ಜನರ ಬ್ಯಾಂಕ್‌ ಖಾತೆಗಳಿಗೆ ಕನ್ನ ಹಾಕುವ ನೈಜೀರಿಯ ಕಳ್ಳರ ಸೆರೆ


Team Udayavani, Feb 12, 2017, 2:59 PM IST

11.jpg

ಬೆಂಗಳೂರು: ಎಟಿಎಂ ಮಷಿನ್‌ಗಳಲ್ಲಿ ಸ್ಕಿಮ್ಮರ್‌ ಅಳವಡಿಸಿ, ಡೆಬಿಟ್‌ ಕಾರ್ಡ್‌ ನಕಲು ಮಾಡಿ ಆನ್‌ಲೈನ್‌ ವ್ಯವಹಾರ ಮಾಡುವ ಮೂಲಕ ಗ್ರಾಹಕರ ಖಾತೆಯಿಂದ ಹಣ ಲಪಾಟಾಯಿಸುತ್ತಿದ್ದ ನೈಜೀರಿಯಾ ಮತ್ತು ಉಗಾಂಡ ದೇಶದ ಏಳು ಮಂದಿಯನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

ನೈಜೀರಿಯಾದ ಎರೆಮ್‌ಹೆನ್‌ ಸ್ಮಾಟ್‌ ì(33), ಉಗಾಂಡಾದ ಮಾರ್ಟಿನ್‌ ಸಾಂಬಾ (25), ನಂಬೋಜ್‌ ಜೊಲಿ(23), ಟೀನಾ (23), ನೈಜೀರಿಯಾದ ಕೆನ್ನಿ (32), ಒಲೊಆಡೆಜಿ ಓಲಾಯೆಮಿ (34) ಹಾಗೂ ವೈಯ್ನಾಲಿಕಾವಲ್‌ ನಿವಾಸಿ ವಿಕ್ರಂರಾವ್‌ ನಿಕ್ಕಂ (40) ಬಂಧಿತರು.

ಬಂಧಿತರು ಬೆಂಗಳೂರಿನ ಥಣಿಸಂದ್ರ, ಭೈರತಿ, ಧಾರವಾಡ ಮತ್ತು ಗೋವಾದಲ್ಲಿ ವಾಸವಿದ್ದರು. ಪ್ರಕರಣದ ಪ್ರಮುಖ ಆರೋಪಿಗಳಾದ ಬ್ಲೆಸ್ಸಿಂಗ್‌, ಕಿಂಗ್ಸ್‌ಮ್ಯಾನ್‌, ಟೈಗರ್‌ ಅಲಿಯಾಸ್‌ ಕಿಗೆನ್‌ ಹಿಲೇರಿ, ಮೈಕ್‌ ಮಿಕ್ಕಿ, ಡೇವಿಡ್‌, ಲೀಸಾ, ನೊವೆಲ್ಲಾ ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಬಂಧಿತರ ಪೈಕಿ ವಿಕ್ರಂರಾವ್‌ ನಿಕ್ಕಂ ಬಿಟ್‌ ಕಾಯಿನ್‌ ದಂಧೆ ನಡೆಸುತ್ತಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಂಧಿತರಿಂದ 21 ಲಕ್ಷ ರೂ.ಜಪ್ತಿ ಮಾಡಲಾಗಿದೆ.

