ಮಣ್ಣಿನ ಗಣಪನತ್ತ ಒಲವು


Team Udayavani, Sep 12, 2018, 12:28 PM IST

mannina.jpg

ಬೆಂಗಳೂರು: ಪಿಒಪಿ ಗಣೇಶ ಮೂರ್ತಿಗಳ ಖರೀದಿಗೆ ಜನ ಆಸಕ್ತಿ ತೋರದ ಕಾರಣ ವಾಮಮಾರ್ಗಗಳ ಮೂಲಕ ಗ್ರಾಹಕರನ್ನು ಸೆಳೆಯಲು ಪಿಒಪಿ ಮೂರ್ತಿ ಮಾರಾಟಗಾರರು ಕಸರತ್ತು ನಡೆಸುತ್ತಿದ್ದಾರೆ. ಆದರೆ ಜನ ಮಣ್ಣಿನ ಮೂರ್ತಿಗಳತ್ತ ಒಲವು ತೋರುತ್ತಿರುವುದು ಕಾಣುತ್ತಿದೆ.

ಮಣ್ಣಿನ ಗಣಪತಿ ಮೂರ್ತಿಗಳ ಜತೆಗೆ ಈಗಾಗಲೇ ಬೃಹದಾಕಾರದ ಪಿಒಪಿ ಗಣೇಶ ಮೂರ್ತಿಗಳೂ ಫ‌ುಟ್‌ಪಾತ್‌, ಮಳಿಗೆಗಳಲ್ಲಿ ಪ್ರತಿಷ್ಠಾಪನೆಯಾಗಿವೆ. ಮಾವಳ್ಳಿ, ಅವೆನ್ಯೂ ರಸ್ತೆ, ವಿಲ್ಸನ್‌ ಗಾರ್ಡನ್‌, ಮಲ್ಲೇಶ್ವರ, ಜಯನಗರ, ರಾಜಾಜಿನಗರ, ವಿಜಯನಗರ ಸೇರಿದಂತೆ ಎಲ್ಲೆಡೆ ಮಣ್ಣಿನ ಮೂರ್ತಿಗಷ್ಟೇ ಪಿಒಪಿ ಗಣೇಶ ಮೂರ್ತಿಗಳು ಮಾರಾಟಕ್ಕಿವೆ.

ಪಿಒಪಿ ಮೂರ್ತಿ ಬಳಕೆ ನಿಷೇಧವಿದ್ದರೂ ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕಿಂತ ಖರೀದಿದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಬಿಬಿಎಂಪಿ ಒತ್ತು ನೀಡಿದೆ. ಹಾಗಾಗಿ ಸಾರ್ವಜನಿಕವಾಗಿ ಪಿಒಪಿ ಮೂರ್ತಿ ಮಾರಾಟವಾಗುತ್ತಿದ್ದರೂ ಅದನ್ನು ನಿಯಂತ್ರಿಸುವ ಕಾರ್ಯಕ್ಕೆ ಕೈಹಾಕುತ್ತಿಲ್ಲ. ಬದಲಿಗೆ ಮಣ್ಣಿನ ಮೂರ್ತಿಗಳನ್ನು ಬಳಸಿ ನಗರದ ಜಲಮೂಲ, ಪರಿಸರ ರಕ್ಷಣೆಗೆ ಸಹಕರಿಸುವಂತೆ ಮನವಿ ಮಾಡುತ್ತಿದೆ.

ಆರು ತಿಂಗಳ ಹಿಂದೆಯೇ ಮುಂಗಡ: ಅಷ್ಟಕ್ಕೂ ಈ ಪಿಒಪಿ ಗಣೇಶನ ಮೂರ್ತಿಗಳು ದಿಢೀರ್‌ ಮಾರುಕಟ್ಟೆಗೆ ಇಳಿದಿವೆಯೇ? ಖಂಡಿತ ತಾವಾಗಿ ತಂದಿದ್ದಲ್ಲ ಎನ್ನುತ್ತಾರೆ ಮಾರಾಟಗಾರರು. ಆಯ್ದ ಮಾದರಿಯ ಬೃಹತ್‌ ಪಿಒಪಿ ಮೂರ್ತಿಗಳಿಗೆ ನಾನಾ ಸಂಘ-ಸಂಸ್ಥೆಗಳು ಆರು ತಿಂಗಳ ಹಿಂದೆಯೇ ಹಣ ನೀಡಿ ಕಾಯ್ದಿರಿಸಿದ್ದಾರೆ.

