ಸದನದಲ್ಲಿ ಚರ್ಚೆಗೆ ಸಿದ್ಧ: ಎಚ್‌ಡಿಕೆ
Team Udayavani, Jul 7, 2018, 6:05 AM IST
ಬೆಂಗಳೂರು: ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ಬಗ್ಗೆ ಸದನದಲ್ಲಿ ಚರ್ಚೆಗೆ ಸಿದಟಛಿ ಎಂದು
ಪ್ರತಿಪಕ್ಷಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಇದೇ ವೇಳೆ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿರುವ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಎಚ್.ಕೆ. ಪಾಟೀಲ್ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ನನಗೆ ಯಾವುದೇ ಪತ್ರ ಬಂದಿಲ್ಲ. ಉತ್ತರ
ಕರ್ನಾಟಕ ಭಾಗಕ್ಕೆ 5 ಕಾರ್ಖಾನೆಗಳನ್ನು ಕೊಡು ತ್ತಿದ್ದೇವೆ. ಗದಗ ಜಿಲ್ಲೆಯೊಂದಕ್ಕೇ ಕುಡಿಯುವ ನೀರಿಗೆ 1,500 ಕೋಟಿ ರೂ. ಅನುದಾನ ಕೊಟ್ಟಿದ್ದೇವೆ ಎಂದು ಟಾಂಗ್ ಕೊಟ್ಟರು.
ಬಜೆಟ್ ಹಾಸನ, ರಾಮನಗರ, ಮಂಡ್ಯ ಜಿಲ್ಲೆಗೆ ಸಿಮೀತವಲ್ಲ. ಕಳೆದ 10 ವರ್ಷಗಳಲ್ಲಿ ಈ ಭಾಗಕ್ಕೆ ಕೊಟ್ಟ
ಅನುದಾನ ಎಷ್ಟು? ಈ ಬಾರಿ ಸರಿ ಸುಮಾರು 200 ಕೋಟಿ ರೂ. ಅನುದಾನ ಕೊಟ್ಟಿರಬಹುದು ಎಂದು ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.
ನಡಹಳ್ಳಿಗೆ ಕೆಲ್ಸ ಇಲ್ಲ: ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂಬ ನಡಹಳ್ಳಿ ಹೇಳಿಕೆಗೆ ತಿರುಗೇಟು ನೀಡಿದ
ಮುಖ್ಯಮಂತ್ರಿ, ನಡಹಳ್ಳಿಗೆ ಬೇರೆ ಕೆಲಸ ಇಲ್ಲ. ಅದಕ್ಕೆ ಹೀಗೆಲ್ಲ ಮಾತಾಡ್ತಿದ್ದಾರೆ. ಅವ್ರಿಗೆ ಉತ್ತರ ಕರ್ನಾಟದ ಬಗ್ಗೆ ಕಮಿಟೆ¾ಂಟ… ಇದ್ರೆ ತಾನೇ. ಅವ್ರು ಬೇಕ್ ಬೇಕಾದಂಗೆ ಪಕ್ಷಾತರ ಮಾಡಿಕೊಂಡು ಓಡಾಡವ್ರು ಎಂದು ತೀಕ್ಷ್ಣವಾಗಿ ನುಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಿಯತಮೆಯ ಆತ್ಮಹತ್ಯೆಯಿಂದ ಮನನೊಂದು ಪ್ರಿಯತಮ ಆತ್ಮಹತ್ಯೆ
ಪಠ್ಯಪುಸ್ತಕದಲ್ಲಿ ಕೇಸರಿಕರಣ ನುಸುಳುತ್ತಿರುವುದು ಅಪಾಯಕಾರಿ: ಎಚ್. ವಿಶ್ವನಾಥ್
ನಮ್ಮೂರಿನಲ್ಲಿ ಪಾನಿಪುರಿ, ಪಾನ್ ಮಸಾಲಾ ಮಾರುವವರು ಗುಜರಾತ್ ನವರು: ಸಿ.ಎಂ.ಇಬ್ರಾಹಿಂ
ಸಂಪುಟ ವಿಸ್ತರಣೆ ಕುರಿತು ಚರ್ಚೆಯಿಲ್ಲ: ದೆಹಲಿಯಲ್ಲಿ ಸಿಎಂ ಬೊಮ್ಮಾಯಿ
ಎಲ್ಲೇ ಇದ್ದರೂ ಕನ್ನಡವೇ ಜೀವ; ಕೆನಡಾದಲ್ಲಿ ಕನ್ನಡ ಕಹಳೆ ಮೊಳಗಿಸಿದ ಚಂದ್ರ ಆರ್ಯ ಅಂತರಂಗ