ವಂಚನೆ ಹೇಗೆ?
 ಆರೋಪಿಗಳು ಗ್ರಾಹಕರ ಸೋಗಿನಲ್ಲಿ ಎಟಿಎಂ ಕೇಂದ್ರಕ್ಕೆ ತೆರಳಿ ಮಷಿನ್‌ ಗಳಲ್ಲಿ ಸ್ಕಿಮ್ಮರ್‌ ಮಷಿನ್‌ ಅಳಡಿಸುತ್ತಿದ್ದರು. ಆರೋಪಿಗಳ ಪೈಕಿ ಕೆಲವರು ಎಟಿಎಂ ಕೇಂದ್ರದ ಸಿಬ್ಬಂದಿಯನ್ನು ಮಾತನಾಡಿಸುತ್ತಾ ಬೇರೆಡೆ ಗಮನ ಸೆಳೆಯುತ್ತಿದ್ದರು. ಈ ವೇಳೆ ಮತ್ತೂಬ್ಬ ಆರೋಪಿ ಸ್ಕಿಮ್ಮರ್‌ ಮಷಿನ್‌ ಅಳವಡಿಸಿ, ಮ್ಯಾಗೆ¾ಟಿಕ್‌ ಸ್ಟ್ರಿಪ್‌ ಹಾಗೂ ಸಣ್ಣದೊಂದು ಕ್ಯಾಮೆರಾ ಅಳವಡಿಸಿ ಬರುತ್ತಿದ್ದ. ಭದ್ರತಾ ಸಿಬ್ಬಂದಿ ಗ್ರಾಹಕರೆಂದು ಸುಮ್ಮನಾಗುತ್ತಿದ್ದ. ಗ್ರಾಹಕರು ಎಟಿಎಂನಲ್ಲಿ ಹಣ ಪಡೆಯಲು ಎಟಿಎಂ ಮಷಿನ್‌ಗೆ ಕಾರ್ಡ್‌ ಹಾಕಿದಾಗ ಸ್ಕಿಮ್ಮರ್‌ನಲ್ಲಿ ಡೆಬಿಟ್‌ ಕಾರ್ಡ್‌ ಮಾಹಿತಿ ದಾಖಲಾಗುತ್ತಿತ್ತು. ಇವುಗಳಿಂದ ಬಂದ ದತ್ತಾಂಶವನ್ನು ಬೇರೊಂದು ಖಾಲಿ ಕಾರ್ಡ್‌ಗೆ ನಕಲಿ ಮಾಡಿ ಹೊರ ಎಟಿಎಂ ಕಾರ್ಡ್‌ ತಯಾರಿಸಿಕೊಳ್ಳುತ್ತಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಜನವರಿ 7 ರಂದು ಆರೋಪಿಗಳು ಮಾನ್ಯತಾ ಟೆಕ್‌ಪಾರ್ಕ್‌ನ ಕಾಗ್ನಿಜೆಂಟ್‌ ಟೆಕ್ನಾಲಜಿ ಸಂಸ್ಥೆಯೊಂದರ ಉದ್ಯೋಗಿ ಕಮ್ಮನಹಳ್ಳಿ ನಿವಾಸಿ ಪಾಯಲ್‌ ಮಂಡಲ್‌ ಎಂಬುವರ ಎಚ್‌ಡಿಎಫ್ಸಿ ಖಾತೆಯಿಂದ 94 ಸಾವಿರ ರೂ.ಹಣ ಡ್ರಾ ಮಾಡಿದ್ದರು. ಈ ಬಗ್ಗೆ ಪಾಯಲ್‌ ಬಾಣಸವಾಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಆರೋಪಿಗಳ ಕೃತ್ಯ ಬಯಲಾಗಿದೆ. ಇವರ ಬಂಧನದಿಂದ ಇದೇ ರೀತಿಯ 11 ಪ್ರಕರಣ ಬಯಲಾಗಿದೆ.

ವೀಸಾ ಮುಗಿದರೂ ಅಕ್ರಮ ವಾಸ
ಆರೋಪಿಗಳು ವಯಾ.ಕಾಂ ಎಂಬ ಆನ್‌ಲೈನ್‌ ನಲ್ಲಿ ಬಾಗಲೂರಿನ ಖಾನ್ಸ್‌ ಟೂರ್ ಅಂಡ್‌ ಟ್ರಾವೆಲ್ಸ್‌ ಮೂಲಕ ವಿಮಾನದ ಟಿಕೆಟ್‌ಗಳನ್ನು ಬುಕ್‌ ಮಾಡುತ್ತಿದ್ದರು. ಇದಕ್ಕೆ ಸ್ವೆ„ಪಿಂಗ್‌ ಮಷಿನ್‌ ಮೂಲಕ ಹಣ ವ್ಯಯಿಸುತ್ತಿದ್ದರು. ಬಳಿಕ ಯಾವುದಾದರೊಂದು ನೆಪವೊಡ್ಡಿ ಟಿಕೆಟ್‌ ರದ್ದುಗೊಳಿಸಿ ನಗದು ವಾಪಸ್‌ ಪಡೆಯುತ್ತಿದ್ದರು. ಬಂಧಿತರು ವಿದ್ಯಾರ್ಥಿ ವೀಸಾದಡಿ ಭಾರತಕ್ಕೆ ಬಂದಿದ್ದು, ವೀಸಾ ಅವಧಿ ಮುಗಿದ ಬಳಿಕವೂ ನಗರದಲ್ಲಿ ಅಕ್ರಮವಾಗಿ ವಾಸವಿದ್ದಾರೆ. 

