Udayavni Special

ಸರ್ಕಾರಿ ಅಧಿಕಾರಿಗಳ ಬಳಿ ಕೆ.ಜಿ.ಗಟ್ಟಲೆ ಚಿನ್ನ


Team Udayavani, Mar 21, 2019, 6:58 AM IST

blore-1.jpg

ಬೆಂಗಳೂರು: ಬಿಬಿಎಂಪಿ ಸಹಾಯಕ ಅಧಿಕಾರಿ ಸೇರಿ ನಾಲ್ವರು ಸರ್ಕಾರಿ ಅಧಿಕಾರಿಗಳ ಕಚೇರಿ ಹಾಗೂ ನಿವಾಸಗಳು ಹಾಗೂ ರಾಜ್ಯದ 10 ಸ್ಥಳಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನಡೆಸಿದದಾಳಿ ವೇಳೆ ಕೆ.ಜಿಗಟ್ಟಲೆ ಚಿನ್ನ, ಲಕ್ಷಾಂತರ ರೂ. ನಗದು ಮತ್ತು ಕೋಟ್ಯಂತರ ರೂ. ಮೌಲ್ಯದ ಜಮೀನುಗಳ ದಾಖಲೆಗಳು ಪತ್ತೆಯಾಗಿವೆ.

ನಾಲ್ವರು ಆರೋಪಿತ ಅಧಿಕಾರಿಗಳ ನಿವಾಸಗಳಲ್ಲಿ ದೊರೆತ ಚಿನ್ನ, ಬೆಳ್ಳಿ ಆಭರಣಗಳು, ಜಮೀನು ದಾಖಲೆಗಳು ಸೇರಿದಂತೆ ಇನ್ನಿತರೆ ದಾಖಲೆಗಳನ್ನು ಜಪ್ತಿ ಪಡಿಸಿಕೊಂಡ ಎಸಿಬಿ ತನಿಖೆ ಮುಂದುವರಿಸಿದೆ. ದಾಳಿ ವೇಳೆ ಸಹಕಾರ ಇಲಾಖೆಯ ಸಹಕಾರ ಸಂಘಗಳ ಅಪರ ನಿಬಂಧಕ ಬಿ.ಸಿ.ಸತೀಶ್‌ ಅವರ ಬಸವೇಶ್ವರ ನಗರದ ನಿವಾಸದಲ್ಲಿ ಒಂದು ಕೆ.ಜಿ 900 ಗ್ರಾಂ. ಚಿನ್ನಾಭರಣ, ಜತೆಗೆ ಬ್ಯಾಂಕ್‌ ಆಫ್ ಇಂಡಿಯಾದ ಲಾಕರ್‌ನಲ್ಲಿ 1.3 ಕೆ.ಜಿ ಚಿನ್ನಾಭರಣ ಪತ್ತೆಯಾಗಿದೆ. ಜಪ್ತಿ ಮಾಡಿಕೊಂಡ ಚಿನ್ನಾಭರಣಗಳ ಅಂದಾಜು ಮೌಲ್ಯ 70 ಲಕ್ಷ ರೂ.ಗಿಂತಲೂ ಅಧಿಕವಾಗಿವೆ.

ವಿಜಯಪುರದ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಉಪನಿರ್ದೇಶಕ ಶರದ್‌ ಗಂಗಪ್ಪ ಇಜ್ರಿ ನಿವಾಸದಲ್ಲಿ 42.66 ಲಕ್ಷ ರೂ. ನಗದು ಪತ್ತೆಯಾಗಿದೆ. ಈ ಕುರಿತು ಶೋಧ ಕಾರ್ಯ ಹಾಗೂ ತನಿಖೆ ಮುಂದುವರಿದಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಯಾರ್ಯಾರ ಮನೆಯಲ್ಲಿ ಎಷ್ಟೆಷ್ಟು?: ಮಂಜುನಾಥ್‌ ಎಸ್‌.ಬಿ (ಸಹಾಯಕ ಕಂದಾಯ ಅಧಿಕಾರಿ, ಬಿಬಿಎಂಪಿ)- ಬೆಂಗಳೂರಿನಲ್ಲಿ ಒಂದು ಮನೆ, ನಾಲ್ಕು ಸೈಟ್‌, ಚನ್ನರಾಯಪಟ್ಟಣದಲ್ಲಿ ಒಂದು ಮನೆ, ವಾಣಿಜ್ಯ ಸಂಕೀರ್ಣ, ಹಾಸನದಲ್ಲಿ 13 ಗುಂಟೆ ಜಮೀನು, 453 ಗ್ರಾಂ. ಚಿನ್ನ, ಒಂದು ಕೆ.ಜಿ 230 ಗ್ರಾಂ. ಬೆಳ್ಳಿ, ಒಂದು ಕಾರು, ಒಂದು ಬೈಕ್‌, 4.26 ಲಕ್ಷ ನಗದು, 19 ಲಕ್ಷ ರೂ. ಗೃಹಪಯೋಗಿ ವಸ್ತುಗಳು. ಬಿ.ಸಿ ಸತೀಶ್‌  (ಸಹಕಾರ ಇಲಾಖೆಯ ಸಹಕಾರ ಸಂಘಗಳ ಅಪರ ನಿಬಂಧಕ)- ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಐಶಾರಾಮಿ ಮನೆ, 2 ಸೈಟ್‌, ಒಂದು ಕೆ.ಜಿ 900 ಗ್ರಾಂ ಚಿನ್ನ, ಒಂದು ಕಾರು, ಒಂದು ಬೈಕ್‌, ಉಳಿತಾಯ ಖಾತೆಯಲ್ಲಿ 3.84 ಲಕ್ಷ ರೂ. 34 ಲಕ್ಷ ರೂ. ಮೌಲ್ಯದ ಗೃಹಪಯೋಗಿ ವಸ್ತುಗಳು, ಲಾಕರ್‌ನಲ್ಲಿ ಸುಮಾರು 38 ಲಕ್ಷ ರೂ. ಮೌಲ್ಯದ ಚಿನ್ನಾಭರಣ.

