ನಗರಾದ್ಯಂತ ಕೃಷ್ಣಲೀಲಾ ವಿನೋದಗಳ ವಿಜೃಂಭಣೆ


Team Udayavani, Aug 15, 2017, 11:15 AM IST

UV–Krishna-Janma-(2).jpg

ಬೆಂಗಳೂರು: “ವಸುದೇವ ಸುತಂ ದೇವಂ ಕಂಸಚಾಣೂರ ಮರ್ದನಂ, ದೇವಕಿ ಪರಮಾನಂದಂ ಕೃಷ್ಣವಂದೇ ಜಗದ್ಗುರು’ ಎಂಬಂತೆ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಸೋಮವಾರ ನಗರದಾದ್ಯಂತ ಶ್ರೀ ಕೃಷ್ಣ ಲೀಲಾ ವಿನೋಧಗಳ ಕೊಂಡಾಟ ವಿಜೃಂಭಣೆಯಿಂದ ನಡೆಯಿತು.

ಶ್ರೀ ಕೃಷ್ಣ ದೇವಾಲಯ ಸೇರಿದಂತೆ ವಿವಿಧ ಮಠ ಮಂದಿರ ಹಾಗೂ ಸಂಘ ಸಂಸ್ಥೆಗಳಿಂದ ಜನ್ಮಾಷ್ಟಮಿಯ ಕೃಷ್ಣ ದೇವರ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಹೋಮ, ಪೂಜೆ, ಅಭಿಷೇಕ, ಪ್ರಸಾದ ವಿತರಣೆ ಹೀಗೆ ವಿವಿಧ ಸೇವೆಯ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮವೂ ಜನಮನಸೂರೆಗೊಂಡಿದೆ. ಮಕ್ಕಳ ಶ್ರೀಕೃಷ್ಣ, ರಾಧೆಯ ವೇಷ ತೊಟ್ಟು ಸಂಭ್ರಮಿಸಿದರು. ಬಹುತೇಕ ಮನೆಗಳಲ್ಲೂ ಕೃಷ್ಣಜನ್ಮಾಷ್ಟಮಿಯ ವಿಶೇಷ ಪೂಜೆ ನಡೆದಿದೆ.

ಇಂದಿರಾನಗರದ ಶ್ರೀಕೃಷ್ಣ ದೇವಾಲಯ, ವಸಂತಪುರ ಮತ್ತು ರಾಜಾಜಿನಗರದ ಇಸ್ಕಾನ್‌, ಬಸವನಗುಡಿಯ ಪುತ್ತಿಗೆ ಮಠದ ಗೋವರ್ಧನಗಿರಿ, ವಿದ್ಯಾಪೀಠದ ಪೂರ್ಣಪ್ರಜ್ಞಾ ವೀದ್ಯಾಪೀಠ, ಶ್ರೀನಿವಾಸನಗರದ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಸೇರಿದಂತೆ ನಗರದ ಕೃಷ್ಣದೇವಾಲಯಗಳಲ್ಲಿ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಪೂಜೆ ನಡೆದಿದ್ದು, ಭಕ್ತರು ದೇವರ ದರ್ಶನಕ್ಕಾಗಿ  ಸರದಿಸಾಲಿನಲ್ಲಿ ಗಂಟೆಗಟ್ಟಲೇ ಸಾಗಿದರು.

ಇಸ್ಕಾನ್‌ನಲ್ಲಿ ವಿಶೇಷ ಪೂಜೆ: ವೆಸ್ಟ್‌ಆಫ್ ಕಾರ್ಡ್‌ ರಸ್ತೆಯ ಇಸ್ಕಾನ್‌ನಲ್ಲಿ ಬೆಳಗ್ಗೆ 4 ಗಂಟೆಗೆ ಶ್ರೀ ಕೃಷ್ಣ ಬಲರಾಮರಿಗೆ ಮಹಾಮಂಗಳಾರತಿ ಮಾಡುವ ಮೂಲಕ ಪೂಜೆ ಆರಂಭವಾಯಿತು. ಭಕ್ತಾಧಿಗಳ ಅನುಕೂಲಕ್ಕಾಗಿ ಮತ್ತು ಎಲ್ಲರಿಗೂ ದರ್ಶನ ಹಾಗೂ ಅಭಿಷೇಕ ನೋಡುವ ಭಾಗ್ಯ ದೊರೆಯಲಿ ಎಂಬ ಕಾರಣದಿಂದ ದೇವಾಲಯದ ದ್ವಾರಕಾಪುರಿಯಲ್ಲಿ ಬೆಳಗ್ಗೆ ಮತ್ತು ಸಂಜೆ ಎರಡೆರಡು ಬಾರಿ ಅಭಿಷೇಕ ಮಾಡಲಾಯಿತು.

ಮುಖ್ಯಗುಡಿಯಲ್ಲಿ ರಾಧಾ ಕೃಷ್ಣ ವಿಗ್ರಹಕ್ಕೆ ಜಲಾಭಿಷೇಕ, ಫಲಾಭಿಷೇಕ, ಜೇನುತುಪ್ಪದ ಅಭಿಷೇಕ, ಕ್ಷೀರಾಭಿಷೇಕ, ಪುಷ್ಪಗಳ ಅಭಿಷೇಕ ಮಾಡಲಾಯಿತು. ಮಧ್ಯಾಹ್ನ ಹೊಸ ಉಡುಪು ಮತ್ತು ಆಭರಣಗಳಿಂದ ಕಂಗೊಳಿಸುತ್ತಿದ್ದ ರಾಧಾ ಕೃಷ್ಣರಿಗೆ ನಡೆದ ಶೃಂಗಾರ ಆರತಿಯನ್ನು ಭಕ್ತರು ಕಣ್ತುಂಬಿಕೊಂಡರು. ಮಧ್ಯರಾತ್ರಿ ರಾಜಭೋಗ ಆರತಿಯೊಂದಿಗೆ ದಿನದ ಕಾರ್ಯಕ್ರಮ ಸಂಪನ್ನಗಹೊಂಡಿತು.

