Missing case: ಪತಿ, ಪತ್ನಿ ಹುಡುಕಿಕೊಡಲು ಪ್ರತ್ಯೇಕ ದೂರು!
Team Udayavani, Jan 21, 2024, 12:06 PM IST
ಬೆಂಗಳೂರು: ವಿವಾಹಿತ ವ್ಯಕ್ತಿಯೊಬ್ಬ ವಿವಾಹಿತ ಮಹಿಳೆ ಜತೆ ಮನೆ ಬಿಟ್ಟು ಪರಾರಿಯಾಗಿರುವ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ.
ಇಲಿಯಾಜ್ ನಗರದ ವಾಸೀಂ ಮತ್ತು ಕುಮಾರಸ್ವಾಮಿ ಲೇಔಟ್ ದಿಲ್ಷಾದ್ ಪರಾರಿಯಾದವರು. ವಾಸೀಂ ಪತ್ನಿ ಸುಮೆಯಾ ಬಾನು ಎಂಬವರು ತನ್ನ ಪತಿಯನ್ನು ಹುಡುಕಿಕೊಡುವಂತೆ ದೂರು ನೀಡಿದರೆ, ನಯೀಮ್ ತನ್ನ ಪತ್ನಿ ದಿಲ್ಷಾದ್ಳನ್ನು ಹುಡುಕಿಕೊಡುವಂತೆ ದೂರು ನೀಡಿದ್ದಾರೆ. ಎರಡೂ ದೂರು ಸ್ವೀಕರಿಸಿರುವ ಪೊಲೀಸರು, ವಾಸೀಂ ಮತ್ತು ದಿಲಾÒದ್ ಪತ್ತೆಗೆ ಕಾರ್ಯ ಆರಂಭಿಸಿದ್ದಾರೆ.
ವಾಸೀಂ ಮತ್ತು ಸುಮೆಯಾ ಬಾನು ಏಳು ವರ್ಷದ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಒಂದು ಮಗುವಿದೆ. ನಯೀಮ್ ಮತ್ತು ದಿಲ್ಷಾದ್ 18 ವರ್ಷದ ಹಿಂದೆ ವಿವಾಹವಾಗಿದ್ದು, ದಂಪತಿಗೆ ಮೂರು ಮಕ್ಕಳಿವೆ. ಇತ್ತೀಚೆಗೆ ವಾಸೀಂ ಮತ್ತು ದಿಲಾÒದ್ ನಡುವೆ ಅನೈತಿಕ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿದೆ. ಕಳೆದ ಡಿಸೆಂಬರ್ನಲ್ಲಿ ಈ ಇಬ್ಬರು ಜೆ.ಪಿ.ನಗರದ ಲಾಡ್ಜ್ ವೊಂದರಲ್ಲಿ ಏಕಾಂತದಲ್ಲಿ ಇರುವಾಗ ಸುಮಾಯಾ ಬಾನು ಕುಟುಂಬದವರಿಗೆ ಸಿಕ್ಕಿ ಬಿದ್ದು, ಹೈಡ್ರಾಮವೇ ನಡೆದಿತ್ತು. ಈ ವೇಳೆ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಇಬ್ಬರನ್ನೂ ಕರೆಸಿ ಬುದ್ಧಿವಾದ ಹೇಳಿ ಕಳುಹಿಸಿದ್ದರು.
ಇದೀಗ ಕಳೆದ ಮೂರು ನಾಲ್ಕು ದಿನಗಳಿಂದ ವಾಸೀಂ ಮತ್ತು ದಿಲ್ಷಾದ್ ಮನೆ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಎರಡು ಪ್ರತ್ಯೇಕ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!