 ಶರದ್‌ ಗಂಗಪ್ಪ ಇಜ್ರಿ ( ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ವಿಜಯಪುರ ಉಪನಿರ್ದೇಶಕ) ವಿಜಯಪುರದಲ್ಲಿ 2 ಮನೆ ಒಂದು ಫ್ಲಾಟ್‌, 32 ಎಕರೆ 24 ಗುಂಟೆ ಜಮೀನು, 675 ಗ್ರಾಂ. ಚಿನ್ನಾಭರಣ, 12.5 ಕೆ.ಜಿ ಬೆಳ್ಳಿ ಆಭರಣ, 3 ಕಾರು, ಮೂರು ಬೈಕ್‌. 42 ಲಕ್ಷ ರೂ. ನಗದು, ಬ್ಯಾಂಕ್‌ ಖಾತೆಯಲ್ಲಿ 3.97 ಲಕ್ಷ ರೂ. 2.6 ಲಕ್ಷ ರೂ. ಠೇವಣಿ, ಒಂದು ಲಾಕರ್‌, 6.37 ಲಕ್ಷ ಮೌಲ್ಯದ ವಿಮೆ.

ಪ್ರಕಾಶ್‌ಗೌಡ ಕುದರಿಮೋಟಿ (ಮುಂಡರಗಿ ಕೃಷಿ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ)- ಮುಂಡರಗಿಯಲ್ಲಿ ಎರಡು ಮನೆ, ಎರಡು ಸೈಟ್‌, ಕುಕ್ಕನೂರಿನಲ್ಲಿ ಐದು ಎಕರೆ ಹರಲಾಪುರದಲ್ಲಿ 4.29 ಎಕರೆ ಜಮೀನು, ಹಳ್ಳಿಗುಡ್ಡಿ ಗ್ರಾಮದಲ್ಲಿ 7.31 ಎಕರೆ
ಜಮೀನು, 570 ಗ್ರಾಂ. ಚಿನ್ನ, 2 ಕೆ.ಜಿ 290 ಗ್ರಾಂ. ಬೆಳ್ಳಿ, 1 ಕಾರು, 2 ಬೈಕ್‌.  

ಟಾಪ್ ನ್ಯೂಸ್

‘ಹೇಳುವುದು ಆಚಾರ, ಮಾಡುವುದು ಅನಾಚಾರ’: ಬಿಜೆಪಿ ವಿರುದ್ಧ ಕಿಡಿಕಾರಿದ ಜೆಡಿಎಸ್

‘ಹೇಳುವುದು ಆಚಾರ, ಮಾಡುವುದು ಅನಾಚಾರ’: ಬಿಜೆಪಿ ವಿರುದ್ಧ ಕಿಡಿಕಾರಿದ ಜೆಡಿಎಸ್

ಮಂಗಳೂರಿನ ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ: ಸಂತ್ರಸ್ತೆ-ವಕೀಲರ ಆಡಿಯೋ ವೈರಲ್

ಮಂಗಳೂರಿನ ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ: ಸಂತ್ರಸ್ತೆ-ವಕೀಲರ ಆಡಿಯೋ ವೈರಲ್

d-k-shi

ಮೋದಿ ಹೆಬ್ಬೆಟ್ಟ್ ಗಿರಾಕಿ ಎಂದ ಕಾಂಗ್ರೆಸ್ ಟ್ವೀಟ್ ಗೆ ಡಿಕೆ ಶಿವಕುಮಾರ್ ವಿಷಾದ

ಲಖೀಂಪುರ ಖೇರಿ ಘಟನೆ: ಬಿಜೆಪಿ ನಾಯಕ ಸೇರಿ ನಾಲ್ಕು ಮಂದಿಯ ಬಂಧನ

ಲಖೀಂಪುರ ಖೇರಿ ಘಟನೆ: ಬಿಜೆಪಿ ನಾಯಕ ಸೇರಿ ನಾಲ್ಕು ಮಂದಿಯ ಬಂಧನ

gjhgfds

ಓಟಿಟಿಯಲ್ಲಿ ‘ಸಲಗ’ ದರ್ಶನವಿಲ್ಲ

rwytju11111111111

ಮಂಗಳವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಏರಿಕೆಯ ಮೆಟ್ಟಿಲು ಹತ್ತಿದ ಕಾಟನ್‌