ಅದರಂತೆ ಅವರು ಬಯಸಿದ ವಿನ್ಯಾಸದ ಮೂರ್ತಿಗಳನ್ನು ಮಾರಾಟಕ್ಕೆ ಇಡಲಾಗಿದೆ. ಗುರುವಾರದ ಹೊತ್ತಿಗೆ ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಇತರೆಡೆಯಿಂದ ಗಣೇಶನ ಮೂರ್ತಿಗಳು ಬಂದಿಳಿಯಲಿವೆ ಎನ್ನುತ್ತಾರೆ ಅವೆನ್ಯೂ ರಸ್ತೆಯ ಪಿಒಪಿ ಮೂರ್ತಿ ಮಾರಾಟಗಾರರು.

ಗಣೇಶನ ಮೂರ್ತಿ ಮುಟ್ಟುಗೋಲು ಅತ್ಯಂತ ಸೂಕ್ಷ್ಮ ವಿಚಾರ. ಧಾರ್ಮಿಕವಾಗಿ, ಭಾವನಾತ್ಮಕವಾಗಿರುವ ವಿಚಾರದಲ್ಲಿ ಪಾಲಿಕೆ ಏಕಾಏಕಿ ಬಲ ಪ್ರಯೋಗಿಸಲು ಸಾಧ್ಯವಿಲ್ಲ. ಹಾಗಾಗಿ, ಎಚ್ಚರಿಕೆಗೆ ಜೊತೆಗೆ ಜಾಗೃತಿಗೆ ಆದ್ಯತೆ ನೀಡಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಬಿಬಿಎಂಪಿ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಹೆಸರಿಗೆ ಮಣ್ಣಿನ ಮೂರ್ತಿ – ಮಾರುವುದು ಪಿಒಪಿ ಮೂರ್ತಿ: ಹಲವೆಡೆ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಲಭ್ಯ ಎಂಬ ಭಾರೀ ಫ‌ಲಕಗಳನ್ನು ಅಳವಡಿಸಲಾಗಿದೆ. ಹಾಗೆಂದು ಖರೀದಿಗೆ ಮುಂದಾದರೆ ನೀಡುವುದು ಪಿಒಪಿ ಮೂರ್ತಿಗಳನ್ನು. ಪಿಒಪಿ ಮೂರ್ತಿ ಕೊಳ್ಳಲು ಜನ ಹಿಂದೇಟು ಹಾಕುತ್ತಿರುವುದರಿಂದ ಮಾರಾಟಗಾರರು ನಾನಾ ತಂತ್ರಗಳನ್ನು ಅನುಸರಿಸಲಾರಂಭಿಸಿದ್ದಾರೆ. ಅದರಂತೆ ಫ‌ಲಕದ ಮೂಲಕ ಸೆಳೆದು ಪಿಒಪಿ ಮಾರುವುದು ಒಂದು ತಂತ್ರ.

ನಿಷೇಧ ಇದ್ದರೂ ಗ್ರಾಹಕರು ಕೇಳುತ್ತಾರೆ. ಹಾಗಾಗಿ, ಎರಡೂ ಪ್ರಕಾರದ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದು, ಗ್ರಾಹಕರು ಕೇಳಿದ್ದನ್ನು ನೀಡುತ್ತೇವೆ. ಮನೆಗಳಲ್ಲಿ ಪ್ರತಿಷ್ಠಾಪಿಸುವವರು ಮಣ್ಣಿನ ಗಣೇಶ ಮೂರ್ತಿ ಕೇಳುತ್ತಾರೆ. ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವವರು ಪಿಒಪಿ ಮೂರ್ತಿ ಬಯಸುತ್ತಾರೆ ಎನ್ನುತ್ತಾರೆ ಜೆ.ಸಿ. ರಸ್ತೆಯ ಗಣೇಶ ಮೂರ್ತಿ ವ್ಯಾಪಾರಿಗಳು.

ಸಾವಿರಾರು ಅರ್ಜಿಗಳು: ಈಗಾಗಲೇ ಮೂರ್ತಿ ಪ್ರತಿಷ್ಠಾಪಿಸಲು ರಸ್ತೆ ಅಕ್ಕಪಕ್ಕದ ಜಾಗ, ಮೈದಾನಗಳಲ್ಲಿ ಶಾಮಿಯಾನ, ಪೆಂಡಾಲ್‌ಗ‌ಳು ಗಣೇಶನ ಮೂರ್ತಿ ಬರಮಾಡಿಕೊಳ್ಳಲು ಸಿಂಗಾರಗೊಂಡಿವೆ. ಹೀಗೆ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆಗೆ ಈವರೆಗೆ ಬಿಬಿಎಂಪಿಗೆ ಅನುಮತಿ ಕೋರಿ ಸರಿಸುಮಾರು ಸಾವಿರಾರು ಅರ್ಜಿಗಳು ಬಂದಿವೆ.