ಸಹಸ್ರಾರು ಸಂಖ್ಯೆಯಲ್ಲಿ ಬಂದಿರುವ ಭಕ್ತರಿಗೆ ಲಾಡು ಮತ್ತು ಸಿಹಿ ಪೊಂಗಲ್‌ ಪ್ರಸಾದ ವಿತರಣೆ ಮಾಡಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೃಷ್ಣ ವೇಷಧಾರಿ ಮಕ್ಕಳನ್ನು ಎತ್ತಿ ಕೊಂಡಾಡುವ ಮೂಲಕ ವಿಶೇಷವಾಗಿ ಆಚರಿಸಲದರು. 

ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದಿಂದ ಮುಂಜಾನೆ ಸಮವಸ್ತ್ರಧಾರಿ ಒಂದುವರೆ ಸಾವಿರ ವೈದಿಕರಿಂದ ಕೃಷ್ಣನ ಕುರಿತ ಸಹಸ್ರನಾಮಾವಳಿ ಮತ್ತು ವಿಷ್ಣು ಸಹಸ್ರನಾಮ ಪಾರಾಯಣ, ಪಲಿಮಾರು ಮಠಾಧೀಶರು, ವ್ಯಾಸರಾಜ ಮಠಾಧೀಶರು ಮತ್ತು ಸುವಿದ್ಯೆಂದ್ರತೀರ್ಥ ಶ್ರೀಗಳು ತುಳಸಿ ಅರ್ಚನೆ ಮಾಡಿ ಅನುಗ್ರಹ ಸಂದೇಶ ನೀಡಿದರು. ಬಸವನಗುಡಿಯ ಪುತ್ತಿಗೆ ಮಠದ ಗೋವರ್ಧನಗಿರಿಯಲ್ಲಿ ಶ್ರೀಕೃಷ್ಣನಿಗೆ ವಿಶೇಷವಾಗಿ ಹೋವಿನ ಅಲಂಕಾರ ಮಾಡಲಾಗಿತ್ತು. 

ಅಭಯಚಾತುರ್ಮಾಸ್ಯ: ಗಿರಿನಗರದ ಶ್ರೀ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಅಭಯಚಾತುರ್ಮಾಸ್ಯದಲ್ಲಿ ಶ್ರೀಕೃಷ್ಣಾಷ್ಟಮಿ ವಿಶೇಷ ಕಾರ್ಯಕ್ರಮದೊಂದಿಗೆ ನೆರವೇರಿದೆ. ರಾಧೆ ಕೃಷ್ಣರ ವೇಷ ತೊಟ್ಟ ಪುಟ್ಟ ಮಕ್ಕಳು ಹಾಗೂ ಸಾಂಪ್ರದಾಯಿಕ ಶೈಲಿಯಲ್ಲಿ ಮೊಸರು ಕಡೆದು ಮಕ್ಕಳಿಗೆ ಬೆಣ್ಣೆ ತಿನ್ನಿಸುವ ಮೂಲಕ ತಾಯಂದಿರು ಎಲ್ಲರ ಗಮನ ಸೆಳೆದರು.  

ಮೊಸರು ಕುಡಿಕೆ, ಬಾಳೆಗೊನೆಯಿಂದ ಬಾಳೆಹಣ್ಣು ತೆಗೆಯುವ ಆಟ, ಹಗ್ಗ ಜಗ್ಗಾಟ, ಜೋಕಾಲಿ, ಎಣ್ಣೆಸಂತೆ ಇತ್ಯಾದಿ ಆಟವನ್ನು ಆಯೋಜಿಸಲಾಗಿತ್ತು. ರಾಮ-ಕೃಷ್ಣ ಹಾಡಿನ ಅಂತ್ಯಾಕ್ಷರೀ, ಕೃಷ್ಣ-ರಾಧೆ ಏಕಪಾತ್ರಾಭಿಷಯ, ರಸಪ್ರಶ್ನೆ ಹಾಗೂ ಭಜನೆ, ಮಂಟಪ ಪ್ರಭಾಕರ ಉಪಾಧ್ಯಾಯ ಅವರಿಂದ ಏಕವ್ಯಕ್ತಿ ಯಕ್ಷಗಾನ. ರಾತ್ರಿ ಕೃಷ್ಣಜನನ ಕಾರ್ಯಕ್ರಮದೊಂದಿಗೆ ಕೃಷ್ಣಾಷ್ಟಮಿಯ ಮೊದಲ ದಿನದ ಕಾರ್ಯಕ್ರಮ ಅಂತ್ಯಗೊಂಡಿದೆ.

ಟಾಪ್ ನ್ಯೂಸ್

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Jagan mohan

YSR Congress ಪ್ರಣಾಳಿಕೆ: ಪಿಂಚಣಿ ಮೊತ್ತ ಏರಿಕೆ, ವೈಜಾಗ್‌ ಕಾರ್ಯಕಾರಿ ರಾಜಧಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

1-wwqw

CRPF DIG ಯಿಂದ ಲೈಂಗಿಕ ಕಿರುಕುಳ: ಖಜಾನ ವಜಾ ಸಾಧ್ಯತೆ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.