ಏರಿಕೆಯ ಮೆಟ್ಟಿಲು ಹತ್ತಿದ ಕಾಟನ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಜಿ ಶಾಸಕ ಎಂ‌.ಪಿ. ಕರ್ಕಿ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ

ಮಾಜಿ ಶಾಸಕ ಎಂ‌.ಪಿ. ಕರ್ಕಿ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ

ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್-2021 ಪೂರ್ವಭಾವಿ ಸಿದ್ಧತೆ ಪರಿಶೀಲಿಸಿದ ಸಚಿವ ನಾರಾಯಣಗೌಡ

ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್-2021 ಪೂರ್ವಭಾವಿ ಸಿದ್ಧತೆ ಪರಿಶೀಲಿಸಿದ ಸಚಿವ ನಾರಾಯಣಗೌಡ

11

ಬೆಂಗಳೂರಿನಲ್ಲಿ ರೋಬೋಟಿಕ್‌ ಹೈಟೆಕ್‌ ಆಸ್ಪತ್ರೆ

ಪತ್ನಿ ಕೊಲೆಗೈದು, ಆತ್ಮಹತ್ಯೆಗೆ ಶರಣಾದ ಪತಿ

ಪತ್ನಿ ಕೊಲೆಗೈದು, ಆತ್ಮಹತ್ಯೆಗೆ ಶರಣಾದ ಪತಿ

An incident at Poorneshwara Nagar police station

ಕೊಲೆಗೈದು ಶವ ಸಮೇತ ಠಾಣೆಗೆ ಬಂದ್ರು

MUST WATCH

udayavani youtube

ತೆರೆದ ಹೊಂಡದಲ್ಲಿ ಬಿದ್ದು ಸಾಯುತ್ತಿವೆ ಪ್ರಾಣಿಗಳು : ಕಣ್ಣು ಮುಚ್ಚಿ ಕುಳಿತ ನಗರ ಸಭೆ

udayavani youtube

ದುರಸ್ತಿಗೊಂಡು ಎರಡೇ ದಿನಕ್ಕೆ ಹಳೆ ಚಾಳಿಯನ್ನು ಮುಂದುವರಿಸಿದ ವಾಚ್ ಟವರ್

udayavani youtube

ಕೊನೆಗೂ ರಾಜ್ಯದಲ್ಲಿ 1 ರಿಂದ 5ನೇ ತರಗತಿ ಶಾಲೆ ಆರಂಭಕ್ಕೆ ಸರಕಾರದ ಗ್ರೀನ್ ಸಿಗ್ನಲ್

udayavani youtube

ಮಹಿಳೆಯರಿಗೆ ಉದ್ಯೋಗ ಕಲ್ಪಿಸಿದ ಯಶಸ್ವೀ ಮಹಿಳಾ ಉದ್ಯಮಿ

udayavani youtube

ಹಳೆ ದ್ವೇಷ : ICU ವಾರ್ಡ್ ನಲ್ಲೆ ನಡೆಯಿತು ಎರಡು ತಂಡಗಳ ಮಾರಾಮಾರಿ

ಹೊಸ ಸೇರ್ಪಡೆ

7

ಕಬ್ಬಿನ ಬಾಕಿ ಪಾವತಿಗೆ ಒತ್ತಾಯಿಸಿ ಪ್ರತಿಭಟನೆ

6

9 ಟನ್‌ ಜಾನುವಾರು ಚರ್ಮ ಜಪ್ತಿ

5

ಕುಮಾರಸ್ವಾಮಿ ಟೀಕಿಸಲು ಅನ್ಸಾರಿ-ಜಮೀರ್‌ಗಿಲ್ಲ ನೈತಿಕತೆ

4

ಮೆರವಣಿಗೆಗೆ ತಡೆ; ಮುಸ್ಲಿಮರ ಆಕ್ರೋಶ

‘ಹೇಳುವುದು ಆಚಾರ, ಮಾಡುವುದು ಅನಾಚಾರ’: ಬಿಜೆಪಿ ವಿರುದ್ಧ ಕಿಡಿಕಾರಿದ ಜೆಡಿಎಸ್

‘ಹೇಳುವುದು ಆಚಾರ, ಮಾಡುವುದು ಅನಾಚಾರ’: ಬಿಜೆಪಿ ವಿರುದ್ಧ ಕಿಡಿಕಾರಿದ ಜೆಡಿಎಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.