ವ್ಯಾಪಾರಿಗಳಿಂದಲೇ ವಿಸರ್ಜನೆ ವ್ಯವಸ್ಥೆ!: ಪಿಒಪಿ ಮೂರ್ತಿಗಳನ್ನು ಮಾರಾಟಕ್ಕಿಟ್ಟಿರುವ ವ್ಯಾಪಾರಿಗಳು ಜನರನ್ನು ಆಕರ್ಷಿಸಲು ದೊಡ್ಡ ಕೃತಕ ಟ್ಯಾಂಕ್‌ಗಳನ್ನಿಟ್ಟು ಮೂರ್ತಿ ವಿಸರ್ಜನೆಗೆ ವ್ಯವಸ್ಥೆ ಮಾಡಿದ್ದಾರೆ. ನಮ್ಮಲ್ಲಿ ಪಿಒಪಿ ಮೂರ್ತಿ ಕೊಂಡುಕೊಳ್ಳುವವರಿಗೆ ವಿಸರ್ಜನೆ ಸಮಸ್ಯೆಯಾಗಬಾರದು ಹಾಗೂ ಕೆರೆಗಳು ಮಾಲಿನ್ಯವಾಗಬಾರದು ಎಂದು ಕೃತಕ ಟ್ಯಾಂಕ್‌ಗಳನ್ನು ನಾವೇ ಸಿದ್ಧಪಡಿಸಿದ್ದು, ಐದು ಅಡಿ ಎತ್ತರದ ಮೂರ್ತಿಗಳನ್ನು ವಿಸರ್ಜನೆ ಮಾಡಲು ಅವಕಾಶ ಮಾಡಿಕೊಡುವ ಯೋಜನೆ ಹಾಕಿಕೊಂಡಿದ್ದೇವೆ ಎನ್ನುತ್ತಾರೆ ವ್ಯಾಪಾರಿ ಸತೀಶ್‌.

ಪರಿಸರ ಮೂರ್ತಿ ಚಿತ್ರ ಕಳುಹಿಸಿ: ಗೌರಿ- ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಅರ್ಥಪೂರ್ಣವಾಗಿ ಆಚರಿಸಬೇಕು ಎಂಬುದು ಸದಾಶಯ. ಅದರಂತೆ ಮಣ್ಣಿನ ಮೂರ್ತಿಗಳನ್ನೇ ಬಳಸುವುದರಿಂದಾಗುವ ಪ್ರಯೋಜನ, ಪರಿಸರ ಸಂರಕ್ಷಣೆ, ವಿಸರ್ಜನಾ ಪ್ರಕ್ರಿಯೆಯೂ ಸರಳವಾಗಿರುವ ಬಗ್ಗೆ ಸರಣಿ ವರದಿಗಳನ್ನು “ಉದಯವಾಣಿ’ ಪ್ರಕಟಿಸಿದೆ.

ಇಂದು ಗೌರಿ ಹಬ್ಬ. ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪರಿಸರ ಸ್ನೇಹಿ ವಿಧಾನದಲ್ಲಿ ಆಚರಣೆ ನಡೆಸುವವರು ಮೂರ್ತಿ ಸಹಿತ ಛಾಯಾಚಿತ್ರವನ್ನು 8861196369 ಮೊಬೈಲ್‌ ವಾಟ್ಸಾಪ್‌ ಸಂಖ್ಯೆಗೆ ಅಥವಾ [email protected] ಗೆ ಕಳುಹಿಸಿದರೆ  ಆಯ್ದ ಚಿತ್ರಗಳನ್ನು ಪ್ರಕಟಿಸಲಾಗುವುದು.

* ಜಯಪ್ರಕಾಶ್‌ ಬಿರಾದಾರ್‌

ಟಾಪ್ ನ್ಯೂಸ್

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Jagan mohan

YSR Congress ಪ್ರಣಾಳಿಕೆ: ಪಿಂಚಣಿ ಮೊತ್ತ ಏರಿಕೆ, ವೈಜಾಗ್‌ ಕಾರ್ಯಕಾರಿ ರಾಜಧಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

1-wwqw

CRPF DIG ಯಿಂದ ಲೈಂಗಿಕ ಕಿರುಕುಳ: ಖಜಾನ ವಜಾ ಸಾಧ್ಯತೆ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.