾಗಿ ಪ್ರಯಾಣಿಕರ ಮುಂದಿಡುತ್ತಾರೆ.

ಕೇಂದ್ರಕ್ಕೆ ಮನವಿ ಪತ್ರ: ಕನ್ನಡ ಕುರಿತ ವಿಮಾನಯಾನ ಸಂಸ್ಥೆಗಳ ಈ ನಿರ್ಲಕ್ಷದ ಬಗ್ಗೆ ಕರ್ನಾಟಕ ನವ ನಿರ್ಮಾಣ ಸೇನೆ ಹಾಗೂ ಕನ್ನಡ ಗ್ರಾಹಕರ ಕೂಟವು ಕೇಂದ್ರ ವಿಮಾನಯಾನ ಸಚಿವರಿಗೆ ಪತ್ರವನ್ನೂ ಬರೆದಿದೆ. ದೇಶೀಯವಾಗಿ ಸೇವೆ ನೀಡುವ ವಿಮಾನಗಳಲ್ಲಿ, ಪ್ರಾದೇಶಿಕ ಭಾಷೆ ಬಳಕೆ ಕಡ್ಡಾಯಗೊಳಿಸುವಂತೆ ಒತ್ತಾಯಿಸಿವೆ. ಅಲ್ಲದೆ, ರಾಜ್ಯದ ಸಂಸದರ ಗಮನಕ್ಕೂ ಈ
ವಿಚಾರವನ್ನು ತಂದಿದ್ದಾರೆ.

ವಿದೇಶಿ ವಿಮಾನಗಳಲ್ಲಿ ಕಂಡ ಕನ್ನಡ ಇಲ್ಲಿಲ್ಲ!
ಸಿಂಗಾಪುರದ ಕ್ಯಾಪೆ ಪೆಸಿಫಿಕ್‌, ಬ್ರಿಟೀಷ್‌ ಏರ್‌ವೆಸ್‌, ಫ್ರಾನ್ಸ್‌ನ ಲುಫ್ತಾನ್ಸಾ ವಿಮಾನಯಾನ ಸಂಸ್ಥೆಗಳೂ ಕನ್ನಡದಲ್ಲಿಯೇ ಮೆನು ನೀಡುತ್ತಿವೆ. ಆದರೆ, ಕರುನಾಡಿನ ಆಗಸದಲ್ಲೇ ಕನ್ನಡ ಕಾಣಿಸುತ್ತಿಲ್ಲ 

ಆನ್‌ಲೈನ್‌ ಅಭಿಯಾನ
ವಿಮಾನ ಯಾನ ಸಂಸ್ಥೆಗಳ ಕನ್ನಡ ನಿರ್ಲಕ್ಷ್ಯ ವಿರುದ್ಧ ಕನ್ನಡ ಗ್ರಾಹಕರ ಕೂಟದ ಸದಸ್ಯರು, “ಸರ್ವ್‌ ಇನ್‌ ಮೈ ಲಾಂಗ್ವೇಜ್‌’ ಹೆಸರಿನಲ್ಲಿ ಆನ್‌ಲೈನ್‌ ಅಭಿಯಾನ ಆರಂಭಿಸಿದ್ದಾರೆ. ಇದರೊಂದಿಗೆ ಕರ್ನಾಟಕ ನವ ನಿರ್ಮಾಣ ಸೇನೆ ಹಾಗೂ ಬನವಾಸಿ ಬಳಗವೂ ಈ ಬಗ್ಗೆ ಟ್ವಿಟರ್‌ ಅಭಿಯಾನ ಆರಂಭಿಸಲು ನಿರ್ಧರಿಸಿದೆ.

ಈಗಿನ ತಂತ್ರಜ್ಞಾನ ಯಾವುದೇ ಭಾಷೆಯಲ್ಲಿ ಮಾತನಾಡಿದರೂ ಅವರ ಮಾತೃ ಭಾಷೆಯಲ್ಲಿಯೇ ಕೇಳಿಸುವ ತಂತ್ರಜ್ಞಾನ ಇದೆ.
ವಿಮಾನಯಾನ ಸಂಸ್ಥೆಗಳು ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಬದಲಾಗಬೇಕು. 

ಅರುಣ್‌ ಜಾವಗಲ್‌, ಕನ್ನಡ ಗ್ರಾಹಕರ ಕೂಟ

ಶಂಕರ್ ಪಾಗೋಜಿ

ಟಾಪ್ ನ್ಯೂಸ್

Kunigal ಹಾಸ್ಟೆಲ್‌ಗಳಿಗೆ ದಿಢೀರ್​ ಭೇಟಿ ಕೊಟ್ಟ ತಹಶೀಲ್ದಾರ್

Kunigal ಹಾಸ್ಟೆಲ್‌ಗಳಿಗೆ ದಿಢೀರ್​ ಭೇಟಿ ಕೊಟ್ಟ ತಹಶೀಲ್ದಾರ್

Siruguppa ಜೆಸ್ಕಾಂ ಸಿಬ್ಬಂದಿ ಎಡವಟ್ಟು; ಗ್ರಾಮಸ್ಥರಿಂದ ತರಾಟೆ

Siruguppa ಜೆಸ್ಕಾಂ ಸಿಬ್ಬಂದಿ ಎಡವಟ್ಟು; ಗ್ರಾಮಸ್ಥರಿಂದ ತರಾಟೆ

ವೇಗದೂತ ಬಸ್‌ಗಳನ್ನು ನಿಲುಗಡೆ ಮಾಡುವಂತೆ ಒತ್ತಾಯಿಸಿ ರಸ್ತೆ ತಡೆ ನಡೆಸಿದ ವಿದ್ಯಾರ್ಥಿಗಳು

ವೇಗದೂತ ಬಸ್‌ಗಳನ್ನು ನಿಲುಗಡೆ ಮಾಡುವಂತೆ ಒತ್ತಾಯಿಸಿ ರಸ್ತೆ ತಡೆ ನಡೆಸಿದ ವಿದ್ಯಾರ್ಥಿಗಳು

1-BP

BJP vs BJP; ವಿಜಯೇಂದ್ರ ವಿರುದ್ಧ ಕಿಡಿ ಕಾರಿದ ಹರಿಹರ ಶಾಸಕ ಬಿ.ಪಿ.ಹರೀಶ್

Mamatha

West Bengal: ಬಾಂಗ್ಲಾ ಜೊತೆ ನೀರು ಹಂಚಿಕೆ ಮಾತುಕತೆಗೆ ಸಿಎಂ ಮಮತಾ ಆಕ್ಷೇಪ

Rabkavi-Banhatti; ಉದ್ಘಾಟನೆಗೆ ಕಾಯುತ್ತಿರುವ ಬಸ್ ನಿಲ್ದಾಣ: ಪ್ರಯಾಣಿಕರ ಪರದಾಟ

Rabkavi-Banhatti; ಉದ್ಘಾಟನೆಗೆ ಕಾಯುತ್ತಿರುವ ಬಸ್ ನಿಲ್ದಾಣ: ಪ್ರಯಾಣಿಕರ ಪರದಾಟ

1-dd

Tulu Nadu ದೈವ ದೇವರ ಹೆಸರಿನಲ್ಲಿ ಬ್ರಿಜೇಶ್ ಚೌಟ ಪ್ರಮಾಣ ವಚನ ಸ್ವೀಕಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-BP

BJP vs BJP; ವಿಜಯೇಂದ್ರ ವಿರುದ್ಧ ಕಿಡಿ ಕಾರಿದ ಹರಿಹರ ಶಾಸಕ ಬಿ.ಪಿ.ಹರೀಶ್

1-sadsadsad

Revanna; ಪ್ರಜ್ವಲ್ ಗೆ 14 ದಿನ ನ್ಯಾಯಾಂಗ ಬಂಧನ: ಸೂರಜ್ ಜುಲೈ 1ರವರೆಗೆ ಸಿಐಡಿ ವಶಕ್ಕೆ

1-woqf

Waqf ಒತ್ತುವರಿ ಆಸ್ತಿ ಸಮುದಾಯದ ಏಳ್ಗೆಗೆ ಬಳಕೆ: ಸಚಿವ ಜಮೀರ್

yatnal

BJP ಹೈಕಮಾಂಡ್ ಗೆ ದೊಡ್ಡವರ ಪಕ್ಷ ವಿರೋಧಿ ಚಟುವಟಿಕೆ ಮಾಹಿತಿ: ಯತ್ನಾಳ್

tankar

ಆನಂದಪುರ – ಶಿಕಾರಿಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ: ಓರ್ವ ಸ್ಥಳದಲ್ಲೇ ಮೃತ್ಯು

MUST WATCH

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

udayavani youtube

“ನನ್ನಿಂದ ತಪ್ಪಾಗಿದೆ ಸರ್‌ ಆದರೆ..” | ಸಪ್ತಮಿ ಅವರದ್ದು ಎನ್ನಲಾದ Audio

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

ಹೊಸ ಸೇರ್ಪಡೆ

Kunigal ಹಾಸ್ಟೆಲ್‌ಗಳಿಗೆ ದಿಢೀರ್​ ಭೇಟಿ ಕೊಟ್ಟ ತಹಶೀಲ್ದಾರ್

Kunigal ಹಾಸ್ಟೆಲ್‌ಗಳಿಗೆ ದಿಢೀರ್​ ಭೇಟಿ ಕೊಟ್ಟ ತಹಶೀಲ್ದಾರ್

1–ncxcx.

Bantwal; ಧಾರ್ಮಿಕ ಕೇಂದ್ರಗಳು, ಶಿಶುಮಂದಿರದಿಂದ ಸಾವಿರಾರು ರೂ. ಕಳವು

Siruguppa ಜೆಸ್ಕಾಂ ಸಿಬ್ಬಂದಿ ಎಡವಟ್ಟು; ಗ್ರಾಮಸ್ಥರಿಂದ ತರಾಟೆ

Siruguppa ಜೆಸ್ಕಾಂ ಸಿಬ್ಬಂದಿ ಎಡವಟ್ಟು; ಗ್ರಾಮಸ್ಥರಿಂದ ತರಾಟೆ

ವೇಗದೂತ ಬಸ್‌ಗಳನ್ನು ನಿಲುಗಡೆ ಮಾಡುವಂತೆ ಒತ್ತಾಯಿಸಿ ರಸ್ತೆ ತಡೆ ನಡೆಸಿದ ವಿದ್ಯಾರ್ಥಿಗಳು

ವೇಗದೂತ ಬಸ್‌ಗಳನ್ನು ನಿಲುಗಡೆ ಮಾಡುವಂತೆ ಒತ್ತಾಯಿಸಿ ರಸ್ತೆ ತಡೆ ನಡೆಸಿದ ವಿದ್ಯಾರ್ಥಿಗಳು

1-BP

BJP vs BJP; ವಿಜಯೇಂದ್ರ ವಿರುದ್ಧ ಕಿಡಿ ಕಾರಿದ ಹರಿಹರ ಶಾಸಕ ಬಿ.ಪಿ.ಹರೀಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.