ಬಿಟ್‌ಕಾಯಿನ್‌ ವರ್ಗಾವಣೆ ದಂಧೆ
ಗ್ರಾಹರಕರ ಖಾತೆಯಿಂದ ಪಡೆದ ಹಣವನ್ನು ಆರೋಪಿಗಳು ಬಿಟ್‌ ಕಾಯಿನ್‌ ಮೂಲಕ ಇತರ ದೇಶಗಳಿಗೆ ವರ್ಗಾವಣೆ ಮಾಡುತ್ತಿದ್ದರು. ಬಂಧಿತ ವಿಕ್ರಂ ನಿಕ್ಕಂ ಬಿಟ್‌ ಕಾಯಿನ್‌ ಏಜೆಂಟ್‌ ಆಗಿದ್ದು, ಹಣ ಜಮೆ ಮಾಡಿಸಿಕೊಂಡು ಅದನ್ನು ಬಿಟ್‌ ಕಾಯಿನ್‌ ಮೂಲಕ ವರ್ಗಾವಣೆ ಮಾಡಿ ಕಮಿಷನ್‌ ಪಡೆಯುತ್ತಿದ್ದ. ವಿಕ್ರಂ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಮಾಡಿಕೊಂಡು ಬಿಟ್‌ ಕಾಯಿನ್‌ ದಂಧೆಯಲ್ಲಿ ತೊಡಗಿದ್ದ.

ಏನಿದು ಬಿಟ್‌ ಕಾಯಿನ್‌
ಬಿಟ್‌ ಕಾಯಿನ್‌ ಎಂಬುದು ಡಿಜಿಟಲ್‌ ಕರೆನ್ಸಿ. ಜಗತ್ತಿನ ಯಾವುದೇ ಭಾಗದಿಂದಲೂ ಹಣ ಪಡೆಯಲು ಹಾಗೂ ಕಳಿಸಲು ಬಳಸಬಹುದು. ರೂಪಾಯಿಗಳ ಮೇಲೆ ಆರ್‌ಬಿಐ ನಿಯಂತ್ರಣವಿರುವಂತೆ ಬಿಟ್‌ ಕಾಯಿನ್‌ ಮೇಲೆ ಯಾವುದೇ ನಿಯಂತ್ರಣವಿಲ್ಲ. ವಿದೇಶಗಳಲ್ಲಿ ಬಿಟ್‌ ಕಾಯಿನ್‌ ಇದೆಯಾದರೂ ಭಾರತದಲ್ಲಿ ಬಿಟ್‌ ಕಾಯಿನ್‌ ವ್ಯವಸ್ಥೆ ಇಲ್ಲ. 

ಟಾಪ್ ನ್ಯೂಸ್

Modi Interview

J&K; ಉಗ್ರರ ನಿಗ್ರಹ ಸಾಮರ್ಥ್ಯಗಳ ಸಂಪೂರ್ಣ ಶ್ರೇಣಿ ನಿಯೋಜಿಸಲು ಮೋದಿ ಕರೆ

ಅಪ್ಪನ ಬಗ್ಗೆ ಕೆಟ್ಟದಾಗಿ ಕಮೆಂಟ್‌ ಮಾಡಿದವರಿಗೆ ಧನ್ಯವಾದ… ದರ್ಶನ್‌ ಪುತ್ರನ ಪೋಸ್ಟ್ ವೈರಲ್

ಅಪ್ಪನ ಬಗ್ಗೆ ಕೆಟ್ಟದಾಗಿ ಕಮೆಂಟ್‌ ಮಾಡಿದವರಿಗೆ ಧನ್ಯವಾದ… ದರ್ಶನ್‌ ಪುತ್ರನ ಪೋಸ್ಟ್ ವೈರಲ್

arrested

Renuka Swamy ಹತ್ಯೆ ಪ್ರಕರಣ; A-8 ಆರೋಪಿ ಪೊಲೀಸರಿಗೆ ಶರಣು

drowned

Srirangapatna: ಕಾವೇರಿಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರುಪಾಲು

1-ajit

Security; ಮೂರನೇ ಬಾರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್ ದೋವಲ್ ನೇಮಕ

3

Pradeep K Vijayan: ಮನೆಯಲ್ಲಿ ಶವವಾಗಿ ಪತ್ತೆಯಾದ ಖ್ಯಾತ ನಟ; ತನಿಖೆ ಆರಂಭ

ಗ್ಯಾರಂಟಿ ಯೋಜನೆ ಕೈಬಿಡುವಂತೆ ಕಾಂಗ್ರೆಸ್ ಪಕ್ಷದಲ್ಲೇ ಒತ್ತಡ ಹೆಚ್ಚುತ್ತಿದೆ: ಶೆಟ್ಟರ್

ಗ್ಯಾರಂಟಿ ಯೋಜನೆ ಕೈಬಿಡುವಂತೆ ಕಾಂಗ್ರೆಸ್ ಪಕ್ಷದಲ್ಲೇ ಒತ್ತಡ ಹೆಚ್ಚುತ್ತಿದೆ: ಶೆಟ್ಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

ಬೈಕ್‌ ಕದಿಯುತ್ತಿದ್ದ Food ಡೆಲಿವರಿ ಬಾಯ್‌ ಸೆರೆ

6-bng-crime

Bengaluru: ಆಸ್ತಿ ವಿಚಾರವಾಗಿ ಸೋದರ ಅತ್ತೆ ಹತ್ಯೆ: ಇಬ್ಬರ ಸೆರೆ

5-bhuvan

Harshika and Bhuvanಗೆ ಹಲ್ಲೆ: ಆರೋಪಿಗಳ ಜಾಮೀನು ಅರ್ಜಿ ವಜಾ

3-darshan

Renukaswamy case: ರೆಡ್ಡಿ 2205 ಖಾತೆಯ ಮೂಲಕ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್‌

Theft: ಸ್ವಂತ ಮನೆಯಿಂದಲೇ ಚಿನ್ನ ಕದ್ದ ಬಾಲಕಿ!

Theft: ಸ್ವಂತ ಮನೆಯಿಂದಲೇ ಚಿನ್ನ ಕದ್ದ ಬಾಲಕಿ!

MUST WATCH

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

udayavani youtube

ಲಾಭದಾಯಕ ಮಲ್ಲಿಗೆ ಕೃಷಿ ಮಾಡುವುದು ಹೇಗೆ? | ಶಂಕರಪುರ ಮಲ್ಲಿಗೆ

udayavani youtube

ಪ್ಯಾಕೇಜ್ಡ್ ಫುಡ್ ಆರೋಗ್ಯಕರವಾದದ್ದೇ ? | ತಜ್ಞರು ಹೇಳುವುದೇನು?

ಹೊಸ ಸೇರ್ಪಡೆ

1-msss

Congress ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

8

ವಿಷ ಸೇವನೆ : ಪದವಿ ವಿದ್ಯಾರ್ಥಿನಿಯ ಸಾವು 

Modi Interview

J&K; ಉಗ್ರರ ನಿಗ್ರಹ ಸಾಮರ್ಥ್ಯಗಳ ಸಂಪೂರ್ಣ ಶ್ರೇಣಿ ನಿಯೋಜಿಸಲು ಮೋದಿ ಕರೆ

Padubidri: ಶೌಚಾಲಯದಲ್ಲಿ ಕುಸಿದು ಬಿದ್ದು ಸಾವು

Padubidri: ಶೌಚಾಲಯದಲ್ಲಿ ಕುಸಿದು ಬಿದ್ದು ಸಾವು

6

Bantwal: ಅಕ್ರಮ ಮರಳು ಸಾಗಾಟ: ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.